9 ಬಾರಿ ಮದುವೆಯಾಗಿರುವ ಈ ಸುಂದರ ನಟಿಯರ ಬಗ್ಗೆ ನಿಮಗೆಷ್ಟು ಗೊತ್ತು? ಅವರ ವೈಯಕ್ತಿಕ ಬದುಕಿನ ಬಗ್ಗೆ ತಿಳಿಯಿರಿ
ಚಿತ್ರರಂಗದಲ್ಲಿ ಸ್ಟಾರ್ ಗಳಿಗೆ ಅಫೇರ್ಸ್, ಬ್ರೇಕಪ್, ಮದುವೆ, ವಿಚ್ಛೇದನ ಆಗುವುದು ಸಾಮಾನ್ಯ. ಇನ್ನು ವಿದೇಶಗಳಲ್ಲಂತೂ ಮದುವೆ ಆಗುವುದು ಹಾಗೂ ವಿಶ್ಚೇಧನ ನೀಡುವುದು ಕಾಮನ್. ನೀವು ಎರಡು ಮೂರು ಮದುವೆ ಆದವರ ಬಗ್ಗೆ ನೋಡಿರುತ್ತೀರಾ, ಓದಿರುತ್ತೀರಾ. ನಾವು ಇಂದು ಒಂಬತ್ತು ಮದುವೆ ಆದ ಸುಂದರಿಯ ಬಗ್ಗೆ ಹೇಳುತ್ತಿದ್ದಿವೆ.
ಬೆಳ್ಳಿ ತೆರೆಯ ಮೇಲೆ ರಾರಾಜಿಸಿ ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ ನಟಿಯ ಕಥೆ ಇದು. ಇವರು ಅಮೆರಿಕದ ಮೊದಲ ಸೆಲಬ್ರೆಟಿ ನಟಿ ಎಂದರೂ ತಪ್ಪಾಗುವುದಿಲ್ಲ. ತಮ್ಮ ನೈಜ ನಟನೆಯಿಂದ ಪರದೆಯ ಮೇಲೆ ಎಷ್ಟೋ ಪಾತ್ರಗಳಿಗೆ ಜೀವತುಂಬಿದ ನಟಿ. ಇವರೇ ಜಾ ಜಾ ಗಬೋರ್.

ಗಬೋರ್ ತಮ್ಮ ಸಿನಿಮಾ ಜೀವನಕ್ಕಿಂತಲೂ ಹೆಚ್ಚು ವೈಯಕ್ತಿಕ ಕಾರಣದಿಂದಲೇ ಸುದ್ದಿಯಲ್ಲಿದ್ದವರು. ಇವರು ಅತಿ ಹೆಚ್ಚು ಮದುವೆಯಾದ ಸುಂದರಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಮೂಲತಹ ಹಂಗೇರಿಯ ಈ ಚೆಲುವೆ ವೃತ್ತಿಜೀವನವನ್ನು ಅರಿತಿ ಅಮೆರಿಕ ಬಂದರು. ಇವರು ತಮ್ಮ ನೈಜ ಯುರೋಪಿಯನ್ ಪ್ಲೇರ್ ಶೈಲಿಯ ನಟನೆಯಿಂದ ಖ್ಯಾತಿ ಪಡೆದರು. ಅಲ್ಲದೆ ಬಹು ಬೇಗ ಬೇಡಿಕೆ ನಟಿಯಾದರು. ಇವರು ಬರೋಬ್ಬರಿ 9 ಮದುವೆ ಆಗಿದ್ದಾರೆ.
ಒಂದು ಕಾರ್ಯಕ್ರಮದಲ್ಲಿ ಗಬೋರ್, "ಪುರುಷರು ಯಾವಾಗಲೂ ನನ್ನನ್ನು ಇಷ್ಟಪಡುತ್ತಾರೆ ಮತ್ತು ನಾನು ಯಾವಾಗಲೂ ಪುರುಷರನ್ನು ಇಷ್ಟಪಡುತ್ತೇನೆ ಎಂದಿದ್ದರು.
ಗಬೋರ್ 1935 ರಲ್ಲಿ ಬುರ್ಹಾನ್ ಅಸಫ್ ಬೆಲ್ಗೆ ಅವರನ್ನು ವಿವಾಹವಾದರು. ಈ ಮದುವೆ 1941 ಮುರಿಯಿತು. ನಂತರ ಅವರು 1942 ರಲ್ಲಿ ಕಾನ್ರಾಡ್ ಹಿಲ್ಟನ್ ಅವರನ್ನು ವಿವಾಹವಾದರು ಮತ್ತು 1947 ರಲ್ಲಿ ಅವರಿಗೆ ವಿಚ್ಛೇದನ ನೀಡಿದರು. ಮುಂದೆ 1949-1954 ರ ಜಾರ್ಜ್ ಸ್ಯಾಂಡರ್ಸ್; ನಂತರ ಹರ್ಬರ್ಟ್ ಹಟ್ನರ್, ಅವರ ಜೊತೆ ದಾಂಪತ್ಯ ಜೀವನ ನಡೆಸಲು ಮುಂದಾದರು. ಈ ಮದುವೆ ಸಹ ಬಹಳ ದಿನ ನಿಲ್ಲಲೇ ಇಲ್ಲ. 1966ರ ಮಾರ್ಚ್ 9 ರಂದು ಜೋಶುವಾ ಎಸ್. ಕಾಸ್ಡೆನ್ ಜೂನಿಯರ್ ಅವರನ್ನು ವಿವಾಹವಾದರು, ಈ ಜೋಡಿಯು 1967 ರಲ್ಲಿ ವಿಶ್ಚೇದನ ಪಡೆಯಿತು.
1975 ರಲ್ಲಿ ಜ್ಯಾಕ್ ರಯಾನ್ ಅವರನ್ನು ಮದುವೆಯಾಗುವವರೆಗೂ ಅವಳು ಮತ್ತೆ ಮದುವೆಯಾಗಿರಲಿಲ್ಲ. ಈ ಸಂಬಂಧ ಸಹ ಒಂದೇ ವರ್ಷಕ್ಕೆ ಸೀಮಿತವಾಯಿತು. 1976ರಲ್ಲಿ ಮೈಕೆಲ್ ಒ'ಹರಾ, 1983 ರಲ್ಲಿ ಫೆಲಿಪೆ ಡಿ ಆಲ್ಬಾ ಕೌಟುಂಬಿಕ ಜೀವನ ನಡೆಸಿದ್ದರು.
ಅಂತಿಮವಾಗಿ, ಅವರು 1986 ರಲ್ಲಿ ಫ್ರೆಡೆರಿಕ್ ಪ್ರಿಂಜ್ ವಾನ್ ಅನ್ಹಾಲ್ಟ್ ಅವರನ್ನು ವಿವಾಹವಾದರು. ಗಬೋರ್ ಸಾಯುವವರೆಗೂ ಈ ಜೋಡಿ ಒಟ್ಟಿಗೆ ಇತ್ತು.

ಜೆನ್ನಿಫರ್ ಓ'ನೀಲ್
ಈ ಪಟ್ಟಿಯಲ್ಲಿ ಎದ್ದು ಕಾಣುವ ಇನ್ನೊಂದು ಹೆಸರು ಜೆನ್ನಿಫರ್ ಓ'ನೀಲ್. ಬ್ರೆಜಿಲ್ ರೂಪದರ್ಶಿ. ಬಳಿಕ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಬೆಳ್ಳಿ ತೆರೆಯಲ್ಲಿ ಹಲವು ಖ್ಯಾತ ಸಿನೆಮಾಗಳಲ್ಲಿ ಅಭಿನಯಿಸಿದ್ದ ಇವರು ತಮ್ಮ ವೈವಾಹಿಕ ಜೀವನದಿಂದಲೂ ಹೆಸರುವಾಸಿ. ಇವರು ಎಂಟು ಪುರುಷರೊಂದಿಗೆ ಒಂಬತ್ತು ಬಾರಿ ವಿವಾಹವಾದರು.
ಜೆನ್ನಿಫರ್ ಓ'ನೀಲ್ ಕೇವಲ 17 ನೇ ವಯಸ್ಸಿನಲ್ಲಿ ಡೀನ್ ರೋಸಿಟರ್ ಅವರನ್ನು ವಿವಾಹವಾದರು. ಈ ಜೋಡಿ 1971ರಲ್ಲಿ ವಿಚ್ಛೇದನ್ಕೆಕ ಮುಂದಾಯಿತು. 1972 ರಲ್ಲಿ ಇವರು ಜೋಸೆಫ್ ಕೋಸ್ಟರ್ ಅವರನ್ನು ವಿವಾಹವಾದರು. ಇವರ ಎರಡನೇ ಪತಿ ಜೋಸೆಫ್ ಕೋಸ್ಟರ್ ಅವರನ್ನು 1972 ರಲ್ಲಿ ವಿವಾಹವಾಗಿ ಸಂಸಾರ ನಡೆಸಿದರು. ನಂತರ ನೀಲ್ ನಿಕ್ ಡಿ ಬೋಯಾ ಅವರನ್ನು ವಿವಾಹವಾದರು. ಕೆಲವೇ ವರ್ಷಗಳಲ್ಲಿ ಈ ವಿವಾಹ ಮುರಿದು ಬಿದ್ದಿತು. 1978 ರಲ್ಲಿ ಅವರು ಜೆಫ್ ಬ್ಯಾರಿಯನ್ನು ವಿವಾಹವಾಗಿ ಒಂದೇ ವರ್ಷದಲ್ಲಿ ಬೇರ್ಪಟ್ಟರು. ನಂತರ, ನಟಿ ಜಾನ್ ಲೆಡೆರರ್ ಅವರನ್ನು ವಿವಾಹವಾಗಿ 1983 ರಲ್ಲಿ ವಿಚ್ಛೇದನ ಪಡೆದರು.
ಜೆನ್ನಿಫರ್ ಓ'ನೀಲ್ ಅವರು ರಿಚರ್ಡ್ ಅಲನ್ ಬ್ರೌನ್, ನೀಲ್ ಎಲ್. ಬೋನಿನ ಅವರನ್ನು ವಿವಾಹವಾಗಿದ್ದರು. 1993 ರಲ್ಲಿ, ಇವರು ತಮ್ಮ ಮಾಜಿ ಪತಿ ರಿಚರ್ಡ್ ಅಲನ್ ಬ್ರೌನ್ ಅವರನ್ನು ಮರು-ಮದುವೆಯಾದರು. 1996 ರಲ್ಲೂ ಮತ್ತೊಂದು ಮದುವೆಗೆ ಇವರು ಹಸಿ ಮಣೆ ಏರಿದ್ದರು.












Click it and Unblock the Notifications