Sihi Kahi Chandru: 2 ಕೋಟಿ ಮನೆ ಮಾರಿಕೊಂಡೆ, ಸೈಟ್ ಮಾರಿದೆ ಆದರೆ... ಸಿಹಿ ಕಹಿ ಚಂದ್ರು ಸಿಹಿ ಕಹಿ ಮಾತು
ಪ್ರತಿಯೊಬ್ಬರ ಜೀವನದಲ್ಲೂ ಏಳು ಬೀಳು ಸಹಜ. ಎದ್ದಾಗ ಹೊಗಳುವವರಿಗಿಂತ ಬಿದ್ದಾಗ ಆಡಿಕೊಂಡು ನಗುವವರೇ ಹೆಚ್ಚು. ಇಂಥಹ ಸಂದರ್ಭಗಳು ಪ್ರತಿಯೊಬ್ಬರ ಜೀವನದಲ್ಲೂ ಎದುರಾಗಿರುತ್ತವೆ. ಕೆಲವರು ಇದನ್ನು ಹೇಳಿಕೊಳ್ಳುವ ಅವಕಾಶ ಪಡೆಯುತ್ತಾರೆ. ಆದರೆ ಕೆಲವರಿಗೆ ಈ ಅವಕಾಶಗಳು ಸಿಗುವುದೇ ಇಲ್ಲ. ಇಂತಹ ಘಟನೆಗಳನ್ನು ಹಂಚಿಕೊಂಡಾಗ ಒಬ್ಬ ವ್ಯಕ್ತಿಗೆ ತಾನೂ ಬಿದ್ದಾಗ ಮುಂದೆ ತಾನು ಮೇಲೇಳುವ ನಂಬಿಕೆ ಹೆಚ್ಚಾಗುತ್ತದೆ. ಇದು ಜೀವನದ ಒಂದು ಪಾಠ ಎಂದು ಸ್ಯಾಂಡಲ್‌ವುಡ್‌ನ ಹೆಸರಾಂತ ನಟ ಸಿಹಿ ಕಹಿ ಚಂದ್ರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಹೌದು.. ಸಿಹಿ ಕಹಿ ಚಂದ್ರು ಒಬ್ಬ ಹೆಸರಾಂತ ಕನ್ನಡ ನಟ. ಆದರೂ ಕೂಡ ಸಮಸ್ಯೆಗಳು ಕಷ್ಟಗಳು ಇವರಿಗೂ ಹೊರತಾಗಿಲ್ಲ. ಸಾಕಷ್ಟು ಕಷ್ಟಪಟ್ಟು ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಜೀವನದಲ್ಲಿ ಸಿಹಿ ಹಾಗೂ ಕಹಿಯನ್ನು ಕಂಡ ಸಿಹಿ ಕಹಿ ಚಂದ್ರು ಅವರ ಬದುಕಿನಲ್ಲಿ ಪವಾಡವೊಂದು ನಡೆದಿದ್ದು ಅದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಹೆಸರಾಂತ ನಟನಿಗೆ ಸಾಲು ಸಾಲು ಸಮಸ್ಯೆ
ಕೊರೊನಾ ಸಂದರ್ಭದಲ್ಲಿ ಸಿಹಿ ಕಹಿ ಚಂದ್ರು ಅವರ ಜೀವನದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆ ಉಂಟಾಗಿತ್ತು. ಈ ಸಮಸ್ಯೆಯಿಂದಾಗಿ ಚಂದ್ರು ಅವರು ಬೀದಿಗೆ ಬರುವಂತಾಗಿತ್ತು. ಬೊಂಬಾಟ್ ಬೋಜನ ಯಶಸ್ಸಿನ ಕುದುರೆಯನ್ನು ಹತ್ತಿದ್ದ ಚಂದ್ರು ಅವರ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಅವರ ಜೀವನದಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾದವು.
'ಬೊಂಬಾಟ್ ಬೋಜನ' ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿರುವಾಗ ಚಂದ್ರು ಅವರಿಗೆ 'ಬೊಂಬಾಟ್ ಬೋಜನ' ಕಂಪನಿ ಶುರುಮಾಡಿ ಫುಡ್ ಪ್ರಾಡಕ್ಟ ಮಾರಾಟ ಮಾಡಲು ಪ್ರತಿಯೊಬ್ಬರೂ ಸಲಹೆ ನೀಡಿದ್ದರಂತೆ. ಈ ಸಲಹೆಯಂತೆ ಚಂದ್ರು ಅವರು ಬೊಂಬಾಟ್ ಬೋಜನ ಫುಡ್ ಪ್ರಾಡಕ್ಟ ಕಂಪನಿಯನ್ನು ಶುರು ಮಾಡಿದ್ದರು.
ಆದರೆ ಈ ಕಂಪನಿ ಚಂದ್ರು ಅವರ ಜೀವನದಲ್ಲಿ ಮುಳುವಾಗಿ ಹೋಯ್ತು. ಇದರಿಂದಾಗಿ ಚಂದ್ರು ಅವರು 2 ಕೋಟಿ 70 ಲಕ್ಷ ಹಣ ಕಳೆದುಕೊಂಡರು. ಆ ಸಮಯದಲ್ಲಿ ಅವರು ಮಾಡುತ್ತಿದ್ದ ಎರಡು ಸೀರಿಯಲ್‌ಗಳು ನಿಂತು ಹೋದವು. ಕೈ ಖಾಲಿಯಾಗಿ ಬೀದಿಗೆ ಬರುವಂತಹ ಸ್ಥಿತಿ ಬಂತು. ಇದರಿಂದಾಗಿ ಒಂದು ಸೈಟ್ ಹಾಗೂ ಮನೆಯನ್ನೂ ಮಾರಿದರು. ವಾಸವಾಗಿದ್ದ ಮನೆಯನ್ನೂ ಅಡವಿಟ್ಟು ಎಲ್ಲಾ ಸಾಲವನ್ನು ತೀರಿಸಿ ಕೆಲಸದಿಂದ ನಿವೃತ್ತಿ ಪಡೆಯುವಷ್ಟು ಚಂದ್ರು ಅವರ ಮನಸ್ಸು ಹಾಳಾಗಿತ್ತು.
ಆಫೀಸ್ ವಸ್ತುಗಳಿಗಾಗಿ ಕೇವಲ ಒಂದುವರೆ ಸಾವಿರ ಮಾತ್ರ ಸಿಕ್ಕಿತ್ತು
ಕೊರೊನಾ ಸಂದರ್ಭದಲ್ಲಿ ಚಂದ್ರು ಅವರು ಬಾಡಿಗೆಗೆ ಇದ್ದ ತಮ್ಮ ಆಫೀಸ್ ಕೂಡ ಖಾಲಿ ಮಾಡಿದರು. ಆದರೆ ಅದರ ಮಾಲೀಕ ಹೀಗೆ ಏಕಾಏಕಿ ಆಫೀಸ್ ಖಾಲಿ ಮಾಡಿದರೆ ಅಡ್ವಾನ್ಸ್ ನಲ್ಲಿ ಮೂರು ತಿಂಗಳು ಬಾಡಿಗೆ ತೆಗೆದುಕೊಳ್ಳುವುದಾಗಿ ಹೇಳಿದ್ದರಂತೆ. ಇದರಿಂದಾ ಅಡ್ವಾನ್ಸ್ ಹಣವೂ ಚಂದ್ರು ಕೈತಪ್ಪಿತ್ತು. ಅಲ್ಲದೆ ಆಫೀಸ್ ಅಲ್ಲಿ ಇದ್ದ ಹತ್ತಾರು ಚೇರ್, ಟೇಬಲ್, ಸಿಸ್ಟಮ್ ಕೂಡ ಮಾರಿದ್ದರಂತೆ ಚಂದ್ರು. ಇದೆಲ್ಲಾ ಮಾರಿದ್ದರೂ ಕೂಡ ಅವರಿಗೆ ಸಿಕ್ಕಿದ್ದು ಕೇವಲ ಒಂದುವರೆ ಸಾವಿರ ರೂಪಾಯಿ ಅಷ್ಟೇ. ಇದರಿಂದಲೂ ಬೇಸರಗೊಂಡ ಸಿಹಿ ಕಹಿ ಚಂದ್ರು ಇನ್ನೇನು ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದರಂತೆ.
ಆಗ ಅಲ್ಲೇ ಇದ್ದ ದೇವಸ್ಥಾನಕ್ಕೆ ಹೋಗಿ ದೇವರಿಗೆ ಬೈದರಂತೆ. 'ನಾನು ಯಾರಿಗೂ ಮೋಸ ಮಾಡಿಲ್ಲ. ಆದರೂ ನನಗೆ ಯಾಕೆ ಈ ಶಿಕ್ಷೆ ಕೊಟ್ಟೆ ದೇವರೇ' ಎಂದು ಕೇಳಿಕೊಂಡಿದ್ದರಂತೆ. ಆಗ ಅಲ್ಲಿನ ಆಚಾರ್ಯರು ಸಿಹಿ ಕಹಿ ಚಂದ್ರು ಅವರು ಮನಸ್ಸಿನಲ್ಲಿ ದೇವರಿಗೆ ಹಾಕಿದ್ದ ಪ್ರಶ್ನೆಗಳಿಗೆಲ್ಲಾ ತಾವೇಗಿಯೇ ಬಂದು ಉತ್ತರ ನೀಡಿದ್ದರು. ಅಲ್ಲದೆ ಒಂದು ವಾರದಲ್ಲಿ ನೀವು ಕಳೆದುಕೊಂಡ ಹಣ ವಾಪಸ್ ಬರುತ್ತದೆ ಎಂದು ಹೇಳಿದ್ದರಂತೆ.
ಸಿಹಿ ಕಹಿ ಚಂದ್ರು ಜೀವನದಲ್ಲಿ ದೇವರ ಪವಾಡ
ಹೀಗೆ ಅರ್ಚಕರು ಹೇಳಿದ್ದ ಮರು ದಿನ ಬೆಳಗ್ಗೆ 'ಬೊಂಬಾಟ್ ಬೋಜನ' ಕಾರ್ಯಕ್ರಮ ಮತ್ತೆ ಶುರು ಮಾಡಲು ಕರೆ ಬಂದಿತ್ತಂತೆ. ಅಲ್ಲಿಂದ ಇಲ್ಲಿವರೆಗೂ ಒಂದೇ ಒಂದು ದಿನ ಬಿಡುವಿಲ್ಲದೆ ಸಿಹಿ ಕಹಿ ಚಂದ್ರು ಅವರು ದುಡಿಯುತ್ತಿದ್ದಾರೆ. ಅಷ್ಟೇ ಅಲ್ಲ ಮಾಡಿದ ಸಾಲವನ್ನೆಲ್ಲಾ ತೀರಿಸಿ ಮನೆಯನ್ನೂ ಉಳಿಸಿಕೊಂಡಿದ್ದಾರೆ. ಇದು ಭಗವಂತನ ಲೀಲೆ, ಪವಾಡ ಎಂದು ಸಿಹಿ ಕಹಿ ಚಂದ್ರು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಮನುಷ್ಯ ಬಿದ್ದಾಗ ಕುಗ್ಗಬಾರದು ಎದ್ದಾಗ ಹಿಗ್ಗಬಾರದು ಅನ್ನೋದಕ್ಕೆ ನಾನು ಜೀವಂತ ಸಾಕ್ಷಿ. ಇದು ಎಲ್ಲರ ಜೀವನದಲ್ಲಿ ನಡೆದಿರುತ್ತದೆ. ಆದರೆ ನಾನು ಹೆಸರಾಂತ ನಟ, ಹೀಗಾಗಿ ನಮ್ಮ ಜೀವನದಲ್ಲಿ ಕಷ್ಟಗಳು ಬರುವುದಿಲ್ಲ ಅಂತಲ್ಲಾ. ನಮ್ಮ ಜೀವನದಲ್ಲೂ ಸಾವಿರಾರು ಕಷ್ಟಗಳು ಬಂದಿರುತ್ತವೆ. ಅದನ್ನು ಹೇಳಿಕೊಂಡಿರುವುದಿಲ್ಲ ಎಂದು ಚಂದ್ರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications