Love Me If You Dare OTT: ಸದ್ದಿಲ್ಲದೆ ಒಟಿಟಿಗೆ ಬಂತು ರೋಮ್ಯಾಂಟಿಕ್ ಹಾರರ್ ಥ್ರಿಲ್ಲರ್ ಸಿನಿಮಾ; ಎಲ್ಲಿ ಯಾವಾಗ ಸ್ಟ್ರೀಮಿಂಗ್?
ಕೆಲವರಿಗೆ ಹಾರರ್ ಸಿನಿಮಾ ಇಷ್ಟ... ಮತ್ತೆ ಕೆಲವರಿಗೆ ಥ್ರಿಲ್ಲರ್.. ಇನ್ನು ಹಲವರಿಗೆ ರೋಮ್ಯಾಂಟಿಕ್ ಫಿಲಂ ಇಷ್ಟ... ಆದರೆ, ಇವೆಲ್ಲಾ ಒಟ್ಟಿಗೆ ಸಿಗುವ ಸಿನಿಮಾ ನಿಮ್ಮ ಮನೆಯಲ್ಲಿಯೇ ಕುಳಿತು ನೋಡಬಹುದು ಎಂದರೆ ಸಿನಿ ಪ್ರೇಕ್ಷಕರಿಗೆ ಹಬ್ಬವೇ ಸರಿ. ಈಗ ಅಂತಹದ್ದೆ ಒಂದು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಹೌದು... ಇತ್ತೀಚೆಗೆ ಥಿಯೇಟರ್‌ಗೆ ಕಾಲಿಟ್ಟಿದ್ದ 'ಲವ್ ಮಿ - ಇಫ್ ಯು ಡೇರ್' ಸಿನಿಮಾ ಒಟಿಟಿಗೆ ಬರಲಿದೆ. ರೌಡಿ ಬಾಯ್ಸ್ ನಾಯಕ ಆಶಿಶ್ ರೆಡ್ಡಿ ಮತ್ತು ಬೇಬಿ ನಾಯಕಿ ವೈಷ್ಣವಿ ಚೈತನ್ಯ ಅಭಿನಯದ ಈ ಚಿತ್ರ ಮೇ ಕೊನೆಯ ವಾರದಲ್ಲಿ ಬಿಡುಗಡೆಯಾಗಿತ್ತು. ಮೂರು ವಾರಗಳ ಅಂತರದಲ್ಲಿಯೇ ಒಟಿಟಿಗೆ ಕಾಲಿಡುತ್ತಿದೆ.

ದಿಲ್ ರಾಜು ಅವರ ಸೋದರಳಿಯ ಆಶಿಶ್ ರೆಡ್ಡಿ ಮತ್ತು ಬೇಬಿ ಖ್ಯಾತಿಯ ವೈಷ್ಣವಿ ಚೈತನ್ಯ ನಟಿಸಿರುವ ಈ ಹಾರರ್ ಥ್ರಿಲ್ಲರ್, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ ಮೂರು ವಾರಗಳ ನಂತರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮತ್ತೆ ಸುದ್ದಿ ಮಾಡಲಿದೆ. ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಈ ಚಿತ್ರ ಜೂನ್ 20 ರಂದು ಸ್ಟ್ರೀಮ್ ಆಗಲಿದೆ ಎಂಬ ಮಾಹಿತಿಯಿದೆ. ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ತೆಲುಗಿನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಚಿತ್ರಮಂದಿರಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ 'ಲವ್ ಮಿ - ಇಫ್ ಯು ಡೇರ್', OTT ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬ ನಿರೀಕ್ಷೆಯಿಟ್ಟುಕೊಂಡಿದೆ ಚಿತ್ರತಂಡ. ಚಿತ್ರದಲ್ಲಿ ರವಿ ಕಿಶನ್, ಸಿಮ್ರಾನ್ ಚೌಧರಿ, ಮತ್ತು ಸಂಯುಕ್ತಾ ಮುಂತಾದವರ ಗಮನಾರ್ಹ ಅಭಿನಯವಿದೆ.
ಹರ್ಷಿತ್ ರೆಡ್ಡಿ, ಹಂಶಿತಾ ರೆಡ್ಡಿ, ಮತ್ತು ನಾಗ ಮಲ್ಲಿಡಿ ನಿರ್ಮಿಸಿರುವ, ನಿರ್ದೇಶಕ ಅರುಣ್ ಭೀಮವರಪು ಅಕ್ಷನ್ ಕಟ್ ಹೇಳಿರುವ ಲವ್ ಮಿ- ಇಫ್ ಯು ಡೇರ್ ಚಿತ್ರಕ್ಕೆ ಪಿಸಿ ಶ್ರೀರಾಮ್ ಅವರ ಛಾಯಾಗ್ರಹಣ ಮತ್ತು ಎಂಎಂ ಕೀರವಾಣಿ ಅವರ ಸಂಗೀತವಿದೆ. ಟೀಸರ್ ಗಳು, ಟ್ರೇಲರ್ ಗಳ ಮೂಲಕ ಜನರಲ್ಲಿ ಕುತೂಹಲ ಮೂಡಿಸಿದ್ದ ಈ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯವಿರಲಿದೆ.

ಆಶಿಶ್ ರೆಡ್ಡಿ ರೌಡಿ ಬಾಯ್ಸ್ ಚಿತ್ರದ ಮೂಲಕ ಹೀರೋ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ತನ್ನ ಮೊದಲ ಚಿತ್ರದಿಂದ ನಟನಾಗಿ ಭರವಸೆ ಮೂಡಿಸಿದ್ದರು. ಆದರೆ, ಈ ಚಿತ್ರ ಕಮರ್ಷಿಯಲ್ ಹಿಟ್ ಆಗಲಿಲ್ಲ. ಆ ನಂತರ ಸುಕುಮಾರ್ ಅವರ ಶಿಷ್ಯಡು ಜೊತೆ ಸೆಲ್ಫಿಶ್ ಎಂಬ ಸಿನಿಮಾ ಅನೌನ್ಸ್ ಮಾಡಿದರು. ಸದ್ಯ ಈ ಸಿನಿಮಾ ಶೂಟಿಂಗ್ ಹಂತದಲ್ಲಿದೆ.
ಮತ್ತೊಂದೆಡೆ, ಬೇಬಿ ಚಿತ್ರದ ಮೂಲಕ ವೈಷ್ಣವಿ ಚೈತನ್ಯ ರಾತ್ರೋರಾತ್ರಿ ಸ್ಟಾರ್‌ಡಮ್ ಪಡೆದರು. ಈ ಸಿನಿಮಾ ತಂದ ಕ್ರೇಜ್‌ನಿಂದ ವೈಷ್ಣವಿ ಏಕಕಾಲಕ್ಕೆ ಎರಡ್ಮೂರು ಸಿನಿಮಾಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅದರಲ್ಲಿ ಸಿದ್ದು ಜೊನ್ನಲಗಡ್ಡ ಅಭಿನಯದ 'ಜಾಕ್' ಚಿತ್ರವೂ ಒಂದು. ಬೇಬಿ ಜೋಡಿ ಆನಂದ್ ದೇವರಕೊಂಡ ಜೊತೆ ಇನ್ನೊಂದು ಸಿನಿಮಾ ಕೂಡ ಮಾಡುತ್ತಿದ್ದಾರೆ.












Click it and Unblock the Notifications