Hansika Motwani: ಆಪ್ತ ಸ್ನೇಹಿತೆಯ ಪತಿಯೊಂದಿಗೆ ಮದುವೆ, ಮೂರೇ ವರ್ಷಕ್ಕೆ ಖ್ಯಾತ ನಟಿ ಡಿವೋರ್ಸ್?
ಇತ್ತೀಚೆಗೆ ಸೆಲೆಬ್ರಿಟಿಗಳ ಡಿವೋರ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಅಗ್ನಿಸಾಕ್ಷಿಯಾಗಿ ಅದ್ಧೂರಿಯಾಗಿ ಮದುವೆಯಾದ ಸೆಲೆಬ್ರಿಟಿಗಳು ದಿಢೀರನೆ ಡಿವೋರ್ಸ್ ಘೋಷಿಸಿ ಶಾಕ್ ನೀಡಿದ್ದಾರೆ. ಈ ಸಾಲಿನಲ್ಲಿ ಈಗ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಸುದ್ದಿಯಾಗಿದ್ದಾರೆ. ಕನ್ನಡದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಬಿಂದಾಸ್ ಸಿನಿಮಾದಲ್ಲಿ ಹನ್ಸಿಕಾ ನಟಿಸಿದ್ದರು. ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿರುವ ಹನ್ಸಿಕಾ 2022ರಲ್ಲಿ ಉದ್ಯಮಿ ಸೊಹೈಲ್ ಖತುರಿಯಾ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಅವರ ಡಿವೋರ್ಸ್ ವದಂತಿ ಜೋರಾಗಿಯೇ ಕೇಳಿಬಂದಿತ್ತು. ಈಗ ಇದಕ್ಕೆ ಪುಷ್ಟಿ ನೀಡುವ ಬೆಳವಣಿಗೆಯೊಂದು ನಡೆದಿದೆ.
ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ತಮ್ಮ ಡಿವೋರ್ಸ್ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ವಿಚ್ಛೇದನದ ವದಂತಿಗಳು ಹರಡುತ್ತಿರುವ ನಡುವೆ, ಹನ್ಸಿಕಾ ತಮ್ಮ ಹೆಸರು ಬದಲಾಯಿಸಿದ್ದಾರೆ. ಈ ಮೂಲಕ ಅವರು ತಮ್ಮ ವೈಯಕ್ತಿಕ ಜೀವನದ ಕುರಿತಾದ ಊಹಾಪೋಹಗಳನ್ನು ಸಾರ್ವಜನಿಕವಾಗಿ ತಿಳಿಸದಿದ್ದರೂ, ಈ ಸಣ್ಣ ಬದಲಾವಣೆಯ ಮೂಲಕ ಸುಳಿವು ನೀಡಿದ್ದಾರೆ.

ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿದ ಹನ್ಸಿಕಾ, ಹೃತಿಕ್ ರೋಷನ್ ಅವರ ಕೋಯಿ ಮಿಲ್ ಗಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ಅವರು ಶಕ ಲಕ ಬೂಮ್ ಬೂಮ್‌ನಂತಹ ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರು ಅಲ್ಲು ಅರ್ಜುನ್ ನಟಿಸಿದ ದೇಶಮುದುರು ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರ ಪುರಿ ಜಗನ್ನಾಥ್ ನಿರ್ದೇಶಿಸಿ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಕೂಡ ಆಗಿತ್ತು. ಹನ್ಸಿಕಾ ಅವರ ಸೌಂದರ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಮಾರುಹೋಗಿದ್ದರು. ಈ ಒಂದೇ ಚಿತ್ರದೊಂದಿಗೆ ಸ್ಟಾರ್ ಹೀರೋಯಿನ್ ಆಗಿದ್ದರು.
ಹನ್ಸಿಕಾ ಸೊಹೈಲ್ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರು. ಇದು ಹನ್ಸಿಕಾಗೆ ಮೊದಲ ಮದುವೆಯಾದರೆ, ಸೊಹೈಲ್‌ಗೆ ಎರಡನೇ ಮದುವೆಯಾಗಿದೆ. ಹನ್ಸಿಕಾ ಮೋಟ್ವಾನಿ ತನ್ನ ಆಪ್ತ ಸ್ನೇಹಿತ ರಿಂಕಿಯ ಮಾಜಿ ಪತಿಯಾಗಿದ್ದ ಸೊಹೈಲ್ ಅವರನ್ನು ವಿವಾಹವಾದರು. ರಿಂಕಿಯಿಂದ ವಿಚ್ಛೇದನ ಪಡೆದ ನಂತರ, ಸೊಹೈಲ್ ಖತುರಿಯಾ ಹನ್ಸಿಕಾ ಅವರನ್ನು ಪ್ರೀತಿಸುತ್ತಿದ್ದರು. ಹನ್ಸಿಕಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನ್ನ ಆತ್ಮೀಯ ಸ್ನೇಹಿತೆಯ ಮೂಲಕ ಸೊಹೈಲ್ ಅವರನ್ನು ಭೇಟಿಯಾದೆ ಎಂದು ಹೇಳಿಕೊಂಡಿದ್ದರು.
ಸ್ನೇಹಿತೆಯ ಮಾಜಿ ಪತಿ ಜೊತೆ ಮದುವೆ
ಜೈಪುರದ ಮುಂಡೋಟಾ ಕೋಟೆ ಅರಮನೆಯಲ್ಲಿ ನಡೆದ ಇವರ ಹನ್ಸಿಕಾ ಅವರ ಮದುವೆಗೆ ಸ್ನೇಹಿತೆ ರಿಂಕಿ ಕೂಡ ಅವರ ಮದುವೆಗೆ ಹಾಜರಾಗಿದ್ದರು. ಆದರೆ ಕೆಲವು ಸಮಯದಿಂದ ಇಬ್ಬರೂ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ವದಂತಿಗಳು ಹರಡಿದ್ದವು. ದಂಪತಿಗಳು ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ, ಹನ್ಸಿಕಾ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಿಂಗಲ್ ಫೋಟೋಗಳನ್ನು ಮಾತ್ರವೇ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಪತಿ ಸೊಹೈಲ್ ಅವರನ್ನು ಅನ್‌ಫಾಲೋ ಕೂಡ ಮಾಡಿದ್ದಾರೆ. ಇದರ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಉಪನಾಮವನ್ನು ಸಹ ಬದಲಾಯಿಸಿದ್ದಾರೆ. ಇದು ಡಿವೋರ್ಸ್ ಸುದ್ದಿಯನ್ನು ಮತ್ತಷ್ಟು ಬಲಪಡಿಸಿದೆ. ಹೀಗಾಗಿ ಇವರು ದೂರವಾಗಿರುವುದು ಸತ್ಯ ಎಂದು ಹೇಳಲಾಗುತ್ತಿದೆ.












Click it and Unblock the Notifications