ಗೌತಮಿ ಜಾದವ್ ಜೋಡಿ ಜೊತೆ ಉಗ್ರಂ ಮಂಜು ವನದುರ್ಗಾ ದೇವಾಲಯಕ್ಕೆ ಭೇಟಿ
ಪ್ರತಿ ಬಿಗ್ ಬಾಸ್ ಸೀಸನ್‌ನಲ್ಲಿಯೂ ಮನೆಯೊಳಗೆ ಒಂದಿಷ್ಟು ಜನರು ಸ್ನೇಹಿತರಾಗಿರುತ್ತಾರೆ. ಆದರೆ ಹೊರಗೆ ಬರುತ್ತಿದ್ದಂತೆ ದೂರವಾಗಿ ಬಿಡುತ್ತಾರೆ. ಉಳಿಸಿಕೊಂಡವರು ಕೆಲವರು ಮಾತ್ರ. ಅದೇ ರೀತಿ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಗಳಲ್ಲಿಯೂ ಕೆಲವರ ನಡುವೆ ಒಂದೊಳ್ಳೆ ಸ್ನೇಹ ಬಾಂಧವ್ಯವಿತ್ತು. ಹೊರ ಬಂದ ಮೇಲೂ ಕೂಡ ಆ ಸ್ನೇಹವನ್ನು ಈ ಸೀಸನ್‌ನ ಸ್ಪರ್ಧಿಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಜನ್ 11ರ ಒಂದು ಸುಂದರವಾದ ಒಳ್ಳೆಯ ಗೆಳೆತನ ಅಂದರೆ ಗೌತಮಿ ಜಾದವ್, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ. ಇವರ ನಡುವೆ ಕಾರ್ಯಕ್ರಮ ಆರಂಭದಲ್ಲೇ ಒಂದೊಳ್ಳೆ ಸ್ನೇಹ ಬೆಳೆದುಕೊಂಡಿತ್ತು. ಅದೇನಾಯ್ತೋ ಗೊತ್ತಿಲ್ಲ ಮೋಕ್ಷಿತಾ ಕೆಲ ದಿನಗಳ ನಂತರ ಇವರಿಬ್ಬರ ಸ್ನೇಹದಿಂದ ಅಂತರ ಕಾಯ್ದುಕೊಂಡರು. ಕೊನೆಯ ದಿನಗಳಲ್ಲಿ ಮತ್ತೆ ಒಂದಾದರು.

ಆದರೆ ಗೌತಮಿ ಜಾದವ್ ಮತ್ತು ಉಗ್ರಂ ಮಂಜು, ಗೌತಮಿ ಮನೆಯಿಂದ ಹೊರ ಹೋಗುವ ಕೊನೆ ದಿನದ ವರೆಗೂ ಉತ್ತಮ ಸ್ನೇಹಿತರಾಗಿದ್ದರು. ಬಿಗ್ ಬಾಸ್ ಮುಗಿದ ಮೇಲೂ ಈ ಸ್ನೇಹವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇರುವಾಗ ಗೌತಮಿ ಜಾದವ್ ಹಾಗೂ ಉಗ್ರಂ ಮಂಜು ಸ್ನೇಹದ ಬಗ್ಗೆ ಅನೇಕ ನೆಗೆಟಿವ್ ಕಮೆಂಟ್‌ಗಳು ಬಂದಿದ್ದವು. ಆದರೆ ಅದ್ಯಾವುದಕ್ಕೂ ಲಕ್ಷ್ಯ ಕೊಡದೇ ಇಬ್ಬರೂ ತಮ್ಮ ಸ್ನೇಹವನ್ನು ಮುಂದುವರಿಸಿದ್ದಾರೆ.
ಇದೀಗ ಉಗ್ರಂ ಮಂಜು ಅವರ ಕುಟುಂಬ ಹಾಗೂ ಗೌತಮಿ ಜಾದವ್ ಅವರು ಕುಟುಂಬ ಜೊತೆಯಾಗಿ ಗೌತಮಿ ಅವರ ಮೆಚ್ಚಿನ ತಾಣ ವನದುರ್ಗಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಈ ದೇವಾಲಯವಿದ್ದು, ಗೌತಮಿ ಜಾದವ್ ವನದುರ್ಗಾ ತಾಯಿಯನ್ನು ಅಪಾರವಾಗಿ ನಂಬುತ್ತಾರೆ. ಇದೀಗ ಎರಡು ಕುಟುಂಬಗಳು ಜೊತೆಯಾಗಿ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಉಗ್ರಂ ಮಂಜು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದೇವಾಲಯಕ್ಕೆ ಭೇಟಿದ ಫೋಟೋಗಳನ್ನು ಹಂಚಿಕೊಂಡಿದ್ದು, 'ಕುಟುಂಬ ಸಮೇತವಾಗಿ ವನದುರ್ಗ ತಾಯಿ ಆಶೀರ್ವಾದ ಪಡೆದ ಕ್ಷಣ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಉಗ್ರಂ ಮಂಜು ಕುಟುಂಬದ ಜೊತೆ ಗೌತಮಿ ಜಾದವ್ ಹಾಗೂ ಅಭಿಷೇಕ್ ಜೋಡಿ ನೋಡಿದ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಬ್ಬರ ಸ್ನೇಹ ಹೀಗೆ ಇರಲಿ ಎಂದು ಹಾರೈಸಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಬದಲಾದ ಉಗ್ರಂ ಮಂಜು ಮಾಂಸಹಾರ ಸೇವಿಸುವುದನ್ನು ಹಾಗೂ ಮದ್ಯಪಾನ ಮಾಡುವುದನ್ನು ಬಿಟ್ಟಿದ್ದಾರಂತೆ. 48 ದಿನ ತಾಯತ ಕಟ್ಟಿಸಿ ಕೊಂಡಿದ್ದೇನೆ. ನಾನ್ ವೆಜ್ ತಿನ್ನುವುದನ್ನು ಹಾಗೂ ಡ್ರಿಂಕ್ಸ್ ಬಿಟ್ಟಿದ್ದೇನೆ ಎಂದು ಸ್ವತಃ ಮಂಜು ಅವರೇ ಹೇಳಿಕೊಂಡಿದ್ದರು.












Click it and Unblock the Notifications