ಗಣೇಶ್ ರಾತ್ರೋ ರಾತ್ರಿ ಸೂಪರ್‌ಸ್ಟಾರ್ ಆಗಿದ್ದು, ಪುನೀತ್ ರಾಜ್ ಕುಮಾರ್ ಬಿಟ್ಟ ಆ ಚಿತ್ರದಿಂದ..
ಅಪ್ಪು.. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ಅಪ್ಪು ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಅಜರಾಮರ. ಪುನೀತ್ ರಾಜ್ ಕುಮಾರ್ ಅವರ ಒಳ್ಳೆಯ ಕೆಲಸಗಳು ಇಂದಿಗೂ ಜೀವಂತವಾಗಿವೆ. ಅದೇ ರೀತಿ ನಟ ಪುನೀತ್ ರಾಜ್‌ಕುಮಾರ್ ಅವರ ನಿರ್ಧಾರವು ನಟ ಗಣೇಶ್ ಅವರಿಗೆ ಅಪಾರ ಯಶಸ್ಸನ್ನು ತಂದಿತು. ಏನು ಆ ಯಶಸ್ಸು ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಹೌದು, ಕನ್ನಡ ಚಿತ್ರರಂಗದ ನಟ ಗೋಲ್ಡನ್ ಸ್ಟಾರ್ ಗಣೇಶ್ ಇಂದು ಅಂದ್ರೆ ಜುಲೈ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು, ಈಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಇನ್ನೂ ಕಿರುತೆರೆಯಲ್ಲಿದ್ದ ಗಣೇಶ್ ಅವರ ಬದುಕು ಬದಲಿಸಿದ್ದು ಮುಂಗಾರು ಮಳೆ' ಚಿತ್ರ. ಮುಂಗಾರು ಮಳೆ ಸಿನಿಮಾದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರು ನಟಿಸಬೇಕಿತ್ತು. ಆದರೆ, ಈ ಚಿತ್ರವು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೈ ಸೇರಿತು ಮತ್ತು ಸೂಪರ್ ಹಿಟ್ ಆಯಿತು. ಈ ಚಿತ್ರವೇ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಲು ಕಾರಣವಾಗಿದೆ.

ಯೋಗರಾಜ್ ಭಟ್ ಅವರು ಮುಂಗಾರು ಮಳೆ ಚಿತ್ರವನ್ನು ಮಾಡಲು ನಿರ್ಧರಿಸಿದ್ದರು. ಈ ಸಿನಿಮಾ ಅಷ್ಟು ದೊಡ್ಡ ಹಿಟ್ ಆಗುತ್ತದೆ ಎಂದು ಯೋಗರಾಜ್ ಭಟ್ಅವರು ಕೂಡ ಅಂದುಕೊಂಡು ಇರಲಿಲ್ಲ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ನಟಿಸಬೇಕಿತ್ತು. ಈ ಸಿನಿಮಾದ ಕಥೆಯನ್ನು ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕೂಡ ಕಥೆ ಕೇಳಿದ್ದರು. ಆದರೆ, ಪುನೀತ್ ಈ ಚಿತ್ರವನ್ನು ಮಾಡದಿರಲು ನಿರ್ಧರಿಸಿದರು.
ನಾವು ಆರೆಂಟು ನಿರ್ಮಾಪಕರಿಗೆ ಹೇಳಿದ್ದೆವು. ಸಿನಿಮಾಗೆ ಏನು ಬೇಕೋ ಅದು ಇದೆ ಎಂದು ಅಪ್ಪು ಹಾಗೂ ರಾಘಣ್ಣ ಹೇಳಿದರು. ಈಗ ಪುನೀತ್ ಅವರ ಇಮೇಜ್ಗೆ ತಕ್ಕಂತೆ ಸಿನಿಮಾ ಮಾಡಲು ಹೋಗಿ ಕಥೆಯನ್ನು ಗಬ್ಬೆಬಿಸಬೇಡಿ ಎಂದು ಅಪ್ಪು ಕೋರಿಕೊಂಡರು. ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದು ಹೇಳಿದ್ದರು. ಅವರು ಕೊಟ್ಟ ಅಭಿಪ್ರಾಯವೂ ಅರ್ಥಪೂರ್ಣ ನಿರ್ದೇಶನ ಆಗಿತ್ತು. ಪುನೀತ್ ರಾಜ್ಕುಮಾರ್ ಅವರೇ ಮುಂಗಾರು ಮಳೆಯನ್ನು ಮಾಡಿದ್ದರೆ ಅವರ ಹೆಸರಿಗೆ ಮತ್ತೊಂದು ಯಶಸ್ಸು ಸೇರ್ಪಡೆ ಆಗಿರುತ್ತಿತ್ತು. ಆದರೆ, ಪುನೀತ್ ರಾಜ್ ಕುಮಾರ್ ಅವರು ಅದನ್ನು ಮಾಡಲಿಲ್ಲ. ಹೊಸಬರಿಗೆ ಬರಲು ಅವಕಾಶ ಮಾಡಿಕೊಟ್ಟರು. ಪುನೀತ್ ರಾಜ್ಕುಮಾರ್ ಅವರು ಈ ಸಿನಿಮಾವನ್ನು ಬಿಡದೆ ಇದ್ದಿದ್ದರೆ ಅದು ಗಣೇಶ್ಗೆ ಸಿಗುತ್ತಿರಲಿಲ್ಲವೇನೋ. ಇಂದು ಗಣೇಶ್ ಸೂಪರ್ ಹಿಟ್ ಆಗಲು ಪುನೀತ್ ರಾಜ್ ಕುಮಾರ್ ಅವರು ಕೂಡ ಒಂದು ಕಾರಣ ಆದರು ಎಂದು ಹೇಳಲಾಗಿದೆ.












Click it and Unblock the Notifications