ಗಗನಸಖಿ ಜೊತೆ ಲಿವ್-ಇನ್, ನಂಬಿದ್ದಕ್ಕೆ ಆ ಪಾಠ ಕಲಿಸಿದಳು: ನಟ ಗಗನ್ ಚಿನ್ನಪ್ಪ
ಕನ್ನಡ ಕಿರುತೆರೆಯ "ಸೀತಾರಾಮ", "ಮಂಗಳ ಗೌರಿ ಮದುವೆ" ಸೀರಿಯಲ್ ಖ್ಯಾತಿಯ ನಟ ಗಗನ್ ಚಿನ್ನಪ್ಪ ಅವರು ತಮ್ಮ ಲವ್‌ಸ್ಟೋರಿ ರಿವೀಲ್ ಮಾಡಿದ್ದಾರೆ. ಹುಡುಗಿಯ ಅಂದ ನೋಡಿ ಹೋಗಿದ್ದಕ್ಕೆ ಏನಾಯ್ತು ಎಂದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. 'ನನ್ನ ಲೈಫ್‌ನ ಮೊದಲ ಬ್ಯೂಟಿಫುಲ್ ಲವ್‌ಸ್ಟೋರಿ ಅದು, ಅವರು ಅಬುಧಾಬಿಯಲ್ಲಿದ್ರು, ದೊಡ್ಡ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡ್ತಿದ್ರು. ಫೇಸ್‌ಬುಕ್‌ನಲ್ಲಿ ಇಬ್ಬರೂ ಫ್ರೆಂಡ್ಸ್ ಆಗಿದ್ವಿ. ಒಂದು ದಿನ ತಮ್ಮ ಪ್ರೊಫೈಲ್‌ನಲ್ಲಿ ಫೋಟೋ ಹಾಕಿದ್ರು, ಅದನ್ನು ನೋಡಿ ಇಷ್ಟು ಚೆನ್ನಾಗಿರೋ ಹುಡುಗಿ ನನ್ನ ಫ್ರೆಂಡಾ ಅನ್ಕೊಂಡೆ. ಇಬ್ಬರೂ ಚಾಟ್ ಮಾಡಲು ಶುರು ಮಾಡಿದ್ವಿ' ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನಲ್‌ನಲ್ಲಿ ಗಗನ್ ರಿವೀಲ್ ಮಾಡಿದ್ದಾರೆ.
'ಲಂಡನ್‌ನಿಂದ ದಿನಸಿ ತರುತ್ತಿದ್ರು'
'ನಾವು ಆರು ತಿಂಗಳ ಕಾಲ ಒಬ್ಬರ ಮುಖ ಒಬ್ಬರು ನೋಡಲೇ ಇಲ್ಲ. ನಂತರ ಬೆಂಗಳೂರಿಗೆ ಬಂದ್ರು, ಮೀಟ್ ಆದ್ವಿ. ನಮ್ಮನೆಗೆ ಈರುಳ್ಳಿ ಕೂಡ ಲಂಡನ್‌ನಿಂದ ಬರ್ತಿತ್ತು. ಎರಡು ತಿಂಗಳಿಗೊಮ್ಮೆ ಅವಳು ಇಲ್ಲಿಗೆ ಬರ್ತಿದ್ರು. ಅಲ್ಲಿಂದ ಬರ್ತಾ ನನಗೆ ಲಂಡನ್‌ನಿಂದ ದಿನಸಿ ಕೂಡ ತರ್ತಿದ್ರು. ನನಗೆ ಅದನ್ನ ನೋಡಿ ಸಿಕ್ಕಾಪಟ್ಟೆ ಇಷ್ಟ ಆಗೋಯ್ತು. ಇದೇ ನನ್ನ ಪ್ರಪಂಚ ಅಂದುಕೊಂಡೆ. ಮೂರು ವರ್ಷ ಎಲ್ಲವೂ ಚೆನ್ನಾಗೇ ಇತ್ತು' ಎಂದಿದ್ದಾರೆ ಗಗನ್ ಚಿನ್ನಪ್ಪ.

'ಆದರೆ ಅವರು ಸ್ಕ್ಯಾಮ್‌ಗಳೆಲ್ಲ ಮಾಡಿ ಬಂದಿದ್ರು. ಬ್ಯಾಂಕ್ ಲೋನ್ ತಗೊಂಡಿದ್ರು, ಅದನ್ನ ಕಟ್ಟದೆ ಇಲ್ಲಿಗೆ ಬಂದುಬಿಟ್ಟಿದ್ರು. ಇದು ನನಗೆ ಗೊತ್ತಿರಲಿಲ್ಲ. ಅದೇ ಟೈಮಲ್ಲಿ ಕೋವಿಡ್ ಆಗಿ ಕೆಲಸ ಕೂಡ ಬಿಟ್ಟುಬಂದ್ರು. ಆಗ ನನ್ನ ಮನೆಯಲ್ಲಿ ಇರಲು ಅವಕಾಶ ಕೊಟ್ಟೆ. ಒಂದು ರೀತಿ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲೇ ಇದ್ವಿ. ಎಲ್ಲವೂ ಚೆನ್ನಾಗಿತ್ತು. ಹುಡುಗಿಯರು ಟಾಕ್ಸಿಕ್ ಅಲ್ಲ ಅಂತ ನಂಬ್ತೀವಿ. ಹುಡುಗರ ಜಾತೀನೇ ಹಾಗೆ, ಕಣ್ಣೀರು ಹಾಕಿದ ಕೂಡಲೇ ನಾವು ಕರಗಿಬಿಡ್ತೀವಿ' ಎಂದಿದ್ದಾರೆ.
'ಕೆಲಸ ಹೋದ್ರೂ ಇಬ್ಬರನ್ನ ನಾನೇ ಸಾಕಿದೆ'
'ಆಗ ಲೋನ್ ಬಗ್ಗೆ ಪ್ರಸ್ತಾಪಿಸಿ, ನೀನು ದೊಡ್ಡ ಸ್ಟಾರ್ ಆದ್ಮೇಲೆ ಎಲ್ಲ ಕ್ಲಿಯರ್ ಮಾಡ್ತೀಯಲ್ಲ? ಅಂದ್ರು. ನಾನು ಕೂಡ ಆಗ ಹೌದು ಅಂದೆ. ಅವರ ಅಮ್ಮ ಕೂಡ ನನ್ನ ಮನೆಗೆ ಬಂದ್ರು. ಇಬ್ಬರನ್ನೂ ನಾನೇ ಸಾಕಿದ್ದೀನಿ. ಆಗ ಮಂಗಳ ಗೌರಿ ಸೀರಿಯಲ್ ಮಾಡ್ತಿದ್ದೆ. ನನಗೆ ಬರುತ್ತಿದ್ದ ಹಣ ಸಾಕಾಗುತ್ತಿರಲಿಲ್ಲ. ಅದರಲ್ಲೂ ಅವರನ್ನ ಸಾಕುತ್ತಿದ್ದೆ. ನನ್ನ ಖರ್ಚಿಗೆ ದುಡ್ಡೇ ಉಳಿಯುತ್ತಿರಲಿಲ್ಲ. ಆಗ ಯಾವುದೋ ನನಗೆ ಇಷ್ಟವಿಲ್ಲದ ಪಾತ್ರ ಮಾಡೋಕೆ ಹೇಳಿದ್ರು. ಮಾಡಲ್ಲ ಅಂತ ಸೀರಿಯಲ್ ಬಿಟ್ಟು ಹೊರಬಂದೆ. ಆ ಮೇಲೆ ಯಾವುದೇ ಆಫರ್ ಸಿಗಲಿಲ್ಲ. ಆಗ ಹಣವಿಲ್ಲದೆ, ಇದ್ದ ಎಲ್ಲವನ್ನೂ ಮಾರಿಕೊಂಡೆ' ಎಂದು ಹೇಳಿದ್ದಾರೆ.
'ಪುರುಷರ ಪರ್ಫ್ಯೂಮ್ ವಾಸನೆ ಬಂತು!'
'ಒಂದು ದಿನ ಬಿಸಿನೆಸ್ ಮೀಟಿಂಗ್ ಅಂತ ಪಾರ್ಟಿ ಡ್ರೆಸ್ ಹಾಕಿದ್ರು. ನಂಗೆ ಅನುಮಾನ ಬಂದಿತ್ತು. ನೋಡಿದ್ರೆ ಪುರುಷರ ಪರ್ಫ್ಯೂಮ್ ವಾಸನೆ ಬಂತು. ನನಗೆ ಹುಡುಗರು ಹಾಕೋ ಪರ್ಫ್ಯೂಮ್ ಚೆನ್ನಾಗಿ ಗೊತ್ತಾಗುತ್ತೆ. ಆ ವ್ಯಕ್ತಿಯೇ ಬಂದು ನನ್ನ ಮುಂದೆ ನಾನು ಹೀಗೆ ಮಾಡಿದೆ ಅಂತ ಹೇಳಿಕೊಳ್ತಾನೆ. ಮತ್ತೊಂದು ದಿನ ಫೋನ್ ಕಟ್ ಆಗಿರಲಿಲ್ಲ, ನೋಡಿದ್ರೆ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಳ್ತಿದ್ರು. ಕೊನೆಗೆ ಮನೆಯಿಂದ ಹೊರ ಹೋಗಿ ಅಂದಿದ್ದಕ್ಕೆ ಮನೆ ನಂದು ಅಂದ್ರು. ಮನೆಯಿಂದ ಹೊರ ಹಾಕಿದ್ದಕ್ಕೆ ಶಾಪ ಹಾಕಿ ಹೋದ್ರು. ಅಂದ ಚೆಂದ ನೋಡಿ ಹುಡುಗಿ ಹಿಂದೆ ಹೋಗಬಾರದು ಅಂತಾ ಅವತ್ತೇ ಬುದ್ದಿ ಕಲಿತೆ' ಎಂದಿದ್ದಾರೆ ಗಗನ್ ಚಿನ್ನಪ್ಪ.












Click it and Unblock the Notifications