Prabhas' Marriage: ವಿಶೇಷ ವ್ಯಕ್ತಿ ಬರುತ್ತಿದ್ದಾರೆ; ಪೋಸ್ಟ್ ಹಾಕಿ ಮದುವೆ ಸುಳಿವು ಕೊಟ್ರಾ ಡಾರ್ಲಿಂಗ್ ಪ್ರಭಾಸ್!
ಹೈದರಾಬಾದ್, ಮೇ. 17: ಟಾಲಿವುಡ್ ಸೂಪರ್‌ಸ್ಟಾರ್ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಭಾರತೀಯ ಸಿನಿಮಾ ರಂಗದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ಅವರು ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೂಡ ಇತ್ತು. ಅವರ ಮದುವೆ ಬಗ್ಗೆ ಫ್ಯಾನ್ಸ್ ಪದೇ ಪದೇ ಕೇಳುತ್ತಲೆ ಇದ್ದರು.
ಸದ್ಯ ಶುಕ್ರವಾರ ಬೆಳಗ್ಗೆ, ನಟ ಪ್ರಭಾಸ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದು ಅದು ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಹೌದು... 44 ವರ್ಷ ದಾಟಿದರೂ ಕೂಡ ಮೋಸ್ಟ್ ಎಲಿಜೆಬೆಲ್ ಬ್ಯಾಚೂಲರ್ ಆಗಿರುವ ಪ್ರಭಾಸ್ ಮದುವೆಗೆ ಚಿತ್ರರಂಗ, ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಅವರು ಶೇರ್ ಮಾಡಿರುವ ಸ್ಟೇಟಸ್ ಎಲ್ಲರಿಗೂ ಖುಷಿ ನೀಡಿದೆ.

ಜೀವನಕ್ಕೆ ಸ್ಪೇಷಲ್ ವ್ಯಕ್ತಿ ಬರುತ್ತಿದ್ದಾರೆ!
ತೆಲುಗು ನಟ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದವರಿಂದ ಪ್ರೀತಿಯಿಂದ 'ಡಾರ್ಲಿಂಗ್' ಎಂದು ಕರೆಸಿಕೊಳ್ಳುವ ಅವರು, ತಮ್ಮ ಡಾರ್ಲಿಂಗ್ಸ್‌ಗಾಗಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ "ಡಾರ್ಲಿಂಗ್ಸ್ (ಫ್ಯಾನ್ಸ್).. ಕೊನೆಗೂ ನಮ್ಮ ಜೀವನಕ್ಕೆ ತುಂಬಾ ವಿಶೇಷವಾದ ವ್ಯಕ್ತಿಯೊಬ್ಬರು ಬರಲಿದ್ದಾರೆ.. ಕಾಯ್ತಾ ಇರಿ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದು ಅವರ ಮದುವೆ ಬಗ್ಗೆಯೇ ಎಂದು ಫ್ಯಾನ್ಸ್ಸ್ ಊಹಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ ಅಭಿಮಾನಿಗಳು ವಿವಿಧ ಫೋಸ್ಟ್‌ಗಳನ್ನು ಶೇರ್ ಮಾಡುತ್ತಾ ಹಬ್ಬ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಮದುವೆ ಬಗ್ಗೆಯೇ ಹೇಳಿದ್ದಾರಾ ಎಂಬ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ. ಕೆಲವರು ಪ್ರಭಾಸ್ ಅವರ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳುತ್ತಿದ್ದಾರೆ.

ಪ್ರಭಾಸ್ - ಅನುಷ್ಕಾ ಶೆಟ್ಟಿ ಸಂಬಂಧ
ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪ್ರೀತಿಸುತ್ತಿದ್ದಾರೆ. ಇಬ್ಬರು ಮದುವೆಯಾಗುತ್ತಾರೆ ಎಂಬ ವದಂತಿಯಿತ್ತು. ಇದರ ಜೊತೆಗೆ ಅವರು ತಮ್ಮ ಸಂಬಂಧಿಕರ ಮನೆಯ ಯುವತಿಯೊಂದಿಗೆ ವಿವಾಹವಾಗಲಿದ್ದಾರೆ ಎಂದು ಅವರ ವಿವಾಹದ ಬಗ್ಗೆ ಹಲವಾರು ವದಂತಿಗಳಿವೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟು ಅವರ ಜೋಡಿ ತೆರೆ ಮೇಲೆ ಹೆಚ್ಚು ಸೆಲೆಬ್ರೆಟ್ ಮಾಡುವ ಜೋಡಿಗಳಲ್ಲಿ ಒಂದು.
ಪರದೆಯ ಮೇಲೆ ಮಾತ್ರವಲ್ಲದೆ ಹೊರಗಡೆ ಕೂಡ ಇಬ್ಬರ ನಡುವೆ ಉತ್ತಮ ಸಂಬಂಧವಿದೆ. ಇಬ್ಬರ ಅಭಿಮಾನಿಗಳು ಮತ್ತು ಅವರ ಕುಟುಂಬಗಳು ಸಹ ಅವರು ಮದುವೆಯಾಗಬೇಕು ಎಂದು ಬಯಸುತ್ತಾರೆ. ಆದರೆ, ಪದೇ ಪದೇ, ಇಬ್ಬರೂ ನಟರು ಡೇಟಿಂಗ್ ವದಂತಿಗಳನ್ನು ನಿರಾಕರಿಸಿದ್ದು, ತಾವಿಬ್ಬರು ಕೇವಲ ಉತ್ತಮ ಸ್ನೇಹಿತರು ಎಂದು ಹೇಳಿದ್ದಾರೆ.
ಬಾಹುಬಲಿಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದ ಪ್ರಭಾಸ್
ಬಾಹುಬಲಿ 1 ಮತ್ತು ಬಾಹುಬಲಿ 2 ತೆಲುಗು ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡ ನಟ ಪ್ರಭಾಸ್. ಈಗ ಬ್ಯಾಕ್ ಟು ಬ್ಯಾಕ್ ಹಲವಾರು ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಬಾಹುಬಲಿ ಬಳಿಕ ಅವರಿಗೆ ಹೆಚ್ಚು ಸಕ್ಸಸ್ ಕೊಟ್ಟದ್ದು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ. ಇದಾದ ನಂತರ ಮಾರುತಿ ನಿರ್ದೇಶನದಲ್ಲಿ 'ದಿ ರಾಜಾಸಾಬ್' ಎಂಬ ಕಾಮಿಡಿ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.











Click it and Unblock the Notifications