‘ಸಲಾರ್’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್? ಇನ್ನೇನು ಸಿಗುತ್ತೆ ಉತ್ತರ!
ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಎಲ್ಲೆಲ್ಲೂ ಹವಾ ಎದ್ದಿದೆ. ಮತ್ತೊಂದು ಕಡೆ ನಮ್ಮ ಕನ್ನಡ ಸಿನಿಮಾ ಮಂದಿ ಈಗ ಟಾಲಿವುಡ್ ಸ್ಟಾರ್ ಪ್ರಭಾಸ್ ಅವರ ಸಿನಿಮಾ ನಿರ್ಮಿಸುತ್ತಿದ್ದಾರೆ. ಪ್ರಭಾಸ್ ಅವರ ಸಲಾರ್ ಸಿನಿಮಾಗೆ ಬಂಡವಾಳ ಹಾಕಿದ್ದು, ಕನ್ನಡಿಗರ ಸಂಸ್ಥೆ 'ಹೊಂಬಾಳೆ'. ಹಾಗೆ ಸಲಾರ್‌ಗೆ ಆ್ಯಕ್ಷನ್ & ಕಟ್ ಹೇಳಿರುವುದು ನಮ್ಮ ಸಿನಿ ಇಂಡಸ್ಟ್ರಿಯ ಪ್ರಶಾಂತ್ ನೀಲ್ ಅವರು. ಹೀಗಿದ್ದಾಗ ಮತ್ತೊಂದು ಸುದ್ದಿ ಯಶ್‌ರ ಬಗ್ಗೆ ಹರಿದಾಡ್ತಾ, ಸಂಚಲನ ಸೃಷ್ಟಿಸುತ್ತಿದೆ.
ಪ್ರಭಾಸ್ ಸಿನಿಮಾದಲ್ಲಿ ಯಶ್ ಇರುತ್ತಾರಾ? ಸಲಾರ್ ಸಿನಿಮಾದಲ್ಲಿ ಯಶ್ ಅವರು ಕೂಡ ನಟನೆ ಮಾಡಿದ್ದಾರಾ? ಹೀಗೆ ಸಾವಿರಾರು ಪ್ರಶ್ನೆಗಳು ಜಗತ್ತಿನಾದ್ಯಂತ ಕೋಟ್ಯಂತರ ಫ್ಯಾನ್ಸ್ ತಲೆಯಲ್ಲಿ ಓಡಾಡುತ್ತಿವೆ. ಆದ್ರೂ ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈಗ 'ಸಲಾರ್-1' ಸಿನಿಮಾದ 2ನೇ ಟ್ರೇಲರ್ ಬಿಡುಗಡೆ ಆಗಲಿದೆ. ಈ ಟ್ರೇಲರ್‌ನಲ್ಲೇ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಇರ್ತಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಓಡಾಡುತ್ತಿದೆ. ಅರೆ ಈ ಸುದ್ದಿ ನಿಜಾನಾ? ಪ್ರಭಾಸ್ ಸಿನಿಮಾದಲ್ಲಿ ಯಶ್ ಕೂಡ ನಟಿಸ್ತಿದ್ದಾರಾ? ಮುಂದೆ ಓದಿ.

ಯಶ್ & ಪ್ರಭಾಸ್ ಜೋಡಿ ಮೋಡಿ?
ಅಂದಹಾಗೆ ಈ ಸುದ್ದಿ ಇಂದು ಅಥವಾ ನಿನ್ನೆಯದಲ್ಲ ಇಂತಹ ಸುದ್ದಿಗಳು ಹಲವು ವರ್ಷ ಹರಿದಾಡಿವೆ. ಯಾವಾಗ 'ಕೆಜಿಎಫ್-2' ರಿಲೀಸ್ ಆಗಿತ್ತೋ ಅದೇ ದಿನದಿಂದ ಯಶ್ ಮತ್ತು ಪ್ರಭಾಸ್ ಒಟ್ಟಿಗೆ ನಟನೆ ಮಾಡಲಿದ್ದಾರೆ ಅನ್ನೋ ಮಾತು ಹರಿದಾಡಿತ್ತು. ಈ ಮಾತಿಗೆಲ್ಲಾ ಪುಷ್ಟಿ ನೀಡುವಂತೆ ಇತ್ತೀಚೆಗೆ ಸಂದರ್ಶನ ಒಂದ್ರಲ್ಲಿ ಸಲಾರ್ ಸಿನಿಮಾದ ಬಾಲ ಗಾಯಕಿಯು, ಯಶ್ ಅವರು ಸಲಾರ್ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಹಿಂಟ್ ಕೊಟ್ಟಿದ್ದರು. ಹೀಗಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಯಾಗಿದೆ. ಯಾಕಂದ್ರೆ ಇನ್ನೇನು ಕೆಲವೇ, ಕೆಲವು ನಿಮಿಷದಲ್ಲಿ ಸಲಾರ್ ಚಿತ್ರದ 2ನೇ ಟ್ರೇಲರ್ ರಿಲೀಸ್ ಆಗಲಿದೆ.
ಈಗಾಗಲೇ ಕೋಟಿ ಕೋಟಿ ವಸೂಲಿ?
'ಸಲಾರ್' ಚಿತ್ರ ರಿಲೀಸ್ ಆಗುವುದಕ್ಕೆ ಮೊದಲೇ ಕೋಟಿ ಕೋಟಿ ಬಿಸಿನೆಸ್ ಮಾಡಿರುವ ಮಾತು ಓಡಾಡುತ್ತಿದೆ. 'ಸಲಾರ್' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಶ್ರುತಿ ಹಾಸನ್, ಕನ್ನಡ ನಟ ಪ್ರಮೋದ್ & ಮಧು ಗುರುಸ್ವಾಮಿ ನಟಿಸಿದ್ದಾರೆ. ದೊಡ್ಡ ತಾರಾ ಬಳಗ 'ಸಲಾರ್' ಸಿನಿಮಾ ತಂಡಕ್ಕೆ ಸಾಥ್ ನೀಡಿದೆ. ಈ ಎಲ್ಲಾ ಕಾರಣಕ್ಕೆ ಇಡೀ ದೇಶಾದ್ಯಂತ ಸಲಾರ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಅದರಲ್ಲೂ ಸ್ಯಾಂಡಲವುಡ್‌ನ ಹಲವು ನಟ, ನಟಿಯರು ಈ ಚಿತ್ರದಲ್ಲಿ ಇರುವುದು ಗಮನ ಸೆಳೆದಿದೆ.
ಪ್ರಭಾಸ್ ಡಿಮ್ಯಾಂಡ್ ಕಮ್ಮಿ ಆಗಲ್ಲ!
ಎಷ್ಟೇ ಸೋಲು ಕಾಣಲಿ ಎಷ್ಟೇ ಅಡ್ಡಿ ಎದುರಾಗಲಿ. ಪ್ರಭಾಸ್‌ಗೆ ಇರುವ 'ಡಿಮ್ಯಾಂಡ್' ಮಾತ್ರ ಕಡಿಮೆ ಆಗಲ್ಲ. ಇದಕ್ಕೆ ಸಾಕ್ಷಿ 'ಸಲಾರ್' ಸಿನಿಮಾ ಎನ್ನಬಹುದು. ಏಕೆಂದರೆ ಈ ಸಿನಿಮಾಗೆ ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ..? ಬರೋಬ್ಬರಿ 100 ಕೋಟಿ ರೂ. ಅಂತಾ ಹೇಳಲಾಗ್ತಿದೆ. ಇದನ್ನೂ ಮೀರಿ ಇನ್ನಷ್ಟು ಹಣ ಸಂಭಾವನೆ ರೂಪದಲ್ಲಿ ಡಾರ್ಲಿಂಗ್ ಪ್ರಭಾಸ್ ಅವರ ಕೈಸೇರುತ್ತದೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿವೆ.

ಮತ್ತೊಂದು ಇತಿಹಾಸ ಗ್ಯಾರಂಟಿ?
ಇದೆಲ್ಲಾ ಏನೇ ಇರಲಿ 'ಸಲಾರ್' ಮತ್ತೊಂದು ಮೈಲಿಗಲ್ಲು ತಲುಪೋದು ಮಾತ್ರ ಗ್ಯಾರಂಟಿ ಅಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ಪ್ರಭಾಸ್ ಅವರ ಕೋಟ್ಯಂತರ ಅಭಿಮಾನಿಗಳು ಈ ಸಿನಿಮಾಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಿನಿಮಾ ಸಂಭ್ರಮಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ಮೊದಲನೇ ಟ್ರೇಲರ್ ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್ ಮಾಡಿಬಿಟ್ಟಿದೆ. ಈಗ ರಿಲೀಸ್ ಆಗ್ತಿರುವ 2ನೇ ಟ್ರೇಲರ್ ಕೂಡ, ಇದೇ ರೀತಿ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದೆ ಅಂತಿದ್ದಾರೆ ಅಭಿಮಾನಿಗಳು.












Click it and Unblock the Notifications