Oscar Awards 2025: ಆಸ್ಕರ್ ಅವಾರ್ಡ್ ಪಟ್ಟಿಯಲ್ಲಿ ದೊಡ್ಡ ದೊಡ್ಡ ಹೆಸರು, ಪ್ರಶಸ್ತಿ ಗೆಲ್ಲುವುದು ಯಾರು?
ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಶಸ್ತಿ ಯಾವುದು? ಎಂಬ ಪ್ರಶ್ನೆಗೆ ಸುಲಭವಾದ ಉತ್ತರವನ್ನ ಜನ ನೀಡುತ್ತಾರೆ, ಯಾಕಂದ್ರೆ 'ಆಸ್ಕರ್ ಪ್ರಶಸ್ತಿ' ಹೆಸರು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೆ ಚಿರಪರಿಚಿತ. ಇಂತಹ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾಗಿದ್ದು, 2025ರ ಆಸ್ಕರ್ ಪ್ರಶಸ್ತಿ ಗೆಲ್ಲುವುದು ಯಾರು? ಎನ್ನುವ ಪ್ರಶ್ನೆಗೆ ಇನ್ನೇನು ಕೆಲವೇ ನಿಮಿಷದಲ್ಲಿ ಉತ್ತರ ಸಿಗಲಿದೆ. ಹಾಗಾದರೆ ಆಸ್ಕರ್ ರೇಸ್‌ನಲ್ಲಿ ಇರುವುದು ಯಾರು?
ಹಾಲಿವುಡ್ ಸಿನಿಮಾ ರಂಗ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯವನ್ನ ಹೊಂದಿದೆ. ಅಮೆರಿಕ ಮೂಲದ ಸಿನಿಮಾ ರಂಗ ಎಂಬ ಹೆಸರು ಇದ್ದರೂ ಹಾಲಿವುಡ್ ಈಗ ಜಗತ್ತಿನಾದ್ಯಂತ ಹೆಸರನ್ನು ಮಾಡಿದೆ. ಒಂದೊಂದು ಸಿನಿಮಾಗೂ ಸಾವಿರ ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಹಾಲಿವುಡ್ ಸಿನಿಮಾ ಮಂದಿ ಸದಾ ಹೈ ಲೆವೆಲ್, ಇಂತಹ ಸಿನಿಮಾ ಇಂಡಸ್ಟ್ರಿಯಲ್ಲಿ ಮೂಡಿ ಬರುವ ಚಿತ್ರಗಳಿಗೆ 'ಆಸ್ಕರ್ ಪ್ರಶಸ್ತಿ' ನೀಡಲಾಗುತ್ತದೆ. ಹೀಗೆ ಜಗತ್ತಿನ ಇತರ ಭಾಷೆಗಳ ಚಿತ್ರಕ್ಕೂ ಆಸ್ಕರ್ ಪ್ರಶಸ್ತಿ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ. ಇಂತಿಪ್ಪ ಆಸ್ಕರ್ ಅಖಾಡದಲ್ಲಿ ಈ ಬಾರಿ ಅಬ್ಬರಿಸುತ್ತಿರುವುದು ಯಾರು?

ಆಸ್ಕರ್ ಪ್ರಶಸ್ತಿ ಗೆಲ್ಲುವುದು ಯಾರು?
2025ರ ಆಸ್ಕರ್ ಪ್ರಶಸ್ತಿ ಲಿಸ್ಟ್‌ನಲ್ಲಿ ಒಟ್ಟು 10 ಸಿನಿಮಾಗಳು ಅಬ್ಬರಿಸುತ್ತಿವೆ. 'ಅನೋರಾ' ಸೇರಿ ದಿ ಬ್ರುಟಲಿಸ್ಟ್, ಎ ಕಂಪ್ಲೀಟ್ ಅನ್‌ನೋನ್, ಕಾನ್‌ಕ್ಲೇವ್, ಡ್ಯೂನ್: ಪಾರ್ಟ್-2, ಎಮಿಲಿಯಾ ಪರೇಜ್, ಐಮ್ ಸ್ಟಿಲ್ ಹೀಯರ್, ನಿಕೆಲ್ ಬಾಯ್ಸ್, ದಿ ಸಬ್‌ಸ್ಟೆನ್ಸ್, ವಿಕೆಡ್ ಸಿನಿಮಾಗಳು ಈ ಬಾರಿ ಆಸ್ಕರ್ ರೇಸ್‌ನಲ್ಲಿ ಅಬ್ಬರಿಸುತ್ತಿವೆ. ಹಾಗೇ, ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆಲ್ಲಲು ಸಿಕ್ಕಾಪಟ್ಟೆ ಪೈಪೋಟಿ ಕಂಡು ಬಂದಿದ್ದು, ಇನ್ನು ಪಟ್ಟಿಯಲ್ಲಿರುವ ಹೆಸರು ತಿಳಿಯಲು ಮುಂದೆ ಓದಿ.
ಅತ್ಯುತ್ತಮ ನಟ & ನಿರ್ದೇಶಕರು ಯಾರು?
ಆಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್), ತಿಮೋತಿ ಚಲಮೆಟ್ (ಎ ಕಂಪ್ಲೀಟ್ ಅನ್‌ನೋನ್) & ಕೋಲ್ಮನ್ ಡೊಮಿಂಗೊ (ಸಿಂಗ್ ಸಿಂಗ್), ರಾಲ್ಫ್ ಫಿಯೆನ್ನೆಸ್ (ಕಾನ್‌ಕ್ಲೇವ್), ಸೆಬಾಸ್ಟಿಯನ್ ಸ್ಟಾನ್ (ದಿ ಅಪ್ರೆಂಟಿಸ್) ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆಯುವ ರೇಸ್‌ನಲ್ಲಿ ಇದ್ದಾರೆ. ಹಾಗೇ ಅತ್ಯುತ್ತಮ ನಿರ್ದೇಶಕರ ಲಿಸ್ಟ್ ಕೂಡ ಘಟಾನುಘಟಿ ಡೈರೆಕ್ಟರ್‌ಗಳಿಂದ ಕೂಡಿದ್ದು, ಸೀನ್ ಬೇಕರ್ (ಅನೋರಾ), ಬ್ರಾಡಿ ಕಾರ್ಬೆಟ್ (ದಿ ಬ್ರೂಟಲಿಸ್ಟ್), ಲುಕಾ ಗ್ವಾಡಾಗ್ನಿನೊ (ಎ ಕಂಪ್ಲೀಟ್ ಅನ್‌ನೋನ್), ಜಾಕ್ವೆಸ್ ಆಡಿಯಾರ್ಡ್ (ಎಮಿಲಿಯಾ ಪೆರೆಜ್) ಸೇರಿದಂತೆ ಡೆನಿಸ್ ವಿಲ್ಲೆನ್ಯೂವ್ (ಡ್ಯೂನ್:ಪಾರ್ಟ್ 2) ರೇಸ್‌ನಲ್ಲಿ ಇದ್ದಾರೆ.












Click it and Unblock the Notifications