‘ಕೆಜಿಎಫ್-3’ ಸಿನಿಮಾದಲ್ಲಿ ಡೈರೆಕ್ಟರ್ ಪ್ರಶಾಂತ್ ನೀಲ್ ನಟನೆ?
ಕನ್ನಡ ಸಿನಿಮಾಗಳಿಗೆ ಹೊಸ ವೇದಿಕೆ ಒದಗಿಸಿಕೊಟ್ಟು ಜಗತ್ತಿನಾದ್ಯಂತ ಮಿಂಚುವಂತೆ ಮಾಡಿದ ಕೀರ್ತಿ 'ಕೆಜಿಎಫ್' ಸಿನಿಮಾ ಸರಣಿಗೆ ಸಲ್ಲಬೇಕು. ಯಾಕೆ ಅಂದ್ರೆ 'ಕೆಜಿಎಫ್ ಚಾಪ್ಟರ್ 1' ಮತ್ತು 'ಕೆಜಿಎಫ್ ಚಾಪ್ಟರ್ 2' ಅಂತಹ ಸಾಧನೆ ಮಾಡಿತ್ತು. ಈಗ ಇದೇ ಕೆಜಿಎಫ್ ಚಿತ್ರಕ್ಕೆ ಡೈರೆಕ್ಷನ್ ಮಾಡಿದ್ದ ಪ್ರಶಾಂತ್ ನೀಲ್ ಅವರ 'ಸಲಾರ್' ಸಿನಿಮಾ ರಿಲೀಸ್ ಆಗಿದೆ. ಇದೇ ವೇಳೆ 'ಕೆಜಿಎಫ್-3' ಸಿನಿಮಾದಲ್ಲಿ ಡೈರೆಕ್ಟರ್ ಪ್ರಶಾಂತ್ ನೀಲ್ ನಟನೆ ಮಾಡ್ತಾರಾ ಎಂಬ ಚರ್ಚೆ ಶುರುವಾಗಿದೆ.
ಹೌದು ಸಲಾರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ ನಂತರ ಇದೀಗ ಅಭಿಮಾನಿಗಳು ಹೊಸ ಚರ್ಚೆ ಶುರು ಮಾಡಿದ್ದಾರೆ. 'ಕೆಜಿಎಫ್ ಚಾಪ್ಟರ್ 1' ಮತ್ತು 'ಕೆಜಿಎಫ್ ಚಾಪ್ಟರ್ 2' ನಂತರ 'ಕೆಜಿಎಫ್ ಚಾಪ್ಟರ್ 3' ಬರೋದು ಗ್ಯಾರಂಟಿ ಆಗಿದೆ. ಹೀಗಿದ್ದಾಗ, ಪ್ರಶಾಂತ್ ನೀಲ್ ಅವರು 'ಕೆಜಿಎಫ್ ಚಾಪ್ಟರ್ 3' ಸಿನಿಮಾದಲ್ಲಿ ನಟನೆ ಮಾಡ್ತಾರಾ? ಅಂತ ಇದೀಗ ಅಭಿಮಾನಿಗಳು ಚರ್ಚೆ ಮಾಡ್ತಿದ್ದಾರೆ.

ಈಗಾಗಲೇ ಡೈರೆಕ್ಷನ್ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಪ್ರಶಾಂತ್ ನೀಲ್ ಅವರು, ಆಕ್ಟಿಂಗ್ ಮೂಲಕವೂ ಮಿಂಚು ಹರಿಸಲು ಸಜ್ಜಾಗಿದ್ದಾರೆ ಅಂತಾ ಫ್ಯಾನ್ಸ್ ಮಾತನಾಡ್ತಿದ್ದಾರೆ. ಆದ್ರೆ ಈ ಸುದ್ದಿ ಅಧಿಕೃತವಲ್ಲ. ಹೀಗಿದ್ದಾಗ 'ಕೆಜಿಎಫ್-2' ಫೋಟೋಸ್ ವೈರಲ್ ಆಗುತ್ತಿವೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಮಷಿನ್ ಗನ್ ಹಿಡಿದಿದ್ದ ನೀಲ್!
'ಕೆಜಿಎಫ್ ಚಾಪ್ಟರ್ 2' ಸಿನಿಮಾದಲ್ಲಿ ಪ್ರಶಾಂತ್ ನೀಲ್ ಅವರು ಮಷಿನ್ ಗನ್ ಹಿಡಿದು, ಪೋಸ್ ಕೊಟ್ಟಿದ್ದ ಫೋಟೋಗಳು ವೈರಲ್ ಆಗ್ತಿವೆ. ಇದರ ಜೊತೆ 'ಕೆಜಿಎಫ್-3' ಸಿನಿಮಾ ಬಗ್ಗೆಯೂ ಚರ್ಚೆ ಜೋರಾಗಿದೆ. ಇತ್ತೀಚೆಗಷ್ಟೇ ಪ್ರಶಾಂತ್ ನೀಲ್ ಅವರು ಕೂಡ ಕೆಜಿಎಫ್-3 ಸಿನಿಮಾ ಬಗ್ಗೆ ಮಾತನಾಡಿದ್ದರು. ಹೀಗಿದ್ದಾಗ ಅಭಿಮಾನಿಗಳು ಕುತೂಹಲದಿಂದ ನೀಲ್ & ಯಶ್ ಅವರ ಕಾಂಬಿನೇಷನ್‌ನಲ್ಲಿ ಕೆಜಿಎಫ್-3 ನೋಡೋದಕ್ಕೆ ಕಾಯುತ್ತಿದ್ದಾರೆ. ಹಾಗಾದ್ರೆ ಯಾವಾಗ ಸೆಟ್ಟೇರುತ್ತೆ ಈ ಸಿನಿಮಾ?

ಸದ್ಯಕ್ಕೆ ಬರೋದಿಲ್ಲ 'ಕೆಜಿಎಫ್-3'
ಅಂದಹಾಗೆ ಈಗ ಪ್ರಶಾಂತ್ ನೀಲ್ ಅವರು ಸಲಾರ್-1 ಮುಗಿಸಿದ್ದು, ಇನ್ನೇನು ಸಲಾರ್-2 ಸಿನಿಮಾಗೆ ಸಿದ್ಧರಾಗಬೇಕಿದೆ. ಇದರ ಜೊತೆ ಅವರು ಮತ್ತೊಂದು ಸಿನಿಮಾ ಮಾಡಬೇಕಿದ್ದು ಮತ್ತೊಂದು ಕಡೆ ರಾಕಿಂಗ್ ಸ್ಟಾರ್ ಯಶ್ ಅವ್ರು ತಮ್ಮ ಹೊಸ ಸಿನ್ಮಾ ಘೋಷಣೆ ಮಾಡಿದ್ದಾರೆ. ಹೊಸ ಸಿನಿಮಾಗೆ 'ಟಾಕ್ಸಿಕ್' ಎಂಬ ಟೈಟಲ್ ಇಟ್ಟಿದ್ದಾರೆ. ಹೀಗೆ ಇಬ್ಬರೂ, ಒಂದೊಂದು ಸಿನಿಮಾದಲ್ಲಿ ಸಖತ್ ಬ್ಯುಸಿ. ಹೀಗಿದ್ದಾಗ, 'ಕೆಜಿಎಫ್-3' ಬಂದರು ಕೂಡ ಸದ್ಯಕ್ಕೆ ಬರಲ್ಲ ಎನ್ನುವ ಮಾತುಗಳು ಈಗ ಕೇಳಿಬರುತ್ತಿವೆ.
ಬಾಕ್ಸ್ ಆಫಿಸ್‌ನಲ್ಲಿ ಸಲಾರ್ ಅಬ್ಬರ
ಸಲಾರ್ ಸಿನಿಮಾ ಮೊದಲ ದಿನ ಬರೋಬ್ಬರಿ 175 ಕೋಟಿ ರೂಪಾಯಿ ಸಂಪಾದನೆ ಮಾಡಿತ್ತು. ಜಗತ್ತಿನಾದ್ಯಂತ ಹತ್ತಾರು ಸಾವಿರ ಸಿನಿಮಾ ಮಂದಿರದಲ್ಲಿ ರಿಲೀಸ್ ಆಗಿದ್ದ 'ಸಲಾರ್' ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡಿತ್ತು. ಈ ಮೂಲಕ ಹೊಸ ದಾಖಲೆಯನ್ನ ಬರೆದಿತ್ತು. ಪ್ರಭಾಸ್ ವೃತ್ತಿ ಜೀವನದಲ್ಲಿ ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಗಳಿಸಿದ್ದ 2ನೇ ಸಿನಿಮಾ ಇದಾಗಿದೆ. ಯಾಕಂದ್ರೆ ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂ. ಸಂಪಾದನೆ ಮಾಡಿತ್ತು. ಹೀಗೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿರುವ 'ಸಲಾರ್' ಇನ್ನೇನು ಹೊಸ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಈವರೆಗೂ 450 ರಿಂದ 490 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.
ದಾಖಲೆ ಬರೆದಿದ್ದ ಕೆಜಿಎಫ್ ಚಾಪ್ಟರ್-2
ಕೆಜಿಎಫ್-2 2022ರಲ್ಲಿ ರಿಲೀಸ್ ಆಗಿತ್ತು, ಹಾಗೇ ಬಾಕ್ಸ್ ಆಫಿಸ್ ಅಖಾಡದಲ್ಲಿ ಘರ್ಜಿಸಿತ್ತು. ಇದೀಗ ಪ್ರಶಾಂತ್ ನೀಲ್ ಅವರ ಸಲಾರ್ ಸಿನಿಮಾ ಕೂಡ ಅದೇ ರೀತಿ ಘರ್ಜನೆ ಮಾಡ್ತಿದೆ. ಇದರ ಜೊತೆಗೆ 'ಕೆಜಿಎಫ್-3' ಬಗ್ಗೆಯೂ ಅಭಿಮಾನಿಗಳು ಚರ್ಚೆ ಶುರುಮಾಡಿದ್ದು. ಇದಕ್ಕೆ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆ ಕೂಡ ಇದೆ.












Click it and Unblock the Notifications