ಒಬ್ಬರಿಂದಲೇ ಕನ್ನಡ ಫಿಲಂ ಇಂಡಸ್ಟ್ರಿ ಆಗಿಲ್ಲ: ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ನೇರವಾಗಿ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?
10 ವರ್ಷಗಳ ಹಿಂದೆ ಪ್ರಶಾಂತ್ ನೀಲ್ ಎಂಬ ವ್ಯಕ್ತಿ ಯಾರು? ಅಂತಾನೆ ಜಗತ್ತಿಗೆ ಗೊತ್ತಿರಲಿಲ್ಲ. ಆದರೆ ಇಂದು ಪ್ರಶಾಂತ್ ನೀಲ್ ಹೆಸರನ್ನ ಕೇಳದವರಿಲ್ಲ ಎನ್ನುವ ಮಟ್ಟಿಗೆ ಈ ಡೈರೆಕ್ಟರ್ ಬೆಳೆದು ನಿಂತಿದ್ದಾರೆ. ಅದರಲ್ಲೂ ಕೆಲಸದಲ್ಲಿ ಈ ವ್ಯಕ್ತಿ ತೋರಿಸುವ ಶ್ರದ್ಧೆ, ಎಂತಹವರಿಗೂ ಇಷ್ಟವಾಗುತ್ತೆ. ಈ ಕಾರಣಕ್ಕೆ ಪ್ರಶಾಂತ್ ನೀಲ್ ದೊಡ್ಡ ದೊಡ್ಡ ಸಿನಿಮಾಗಳನ್ನು ಸಲೀಸಾಗಿ ಮಾಡುತ್ತಾರೆ. ಇಂತಿಪ್ಪ ನೀಲ್ ಈಗ ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಹೌದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ 4ನೇ ಸಿನಿಮಾ 'ಸಲಾರ್' ನಿನ್ನೆ ಭರ್ಜರಿ ರಿಲೀಸ್ ಆಗಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಸಲಾರ್ ಅಬ್ಬರ ಬಲು ಜೋರಾಗುತ್ತಿದೆ ಮತ್ತು ಬಾಕ್ಸ್ ಆಫಿಸ್ ಅಖಾಡದಲ್ಲಿ ಕೂಡ ಪ್ರಭಾಸ್ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ. ಹೀಗಿದ್ದಾಗ ಪ್ರಶಾಂತ್ ನೀಲ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ. ನೀಲ್ ಅವರ ಈ ಮಾತುಗಳು ಈಗ ಎಲ್ಲೆಲ್ಲೂ ವೈರಲ್ ಆಗುತ್ತಿವೆ. ಹಾಗೇ ಕನ್ನಡ ಸಿನಿಮಾ ರಂಗದ ಬಗ್ಗೆ ಪ್ರಶಾಂತ್ ನೀಲ್ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಪ್ರಶಾಂತ್ ನೀಲ್ ಡೈರೆಕ್ಟ್ ವಾರ್ನಿಂಗ್!
ಅಂದಹಾಗೆ ಡಾರ್ಲಿಂಗ್ ಪ್ರಭಾಸ್ ನಟನೆಯ ಮತ್ತು ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ 'ಸಲಾರ್' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಅದ್ರಲ್ಲೂ ಜಗತ್ತಿನಾದ್ಯಂತ ಸಲಾರ್ ಸಿನಿಮಾ ಬಾಚಿರುವ ಹಣ ತಲೆ ತಿರುಗಿಸುವಂತಿದೆ. ಸಲಾರ್ ಮೊದಲ ದಿನವೇ ಬರೋಬ್ಬರಿ 175 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ಜಗತ್ತಿನಾದ್ಯಂತ ಹತ್ತಾರು ಸಾವಿರ ಸಿನಿಮಾ ಮಂದಿರದಲ್ಲಿ ರಿಲೀಸ್ ಆಗಿದ್ದ 'ಸಲಾರ್' ಈಗ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಇದೇ ಸಮಯದಲ್ಲಿ ಪ್ರಶಾಂತ್ ನೀಲ್ ಅವರು, ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ನೀಡಿರುವ ಆ ಒಂದು ಹೇಳಿಕೆ ವೈರಲ್ ಆಗುತ್ತಿದೆ.
ಕನ್ನಡದ ಬಗ್ಗೆ ನೀಲ್‌ಗೆ ಹೆಮ್ಮೆ
ಸಲಾರ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಅವರು ಸಂದರ್ಶನ ನೀಡಿದ್ದು, ಈ ಸಮಯದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಈಗ ದೊಡ್ಡ ಸ್ಟಾರ್ ಡೈರೆಕ್ಟರ್ ಆಗಿ ಬೆಳೆದು ನಿಂತಿರುವ ಪ್ರಶಾಂತ್ ನೀಲ್, ತಾವು ಬೆಳೆದುಬಂದ ದಾರಿಯನ್ನು ನೆನಪು ಮಾಡಿಕೊಂಡಿದ್ದಾರೆ. ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಈಗ ನಾನು ಇಷ್ಟೆಲ್ಲಾ ಸಾಧನೆ ಮಾಡಿದ್ದೀನಿ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗೇ ಈ ವೇಳೆ 'ಒಬ್ಬರಿಂದಲೇ ಕನ್ನಡ ಫಿಲಂ ಇಂಡಸ್ಟ್ರಿ ಬೆಳೆದಿಲ್ಲ' ಎನ್ನುವ ಮೂಲಕ, ಸ್ಯಾಂಡಲ್‌ವುಡ್‌ಗೆ ಕೊಡುಗೆ ನೀಡಿರುವ ಎಲ್ಲಾ ನಟ & ನಿರ್ದೇಶಕರನ್ನು ನೆನಪು ಮಾಡಿಕೊಂಡಿದ್ದಾರೆ. ಹಾಗೇ ತಾವು ಬೇರೆ ಭಾಷೆ ಇಂಡಸ್ಟ್ರಿಗೆ ಹೋದ ಬಗ್ಗೆ ಮಾತನಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ ನೀಲ್.

What am today is because of Kannada Film Industry 🔥 - #PrashanthNeel#Salaar #Prabhas pic.twitter.com/1Di8dVxnKu
— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) December 21, 2023
ಸಲಾರ್ ಇತಿಹಾಸ ಶುರುವಾಯ್ತು ನೋಡಿ!
ಭಾರತದಲ್ಲಿ ಮೊದಲನೇ ದಿನ ಹೆಚ್ಚು ಹಣ ಮಾಡಿದ ಸಿನಿಮಾಗಳ ಪೈಕಿ, RRR ಸಿನಿಮಾಗೆ ಮೊದಲ ಸ್ಥಾನ ಇದ್ದು. ಆರ್‌ಆರ್‌ಆರ್ ಸಿನಿಮಾ ಮೊದಲ ದಿನ 223.5 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇನ್ನು ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂಪಾಯಿಗಳ ಸಂಪಾದನೆ ಮಾಡಿತ್ತು. ಇದು ಬಿಟ್ಟು ಕನ್ನಡಿಗರ 'ಕೆಜಿಎಫ್ ಚಾಪ್ಟರ್-2' 164.5 ಕೋಟಿ ರೂಪಾಯಿ ಹಣವನ್ನ ಮೊದಲ ದಿನವೇ ಸಂಪಾದಿಸಿತ್ತು. ಇದೀಗ ಪ್ರಭಾಸ್ ಅವರ ಸಲಾರ್ ಸಿನಿಮಾ ಹೊಸ ಇತಿಹಾಸ ಬರೆದಿದೆ.
ಪ್ರಭಾಸ್ ಸಿನಿಮಾ ಗಳಿಸಿದ್ದು ಎಷ್ಟು?
ಸಲಾರ್ ಸಿನಿಮಾ ಮೊದಲ ದಿನ ಬರೋಬ್ಬರಿ 175 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ಜಗತ್ತಿನಾದ್ಯಂತ ಹತ್ತಾರು ಸಾವಿರ ಸಿನಿಮಾ ಮಂದಿರದಲ್ಲಿ ರಿಲೀಸ್ ಆಗಿರುವ ಈ 'ಸಲಾರ್' ಸಿನಿಮಾ ಈಗ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಪ್ರಭಾಸ್ ವೃತ್ತಿ ಜೀವನದಲ್ಲಿ ಇಷ್ಟೊಂದು ದೊಡ್ಡ ಮೊತ್ತ ಗಳಿಸಿದ 2ನೇ ಸಿನಿಮಾ ಇದಾಗಿದೆ ಎಂಬುದು ಮತ್ತೊಂದು ವಿಶೇಷ. ಬಾಹುಬಲಿ-2 ಸಿನಿಮಾ ಮೊದಲನೆ ದಿನ 214.5 ಕೋಟಿ ರೂಪಾಯಿ ಸಂಪಾದನೆ ಮಾಡಿತ್ತು.












Click it and Unblock the Notifications