Prajwal Devaraj Love Story: ಪ್ರಜ್ವಲ್ ದೇವರಾಜ್ & ರಾಗಿಣಿ ನಡುವೆ ಲವ್ ಆಗಿದ್ದು ಯಾವಾಗ & ಹೇಗೆ?

Prajwal Devaraj: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಯುವಕ-ಯುವತಿಯರು ಲವ್‌ ಬಲೆಯಲ್ಲಿ ಬಿದ್ದು ಬ್ರೇಕ್‌ ಅಪ್‌ ಮತ್ತು ಮದುವೆಯಾಗಿಯೂ ಡೈವರ್ಸ್‌ ಮಟ್ಟಕ್ಕೆ ಇಳಿಯುವುದನ್ನು ನೋಡಿದ್ದೇವೆ. ಸಂಖ್ಯೆ ಹೆಚ್ಚಾಗಿದೆ. ಇಂತಹವರ ನಡುವೆಯೂ ಲವ್‌ ಮ್ಯಾರೇಜ್‌ ಆಗಿ ಸುಖ ಸಂಸಾರ ಸಾಗಿಸುವವರು ಇದ್ದು, ಈ ಪಟ್ಟಿಗೆ ನಟ ಪ್ರಜ್ವಲ್‌ ದೇವರಾಜ್‌ ಅವರ ಲವ್‌ ಸ್ಟೋರಿಯೂ ಸೇರ್ಪಟ್ಟಿದೆ. ಹಾಗಾದರೆ ಇವರ ಲವ್‌ ಶುರುವಾಗಿದ್ದೇಗೆ ಎಂದು ಇಲ್ಲಿ ತಿಳಿಯಿರಿ.

ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಸ್ಯಾಂಡಲ್‌ವುಡ್ನ ಜನಪ್ರಿಯ ತಾರ ಜೋಡಿಗಳಾಗಿದ್ದು, ಇದೀಗ ಪ್ರಜ್ವಲ್ ರಾಗಿಣಿಗೆ ಪ್ರಪೋಸ್ ಮಾಡಿದ್ದು ಯಾವಾಗ ಮತ್ತು ಹೇಗೆ ಎನ್ನುವ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ.

Do you know When Did Prajwal Devaraj proposed to Ragini Know details

ನಟ ದೇವರಾಜ್‌ ನಟ ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದಲ್ಲಿ ಡೈನಾಮಿಕ್ ಪ್ರಿನ್ಸ್ ಎಂದೇ ಪ್ರಖಾತಿ ಪಡೆದಿದ್ದು, ಇವರ ಪತ್ನಿ ರಾಗಿಣಿ ಪ್ರಜ್ವಲ್‌ ಕಥಕ್ ನೃತ್ಯಗಾರ್ತಿಯಾಗಿದ್ದಾರೆ. ಇನ್ನು ಇವರದ್ದು ಹದಿಹರೆಯದಲ್ಲೇ ಪ್ರೀತಿ ಮಾಡಿ ಮದುವೆಯಾಗಿರುವ ಕ್ಯೂಟ್‌ ಜೋಡಿಗಳಲ್ಲೊಂದಾಗಿದೆ.

ಈಗಾಗಲೇ ಹಲವು ಸಂದರ್ಶನಗಳಲ್ಲಿ ಪ್ರಜ್ವಲ್ ದೇವರಾಜ್‌ ಮತ್ತು ರಾಗಿಣಿ ತಮ್ಮ ಅದ್ಭುತ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡೊದ್ದಾರೆ. ಇವರದ್ದು ಇಂದು ನಿನ್ನೆಯ ಪ್ರೀತಿ ಅಲ್ಲ, 20 ವರ್ಷಗಳಿಂದಲೂ ಇವರು ಲವ್ ಮಾಡಿದ್ದರು ಎಂದು ಇವರಿಂದಲೇ ತಿಳಿದುಬಂದಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿದ್ದ ಚಿತ್ತಾರ ಅವಾರ್ಡ್ ಕಾರ್ಯಕ್ರಮದ ಪ್ರೊಮೋ ರಿಲೀಸ್ ಆಗಿದ್ದು, ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಅವರಿಗೆ ನಿರೂಪಕ ನಿರಂಜನ್ ದೇಶಪಾಂಡೆ, ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ ಎಂದು ಕೇಳಿದಾಗ, ಬಳಿ ಇದ್ದ ಪ್ರಜ್ವಲ್ ಪತ್ನಿ ರಾಗಿಣಿ ಸ್ಕೂಲ್‌ನಲ್ಲಿ ಇರುವಾಗಲೇ ತಮ್ಮ ನಡುವೆ ಪ್ರೀತಿ ಶುರುವಾಯಿತು ಎಂದು ಹೇಳಿದ್ದಾರೆ.

ಪ್ರಜ್ವಲ್ 9ನೇ ತರಗತಿ ಮತ್ತು ರಾಗಿಣಿ 6ನೇ ತರಗತಿಯಲ್ಲಿ ಇರುವಾಗ ತಮ್ಮ ಪ್ರೀತಿಯನ್ನು ಪ್ರಸ್ತಾಪಿಸಿದ್ದರಂತೆ. ನೋಟ್ ಪುಸ್ತಕದಲ್ಲಿ ಪೂರ್ತಿಯಾಗಿ ಐ ಲವ್ ಯೂ ರಾಗಿಣಿ ಎಂದು ಬರೆದು ರಾಗಿಣಿಗೆ ಕೊಡುವ ಮೂಲಕ ತಮ್ಮ ಪ್ರೀತಿಯನ್ನು ಪ್ರಜ್ವಲ್‌ ದೇವರಾಜ್‌ ವ್ಯಕ್ತಪಡಿಸಿದ್ದರಂತೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಮೊದಲು ಡ್ಯಾನ್ಸ್‌ನಿಂದ ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಗಿತ್ತಂತೆ. ರಾಗಿಣಿ ಮತ್ತು ಪ್ರಜ್ವಲ್ ಇಬ್ಬರೂ ಕೂಡ ಇಮ್ರಾನ್ ಸರ್ದಾರಿಯಾ ಅವರ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದರಂತೆ. ಅಲ್ಲೇ ಇವರಿಬ್ಬರಿಗೆ ಪರಿಚಯ ಆಗಿದ್ದು, ಇದರಿಂದ ಸ್ನೇಹ ಶುರುವಾಗಿತ್ತಂತೆ. ಅಲ್ಲದೆ, ಇವರಿಬ್ಬರ ಫ್ರೆಂಡ್ಸ್ ಗ್ರೂಪ್ ಸಹ ಒಂದೇ ಆಗಿದ್ದು, ಈ ಹಿನ್ನೆಲೆ ಹೆಚ್ಚಾಗಿ ಜೊತೆಯಲ್ಲಿದ್ದ ಈ ಜೋಡಿಯ ನಡುವೆ ಪ್ರೀತಿ ಕೂಡ ಶುರು ಆಯಿತಂತೆ.

ಇದೆಲ್ಲ ಆದ ನಂತರ ಪ್ರಜ್ವಲ್ ದೇವರಾಜ್‌ ಅವರು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದರಂತೆ. ರಾಗಿಣಿ ಮಾಡೆಲಿಂಗ್, ಡ್ಯಾನ್ಸ್, ಫಿಟ್ನೆಸ್ ಟ್ರೈನರ್ ಆಗಿ ವೃತ್ತಿ ಜೀವನ ಕಂಡುಕೊಂಡಿದ್ದು, ಇವರು ನಟಿಯಾಗಿಯೂ ಗುರುತಿಸಿಕೊಂಡಿದ್ದರು. ಸ್ಯಾಂಡಲ್‌ವುಡ್ ಸಿನಿಮಾ, ಶಾರ್ಟ್ ಫಿಲಂಗಳಲ್ಲೂ ಸಹ ಇವರು ನಟನೆ ಮಾಡಿದ್ದು, ಜೊತೆಗೆ ತಮ್ಮ ಪ್ರೀತಿ-ಪ್ರೇಮವನ್ನು ಮುಂದುವರೆಸಿಕೊಂಡು ಬಂದಿದ್ದರಂತೆ.

ಕೊನೆಹೆ ಈ ಮುದ್ದಾದ ಜೋಡಿ ಅಕ್ಟೋಬರ್ 25, 2015ರಂದು ತಮ್ಮ ಕುಟುಂಬದ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಚಿತ್ತಾರ ಅವಾರ್ಡ್ ಕಾರ್ಯಕ್ರಮದಲ್ಲೂ ಜೊತೆಯಾಗಿ ಈ ಜೋಡಿ ಕಾಣಿಸಿಕೊಂಡಿದ್ದು, ಪ್ರಜ್ವಲ್ ತಮಗೆ ಸಿಕ್ಕ ಪ್ರಶಸ್ತಿಯನ್ನು ತಮ್ಮ ಪತ್ನಿ ರಾಗಿಣಿಯ ಕೈಗೆ ನೀರುವ ಮೂಲಕ ಪತ್ನಿಯ ಹಣೆಗೆ ಸಿಹಿ ಮುತ್ತನ್ನು ಇಟ್ಟಿದ್ದಾರೆ. ಇನ್ನೂ ಕಂಡ ಜನರು ಈ ಮುದ್ದಾದ ಜೋಡಿ ಮೇಲೆ ಯಾಮ ಕಣ್ಣು ಬೀಳದಿರಲಿದೆ ಎಂದು ಆಶೀರ್ವಾದ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+