Darshan Thoogudeepa: ನಟ ದರ್ಶನ್ ಭೇಟಿ ಮಾಡಿದ ಚಿಕ್ಕಣ್ಣನ ಬಗ್ಗೆ ಪೊಲೀಸ್ ಆಯುಕ್ತರು ಹೇಳಿದ್ದೇನು ಗೊತ್ತಾ?
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲುಪಾರಿದೆ. ಕೊಲೆ ಬಳಿಕ ದರ್ಶನ್ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ಚಿಕ್ಕಣ್ಣನನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೂ ಕಾನೂನನ್ನು ಮೀರಿ ಮತ್ತೆ ದರ್ಶನ್‌ನ್ನು ಭೇಟಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಏನು ಹೇಳಿದ್ದಾರೆಂದು ಇಲ್ಲಿ ತಿಳಿಯಿರಿ.
ಕಾನೂನಿನ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಗಾದ ಚಿಕ್ಕಣ್ಣ ನಟ ದರ್ಶನ್‌ನನ್ನು ಭೇಟಿ ಮಾಡುವಂತಿಲ್ಲ. ಆದರೂ ಇದೆಲ್ಲವನ್ನು ಮೀರಿ ಮತ್ತೆ ದರ್ಶನ್ ಭೇಟಿ ಮಾಡಿದ ಚಿಕ್ಕಣ್ಣಗೆ ಪೊಲೀಸ್ ಆಯುಕ್ತ ದಯಾನಂದ್ ಬಿ ಶಾಕಿಂಗ್ ನೀಡಿದ್ದಾರೆ.

ಇಂದು ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾಗಿರುವ ನಟ ಚಿಕ್ಕಣ್ಣ ಅವರು ದರ್ಶನ್ ಭೇಟಿಯಾಗಿ ಮಾತನಾಡಿರುವುದರ ಬಗ್ಗೆ ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದರಿಂದಾಗಿ ಇದೀಗ ಹಾಸ್ಯನಟ ಚಿಕ್ಕಣ್ಣಗೆ ಮತ್ತ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ದರ್ಶನ್ ಅವರು ಚಿಕ್ಕಣ್ಣ ಜೊತೆ ಪಾರ್ಟಿ ಮಾಡಿರುವುದು ತನಿಖೆ ವೇಳೆ ಬಯಲಾಗಿತ್ತು. ಇನ್ನು ಈ ಸಂಬಂಧ ಪೊಲೀಸರು ಚಿಕ್ಕಣ್ಣಗೆ ನೋಟಿಸ್ ನೀದ್ದರು. ಪ್ರಮುಖ ಸಾಕ್ಷಿಯಾಗಿರುವ ಹಿನ್ನೆಲೆ ಚಿಕ್ಕಣ್ಣ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲು ಮಾಡಲಾಗಿತ್ತು.
ವಿಚಾರಣೆ ಎದುರಸಿದ ಕೆಲವು ದಿನಗಳ ಬಳಿ ನಟ ಅಭಿಷೇಕ್ ಅಂಬರೀಶ್, ಧನ್ವೀರ್ ಅವರೊಂದಿಗೆ ಚಿಕ್ಕಣ್ಣ ಕೂಡ ನಟ ದರ್ಶನ್‌ನನ್ನು ಭೇಟಿ ಮಾಡಿದ್ದರು. ತನಿಖೆ ಹಂತದಲ್ಲಿರುವಾಗ ಪ್ರಕರಣದ ಸಾಕ್ಷಿಯೂ ವಿಚಾರಣಾಧೀನ ಕೈದಿಯನ್ನು ಭೇಟಿ ಮಾಡುವಂತಿಲ್ಲ. ಆದರೆ ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಚುರುಕುಗೊಂಡ ಬೆನ್ನಲ್ಲೇ ಚಿಕ್ಕಣ್ಣ ಭೇಟಿಯಾಗಿರುವುದು, ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯೆಯಿದೆ ಎನ್ನಲಾಗುತ್ತಿದೆ.
ಚಿಕ್ಕಣ್ಣಗೆ ಸಂಕಷ್ಟ: ಒಂದು ಬಾರಿ ವಿಚಾರಣೆಗೆ ಹಾಜರಾದ ಮೇಲೆ ಆರೋಪಿಯನ್ನು ಭೇಟಿಯಾಗುವಂತಿಲ್ಲ. ಯಾಕೆಂದರೆ, ಅಲ್ಲಿ ಏನೆಲ್ಲ ಹೇಳಿಕೆ ದಾಖಲು ಮಾಡಿದ್ದಾರೆ ಎನ್ನುವ ವಿಚಾರಗಳನ್ನೆಲ್ಲ ಒಂದು ವೇಳೆ ಆರೋಪಿಗೆ ಹೇಳಿಬಿಡುತ್ತಾರೇನೋ ಅನ್ನುವ ಶಂಕೆ ಇದ್ದೇ ಇರುತ್ತದೆ. ಆದ್ದರಿಂದ ಕಾನೂನು ಮೀರಿ ಈ ರೀತಿ ಮಾಡುವಂತಿಲ್ಲ.
ಪೊಲೀಸರು ತಮ್ಮ ಶ್ರಮವನ್ನೆಲ್ಲ ಮುಡುಪಾಗಿಟ್ಟು ಬಲವಾದ ಸಾಕ್ಷಿಗಳು, ಹೇಳಿಕೆಗಳನ್ನು ದಾಖಲಿಸಿಕೊಂಡಿರುತ್ತಾರೆ. ಒಂದು ವೇಳೆ ಇವುಗಳು ಹೊರಗಡೆ ಲೀಕ್ ಆದರೆ ಇಷ್ಟು ದಿನ ಹಾಕಿದ ಶ್ರಮವೆಲ್ಲ ವ್ಯರ್ಥವಾದಂತಾಗುತ್ತದೆ. ಆದ್ದರಿಂದ ನಟ ಚಿಕ್ಕಣ್ಣಗೆ ಮತ್ತೊಮ್ಮೆ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿಗೆ ಎನ್ನಲಾಗುತ್ತಿದೆ.












Click it and Unblock the Notifications