Darshan Thoogudeepa: ಬಳ್ಳಾರಿ ಜೈಲಾಧಿಕಾರಿಗಳ ಬಳಿ ನಟ ದರ್ಶನ್‌ ಬೇಡಿದ್ದೇನು ಗೊತ್ತಾ?

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನನ್ನು ಪರಪ್ಪನ ಅಗ್ರಹಾರದಲ್ಲಿ ರಾಜ್ಯಾತಿಥ್ಯ ಹಿನ್ನೆಲೆ ಬಳ್ಳಾರಿ ಜೈಲಿಗೆ ಶೀಫ್ಟ್‌ ಮಾಡಲಾಗಿದ್ದು, ಇದೀಗ ದರ್ಶನ್‌ಗೆ ಹಲವು ವ್ಯವಸ್ಥೆಗಳನ್ನು ನೀಡಬೇಕೆಂದು ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಟ ದರ್ಶನ್‌ ಬಳ್ಳಾರಿ ಜೈಲಿನಲ್ಲಿ ಈಗಾಗಲೇ ಮೂರು ರಾತ್ರಿ ಕಳೆದಿದ್ದಾರೆ. ಅಲ್ಲದೆ, ಅಲ್ಲದೆ ಎಲ್ಲಾ ಖೈದಿಗಳಿಗೂ ಕೊಡುವಂತೆ ದರ್ಶನ್‌ಗೂ ಅದೇ ಊಟವನ್ನು ನೀಡಲಾಗುತ್ತಿದೆ. ಇನ್ನು ಇದೀಗ ಕುಟುಂಬಸ್ಥರು ದರ್ಶನ್‌ಗಿರುವ ಆರೋಗ್ಯದ ಬಗ್ಗೆ ಪೊಲೀಸರ ಬಳಿ ಹಂಚಿಕೊಂಡಿದ್ದು, ಅವರಿಗೆ ಕೆಲವೊಂದು ವ್ಯವಸ್ಥೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ ಪೊಲೀಸರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

Do you know what did Actor Darshan demand to Ballari jail officials

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಕುಳಿತು ರೇಸಾರ್ಟ್‌ ರೀತಿಯಲ್ಲೇ ರೌಂಡ್‌ ಟೇಬಲ್‌ ಪಾರ್ಟಿ ಮಾಡುವ ಮೂಲಕ ಒಂದು ಕೈಯಲ್ಲಿ ಕಾಫಿ ಮಗ್‌, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದು ಹರಟೆ ಹೊಡೆದಿರುವ ಫೋಟೋ ಭಾರೀ ವೈರಲ್‌ ಆಗಿತ್ತು. ಅಲ್ಲದೆ, ವಿಡಿಯೋ ಕಾಲ್‌ನಲ್ಲಿ ರೌಡಿ ಶೀಟರ್‌ಗಳ ಜೊತೆ ಮಾತನಾಡಿರುವ ವಿಡಿಯೋ ಸಹ ವೈರಲ್‌ ಆಗಿದ್ದು, ಇವುಗಳೇ ದರ್ಶನ್‌ ಬಳ್ಳಾರಿ ಜೈಲಿಗೆ ಬರಲು ಕಾರಣ.

ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಬೆನ್ನುನೋವು ಇದೆ ಎಂದು ಕುಟುಂಬಸ್ಥರು ಪೊಲೀಸರಿಗೆ ಮೆಡಿಕಲ್ ರಿಪೋರ್ಟ್ ಕೊಟ್ಟಿದ್ದಾರೆ. ಈ ಹಿನ್ನೆಲೆ ಜೈಲಧಿಕಾರಿಗಳು ಆರೋಪಿ ದರ್ಶನ್‌ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಜೈಲು ಡಾಕ್ಟರ್ ಮೂಲಕ ದರ್ಶನ್ ವೈದ್ಯಕೀಯ ರಿಪೋರ್ಟ್ ಪರಿಶೀಲನೆ ನಡೆಸಲಾಯಿತು. ಬೆನ್ನು ನೋವಿನಿಂದಾಗಿ ದರ್ಶನ್‌ಗೆ ಮೋಷನ್ ಸಮಸ್ಯೆ ಕೂಡ ಆಗಿದೆ. ಆದ್ದರಿಂದ ವೆಸ್ಟರ್ನ್ ಟಾಯ್ಲೆಟ್ ಅಥವಾ ಸರ್ಜಿಕಲ್ ಚೇರ್‌ಗೆ ನಟ ಮನವಿ ಮಾಡಿದ್ದರು ಎನ್ನಲಾಗಿದೆ.

12 ಗಂಟೆ ಸುಮಾರಿಗೆ ಜೈಲು ವೈದ್ಯರು ದರ್ಶನ್ ಆರೋಗ್ಯ ತಪಾಸಣೆ ಮಾಡಿದರು. ಬೆನ್ನು ನೋವಿನ ತೀವ್ರತೆ ಬಗ್ಗೆ ವೈದ್ಯಕೀಯ ತಪಾಸಣೆ ಬಳಿಕ ಡಿಐಜಿಗೆ ಸಲ್ಲಿಕೆ ಮಾಡಲಾಗುವುದು. ಸದ್ಯ ಸಾಮಾನ್ಯ ಕೈದಿಯಂತೆ ದರ್ಶನ್‌ಗೂ ಜೈಲಲ್ಲಿ ತಪಾಸಣೆ ನಡೆಸಲಾಗಿದೆ. ಬೆನ್ನು ನೋವಿನ ಕಾರಣ ಕೆಲವು ಮಾತ್ರೆಗಳ ಬಗ್ಗೆ ದರ್ಶನ್ ಮನವಿ ಮಾಡಿದ್ದರು. ವೈದ್ಯರ ತಪಾಸಣೆ ಬಳಿಕ ಅಗತ್ಯವಿದ್ದರೆ ಸರ್ಕಾರಿ ಆಸ್ಪತ್ರೆಯ ಮೆಡಿಸಿನ್‌ಗಳನ್ನ ಕೊಡುವುದಾಗಿ ಜೈಲಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ಎ2 ಆರೋಪಿ ನಟ ದರ್ಶನ್‌ಗೆ ಮಧ್ಯಾಹ್ನದ ಊಟ ನೀಡಲಾಯಿತು. ಪತ್ನಿ ವಿಜಯಲಕ್ಷ್ಮಿ ತಂದಿದ್ದ ತಿನಿಸುಗಳೊಂದಿಗೆ ದರ್ಶನ್ ಊಟ ಮಾಡಿದರು. ರಾಗಿ ಮುದ್ದೆ, ಅನ್ನ, ಸಾಂಬಾರು, ಮಜ್ಜಿಗೆ ಊಟ ಮಾಡಿದರು ಎಂದು ತಿಳಿದುಬಂದಿದೆ.

ಜೈಲಿನಲ್ಲಿ ದರ್ಶನ್ ಆರೋಗ್ಯ ತಪಾಸಣೆ ನಡೆಸಲಾಯಿತು. ಸ್ಟಾಫ್ ನರ್ಸ್‌ಗಳು ಹಾಗೂ ಡ್ಯೂಟಿ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಯಿತು. ಬಿಪಿ ಹಾಗೂ ಶುಗರ್ ಪರೀಕ್ಷೆ ಮಾಡಲಾಯಿತು. ಇದೇ ವೇಳೆ ನಿನ್ನೆ ದರ್ಶನ್ ಕುಟುಂಬಸ್ಥರು ನೀಡಿದ ವರದಿಯನ್ನು ವೈದ್ಯರು ಪರಿಶೀಲಿಸಿದರು. ನಾಳೆಯೂ ಹಿರಿಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+