ತರುಣ್ ಸುಧೀರ್-ಸೋನಲ್ ಮೊಂತೆರೋ ವಿವಾಹ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಗೊತ್ತಾ?
ಸ್ಯಾಂಡಲ್‌ವುಡ್ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಅವರ ವಿವಾಹ ಹಿಂದೂ ಸಂಪ್ರದಾಯದಂತೆ ಬೆಂಗಳೂರಿಲ್ಲಿರುವ ಪೂರ್ಣಿಮಾ ಪಾಲೇಸ್‌ನಲ್ಲಿ ಇಂದು (ಆಗಸ್ಟ್ 11) ನಡೆದಿದೆ. ಇನ್ನು ಈ ವೇಳೆ ರಾಜಕೀಯ ಗಣ್ಯರು, ಸಿನಿತಾರೆಯರ ದಂಡೇ ಪಾಲ್ಗೊಂಡಿತ್ತು. ಹಾಗಾದರೆ ಯಾರೆಲ್ಲ ಇದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ತರುಣ್ ಸುಧೀರ್ ಹಾಗೂ ಸೋನಲ್ ಮಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಗುರು-ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನ ಪೂರ್ಣಿಮಾ ಪಾಲೇಸ್‌ನಲ್ಲಿಯೇ ಇವರ ವಿವಾಹ ನೆರವೇರಿದೆ. ತುಲಾ ಲಗ್ನ ಮುಹೂರ್ತದಲ್ಲಿಯೇ ಮಾಂಗಲ್ಯದ ಧಾರಣೆ ನಡೆದಿದೆ. ಇನ್ನು ಇವರ ವಿವಾಹಕ್ಕೆ ಸಿನಿಮಾರಂಗ ಹಾಗೂ ರಾಜಕಾರಣಿಗಳು ಸಾಕ್ಷಿಯಾಗಿದ್ದಾರೆ.

ಸೋನಲ್ ಮತ್ತು ತರುಣ್ ವಿವಾಹಕ್ಕೆ ಸಿನಿಮಾರಂಗದ ಬಹುತೇಕರು ಆಗಮಿಸಿದ್ದು, ಹಿರಿಯ ನಟಿ ಗಿರಿಜಾ ಲೋಕೇಶ್, ಸುಧಾರಾಣಿ, ಮಾಳವಿಕಾ ಹಾಗೂ ಅವಿನಾಶ್, ಯೋಗಿ ದ್ವಾರಕೀಶ್, ರಾಕ್‌ಲೈನ್ ವೆಂಕಟೇಶ್ ವಿಶೇಷವಾಗಿ ಟಾಲಿವುಡ್‌ನ ನಟ ಜಗಪತಿ ಬಾಬು ಈ ಜೋಡಿಗೆ ಶುಭ ಹಾರೈಸಿ, ಫೋಟೋ ತೆಗೆಸಿಕೊಂಡರು.
ಇನ್ನು ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ದೂರದ ಮುಂಬೈಯಿಂದಲೇ ಇಲ್ಲಿಗೆ ಬಂದು ಈ ನವ ಜೋಡಿಗೆ ಶುಭ ಹಾರೈಸಿದರು. ಅಲ್ಲದೆ, ರವಿಚಂದ್ರನ್ ಸಹೋದರ ಬಾಲಾಜಿ, ಸಾಧು ಕೋಕಿಲ, ತನಿಷಾ ಕುಪ್ಪಂಡ, ನಿರೂಪಕ ನಿರಂಜನ್ ದೇಶಪಾಂಡೆ, ನಟ-ನಿರ್ದೇಶಕ ರಘು ರಾಮ್, ಗೋಲ್ಡನ್ ಸ್ಟಾರ್ ಗಣೇಶ್, ತಾರಾ ಅನುರಾಧಾ, ವಿನೋದ್ ರಾಜ್, ಮೇಘನಾ ಗಾಂವ್ಕರ್ ಸೇರಿ ಬಹುತೇಜ ಮಂದಿ ಈ ನವ ಜೋಡಿಗೆ ಹಾರೈಸಿದರು.
ಇಂದು ಬೆಳಗ್ಗೆ 10:50ರಿಂದ 11:35 ವೇಳೆಹೆ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆದಿದ್ದು, ಈ ವಿವಾಹ ತರುಣ್ ಸುಧೀರ್ ಅವರ ಸಂಪ್ರದಾಯಂತೆ ನಡೆದಿದೆ. ಈ ಮೂಲಕ ತರುಣ್ ಮತ್ತು ಸೋನಲ್ ಮದುವೆ ಅದ್ದೂರಿಯಾಗಿಯೇ ನಡೆದಿದೆ. ಕಳೆದ ಒಂದು ತಿಂಗಳಿಂದಲೂ ಭರ್ಜರಿ ತಯಾರಿ ನಡೆದಿತ್ತು. ಹಾಗೆಯೇ ತರುಣ್ ಸುಧೀರ್ ಪರಿಸರ ಸ್ನೇಹಿ ಲಗ್ನಪತ್ರಿಕೆ ಕೊಟ್ಟು ಎಲ್ಲರಿಗೂ ವಿಶೇಷ ಆಹ್ವಾನ ನೀಡಿದ್ದರು.
ಈ ಮದುವೆ ಆರತಕ್ಷತೆಗೆ ತರುಣ್ ಅವರೇ ವಿಶೇಷ ಥೀಮ್‌ನಲ್ಲಿ ಯೋಜನೆ ರೂಪಿಸಿದ್ದರು. ಸಿನಿಮಾ ಅವಾರ್ಡ್ ಫಂಕ್ಷನ್ ಮಾದರಿಯ ಸೆಟ್ ಹಾಕಿಸಲಾಗಿತ್ತು. ಕಲ್ಯಾಣ ಮಂದಿರದ ತುಂಬ ಸೋನಲ್ ಮತ್ತು ತರುಣ್ ಅವರ ಸ್ಪೆಷಲ್ ಫೋಟೋಗಳನ್ನು ಬಳಕೆ ಮಾಡಲಾಗಿತ್ತು. ನಟ ಸುಧೀರ್ ಅವರ ದೊಡ್ಡ ಫೋಟೋವೊಂದನ್ನು ಮದುವೆ ಹಾಲ್‌ನಲ್ಲಿ ಇರಿಸಿದ್ದು, ವಿಶೇಷ ಆಗಿತ್ತು. ಈ ನೂತನ ಜೋಡಿಗೆ ತಾಯಿ ಮಾಲತಿ ಸುಧೀರ್ ಅವರು ದೃಷ್ಟಿ ತೆಗೆದಿದ್ದು, ಮತ್ತೊಂದು ವಿಶೇಷವಾಗಿದೆ.
ತರುಣ್ ಸುಧೀರ್-ಸೋನಲ್ ಅವರ ಮದುವೆ ಆರತಕ್ಷತೆ ಸಮಾರಂಭಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಅಶ್ವತ್ಥ್ ನಾರಾಯಣ್, ನಟ ಉಪೇಂದ್ರ, ರಿಷಬ್ ಶೆಟ್ಟಿ, ಧನಂಜಯ್, ರಮೇಶ್ ಅರವಿಂದ್, ಶ್ರುತಿ, ಜೈಜಗದೀಶ್, ಪ್ರೇಮಾ, ದುನಿಯಾ ವಿಜಯ್, ಸುನೀಲ್ ರಾವ್, ವಿನೋದ್ ಪ್ರಭಾಕರ್, ಅನಿರುದ್ಧ್, ಜಗ್ಗೇಶ್, ಮಾಲಾಶ್ರೀ ಮುಂತಾದವರು ಆಗಮಿಸಿದ್ದರು. ಇನ್ನೂ ಮದುವೆ ಮಂಟಪದ ಸುತ್ತಲೂ ತಂದೇ ಸುಧೀರ್ ಅವರ ಫೋಟೋವನ್ನು ಹಾಕಿಸಿದ್ದು, ವಿಶೇಷವಾಗಿತ್ತು.












Click it and Unblock the Notifications