KGF Chapter 3: ‘ಕೆಜಿಎಫ್-3’ ರಿಲೀಸ್ ಡೇಟ್ ಫಿಕ್ಸ್, ಯಶ್ ಅಭಿಮಾನಿಗಳಿಗೆ ಇಲ್ಲಿದೆ ಸರ್ಪ್ರೈಸ್!
ಪ್ಯಾನ್ ಇಂಡಿಯಾ ಜಮಾನದಲ್ಲಿ ಕನ್ನಡ ಸಿನಿಮಾಗಳಿಗೆ ಭಾರಿ ಡಿಮ್ಯಾಂಡ್ ಇದ್ದು, ಕೆಜಿಎಫ್ ಮತ್ತು ಕಾಂತಾರ ನಂತರ ಕನ್ನಡ ಸಿನಿಮಾಗಳ ಖದರ್‌ಗೆ ಬಾಲಿವುಡ್ ಶೇಕ್ ಆಗಿದೆ. ಹೀಗಿದ್ದಾಗ ಕನ್ನಡದ ಉತ್ತಮ ಚಿತ್ರಗಳನ್ನು ಪರಭಾಷೆ ಜನರು ಪ್ರೀತಿಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಅತ್ಯುತ್ತಮ ಚಿತ್ರಗಳು ಬರುತ್ತಿವೆ. ಇದೀಗ ನಟ ಯಶ್ ಫ್ಯಾನ್ಸ್‌ಗೆ 'ಕೆಜಿಎಫ್-3' ಬಗ್ಗೆ 'ಹೊಂಬಾಳೆ ಫಿಲ್ಮ್ಸ್' ಗುಡ್ ನ್ಯೂಸ್ ಕೊಟ್ಟಿದೆ.
ಕನ್ನಡಿಗರ ಪಾಲಿಗೆ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ 'ಕೆಜಿಎಫ್' ರಿಯಲ್ ಗೋಲ್ಡ್. ಬರೀ ದುಡ್ಡು ಮಾಡಿದ ವಿಚಾರಕ್ಕೆ ಮಾತ್ರವಲ್ಲ, ಎಲ್ಲಾ ವಿಭಾಗದಲ್ಲೂ 'ಕೆಜಿಎಫ್' ಚಿತ್ರ ಹಿಂದಿನ ದಾಖಲೆಗಳನ್ನು ಧೂಳ್ ಧೂಳ್ ಮಾಡಿತ್ತು. ಎರಡು ಭಾಗದಲ್ಲಿ ಬಿಡುಗಡೆ ಆಗಿರುವ ಕೆಜಿಎಫ್ ಕೋಟ್ಯಂತರ ಭಾರತೀಯ ಫ್ಯಾನ್ಸ್ ಹೃದಯ ಗೆದ್ದಿದೆ. ಆದರೆ 'ಕೆಜಿಎಫ್-1' & 'ಕೆಜಿಎಫ್-2' ನೋಡಿದ್ದ ಫ್ಯಾನ್ಸ್ 'ಕೆಜಿಎಫ್-3' ಯಾವಾಗ? ಅಂತಾ ಕಾಯುತ್ತಿದ್ದರು. ಅದ್ರಲ್ಲೂ ಯಶ್ ಕೆಜಿಎಫ್-2 ಬಳಿಕ ತಮ್ಮ ಮುಂದಿನ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ 'ಕೆಜಿಎಫ್-3' ರಿಲೀಸ್ ಡೇಟ್ ಪಕ್ಕಾ ಆಗಿದೆ.

2025ಕ್ಕೆ 'ಕೆಜಿಎಫ್ ಚಾಪ್ಟರ್-3' ರಿಲೀಸ್!
ಹೌದು, ಕೆಜಿಎಫ್-1 ಮತ್ತು ಕೆಜಿಎಫ್-2 ಎರಡೂ ಇಂಡಸ್ಟ್ರಿ ಹಿಟ್ ಸಿನಿಮಾಗಳು. ಅದ್ರಲ್ಲೂ 'ಕೆಜಿಎಫ್-2' ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿರುವ ಸಿನಿಮಾಗಳಲ್ಲಿ 3ನೇ ಸ್ಥಾನ ಪಡೆದಿತ್ತು. ಹೀಗೆ 1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವ 'ಕೆಜಿಎಫ್-2' ಭಾರತದಲ್ಲೇ 1000 ಕೋಟಿ ರೂಪಾಯಿ ಬಾಚಿತ್ತು. ಹಾಗೇ ಹೊರದೇಶದಲ್ಲಿ 214 ಕೋಟಿಗೂ ಹೆಚ್ಚು ಗಳಿಸಿತ್ತು ಕನ್ನಡಿಗರ 'ಕೆಜಿಎಫ್-2'. ಇನ್ನು ಕೆಜಿಎಫ್ ಚಾಪ್ಟರ್ 2 ಕ್ಲೈಮ್ಯಾಕ್ಸ್‌ನಲ್ಲಿ 'ಕೆಜಿಎಫ್ ಚಾಪ್ಟರ್-3' ಬಗ್ಗೆ ಹಿಂಟ್ ಕೊಡಲಾಗಿತ್ತು. ಹೀಗಾಗಿ ಸಹಜವಾಗಿ ಕೆಜಿಎಫ್-3 ಬಗ್ಗೆ ಕುತೂಹಲದಿಂದ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರು.
ಇನ್ನು ಕೆಜಿಎಫ್ ಚಾಪ್ಟರ್-3 ಬಗ್ಗೆ ಹೊಂಬಾಳೆ ಸಂಸ್ಥೆ ಬಿಗ್ ಅಪ್‌ಡೇಟ್ ಕೊಟ್ಟಿದೆಯಂತೆ. ಪ್ರೊಡಕ್ಷನ್ ಕೆಲಸ ಇದೇ ವರ್ಷದ ಡಿಸೆಂಬರ್‌ಗೆ ಆರಂಭವಾಗಲಿದ್ದು, 2025ರಲ್ಲಿ ಕೆಜಿಎಫ್-3 ರಿಲೀಸ್ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ವಕ್ತಾರರು ಮಾಹಿತಿ ನೀಡಿರುವ ಬಗ್ಗೆ ಇದೀಗ 'ಪ್ರಜಾವಾಣಿ' ವರದಿ ಮಾಡಿದೆ. ಈ ಮೂಲಕ ಅಂತೂ ಶತಕೋಟಿ ಭಾರತೀಯರ ಕನಸು ನನಸಾಗುವ ಕಾಲ ಬಂದಿದೆ. ಕೆಜಿಎಫ್ ಕರ್ನಾಟಕ ಮಾತ್ರವಲ್ಲದೆ, ಜಗತ್ತಿನಾದ್ಯಂತ ಭಾರಿ ಅಬ್ಬರ ತೋರಿಸಿತ್ತು. ಅದರಲ್ಲೂ ಹಿಂದಿ ಭಾಷಿಕರ ಪ್ರದೇಶದಲ್ಲಿ ಯಶ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.

ಪಕ್ಕಾ ಡೇಟ್ ಕೂಡ ಹೇಳ್ತಾರಂತೆ!
ಇದೇ ಡಿಸೆಂಬರ್ 21ಕ್ಕೆ ಕೆಜಿಎಫ್ ಚಾಪ್ಟರ್ -1 ಬಿಡುಗಡೆಯಾಗಿ 5 ವರ್ಷ ಪೂರ್ತಿಯಾಗಲಿದೆ. ಅದೇ ದಿನ ಕಜಿಎಫ್ ಚಾಪ್ಟರ್-3 ರಿಲೀಸ್ ಡೇಟ್ ಘೋಷಿಸಲಾಗುತ್ತಿದೆ. ಕೆಜಿಎಫ್ ಚಾಪ್ಟರ್ -3 ಚಿತ್ರದ ನಿರ್ದೇಶಕ, ನಿರ್ಮಾಪಕ & ನಟರ ನಡುವೆ ಆರಂಭಿಕ ಸುತ್ತಿನ ಚರ್ಚೆ ನಡೆದಿದೆ. ಹಾಗೂ ಕಥಾಹಂದರ ಚರ್ಚಿಸಲಾಗಿದೆ. ಚಿತ್ರೀಕರಣವು ಅಕ್ಟೋಬರ್ 2024 ರಲ್ಲಿ ಪ್ರಾರಂಭವಾಗಲಿದೆ. ಈ ಮೂಲಕ ಕೆಜಿಎಫ್-3, 2025ರಲ್ಲಿ ರಿಲೀಸ್ ಆಗಲಿದೆಯಂತೆ. ಹೀಗಾಗಿ ಇದೇ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಕೆಜಿಎಫ್-3 ರಿಲೀಸ್ ಡೇಟ್ ಕೂಡ ಫೈನಲ್ ಆಗಲಿದೆಯಂತೆ.
ಹಾಗೇ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಹಾಗೂ ಪ್ರಭಾಸ್ ನಟಿಸಿರುವ 'ಸಲಾರ್' ಡಿ.22 ರಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲೇ ಮತ್ತೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಇಡೀ ಜಗತ್ತೇ ಮತ್ತೊಮ್ಮೆ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವ ದಿನಗಳು ಬರಲಿವೆ. ಈಗಾಗಲೇ ಕೆಜಿಎಫ್ & ಕಾಂತಾರಾ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ಸಖತ್ ಸದ್ದು ಮಾಡಿದೆ. ಈ ಮಧ್ಯೆ ಕಜಿಎಫ್ ಚಾಪ್ಟರ್-3 ಡೇಟ್ ಫೈನಲ್ ಆಗುತ್ತಿರುವುದು ಫ್ಯಾನ್ಸ್‌ಗೆ ಇನ್ನೊಂದು ಸರ್ಪ್ರೈಸ್ ಎನ್ನಬಹುದು.












Click it and Unblock the Notifications