ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಜೈಲ್ ಡೈರಿ!
ಸೋನು ಶ್ರೀನಿವಾಸ್ ಗೌಡ ಈಗ ಪರಪ್ಪನ ಅಗ್ರಹಾರದ ಅತಿಥಿ ಆಗಿದ್ದು, ಮುದ್ದೆ ಮುರಿದು & ಕಂಬಿ ಎಣಿಸುತ್ತಾ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಮಾಡಬಾರದ್ದನ್ನ ಮಾಡಿದರೆ ಹಿಂಗೆ ಆಗುತ್ತೆ ಅಂತಾ ಸೋನುಗೆ ಈಗ ಅಣಕಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹಾಗಾದ್ರೆ ಈಗ ರೀಲ್ಸ್ ರಾಣಿ ಕಥೆ ಏನಾಯ್ತು? ಸೋನು ರಿಲೀಸ್ ಆಗುವುದು ಯಾವಾಗ? ಬನ್ನಿ ತಿಳಿಯೋಣ.
ಸೋನು ಶ್ರೀನಿವಾಸ್ ಗೌಡಗೆ ದಿಢೀರ್ ಎಲ್ಲವೂ ಬಂದಿತ್ತು. ರೀಲ್ಸ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫಾಲೋವರ್ಸ್ ಸಂಪಾದನೆ ಮಾಡಿದ್ದ ಈ ರೀಲ್ಸ್ ರಾಣಿ, ತನ್ನ ಕೈಗೆ ಹಣ ಬರುತ್ತಿದ್ದಂತೆ ಕಾನೂನು ಮರೆತು ಹೋಗಿದ್ದರು ಅಂತಾ ಕಾಣುತ್ತೆ. ಅದರಲ್ಲೂ ಮಗು ದತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಸೋನು ಮಾಡಿಕೊಂಡ ಎಡವಟ್ಟು ಈಗ ರೀಲ್ಸ್ ರಾಣಿಗೆ ಕೇಂದ್ರ ಕಾರಾಗೃಹ ಅಂದ್ರೆ ಶ್ರೀಕೃಷ್ಣ ಪರಮಾತ್ಮನ ಜನ್ಮಸ್ಥಳವಾದ ಜೈಲು ದರ್ಶನವನ್ನ ಮಾಡಿಸಿದೆ. ಹಾಗಾದರೆ ಸೋನು ಶ್ರೀನಿವಾಸ್ ಯಾವಾಗ ರಿಲೀಸ್ ಆಗೋದು? ಮುಂದೆ ಓದಿ.

ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಊಟ!
ಅಂದಹಾಗೆ ಕಾನೂನುಬಾಹಿರ ರೀತಿಯಲ್ಲಿ ಹೆಣ್ಣು ಮಗು ದತ್ತು ಪಡೆದ ಆರೋಪ ಉರುಳಿನಲ್ಲಿ ಸಿಲುಕಿದ, 'ಬಿಗ್ ಬಾಸ್' ಕನ್ನಡ ಒಟಿಟಿ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಸೋನುಗೆ ಈಗ ನ್ಯಾಯಾಂಗ ಬಂಧನ ಆಗಿದೆ. ಮಾನ್ಯ ಸಿಜೆಎಂ ನ್ಯಾಯಾಲಯ ಸೋನುಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿ ತೀರ್ಪು ನೀಡಿದೆ. ಹೀಗೆ ಮಾನ್ಯ ನಾಯಾಲಯದ, ಮಹತ್ವದ ಆದೇಶ ಹೊರ ಬಿದ್ದ ತಕ್ಷಣವೇ ಸೋನು ಶ್ರೀನಿವಾಸ್ ಗೌಡ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗೋದು ಫಿಕ್ಸ್ ಆಗಿತ್ತು.
ರೀಲ್ಸ್ ಹುಚ್ಚಿಗೆ ಜೀವನ ಬಲಿ?
ಸೋನು ಶ್ರೀನಿವಾಸ್ ಗೌಡ ಬರೀ ರೀಲ್ಸ್ ಮಾಡ್ಕೊಂಡು ಇದ್ದಿದ್ದರೆ ಏನೂ ಆಗುತ್ತಿರಲಿಲ್ಲವೇನೊ. ಆದರೆ ಈ ನಡುವೆ ತನ್ನದೇ ಒಂದು ಯುಟ್ಯೂಬ್ ಚಾನೆಲ್ ತೆರೆದು, ಅದರಲ್ಲಿ ಪ್ರತಿನಿತ್ಯವು ವ್ಲಾಗ್ಸ್ ಹಾಕುತ್ತಿದ್ದ ಸೋನು ಶ್ರೀನಿವಾಸ್ ಗೌಡಗೆ ಒಂದು ಐಡಿಯಾ ಹೊಳೆದಿತ್ತು. ಹೀಗಾಗಿ ಹೆಣ್ಣು ಮಗು ಒಂದನ್ನ ದತ್ತು ಪಡೆದಿದ್ದೇನೆ ಅಂತಾ ಊರು ತುಂಬಾ ಹೇಳಿಕೊಂಡು ಬಂದು ಅದನ್ನ ವ್ಲಾಗ್ ಮಾಡಿ ಸೋನು ತಾನೇ ಹಳ್ಳಕ್ಕೆ ಬಿದ್ದಂತೆ ಆಗಿತ್ತು.
ಇನ್ನು ಕಾನೂನು ಪ್ರಕಾರ ದತ್ತು ಪಡೆದ ಮಗುವಿನ ಯಾವುದೇ ಮಾಹಿತಿ ಸಾರ್ವಜನಿಕವಾಗಿ ಬಹಿರಂಗಪಡಿಸಲು ಆಗಲ್ಲ. ಆದರೆ ಸೋನು ಇಂತಹ ಹಲವು ತಪ್ಪು ಮಾಡಿದ್ದ ಆರೋಪ ಕೇಳಿಬಂದಿತ್ತು. ಹೀಗಾಗಿಯೇ ಬೆಂಗಳೂರು ನಗರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ (ಡಿಸಿಪಿಯು) ಕಾನೂನು ಪರಿವೀಕ್ಷಣೆ ಅಧಿಕಾರಿ ನೀಡಿದ ದೂರಿನ ಅನ್ವಯ ಕೇಸ್ ದಾಖಲಿಸಿದ್ದ, ಬ್ಯಾಡರಹಳ್ಳಿ ಠಾಣೆ ಪೊಲೀಸ್ರು ಶುಕ್ರವಾರ ಸೋನು ಶ್ರೀನಿವಾಸ್ ಗೌಡ ಅವರನ್ನ ಬಂಧಿಸಿದ್ರು. ಸೋನು ಗೌಡ ಜೊತೆಯಲ್ಲಿ ಇದ್ದ ಎಂಟು ವರ್ಷದ ಹೆಣ್ಣು ಮಗುವನ್ನ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದು ರಕ್ಷಣೆ ಒದಗಿಸಿದ್ದರು.
ಪೊಲೀಸರಿಂದ ಸ್ಥಳ ಮಹಜರ್
ಹೀಗೆ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆದ ಸುದ್ದಿ ಈಗ ದೇಶಾದ್ಯಂತ ಸದ್ದು ಮಾಡಿದೆ. ಅಲ್ಲದೆ ಬಾಲಕಿಯನ್ನ ರಾಯಚೂರಿನ ಮಸ್ಕಿ ತಾಲೂಕು ಕಾಚಾಪುರ ಗ್ರಾಮದಿಂದ ಸೋನು ಗೌಡ ಕರೆದುಕೊಂದು ಬಂದಿದ್ದರು ಎನ್ನಲಾಗಿತ್ತು. ಬಾಲಕಿಯನ್ನು ದತ್ತು ಪಡೆಯುವಲ್ಲಿ ಯಾವುದೇ ರೀತಿ ಕಾನೂನು ಪಾಲನೆ ಮಾಡಿರದ ಈ ಸೋನು ಗೌಡ, ಈಗ ಪೊಲೀಸರ ಅತಿಥಿಯಾಗಿದ್ದಾರೆ. ಸ್ಥಳ ಮಹಜರ್ ಮಾಡಲು ಬಾಲಕಿ ಹುಟ್ಟೂರಿಗೂ ಸೋನು ಅವರನ್ನು ಕರೆದುಕೊಂಡು ಹೋಗಿ ಬಂದಿದ್ದರು ಪೊಲೀಸರು ಎನ್ನಲಾಗಿತ್ತು. ಇದೀಗ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆ, ಸೋನು ಶ್ರೀನಿವಾಸ್ ಗೌಡಗೆ ಹೊಸ ಸಂಕಷ್ಟ ಎದುರಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ
ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆದ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಭಾರಿ ಚರ್ಚೆ ನಡೆದಿದೆ. ಒಂದು ಕಡೆ ಮಾಡಿದ ತಪ್ಪಿಗೆ ಶಿಕ್ಷೆಯಾಗಿದೆ ಬಿಡಿ ಅಂತಾ ಕೆಲವರು ಹೇಳ್ತಿದ್ರೆ, ಇನ್ನೂ ಕೆಲವರು ಸೋನು ಶ್ರೀನಿವಾಸ್ ಗೌಡ ಪರ ನಿಂತಿದ್ದಾರೆ. ಹೀಗಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿ ಮಾತುಕತೆ ನಡೆಯುತ್ತಿದೆ. ಈ ಮೂಲಕ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆದ ನಂತರ ಪರ & ವಿರೋಧದ ಮಾತುಗಳು ಕೇಳಿಬಂದಿದೆ. ಈ ನಡುವೆ ಮಗುವಿನ ಪೋಷಕರಿಗೆ ಕೂಡ ಈ ಪ್ರಕರಣ ಸಮಸ್ಯೆ ಕೊಡುವ ಸಾಧ್ಯತೆ ದಟ್ಟವಾಗಿ ಇದ್ದು, ಈ ಬಗ್ಗೆಯೂ ಪರ & ವಿರೋಧದ ಮಾತುಕತೆ ಜೋರಾಗಿದೆ.












Click it and Unblock the Notifications