National Film Awards: ಹಳ್ಳಿಯಿಂದ ದಿಲ್ಲಿವರೆಗೂ ರಾಜಮೌಳಿ ಸೌಂಡ್!
ಭಾರತದ ಸಿನಿಮಾಗಳು ಅಂದ್ರೆ ಹಾಲಿವುಡ್ ಕೂಡ ಒಂದು ಸಾರಿ ಹಿಂದೆ, ಮುಂದೆ ನೋಡಿ ತನ್ನ ಚಿತ್ರಗಳನ್ನ ರಿಲೀಸ್ ಮಾಡುತ್ತೆ. ಅದ್ರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಅಂದರೆ ಬಾಲಿವುಡ್‌ನಿಂದ ಹಾಲಿವುಡ್ ತನಕ ಎಲ್ಲರೂ ಶೇಕ್ ಆಗ್ತಾರೆ. ಹೀಗೆ ದಕ್ಷಿಣ ಭಾರತದಲ್ಲಿ ಭರ್ಜರಿ ಸಿನಿಮಾಗಳ ಟ್ರೆಂಡ್ ಆರಂಭಿಸಿದ್ದು ರಾಜಮೌಳಿ. ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಸಿನಿಮಾಗಳನ್ನ ನಿರ್ಮಿಸುವ ಸ್ಟಾರ್ ನಿರ್ದೇಶಕ ರಾಜಮೌಳಿ ಮತ್ತೆ ಸೌಂಡ್ ಮಾಡಿದ್ದಾರೆ.
ಹೌದು, ಮೊದಲೇ ಹೇಳಿದಂತೆ ಹಳ್ಳಿಯಿಂದ ದಿಲ್ಲಿವರೆಗೂ ರಾಜಮೌಳಿ ಸೌಂಡ್ ಜೋರಿದೆ. ಕಳೆದ ಹಲವು ದಶಕಗಳಿಂದ ಚಿತ್ರ ರಂಗಕ್ಕೆ ಸೇವೆ ಸಲ್ಲಿಸುತ್ತಿರುವ ರಾಜಮೌಳಿ, ಬಾಹುಬಲಿ ಸಿನಿಮಾ ಮೂಲಕ ಜಗತ್ತಿಗೇ ಪರಿಚಿತರಾದರು. 'ಬಾಹುಬಲಿ-1' ಮತ್ತು 'ಬಾಹುಬಲಿ-2' ಭರ್ಜರಿ ಹಿಟ್ ಕಂಡು, ಸಾವಿರಾರು ಕೋಟಿ ಗಳಿಸಿದ್ದವು. ಹೀಗೆ ತಮ್ಮ ನಿರ್ದೇಶನದ ಶೈಲಿ ಹಾಗೂ ಕಥೆಗಳ ಮೂಲಕ ಸದ್ದು ಮಾಡುವ ರಾಜಮೌಳಿ ಅವರು, RRR ಚಿತ್ರದ ಮೂಲಕ ಮತ್ತೆ ಗ್ರ್ಯಾಂಡ್ ಕಂಬ್ಯಾಕ್ ಮಾಡಿದ್ದಾರೆ. ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ RRR ಸಿನಿಮಾ ಅಬ್ಬರಿಸಿ ಬೊಬ್ಬಿರಿದಿದೆ.

RRR ಸಿನಿಮಾಗೆ ಎಷ್ಟು ಪ್ರಶಸ್ತಿ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಯ ಪಟ್ಟಿಯನ್ನ ಪ್ರಕಟಿಸಲಾಗಿದೆ. ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದೆ. ಸೆಪ್ಟೆಂಬರ್ 1, 2021ರಿಂದ ಆಗಸ್ಟ್ 31, 2022ರ ನಡುವೆ ರಿಲೀಸ್ ಆದ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಪೈಕಿ RRR ಸಿನಿಮಾ ದೊಡ್ಡ ಸದ್ದು ಮಾಡಿದೆ. ಹಾಗಾದರೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ RRR ಸಿನಿಮಾ ಗಳಿಸಿರುವ ಪ್ರಶಸ್ತಿ ಎಷ್ಟು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
RRR ಸಿನಿಮಾ ಬಹುತೇಕ ಎಲ್ಲಾ ವಿಭಾಗದಲ್ಲೂ ತನ್ನ ತಾಕತ್ ತೋರಿಸಿದೆ. ಆಸ್ಕರ್ ರೀತಿಯೇ ದೇಶದ ಪ್ರಮುಖ ಸಿನಿಮಾ ಪ್ರಶಸ್ತಿ ವಿಭಾಗದಲ್ಲೂ RRR ಸದ್ದು ಮಾಡಿದೆ. ಅತ್ಯುತ್ತಮ ಸಾಹಸ ಸಂಯೋಜನೆ ವಿಭಾಗದಲ್ಲಿ RRR ಪ್ರಶಸ್ತಿ ಪಡೆದಿದೆ, ಹಾಗೇ ಅತ್ಯುತ್ತಮ ನೃತ್ಯ ನಿರ್ದೇಶನ & ಸ್ಪೆಷಲ್ ಎಫೆಕ್ಟ್, ಅತ್ಯುತ್ತಮ ಹಿನ್ನೆಲೆ ಸಂಗೀತ ಸೇರಿದಂತೆ ಅತ್ಯುತ್ತಮ ಜನಪ್ರಿಯ ಚಿತ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗೆ ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ಸಿನ್ಮಾ ಸೌಂಡ್ ಮಾಡಿದೆ. ಈಗಲೂ RRR ಸಿನಿಮಾ ತನ್ನ ಕ್ರೇಜ್ ಉಳಿಸಿಕೊಂಡಿದ್ದು, ಇತ್ತೀಚೆಗೆ ಜಪಾನ್ & ಅಮೆರಿಕದಲ್ಲಿ ರಿಲೀಸ್ ಆಗಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿತ್ತು.

ಜಗತ್ತಿನಾದ್ಯಂತ ಭಾರತೀಯ ಸಿನಿಮಾ ಅಬ್ಬರ
ಒಟ್ಟಾರೆ ಹೇಳೋದಾದ್ರೆ ಅತ್ಯುತ್ತಮ ಚಿತ್ರಗಳ ಪೈಪೋಟಿ ನಡುವೆ ಶ್ರೇಷ್ಠ ಸಿನಿಮಾಗಳನ್ನ ಆಯ್ಕೆ ಮಾಡಿ ಪ್ರಶಸ್ತಿ ಪ್ರಕಟಿಸಲಾಗಿದೆ. ತೆಲುಗು ಇಂಡಸ್ಟ್ರಿ ಮತ್ತೆ RRR ಸಿನಿಮಾ ಮೂಲಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಸದ್ದು ಮಾಡಿದೆ. ಜಗ್ತಿನಾದ್ಯಂತ RRR ಸಿನಿಮಾ ಅಬ್ಬರಿಸಿತ್ತು. ಹಾಗೇ ಗಲ್ಲಾ ಪೆಟ್ಟಿಗೆಯಲ್ಲೂ ಸಾವಿರ ಕೋಟಿ ಗಳಿಸಿ ನಿರ್ಮಾಪಕ ಮತ್ತು ವಿತರಕರಿಗೂ ಭಾರಿ ಲಾಭ ತಂದುಕೊಟ್ಟಿತ್ತು. ಖುದ್ದು ಅವತಾರ್ ಚಿತ್ರ ಖ್ಯಾತಿಯ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್, RRR ಸಿನಿಮಾ ಹೊಗಳಿದ್ದರು. RRR ಚಿತ್ರ ಆಸ್ಕರ್ ಪ್ರಶಸ್ತಿ ಕೂಡ ಪಡೆದಿತ್ತು. ಈಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲೂ ಅಬ್ಬರಿಸಿದೆ.

ದಕ್ಷಿಣ ಭಾರತದ ಸಿನಿಮಾಗಳ ಖದರ್ ಮತ್ತೊಮ್ಮೆ ದೇಶದ ಮೂಲೆ ಮೂಲೆಗೆ ಪಸರಿಸಿದೆ. ಒಂದು ಕಾಲದಲ್ಲಿ ಭಾರತೀಯ ಚಿತ್ರಗಳು ಅಂದರೆ ಬಾಲಿವುಡ್ ಮಾತ್ರ ಎನ್ನುವಂತೆ ಇದ್ದ ಪರಿಸ್ಥಿತಿ ಈಗ ಬದಲಾಗಿದೆ. ಅದರಲ್ಲೂ ಸೌತ್ ಸಿನಿಮಾ ಇಂಡಸ್ಟ್ರಿ ಹೆಸರು ಕೇಳಿದರೆ ಸಾಕು ಬಾಲಿವುಡ್ ಸ್ಟಾರ್‌ಗಳು ಕೂಡ ನಡುಗುವ ಪರಿಸ್ಥಿತಿ ಇದೆ. ಬರೀ ಪ್ರೇಕ್ಷಕರ ಮನ ಗೆಲ್ಲುವ ವಿಚಾರದಲ್ಲಿ ಮಾತ್ರವಲ್ಲ, ಪ್ರಶಸ್ತಿ ಪಡೆಯುವಲ್ಲೂ ದಕ್ಷಿಣ ಭಾರತದ ಸಿನಿಮಾಗಳು ತಮ್ಮ ತಾಕತ್ ತೋರಿಸಿವೆ. ಅದರಲ್ಲೂ RRR ಸಿನಿಮಾ ಹೊಸ ಇತಿಹಾಸವನ್ನೇ ನಿರ್ಮಿಸುತ್ತಿದೆ.












Click it and Unblock the Notifications