KGF Movie: ಕನ್ನಡಿಗರ ‘ಕೆಜಿಎಫ್-2’ ದಾಖಲೆ ಹಿಂದಿಕ್ಕಿದ ಸಿನಿಮಾ ಇದು!

ಕನ್ನಡಿಗರ ಪಾಲಿಗೆ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ 'ಕೆಜಿಎಫ್' ರಿಯಲ್ ಗೋಲ್ಡ್. ಬರೀ ದುಡ್ಡು ಮಾಡಿದ ವಿಚಾರಕ್ಕೆ ಮಾತ್ರವಲ್ಲ, ಎಲ್ಲಾ ವಿಭಾಗದಲ್ಲೂ 'ಕೆಜಿಎಫ್' ಚಿತ್ರ ಈ ಹಿಂದಿನ ದಾಖಲೆ ಧೂಳ್ ಧೂಳ್ ಮಾಡಿತ್ತು. ಎರಡು ಭಾಗದಲ್ಲಿ ಬಿಡುಗಡೆ ಆಗಿರುವ ಕೆಜಿಎಫ್ ಕೋಟ್ಯಂತರ ಭಾರತೀಯ ಅಭಿಮಾನಿಗಳ ಹೃದಯ ಗೆದ್ದಿದೆ. ಆದರೆ 'ಕೆಜಿಎಫ್' ನಿರ್ಮಿಸಿದ್ದ ಬಾಕ್ಸ್ ಆಫಿಸ್ ದಾಖಲೆಯನ್ನು ಹಿಂದಿಯ ಅದೊಂದು ಸಿನಿಮಾ ಹಿಂದಿಕ್ಕಿದೆ.

ಕೆಜಿಎಫ್-1 ಮತ್ತು ಕೆಜಿಎಫ್-2 ಎರಡೂ ಇಂಡಸ್ಟ್ರಿ ಹಿಟ್ ಕಂಡಿದ್ದ ಚಿತ್ರಗಳು. ಈ ಪೈಕಿ, 'ಕೆಜಿಎಫ್-2' ಇಡೀ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಹೀಗೆ 1200 ಕೋಟಿ ರೂಪಾಯಿಗು ಹೆಚ್ಚು ಕಲೆಕ್ಷನ್ ಮಾಡಿರುವ 'ಕೆಜಿಎಫ್-2' ಭಾರತದಲ್ಲೇ 1000 ಕೋಟಿ ರೂಪಾಯಿ ಬಾಚಿತ್ತು. ಹಾಗೇ ಹೊರದೇಶದಲ್ಲಿ 214 ಕೋಟಿಗೂ ಹೆಚ್ಚು ಗಳಿಸಿತ್ತು ಕನ್ನಡಿಗರ 'ಕೆಜಿಎಫ್-2'. ಇಂತಿಪ್ಪ ಕೆಜಿಎಫ್-2 ಚಿತ್ರ, ಹಿಂದಿಯಲ್ಲಿ ಅತಿಹೆಚ್ಚು ಗಳಿಸಿದ್ದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ ಈ ದಾಖಲೆ ಈಗ ಮುರಿದು ಹೋಗಿದೆ.

Discover how Gadar 2 breaks KGF 2 Box office record in Hindi

'ಕೆಜಿಎಫ್-2' ದಾಖಲೆ ಮುರಿದ 'ಗದರ್-2'!

ಹೌದು, ಕೆಜಿಎಫ್-1 ಯಾವಾಗ ದೇಶದ ಮೂಲೆ ಮೂಲೆಗೂ ತಲುಪಿತ್ತೋ ಆಗಲೇ ಕನ್ನಡ ಸಿನಿಮಾ ಕೆಜಿಎಫ್-2 ಬಗ್ಗೆ ನಿರೀಕ್ಷೆ ಮುಗಿಲು ಮುಟ್ಟಿತ್ತು. ಅದ್ರಲ್ಲೂ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತ ಅಂದರೆ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಕೆಜಿಎಫ್-2 ನೋಡಲು ಜನ ಕಾಯುತ್ತಿದ್ದರು. ಹೀಗೆ ಕೆಜಿಎಫ್-1 ರಿಲೀಸ್ ಆಗಿ ಸುಮಾರು 3 ವರ್ಷ ನಂತರ ಕೆಜಿಎಫ್-2 ಬಿಡುಗಡೆ ಆಗಿತ್ತು. ಹೀಗಿದ್ದರೂ ಕೆಜಿಎಫ್-2 ಕ್ರೇಜ್‌ಗೆ ಬಾಕ್ಸ್ ಆಫಿಸ್ ಅಲ್ಲಾಡಿ ಹೋಗಿತ್ತು. ಕನ್ನಡಿಗರ ಸಿನಿಮಾ ಒಂದು ಸಾವಿರ ಕೋಟಿ ಸರದಾರ ಎನಿಸಿಕೊಂಡಿತ್ತು. ಹಾಗೇ ಹಿಂದಿ ಭಾಷೆಯಲ್ಲೇ ಕೆಜಿಎಫ್-2 ಒಟ್ಟು 435 ಕೋಟಿ ರೂಪಾಯಿ ಗಳಿಸಿತ್ತು. ಆದರೆ 'ಗದರ್-2' ಇದೀಗ ಹಿಂದಿ ಭಾಷೆಯಲ್ಲಿ 438 ಕೋಟಿ ರೂಪಾಯಿ ಬಾಚಿಕೊಂಡಿದೆ. ಹೀಗೆ ಕೆಜಿಎಫ್-2 ಜಾಗವನ್ನ ಗದರ್-2 ಆಕ್ರಮಿಸಿಕೊಂಡಿದೆ.

'ಗದರ್-2' ₹500 ಕೋಟಿ ಗ್ಯಾರಂಟಿ?

ಹಿಂದಿಯಲ್ಲಿ ಮತ್ತೊಂದು ಚಿತ್ರ ಕಮಾಲ್ ಮಾಡಿದೆ, ಯಾಕಂದ್ರೆ ಸಾಲು ಸಾಲು ಸೋಲು ಬಾಲಿವುಡ್ ಮಂದಿಯನ್ನ ಕಂಗೆಡಿಸಿತ್ತು. ಬಾಲಿವುಡ್‌ನ ಪರಿಸ್ಥಿತಿ ಮತ್ತೆ ತಿಳಿಯಾಗುತ್ತಿದ್ದು, ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ. ಅದೇ ರೀತಿಯೇ ಇದೀಗ 'ಗದರ್-2' ಕೂಡ ಭರ್ಜರಿ ಸಕ್ಸಸ್ ಪಡೆದಿದ್ದು ₹60 ಕೋಟಿ ಬಂಡವಾಳದಲ್ಲಿ ಈ ಸಿನಿಮಾ ತಯಾರಾಗಿತ್ತು. ಈಗ ಹಿಂದಿ ವರ್ಷನ್‌ನಲ್ಲೇ ಗದರ್-2 438 ಕೋಟಿ ರೂಪಾಯಿ ಬಾಚಿದ್ದು, ಮುಂದಿನ ವಾರಕ್ಕೆ ಈ ಸಂಖ್ಯೆ ₹500 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ. ಗದರ್-2ಗೆ ಡಿಮ್ಯಾಂಡ್ ಕೂಡ ದಿನದಿನಕ್ಕೂ ಹೆಚ್ಚಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+