Darshan Thoogudeepa: ನಟ ದರ್ಶನ್‌ ಕೋಟ್ಯಾಧಿಪತಿಯಾಗಿದ್ದು ಹೇಗೆ? ಗುಟ್ಟು ರಿವೀಲ್‌ ಮಾಡಿದ ದಿನಕರ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ತೂಗುದೀಪ ಅವರು ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪ ಹೊತ್ತು, ಜಾಮೀನಿನ ಮೇಲೆ ಹೊರಬಂದಿದ್ದಾರೆ. ಚಿಕಿತ್ಸೆ ಕಾರಣದಿಂದ ಅವರು ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ದರ್ಶನ್‌ ಸ್ಯಾಂಡಲ್‌ವುಡ್‌ ಬಾಕ್ಸಾಫೀಸ್‌ ಸುಲ್ತಾನ್‌ ಆಗಿ ಮೆರೆದವರು. ಇವರ ಸಿನಿಮಾಗಳು ಭರ್ಜರಿ ಕಲೆಕ್ಷನ್‌ ಮಾಡುವ ಜೊತೆಗೆ ದರ್ಶನ್‌ ಅವರು ಕೋಟಿಗಟ್ಟಲೆ ಸಂಭಾವನೆ ಪಡೆಯುವ ಮಟ್ಟಕ್ಕೂ ಬೆಳೆದಿದ್ದಾರೆ.

ಸಾಮಾನ್ಯವಾಗಿ ಮನೆ ಆರ್ಥಿಕವಾಗಿ ಬೆಳೆಯಲಿ. ಸಂಪತ್ತು ಅರಸಿ ಬರಲಿ ಎಂದು ಹಲವು ತಮ್ಮದೇ ಆದ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗಳನ್ನು ಪಾಲಿಸುತ್ತಾರೆ. ಅಂತದ್ದೇ ಪದ್ಧತಿಯೊಂದು ತೂಗುದೀಪ ಅವರ ಮನೆಯಲ್ಲೂ ಇತ್ತು ಎಂಬ ಅಚ್ಚರಿ ವಿಚಾರವನ್ನು ದರ್ಶನ್‌ ಸಹೋದರ ದಿನಕರ್‌ ತೂಗುದೀಪ ರಿವೀಲ್‌ ಮಾಡಿದ್ದಾರೆ.

Dinakar Reveals A Surprising Fact About Actor Darshan Thoogudeepa

ಹರಿಯೋ ನೀರಿಗೆ ಹಣ ಹಾಕಿದ್ರೆ, ನಮ್ಮ ಜೀವನದಲ್ಲೂ ಕಾಸು ಹರಿದು ಬರುತ್ತದೆ ಎಂಬುದನ್ನು ದರ್ಶನ್‌ ಅವರ ತಂದೆ ತೂಗುದೀಪ ಶ್ರೀನಿವಾಸ್‌ ಅವರು ನಂಬಿದ್ದರು ಎಂದು ದಿನಕರ್‌ ಹೇಳಿದ್ದಾರೆ. ಈ ವಿಚಾರವನ್ನು ದಿನಕರ್‌ ತಾವು ನಿರ್ದೇಶಿಸಿರುವ ರಾಯಲ್‌ ಸಿನಿಮಾದ ನಟ ವಿರಾಟ್‌ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಕಾವೇರಿ ನದಿಗೆ ದಿನಕರ್‌ ಅವರು ಚಿಲ್ಲರೆ ನಾಣ್ಯಗಳನ್ನು ಮೊದಲಿಗೆ ಎಸೆಯುತ್ತಾರೆ. ಈ ಬಗ್ಗೆ ನಟ ವಿರಾಟ್‌ ಪ್ರಶ್ನೆ ಕೇಳಿದರು. ಯಾಕೆ ಸರ್‌ ನದಿಗೆ ಹಣ ಎಸೆದಿರಿ? ಇದರೆಲ್ಲ ಏನಾದರೂ ವಿಶೇಷ ಇದೆಯೇ? ಎಂದು ಕೇಳಿದರು. ಆಗ ದಿನಕರ್‌ ಈ ವಿಚಾರ ಹೇಳಿಕೊಂಡಿದ್ದಾರೆ. ನಮ್ಮ ತಂದೆ ತೂಗುದೀಪ ಶ್ರೀನಿವಾಸ್‌ ಅವರು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವಾಗ ಹರಿಯುವ ಕಾವೇರಿ ನದಿಗೆ ಹಣ ಎಸೆಯುತ್ತಿದ್ದರು ಎಂದಿದ್ದಾರೆ.

Dinakar Reveals A Surprising Fact About Actor Darshan Thoogudeepa

ಹರಿಯುವ ನದಿಗೆ ಕಾಸು ಎಸೆದರೆ ನಮ್ಮ ಜೀವನದಲ್ಲೂ ಕಾಸು ಹರಿದುಬರುತ್ತೆ ಅನ್ನೋದು ನಮ್ಮ ತಂದೆಯವರ ನಂಬಿಕೆಯಾಗಿತ್ತು. ಅದನ್ನೇ ನಾನು ಹಾಗೂ ಸಹೋದರ ದರ್ಶನ್‌ ಕೂಡ ಫಾಲೋ ಮಾಡುತ್ತಿದ್ದೇವೆ ಎಂದು ದಿನಕರ್‌ ಹೇಳಿದ್ದಾರೆ. ಇದನ್ನು ಕೇಳಿ ನಟ ವಿರಾಟ್‌ ಕೂಡ ಕೈತುಂಬಾ ಚಿಲ್ಲರೆ ಕಾಸನ್ನು ಕಾವೇರಿ ನದಿಗೆ ಎಸೆದಿದ್ದಾರೆ. ನಮ್ಮ ಸಿನಿಮಾ ಕೂಡ ಸಕ್ಸಸ್‌ ಆಗಿ ಕೈತುಂಬಾ ಹಣ ಹರಿದುಬರಲಿ ಎಂದು ವಿರಾಟ್‌ ಕೂಡ ನದಿಗೆ ನಾಣ್ಯ ಎಸೆದಿದ್ದಾರೆ.

ದಿನಕರ್‌ ಅವರು ಹೇಳಿಕೊಂಡಿರುವ ತಮ್ಮ ತಂದೆಯವರ ನಂಬಿಕೆ ಹಾಗೂ ಹಣದ ಬಗ್ಗೆ ಇರುವ ಗೌರವದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹರಿಯೋ ನೀರಿಗೆ ಕಾಸ್ ಹಾಕಿದ್ರೆ ಕಾಸು ಹರ್ಕೊಂಡ್ ಬರುತ್ತೆ ನಿಮ್ ಜೀವನದಲ್ಲಿ ಎಂದು ಫಾಲೋ ಮಾಡಲು ಮುಂದಾಗಿದ್ದಾರೆ.

Dinakar Reveals A Surprising Fact About Actor Darshan Thoogudeepa

ಇನ್ನು ದರ್ಶನ್‌ ಅವರು ಜನವರಿ 5ರಂದು ಅಂದರೆ ಇಂದಿನವರೆಗೆ ಮೈಸೂರಿನಲ್ಲಿರಲು ಕೋರ್ಟ್‌ ಅನುಮತಿ ನೀಡಿತ್ತು. ಕಾಲು ನೋವು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿಂದ ದರ್ಶನ್‌ ಬಳಲುತ್ತಿರುವ ಕಾರಣ ಸರ್ಜರಿಗಾಗಿ ಜಾಮೀನು ಮಂಜೂರಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜಿಎಸ್‌ ಆಸ್ಪತ್ರೆಯಲ್ಲಿದ್ದ ದರ್ಶನ್‌ ಅವರು ಜಾಮೀನು ಸಿಕ್ಕ ಬಳಿಕ ಮೈಸೂರಿನಲ್ಲಿರುವ ಫಾರ್ಮ್‌ಹೌಸ್‌ನತ್ತ ತೆರಳಿದ್ದು, ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+