Get Updates
Get notified of breaking news, exclusive insights, and must-see stories!

ನಟ ಶಿವಣ್ಣನ ಆರೋಗ್ಯ ವಿಚಾರಿಸಿದ ಡಿಸಿಎಂ ಡಿಕೆ ಶಿವಕುಮಾರ್‌

ಅಮೇರಿಕಾದಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದಿರುವ ಕನ್ನಡ ಚಿತ್ರರಂಗದ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಶಿವಣ್ಣ ಹಾಗೂ ಗೀತಕ್ಕ ದಂಪತಿಯನ್ನು ಖುದ್ದು ಭೇಟಿಯಾಗಿ ಕೆಲಹೊತ್ತು ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ಶಿವರಾಜ್‌ಕುಮಾರ್‌ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮೊದಲಿನಿಂದಲೂ ಸದಾಶಿವನಗರದಲ್ಲೇ ನೆರೆಹೊರೆಯಲ್ಲಿದ್ದವರು. ಕೆಲ ವರ್ಷಗಳ ಹಿಂದಷ್ಟೇ ಶಿವಣ್ಣ ನಾಗವಾರದ ಬಳಿಯ ಹೊಸ ಮನೆಗೆ ಶಿಫ್ಟ್‌ ಆಗಿದ್ದರು. ಹಾಗಾಗಿ ರಾಜ್‌ ಕುಟುಂಬದೊಂದಿಗೆ ಡಿಕೆಶಿ ಮೊದಲಿನಿಂದಲೂ ನಂಟು ಹೊಂದಿದ್ದಾರೆ. ಈ ಹಿನ್ನೆಲೆ ಶಿವಣ್ಣ ಅವರನ್ನು ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

DCM DK Shivakumar Meets Actor Shivarajkumar After Cancer Treatment

ಈ ಹಿಂದೆ ಶಿವಣ್ಣ ಸರ್ಜರಿಗೆ ಒಳಗಾದ ಸಂದರ್ಭದಲ್ಲಿಯೂ ಡಿ.ಕೆ.ಶಿವಕುಮಾರ್‌ ಅವರು ಪ್ರಾರ್ಥಿಸಿದ್ದರು. ಶಿವರಾಜ್‌ಕುಮಾರ್ ಅವರ ಆರೋಗ್ಯ ಸುಧಾರಿಸಲಿ ಎಂದು ಟ್ವೀಟ್‌ನಲ್ಲಿ ಹಾರೈಸಿದ್ದರು. ನೆಚ್ಚಿನ ನಟ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ಅವರು ಶೀಘ್ರವೇ ಗುಣಮುಖರಾಗಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ ಎಂದಿದ್ದರು. ನನ್ನ ನೆರೆಹೊರೆಯವರೇ ಆದ ಶಿವರಾಜ್‌ ಕುಮಾರ್‌ ಅವರು ಗಂಭೀರ ಕಾಯಿಲೆಗೆ ಒಳಗಾಗಿದ್ದಾರೆ ಎಂದು ತಿಳಿದು ದುಃಖವಾಯಿತು. ಆದರೆ, ಅವರ ಜೀವನೋತ್ಸಾಹ, ಎಲ್ಲವನ್ನೂ ಗೆಲ್ಲಬಲ್ಲೆನು ಎನ್ನುವ ಧೈರ್ಯ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ. ಭಗವಂತ ಅವರಿಗೆ ಇನ್ನಷ್ಟು ಚೈತನ್ಯ ನೀಡಿ ಕಾಪಾಡಲಿ ಎಂದು ಡಿ.ಕೆ.ಶಿವಕುಮಾರ್‌ ಹಾರೈಸಿದ್ದರು.

ಕ್ಯಾನ್ಸರ್‌ ದೃಢವಾದ ಹಿನ್ನೆಲೆ ನಟ ಶಿವಣ್ಣ ಅವರು ಅಮೆರಿಕಾದ ಮಿಯಾಮಿ ಆಸ್ಪತ್ರೆಯಲ್ಲಿ ಆಪರೇಷನ್‌ಗಾಗಿ ತೆರಳಿದ್ದರು. ಕೊನೆಗೆ ಆಪರೇಷನ್‌ ಯಶಸ್ವಿಯಾಗಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದು ಕಳೆದ ವಾರವಷ್ಟೇ ಅವರು ಬೆಂಗಳೂರಿಗೆ ವಾಪಸ್‌ ಆಗಿದ್ದರು. ಅಲ್ಲದೆ ಶಿವರಾಜ್‌ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದಲೂ ಸ್ಪರ್ಧಿಸಿದ್ದರು. ಹೀಗಾಗಿ ಎರಡೂ ಕುಟುಂಬಗಳ ನಡುವೆ ರಾಜಕೀಯವಾಗಿ ಹಾಗೂ ಆತ್ಮೀಯವಾದ ಬಂಧವಿದೆ.

DCM DK Shivakumar Meets Actor Shivarajkumar After Cancer Treatment

ಈ ಹಿಂದೆ ನಟ ಶಿವರಾಜ್‌ಕುಮಾರ್‌ ಅವರಿಗೆ ಡಿ.ಕೆ.ಶಿವಕುಮಾರ್‌ ಅವರು ರಾಜಕೀಯಕ್ಕೆ ಬರಲು ಆಹ್ವಾನ ನೀಡಿದ್ದರು. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಈಡಿಗ ಸಮುದಾಯದ ಸಮಾವೇಶದಲ್ಲಿ ಭಾಗಿಯಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಹಿರಂಗವಾಗಿ ಶಿವರಾಜ್ ಕುಮಾರ್ ಅವರಿಗೆ ಲೋಕಸಭೆಯ ಟಿಕೆಟ್ ಆಫರ್ ಕೊಟ್ಟಿದ್ದರು.

ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶದಲ್ಲಿ, ʼಲೋಕಸಭೆ ಚುನಾವಣೆಗೆ ತಯಾರಾಗಿ, ಎಂದರೆ ಐದಾರು ಸಿನಿಮಾ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು. ಆದರೆ ಪಾರ್ಲಿಮೆಂಟ್‌ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದೇನೆʼ ಎಂದು ಡಿಕೆಶಿ ಓಪನ್‌ ಆಫರ್‌ ನೀಡಿದ್ದರು.

ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಆಫರ್‌ ಅನ್ನು ಶಿವರಾಜ್‌ಕುಮಾರ್‌ ತಿರಸ್ಕರಿಸಿದ್ದರು. ಬಣ್ಣ ಹಚ್ಚಿ ನಟನೆ ಮಾಡುವುದು ನಮಗೆ ತಂದೆಯಿಂದ ಬಂದಿರುವ ಬಳುವಳಿ. ಬಣ್ಣ ಹಚ್ಚುವುದು, ನಟನೆ ಮಾಡುವುದಷ್ಟೇ ನಮ್ಮ ಕೆಲಸ. ನಾನು ನಾನು ಎಂದಿಗೂ ರಾಜಕಾರಣಕ್ಕೆ ಬರುವುದಿಲ್ಲ. ನಮ್ಮ ತಂದೆ ಕಲಿಸಿದ ನಟನೆಯನ್ನೇ ನಾವು ಮುಂದುವರೆಸುತ್ತೇನೆ ಎಂದು ಶಿವಣ್ಣ ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+