Darshan Thoogudeepa: ಜೈಲಿನಿಂದ ದರ್ಶನ್ ತೂಗುದೀಪ್ ಇವತ್ತೇ ರಿಲೀಸ್? ಅಭಿಮಾನಿಗಳ ಅಬ್ಬರದ ಸಿದ್ಧತೆ

ದರ್ಶನ್ ತೂಗುದೀಪ್ ಅವರು ಇಂದೇ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿ ಹೊರ ಬರಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಕಳೆದ ಒಂದೂವರೆ ತಿಂಗಳಿಂದಲು ಜೈಲಿನಲ್ಲಿ ಇರುವ ನಟ ದರ್ಶನ್ ತೂಗುದೀಪ್ ಅವರು, ನರಕ ಅನುಭವಿಸುತ್ತಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಜೈಲಿನಿಂದ ರಿಲೀಸ್ ಆಗಲಿ ಅಂತಾ ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ. ಇದೇ ವೇಳೆ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಜೈಲಿನಿಂದ ಹೊರಗೆ ಬರುವ ಬಗ್ಗೆ ಸ್ಫೋಟಕ ಸುದ್ದಿ ಹೊರಬಿದ್ದಿದೆ!

ದರ್ಶನ್ ತೂಗುದೀಪ್ ಅವರು ತಮ್ಮ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬ ಯುವಕನ ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಕಳೆದ ತಿಂಗಳು ಪೊಲೀಸರು ದರ್ಶನ್ ತೂಗುದೀಪ್ ಅವರನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಯಾವುದೇ ತಪ್ಪು ಮಾಡಿಲ್ಲ, ಆದರೆ ದರ್ಶನ್ ತೂಗುದೀಪ್ ವಿರುದ್ಧ ಈಗ ರಾಜಕೀಯ ಪಿತೂರಿ ನಡೆಯುತ್ತಿದೆ ಎಂಬ ಆರೋಪವನ್ನ ಅಭಿಮಾನಿಗಳು ಮಾಡ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ಅವರು ಜೈಲಿನಿಂದ ಬಿಡುಗಡೆ ಆಗುವ ಬಗ್ಗೆ ಸ್ಫೋಟಕ ಸುದ್ದಿ ಹರಡಿದೆ. ಹಾಗಾದ್ರೆ ದರ್ಶನ್ ಅವರು ಇಂದೇ ಜೈಲಿನಿಂದ ರಿಲೀಸ್ ಆಗ್ತಾರಾ? ಮುಂದೆ ಓದಿ.

Darshan Thoogudeepa May Attend The Sonal Monteiro And Tharun Sudhir Marriage

ದರ್ಶನ್ ತೂಗುದೀಪ್ ಇವತ್ತೇ ರಿಲೀಸ್?

ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಪಡೆದಿದ್ದ ನಟ ದರ್ಶನ್ ತೂಗುದೀಪ್ ಅವರು ಇದೀಗ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರನ್ನ ಜೈಲಿನಿಂದ ರಿಲೀಸ್ ಮಾಡಿಸಲು ಅಭಿಮಾನಿಗಳು & ದರ್ಶನ್ ಅವರ ಕುಟುಂಬ ಸದಸ್ಯರು ಹೋರಾಡ್ತಿದ್ದು, ಭಾರಿ ಕುತೂಹಲ ಮನೆಮಾಡಿದೆ. ಹೀಗಿದ್ದಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು ಇಂದೇ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿ ಹೊರ ಬರಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

ನಟ ದರ್ಶನ್ ಸರ್ಪ್ರೈಸ್ ಎಂಟ್ರಿ?

ಅಷ್ಟಕ್ಕೂ ದರ್ಶನ್ ಅವರು ಇಂದು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಸಾಧ್ಯತೆಗಳು ಇದೆ ಅಂತಾ ಹೇಳುತ್ತಿರುವುದು ಯಾಕಂದ್ರೆ, ತರುಣ್ ಸುಧೀರ್ & ಸೋನಾಲ್ ಅವರ ಮದುವೆ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹೀಗಿದ್ದಾಗ ನಟ ದರ್ಶನ್ ಅವರು ಸೋನಾಲ್ ಅವರನ್ನ ತಂಗಿ ಅಂತಾ ಕರೆಯುತ್ತಿದ್ದರು. ಇದೇ ಕಾರಣಕ್ಕೆ ಇಂದು ಪರಪ್ಪನ ಅಗ್ರಹಾರದ ಜೈಲಿನಿಂದ ದರ್ಶನ್ ಅವರು ವಿಶೇಷ ಅನುಮತಿ ಪಡೆದು ಜೈಲಿನಿಂದ ರಿಲೀಸ್ ಆಗುತ್ತಾರಾ? ಎಂಬ ಗುಮಾನಿ ಮೂಡಿದೆ. ಅಲ್ಲದೆ ದರ್ಶನ್ ತೂಗುದೀಪ್ ಅವರು ಮದುವೆಗೆ ಬರುವುದು ಗ್ಯಾರಂಟಿ. ಆದರೆ ಈ ವಿಚಾರ ಅಭಿಮಾನಿಗಳಿಗೆ ಗೊತ್ತಾದರೆ ಜನಸಾಗರ ಸೇರುತ್ತದೆ. ಹೀಗಾಗಿ ಸೀಕ್ರೆಟ್ ಆಗಿ ಪೊಲೀಸರು ನೇರ ಮದುವೆಗೆ, ಕರೆದುಕೊಂಡು ಹೋಗ್ತಾರೆಂಬ ಮಾತುಗಳು ಕೂಡ ಹರಿದಾಡುತ್ತಿವೆ.

ಪ್ರೇಮ್ ಫುಲ್ ಮಿಂಚಿಂಗ್ ಗುರೂ!

ನಿನ್ನೆ ನಡೆದ ಅರಶಿಣ ಶಾಸ್ತ್ರದಲ್ಲಿ ನೆನಪಿರಲಿ ಪ್ರೇಮ್ ಸೇರಿದಂತೆ ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ನಟರೇ ಭಾಗವಹಿಸಿದ್ದರು. ಈ ಮೂಲಕ ಸುಧೀರ್ ಅವರ ಮಗನ ಮದುವೆ ಕಾರ್ಯಕ್ರಮದಲ್ಲಿ ಶುಭಾಶಯ ಹೇಳಿದ್ದಾರೆ. ಮತ್ತೊಂದು ಕಡೆ ನಟ ದರ್ಶನ್ ಅವರು ಕೂಡ ಈ ಮದುವೆ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಇದರ ಬಗ್ಗೆ ಸ್ಪಷ್ಟನೆ ಸಿಗಲಿದೆ. ಸೋನಾಲ್ ಅವರನ್ನ ದರ್ಶನ್ ಅವರು ತಂಗಿ ಅಂತಾ ಕರೆಯುತ್ತಿದ್ದರು. ಹೀಗಾಗಿ ತಂಗಿ ಮದುವೆಗೆ ಅಣ್ಣ ದರ್ಶನ್ ಬಂದೇ ಬರ್ತಾರೆ ಎಂಬುದು ಅವರ ಅಭಿಮಾನಿಗಳ ನಂಬಿಕೆ ಆಗಿದೆ.

ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾರಾ?

ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ತೂಗುದೀಪ್ ಅವರಿಗೆ ಇರುವಷ್ಟು ಅಭಿಮಾನಿಗಳು ಹಿಂದೆ ಯಾವುದೇ ನಟನಿಗೂ ಇರಲಿಲ್ಲ, ಮುಂದೆ ಯಾವುದೇ ನಟನಿಗೂ ಸಿಗುವುದಿಲ್ಲ ಅಂತಿದ್ದಾರೆ ಡಿ-ಬಾಸ್ ದರ್ಶನ್ ಅವರ ಫ್ಯಾನ್ಸ್. ಹೀಗಿದ್ದಾಗಲೇ ನಟ ದರ್ಶನ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಜೈಲಿನ ಆಸ್ಪತ್ರೆಗೆ ಸೇರಿದ್ದಾರೆ. ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾರೆ ಎಂಬ ಸುದ್ದಿ ಇದೀಗ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ ಜೈಲಿನ ಮೂಲಗಳು ಇದು ಸುಳ್ಳು ಸುದ್ದಿ ಅಂತಿವೆ.

ಈ ಬಗ್ಗೆ ಜೈಲಿನ ಮೂಲಗಳು ಹೇಳುತ್ತಿರುವ ಸತ್ಯ ಏನೆಂದರೆ, ದರ್ಶನ್ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿ ಇದ್ದಾರೆ ಹೀಗಾಗಿ ಈ ಸುದ್ದಿ ಸುಳ್ಳಾಗಿದ್ದು ಅಭಿಮಾನಿಗಳು ಸುಳ್ಳು ಸುದ್ದಿ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಟ ದರ್ಶನ್ ತೂಗುದೀಪ್‌ರ ಆರೋಗ್ಯಕ್ಕೆ ಏನೂ ಆಗಿಲ್ಲ ಅಂತಿದ್ದಾರೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+