ವಾಮನ ಸಿನಿಮಾ ಫೈಟಿಂಗ್‌ನಲ್ಲಿ ಧನ್ವೀರ್ ಕಾಲು ತುಂಬಾ ಚೆನ್ನಾಗಿ ಬಳಸಿದ್ದಾರೆಂದ ದರ್ಶನ್
ಬೆಂಗಳೂರು ಏಪ್ರಿಲ್ 10: ಕಳೆದ ದಿನ ವಾಮನ ಸಿನಿಮಾ ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮಾಧ್ಯಮಕ್ಕೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡಿಗರು 'ವಾಮನ' ಸಿನಿಮಾ ನೋಡಿ ಹಾರೈಸಬೇಕು ಎಂದು ಹೇಳಿದ್ದಾರೆ. ಕತೆಯನ್ನು ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಎಂದು ದರ್ಶನ್ ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ.
ಧನ್ವೀರ್ ಅಭಿನಯದ ವಾಮನ ಸಿನಿಮಾ ಇಂದು ತೆರೆ ಕಂಡಿದೆ. ಕಳೆದ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಸಿನಿಮಾವನ್ನು ವೀಕ್ಷಿಸಿ ಫೀಡ್‌ಬ್ಯಾಕ್ ಕೊಟ್ಟಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನಲ್ಲಿ ದರ್ಶನ್ ಸಿನಿಮಾ ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿನಿಮಾ ಕತೆ ನನಗೆ ಇಷ್ಟ ಆಯ್ತು. ಫಸ್ಟ್ ಆಫ್ ನಾನು ಏನು ನೋಡಿದೆ ಅನ್ನೋದು ಕನ್ಫೂಸ್ ಆಯ್ತು. ಆಮೇಲೆ ತುಂಬಾ ಅದ್ಭುತವಾಗಿದೆ ಸಿನಿಮಾ. ನನಗೆ ತುಂಬಾ ಇಷ್ಟ ಆಯ್ತು. ಧನ್ವೀರ್ ಮೂರು ಸಿನಿಮಾಗಳಲ್ಲಿ ನಾಲ್ಕನೇ ಸಿನಿಮಾ ವಾಮನ. ವಾಮನದಲ್ಲಿ ಧನ್ವೀರ್ ಅವರನ್ನು ಬೇರೆ ರೀತಿಯಾಗಿ ಕಾಣುವುದು ಪಕ್ಕಾ' ಎಂದರು.

ಅಲ್ಲದೆ ಫೈಟಿಂಗ್ ಅಲ್ಲಿ ಧನ್ವೀರ್ ಅವರು ಕಾಲು ತುಂಬಾ ಚೆನ್ನಾಗಿ ಯ್ಯೂಸ್ ಮಾಡಿದ್ದಾರೆ. ಯಾಕೆಂದರೆ ಉದ್ದ ಇರೋರ ಕಾಲು ಫೈಟಿಂಗ್ ಅಲ್ಲಿ ತುಂಬಾ ಚೆನ್ನಾಗಿ ಕಾಣುತ್ತದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ನೀಟಾಗಿ ಕ್ಲೀನ್ ಆಗಿ ಕತೆ ಮಾಡಿದ್ದಾರೆ. ಧನ್ವೀರ್ ಹೆಚ್ಚು ಕಡಿಮೆ ನನ್ನಂತೆ ಕಾಲು. ನಮ್ದು ಅಪರ್ ಬಾಡಿ ಸಣ್ಣದು, ಲೋವರ್ ಬಾಡಿ ದೊಡ್ಡದು ಅಂದರೆ ಕಾಲು ಉದ್ದ ಜಾಸ್ತಿ. ಹೀಗಾಗಿ ಫೈಟಿಂಗ್ ವೇಳೆ ಕಾಲು ಯ್ಯೂಸ್ ಮಾಡಿದಾಗ ತೆರೆ ಮೇಲೆ ಅದ್ಭುತವಾಗಿ ಕಾಣಿಸುತ್ತದೆ ಎಂದು ದರ್ಶನ್ ಧನ್ವೀರ್ ಆಕ್ಟಿಂಗ್ ಬಗ್ಗೆ ಹೊಗಳಿದ್ದಾರೆ.
ಇದೇ ವೇಳೆ ದರ್ಶನ್ ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿಲ್ಲ, ನಾವು ಸಿನಿಮಾ ಮಾಡ್ತಿರೋದು ಕನ್ನಡದ ಜನತೆಗಾಗಿ. ನಾವು ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುವುದಿಲ್ಲ. ನಮ್ಮ ಕನ್ನಡಿಗರಿಗಾಗಿ ಸಿನಿಮಾಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ವಾಮಾನ ಸಿನಿಮಾದಲ್ಲಿ ತುಂಬಾ ಅದ್ಭುತವಾದ ಮೊರಲ್ ಇದೆ. ತಾಯಿ ತಂದೆ ಪ್ರೀತಿ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ ಎಂದು ಸಿನಿಮಾ ಬಗ್ಗೆ ಹೊಗಳಿದ್ದಾರೆ.
'ಮುದ್ದು ರಾಕ್ಷಸಿ' ಬಗ್ಗೆ ದರ್ಶನ್ ಹೇಳಿದ್ದು ಹೀಗೆ..
ಇನ್ನೂ ದರ್ಶನ್ ವಿಜಯಲಕ್ಷ್ಮೀ ಅವರಿಗೆ ಮುದ್ದು ರಾಕ್ಷಿಸಿ ಎಂದು ಕರೆಯುತ್ತಾರಂತೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಈ ಬಗ್ಗೆ ವಿವರಿಸಿದ ದರ್ಶನ್ ಮುದ್ದು ರಾಕ್ಷಸಿ ತುಂಬಾ ಒಳ್ಳೆಯ ಹಾಡು. ಅದನ್ನು ಕರೆದರೆ ಖುಷಿ ಆಗುತ್ತದೆ ಎಂದು ನಾನು ನನ್ನ ಹೆಂಡತಿಗೆ ಕರೆಯುತ್ತೇನೆ ಎಂದಿದ್ದಾರೆ.
ವಾಮನ ಸಿನಿಮಾ ಬಗ್ಗೆ ಚಿಕ್ಕಣ್ಣ ಹೇಳಿದ್ದು ಇಷ್ಟು
ಇನ್ನೂ ದರ್ಶನ್ ಜೊತೆಗೆ ಚಿಕ್ಕಣ್ಣ ಕೂಡ ವಾಮನ ಸಿನಿಮಾ ವೀಕ್ಷಿಸಿ ಗುಡ್ ರಿವ್ಯೂವ್ ಕೊಟ್ಟಿದ್ದಾರೆ. ಸಿನಿಮಾದಲ್ಲಿ ತಾಯಿ ಎಮೋಷನ್, ಮುದ್ದಾದ ಲವ್ ಸ್ಟೋರಿ, ಸ್ನೇಹ, ಕಾಮಿಡಿ ಎಲ್ಲವೂ ಇದೆ. ತುಂಬಾ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ. ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಹಾರೈಸಿ ಎಂದು ಹೇಳಿದರು.
ಒಟ್ಟಿನಲ್ಲಿ ಸಿನಿಮಾ ಇಂದು ತೆರೆ ಕಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾವನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೆಂದು ಕಾದು ನೋಡಬೇಕಿದೆ.












Click it and Unblock the Notifications