Darshan Thoogudeepa: ಪವಿತ್ರಾ ಗೌಡ ಕುತ್ತಿಗೆಯಲ್ಲಿ ತಾಳಿ, ಕರಿಮಣಿ ಮಾಲೀಕ...

ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಬ್ಬರನ್ನ ಬಿಟ್ಟು ಮತ್ತೊಬ್ಬರು ಬದುಕಲಾರದಷ್ಟು ಆತ್ಮೀಯ ಸ್ನೇಹ ಹೊಂದಿದ್ದರು. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್‌ನ ಮಾಡಿ, ಅಶ್ಲೀಲ ಫೋಟೋಗಳನ್ನ ಕಳುಹಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯ ಭೀಕರ ಕೊಲೆ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗಲೇ, ಪವಿತ್ರಾ ಗೌಡ ಕುತ್ತಿಗೆಯಲ್ಲಿ ತಾಳಿ, ಕರಿಮಣಿ ಮಾಲೀಕ...

ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಗೆಳತಿ ಪವಿತ್ರಾ ಗೌಡ ರೇಣುಕಾಸ್ವಾಮಿಯ ಮರ್ಡರ್ ಕೇಸಲ್ಲಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಆದರೆ ಇದಕ್ಕೂ ಮೊದಲೇ ಪವಿತ್ರಾ ಗೌಡ ಒಂದು ಮದುವೆ ಆಗಿ, ಕೆಲ ವರ್ಷಗಳ ಹಿಂದೆ ಹಳೇ ಗಂಡನಿಗೆ ಡಿವೋರ್ಸ್ ಕೂಡ ನೀಡಿದ್ದರು. ನಂತರ 2014 ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸ್ನೇಹ ಶುರುವಾಗಿತ್ತು ಎಂಬ ಮಾತಿದೆ. ಹೀಗಿದ್ದಾಗಲೇ, ಪವಿತ್ರಾ ಗೌಡ ಕುತ್ತಿಗೆಯಲ್ಲಿ ತಾಳಿ, ಕರಿಮಣಿ ಮಾಲೀಕ...

Darshan Thoogudeepa Friend Pavithra Gowda Jewellery Is Viral On Social Media

ಪವಿತ್ರಾ ಗೌಡ ಕುತ್ತಿಗೆಯಲ್ಲಿ ತಾಳಿ...

ಪವಿತ್ರಾ ಗೌಡ ಮಾಜಿ ಗಂಡ & ಪವಿತ್ರಾ ಗೌಡ ದೂರವಾಗಿ ಹಲವು ವರ್ಷ ಕಳೆದಿದ್ದು, ಈ ಇಬ್ಬರ ಪ್ರೀತಿಗೆ ಸಾಕ್ಷಿಯಗಿ ಒಂದು ಮಗು ಕೂಡ ಇದೆ. ಪವಿತ್ರಾ ಗೌಡ ಅವರ ಮಾಜಿ ಗಂಡ ಆರಂಭದಲ್ಲಿ ತಮ್ಮ ಹೆಂಡತಿ ಅಂದ್ರೆ ಪವಿತ್ರಾ ಗೌಡ ಅವರನ್ನ ತುಂಬಾನೇ ಇಷ್ಟ ಪಡುತ್ತಿದ್ದರಂತೆ, ಆ ನಂತರ ಇಬ್ಬರ ನಡುವೆ ಬಿರುಕು ಮೂಡಿ ದೂರವಾಗಿದ್ದರು. ಇಷ್ಟೆಲ್ಲಾ ಆಗಿ ಇಬ್ಬರೂ ಡಿವೋರ್ಸ್ ಕೂಡ ಪಡೆದಿದ್ದಾರೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೇ ಸಮಯದಲ್ಲಿ ಪವಿತ್ರಾ ಗೌಡ ಕುತ್ತಿಗೆಯಲ್ಲಿ ಈಗಲೂ ತಾಳಿ ಇದೆ ಅಂತ, ಕರಿಮಣಿ ಮಾಲೀಕ...

ದರ್ಶನ್ ತೂಗುದೀಪ್ ಅಂದ್ರೆ ಹವಾನೇ ಬೇರೆ, ಡಿ-ಬಾಸ್ ದರ್ಶನ್ ತೂಗುದೀಪ್ ಒಂದೇ ಒಂದು ಕೂಗು ಹಾಕಿದ್ರೆ ಸಾಕು ಕೋಟಿ ಕೋಟಿ ಅಭಿಮಾನಿಗಳು ಓಡೋಡಿ ಬರ್ತಾರೆ ಅಂತಾನೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಹೇಳ್ತಾರೆ. ಹೀಗಿದ್ದಾಗ ಪವಿತ್ರಾ ಗೌಡ ಕಾರಣಕ್ಕೆ ಇದೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ, ಹೀಗಾಗಿ ಅದು ಸರಿಯಾಗಬೇಕು ಅಂತಾನೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಹಾಗಿದ್ರೆ, ಪವಿತ್ರಾ ಗೌಡ ಕುತ್ತಿಗೆಯಲ್ಲಿ ಈಗಲೂ ತಾಳಿ ಇದೆಯಂತೆ? ಹಾಗಾದ್ರೆ ಕರಿಮಣಿ ಮಾಲೀಕ ಯಾರು?

ಕರಿಮಣಿ ಮಾಲೀಕ ಯಾರು? ಯಾರು?

ಪವಿತ್ರಾ ಗೌಡ ಅವರ ಫೋಟೋ ಒಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಪವಿತ್ರಾ ಗೌಡ ಅವರು ಇತ್ತೀಚೆಗೆ ಶೇರ್ ಮಾಡಿದ್ದ ವಿಡಿಯೋದಲ್ಲಿ ನೋಡಿದರೆ ಪವಿತ್ರಾ ಗೌಡ ಅವರು ಕತ್ತಿನಲ್ಲಿ ತಾಳಿ ಇದೆ ಅನ್ನೋ ವಾದ ಶುರುವಾಗಿದೆ. ಆದರೆ ಈ ತಾಳಿ ಕಟ್ಟಿದ್ದು ಯಾರು? ಪವಿತ್ರಾ ಗೌಡ ಅವರು ಡಿವೋರ್ಸ್ ಪಡೆದಿದ್ದರೂ ತಾಳಿ ಹಾಕುತ್ತಿದ್ದಾರಾ? ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿದೆ. ಇನ್ನೂ ಕೆಲವರು ಈಗ ಹೇಳುತ್ತಿರುವ ಪ್ರಕಾರ ಅದು ತಾಳಿಯೇ ಅಲ್ಲ, ಕೇವಲ ಚಿನ್ನದ ಸರ. ಆದರೆ ತಾಳಿ ಅಂತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅಂತಾ ಕೂಡ ಆರೋಪ ಮಾಡಲಾಗುತ್ತಿದೆ. ಹೀಗಾಗಿ ಇದೀಗ ಪವಿತ್ರಾ ಗೌಡ ಅವರ ವಿಚಾರ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ.

ರೇಣುಕಾಸ್ವಾಮಿ ವಿರುದ್ಧ ತೀವ್ರ ಆಕ್ರೋಶ!

ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್ ಆಗಿರುವ ದರ್ಶನ್ ತೂಗುದೀಪ್ ಅವರನ್ನ ಫ್ಯಾನ್ಸ್ ಯಾವ ಸ್ಥಿತಿಯಲ್ಲೂ ಬಿಟ್ಟು ಕೊಡುವುದೇ ಇಲ್ಲ ಅನ್ನೋದು ಮತ್ತೆ, ಮತ್ತೆ ಸಾಬೀತಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಪ್ಪು ಮಾಡಿಲ್ಲ, ಸಮಾಜದಲ್ಲಿದ್ದ ಒಬ್ಬ ಕಾಮುಕ ಕ್ರಿಮಿ ತೊಲಗಿಸಿದ್ದಾರೆ ಅಷ್ಟೇ... ಅಂದಹಾಗೆ ಈ ರೀತಿ ರೇಣುಕಾಸ್ವಾಮಿ ಭೀಕರ ಕೊಲೆ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಮರ್ಥನೆ ಮಾಡ್ಕೊಂಡಿದ್ದಾರೆ. ಅಲ್ಲದೆ ಈ ವೇಳೆ ರೇಣುಕಾಸ್ವಾಮಿ ಒಬ್ಬ ವಿಕೃತ ಕಾಮುಕ ಎಂಬ ಪಟ್ಟವನ್ನೂ ಕೊಟ್ಟಿದ್ದಾರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು.

ಪವಿತ್ರಾ ಗೌಡ & ಡಿ-ಬಾಸ್ ಮಧ್ಯೆ ದ್ವೇಷ?

ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ದೊಡ್ಡ ಕಂಟಕ ಎದುರಾಗಿದೆ. ಹೀಗೆ ಇಬ್ಬರೂ ಈ ಕೇಸ್‌ನಲ್ಲಿ ಈಗಲೂ ನರಳುತ್ತಿದ್ದು, ಯಾವ ಕ್ಷಣದಲ್ಲಿ ಮತ್ತೆ ಜೈಲಿಗೆ ಹೋಗುತ್ತಾರೋ ಎಂಬ ಅನುಮಾನ ಇದೆ. ಈ ಕೇಸ್ ತುಂಬಾನೇ ಸ್ಟ್ರಾಂಗ್ ಆಗಿದ್ದು ಪೊಲೀಸರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಿಸ್ಥಿತಿ ಕಠಿಣವಾಗಿರುವ ಸಮಯದಲ್ಲೇ ಮತ್ತೊಂದು ಘಟನೆ ನಡೆದು ಹೋಗಿದೆ...

ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಸಂಬಂಧ ಡಿ-ಬಾಸ್ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಕೋರ್ಟ್ ಎದುರು ಹಾಜರಾದರು. ವಿಚಾರಣೆ ವೇಳೆ ಇಬ್ಬರೂ ಎದುರಾಗಿ ಬಂದರೂ ಮಾತನಾಡಿಲ್ಲ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಈ ಮೂಲಕ ಇಬ್ಬರೂ ದೂರವಾಗಿ ಹೋಗಿದ್ದು, ಇಬ್ಬರ ನಡುವೆ ಇದೀಗ ಮಾತುಕತೆಯೇ ಇಲ್ಲ ಎಂಬ ಸುದ್ದಿ ಹಬ್ಬಿದೆ. ಅಲ್ಲದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆಯವರು ಕೂಡ ಪವಿತ್ರಾ ಗೌಡ ಅವರಿಂದ ದೂರ ಇಡಲು ಪ್ರಯತ್ನ ಮಾಡುತ್ತಿದ್ದು, ಇದೀಗ ಯಾರೂ ಕೂಡ ನೇರ ಡಿ-ಬಾಸ್ ಅವರನ್ನ ಭೇಟಿ ಮಾಡಲು ಅಥವಾ ಸಂಪರ್ಕ ಮಾಡಲು ಆಗುತ್ತಿಲ್ಲವಂತೆ!

ದರ್ಶನ್ ಅವರ ಅಭಿಮಾನಿಗಳು ಏನು ಹೇಳುತ್ತಾರೆ?

ಡಿ-ಬಾಸ್ ದರ್ಶನ್ ತೂಗುದೀಪ್ ಜೀವನದಲ್ಲಿ ಹಾಯಾಗಿ ರಾಜನ ರೀತಿಯೇ ಇದ್ದರು, ಆದರೆ ಈ ರೇಣುಕಾಸ್ವಾಮಿ ಮ್ಯಾಟರ್ ಅಡ್ಡ ಬಂದು ಎಲ್ಲಾ ಹಾಳಾಗಿ ಹೋಯ್ತು... ಈ ರೀತಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪದೇ ಪದೇ ಬೇಸರ ವ್ಯಕ್ತಪಡಿಸಿ ರೇಣುಕಾಸ್ವಾಮಿ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಅಲ್ಲದೆ ಪವಿತ್ರಾ ಗೌಡ ವಿರುದ್ಧ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದು, ಪವಿತ್ರಾ ಗೌಡ ಜೊತೆ ಮಾತನಾಡಬೇಡಿ ಮತ್ತು ಪವಿತ್ರಾ ಗೌಡ ಸಹವಾಸ ಮಾಡಬೇಡಿ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಅಭಿಮಾನಿಗಳು ಬುದ್ಧಿ ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+