Darshan Thoogudeepa: ಪವಿತ್ರಾ ಗೌಡಗೆ ಮಾವಿನ ಕಾಯಿ ಬಯಕೆ? ದರ್ಶನ್ ಗೆಳತಿಗೆ ಜೈಲಿನಲ್ಲಿ ಮಾವಿನ ಕಾಯಿ ಕೊಟ್ಟಿದ್ದು ಯಾರು?

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹೀಗಿದ್ದಾಗಲೇ ಪವಿತ್ರಾ ಗೌಡ & ದರ್ಶನ್ ಅವರು ಕಿತ್ತಾಡಿಕೊಂಡಿದ್ದಾರೆ ಎಂಬ ಸುದ್ದಿ ಇಷ್ಟುದಿನ ಹರಿದಾಡಿತ್ತು. ಆದರೆ ಈಗ ನೋಡಿದರೆ ಈ ವಿಚಾರವನ್ನೂ ಮೀರಿಸಿ ಸಂಚಲನ ಸೃಷ್ಟಿ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗ ದರ್ಶನ್ ತೂಗುದೀಪ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಅವರಿಗೆ ಮಾವಿನ ಕಾಯಿ ಬಯಕೆ ಆಗಿದ್ದು, ಕದ್ದು ಮುಚ್ಚಿ ಮಾವಿನಕಾಯಿ ತಿಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ! ಯಾಕೆ ಗೊತ್ತಾ?

ಕೆಲವು ತಿಂಗಳ ಹಿಂದೆ ದರ್ಶನ್ ತೂಗುದೀಪ ಅವರ ಧರ್ಮಪತ್ನಿ ವಿಜಯಲಕ್ಷ್ಮೀ ದರ್ಶನ್ & ಪವಿತ್ರಾ ಗೌಡ ನಡುವೆ ಜಗಳ ನಡೆದಾಗ ಖುದ್ದಾಗಿ ಪವಿತ್ರಾ ಗೌಡ ಪೋಸ್ಟ್ ಒಂದನ್ನ ಹಾಕಿದ್ದರು. ಪವಿತ್ರಾ ಗೌಡ, ದರ್ಶನ್ ತೂಗುದೀಪ್ ಜೊತೆಗಿನ ಆತ್ಮೀಯತೆಗೆ ಸಾಕ್ಷಿಯಾಗಿ ಫೋಟೋಗಳನ್ನು ಕೂಡ ಶೇರ್ ಮಾಡಿದ್ದರು. ಇಬ್ಬರೂ 10 ವರ್ಷದಿಂದ ಆತ್ಮೀಯ ಗೆಳಯ & ಗೆಳತಿ ಎಂಬುದನ್ನು ಹೇಳಿದ್ದರು. ಹೀಗಿದ್ದಾಗ ಇದೀಗ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರದಲ್ಲಿ ಮಾವಿನ ಕಾಯಿ ತಿಂದಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ 1ನೇ ಆರೋಪಿ ಆಗಿರುವ ಪವಿತ್ರಾ ಗೌಡ, ಮಾವಿನ ಕಾಯಿ ಬೇಕು ಅಂತಾ ಡಿಮ್ಯಾಂಡ್ ಇಟ್ಟು ತರಿಸಿಕೊಂಡು ತಿಂದಿದ್ದಾರಂತೆ. ಯಾಕೆ ಗೊತ್ತಾ? ಮುಂದೆ ಓದಿ.

Darshan Thoogudeepa Friend Pavithra Gowda Demanded For Mangoes

ಪವಿತ್ರಾ ಗೌಡ ಈಗ ಗರ್ಭಿಣಿ?

ದರ್ಶನ್ ತೂಗುದೀಪ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡ ಇದೀಗ ಗರ್ಭಿಣಿ ಆಗಿದ್ದು, ಈ ಕಾರಣಕ್ಕೆ ಪದೇ ಪದೇ ಪರಪ್ಪನ ಅಗ್ರಹಾರ ಜೈಲಿನ ಒಳಗಡೆ ಇರುವ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಂದು ಕಡೆ ಪವಿತ್ರಾಗೆ, ವಿಶೇಷ ವ್ಯವಸ್ಥೆ ಕೂಡ ಕಲ್ಪಿಸಲಾಗಿದ್ದು ಅವರ ಆರೋಗ್ಯದಲ್ಲೂ ಆಗಾಗ ಏರುಪೇರು ಆಗ್ತಾ ಇದೆ ಎಂಬ ಆರೋಪ ಮಾಡಲಾಗಿದೆ. ಈ ಎಲ್ಲಾ ಪರಿಸ್ಥಿತಿ ನಡುವೆ ಇದೀಗ ಖುದ್ದು ಪವಿತ್ರಾ ಗೌಡ ತನಗೆ ಮಾವಿನ ಕಾಯಿ ಬೇಕು ಎಂದು ಹಠ ಮಾಡಿ ತರಿಸಿಕೊಂಡು ತಿಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಿಸಿ ಕ್ಯಾಮೆರಾ ಪರಿಶೀಲನೆ ಆಗುತ್ತಾ?

ಪವಿತ್ರಾ ಗೌಡ ಮಾವಿನ ಕಾಯಿ ತಿಂದಿದ್ದಾರೆ, ಅಲ್ಲದೆ ಪವಿತ್ರಾ ಗೌಡ ಈಗ ಗರ್ಭಿಣಿ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾ ತುಂಬಾ ಹಬ್ಬುತ್ತಿವೆ. ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಗಳು ಕೂಡ ನಡೆಯುತ್ತಿವೆ. ಯಾಕಂದ್ರೆ ಜೈಲಿನ ಒಳಗೆ ಯಾವುದೇ ಹೊರಗಿನ ಆಹಾರ ನೀಡುವಂತೆ ಇಲ್ಲ. ಅಕಸ್ಮಾತ್ ಹೀಗೆ ಹೊರಗಿನ ಆಹಾರ ನೀಡಿದ್ದರೆ ಅದು ತಪ್ಪು, ಪವಿತ್ರಾ ಗೌಡ ಅವರಿಗೆ ಜೈಲಿನ ಒಳಗೆ ಮಾವಿನ ಕಾಯಿ ಸಿಕ್ಕಿದ್ದು ಹೇಗೆ? ಈ ಬಗ್ಗೆ ತನಿಖೆ ನಡೆಸಲು ಪರಪ್ಪನ ಅಗ್ರಹಾರ ಜೈಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ದರ್ಶನ್ & ಜೈಲು ಸಿಬ್ಬಂದಿ ಕಿತ್ತಾಟ?

ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರು ಇದ್ದಾರೆ. ಈ ರೀತಿ ವಿಐಪಿ ಸೆಲ್ ಅಂದ್ರೆ ಪ್ರಮುಖ ವ್ಯಕ್ತಿಗಳ ಜೈಲಿನ ಕೋಣೆಗಳ ಬಳಿ ಯಾವುದೇ ಖೈದಿ & ವ್ಯಕ್ತಿಗಳನ್ನ ಸುಳಿಯಲು ಕೂಡ ಬಿಡುವುದಿಲ್ಲ. ಆದರೆ ನಟ ದರ್ಶನ್ ಅವರು ಮಾತ್ರ ಇಲ್ಲಿ ಕೊಲೆ ಆರೋಪಿ ಆಗಿ ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ಇದ್ದರೂ, ಜೈಲಿನ ಕೋಣೆ ಬಿಟ್ಟು ಹೊರಬಂದು ಓಡಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ಪರಪ್ಪನ ಅಗ್ರಹಾರದಲ್ಲು ಕಿರಿಕ್ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇದೆಲ್ಲಾ ಸುಳ್ಳು ಅಂತಿದ್ದಾರೆ, ಅವರ ಸೆಲೆಬ್ರಿಟಿಗಳು ಅಂದ್ರೆ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+