ದರ್ಶನ್ ತೂಗುದೀಪ ವಿರುದ್ಧ ‘ಮರಣದಂಡನೆ’ ಶಿಕ್ಷೆ ಭಯ?
ದರ್ಶನ್ ಕೊಲೆ ಆರೋಪದಲ್ಲಿ ಇದೀಗ ಜೈಲು ಸೇರಿದ್ದಾರೆ. ಹೀಗಿದ್ದಾಗ ರೇಣುಕಾಸ್ವಾಮಿಯ ಕೊಲೆಯಲ್ಲಿ ದರ್ಶನ್ & ಅವರ ಗೆಳೆಯರ ವಿರುದ್ಧ ಪೊಲೀಸರು ಕೂಡ ಸಾಕಷ್ಟು ಸಾಕ್ಷ್ಯಗಳ ಸಂಗ್ರಹ ಮಾಡಿದ್ದಾರೆ. ನಟ ದರ್ಶನ್ ಈ ಕೊಲೆ ಕೇಸ್‌ನಲ್ಲಿ, ಅಪರಾಧಿ ಎಂಬುವ ವಿಚಾರ ಪ್ರೂವ್ ಆಗಿ ಶಿಕ್ಷೆ ಕೂಡ ಘೋಷಣೆ ಮಾಡಿದರೆ ಯಾವ ಶಿಕ್ಷೆ ನೀಡಬಹುದು? ಹೊಸ ಕಾನೂನಿನ ಪ್ರಕಾರ ನಟ ದರ್ಶನ್ ಅವರಿಗೆ 'ಮರಣದಂಡನೆ' ಶಿಕ್ಷೆ ನೀಡುತ್ತಾರಾ? ಬನ್ನಿ ತಿಳಿಯೋಣ.
ಭಾರತದಲ್ಲಿ ಇಂದಿನಿಂದ ಹೊಸ ಅಪರಾಧ ಕಾನೂನು ಜಾರಿಗೆ ಬಂದಿದೆ. ಈ ಹಿಂದೆ ಅಂದ್ರೆ ಸ್ವಾತಂತ್ರ್ಯ ಬಂದ ನಂತರ ಇದ್ದ ಕಾನೂನು ಇದೀಗ ಬದಲಾಗುತ್ತಿದೆ. ಇದೀಗ ಜಾರಿಗೆ ಬರುವ ಹೊಸ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಜಾರಿಗೆ ಅವಕಾಶ ಇದೆ. ಹೀಗಾಗಿಯೇ ದರ್ಶನ್ ಅವರ ಅಭಿಮಾನಿಗಳಿಗೆ ಟೆನ್ಷನ್ ಶುರುವಾಗಿದೆ. ಅದರಲ್ಲೂ ದರ್ಶನ್ ಅವರ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು ಭಯ ಹೆಚ್ಚಾಗುವಂತೆ ಮಾಡಿದೆ.

ದರ್ಶನ್‌ಗೆ ಕಠಿಣ ಶಿಕ್ಷೆ ಭಯ?
ಇಷ್ಟು ದಿನಗಳ ಕಾಲ ಕೊಲೆ ಮಾಡಿದರೆ ಅದಕ್ಕೆ, ಭಾರಿ ದೊಡ್ಡ ಶಿಕ್ಷೆ ಎಂದರೆ ಜೀವಾವಧಿ ವಿಧಿಸುತ್ತಿದ್ದರು. ಆದರೆ ಇದೀಗ ಕಾನೂನು ಕೂಡ ಬದಲಾಗಿದ್ದು ದರ್ಶನ್ ಅವರ ಪ್ರಕರಣದ ಬಗ್ಗೆ ಫ್ಯಾನ್ಸ್‌ಗೆ ಆತಂಕ ಶುರುವಾಗಿದೆ. ಹಾಗಿದ್ರೆ ಹೊಸ ಕಾನೂನಿನ ಪ್ರಕಾರ ಕೊಲೆ ಆರೋಪಿಯ ವಿರುದ್ಧ ಅಪರಾಧ ಸಾಬೀತು ಮಾಡಿದರೆ ಗರಿಷ್ಠ ಯಾವ ಶಿಕ್ಷೆಯ ವಿಧಿಸಬಹುದು? ದರ್ಶನ್ ಅವರ ಕೇಸ್ ಕೂಡ ಹೊಸ ಕಾನೂನಿನ ಅಡಿಯಲ್ಲೇ ದಾಖಲಾಗಿದೆಯಾ? ಆ ಬಗ್ಗೆ ಪೂರ್ಣ ಮಾಹಿತಿಗೆ ಮುಂದೆ ಓದಿ.
ಮರಣದಂಡನೆ ಶಿಕ್ಷೆಗೆ ಅವಕಾಶ?
ಹೊಸದಾಗಿ ಜಾರಿಗೆ ಬಂದ ಕಾನೂನು ಪ್ರಕಾರ ಅಪರಾಧ ನಡೆದ ಸ್ಥಳದಲ್ಲಿ ತನಿಖಾಧಿಕಾರಿಗಳು ವಿಡಿಯೋ ಮಾಡಬೇಕು. ಹಾಗೇ ಕೇಸ್ ವಿಚಾರಣೆ ಮುಗಿದ 45 ದಿನದಲ್ಲಿ ತೀರ್ಪು ನೀಡಬೇಕು. ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ, ಸರಗಳ್ಳತನ ರೀತಿ ಪ್ರಕರಣಗಳನ್ನ ದಾಖಲಿಸಲು ಈವರೆಗೆ ನಿರ್ದಿಷ್ಟ ಸೆಕ್ಷನ್ ಇರಲಿಲ್ಲ. ಈ ಹೊಸ ವ್ಯವಸ್ಥೆಯಲ್ಲಿ ಅವು ಇರಲಿವೆ ಎಂದು ಕೇಂದ್ರ ತಿಳಿಸಿದೆ. ಹೀಗಿದ್ದಾಗ ಕೊಲೆ ಕೇಸ್‌ನಲ್ಲಿ ಕೂಡ ಗರಿಷ್ಠ ಮರಣದಂಡನೆ ಶಿಕ್ಷೆ ನೀಡುವುದಕ್ಕೆ ಕೂಡ ಅವಕಾಶ ಇದೆ ಎನ್ನಲಾಗಿದೆ.
ಅದ್ರಲ್ಲೂ ಮೊದಲ ಬಾರಿಗೆ ಮೂಲ ಮಸೂದೆ ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆ ಎಂದು ವರ್ಗ ಮಾಡಿದೆ. ಈ ಕಾಯಿದೆ ಗುಂಪು ಹತ್ಯೆ ರೀತಿ ಅಪರಾಧಕ್ಕೆ ಗರಿಷ್ಠ ಮರಣದಂಡನೆ ನೀಡಲು ಅವಕಾಶ ನೀಡಲಿದೆ. ಅದರಲ್ಲೂ ಇದೀಗ ರೇಣುಕಾಸ್ವಾಮಿ ಹತ್ಯೆ ಕೂಡ ಗುಂಪು ಹತ್ಯೆ ಎನ್ನುವ ಆರೋಪ ಇದ್ದು, ಆತಂಕ ಮೂಡಿದೆ. ಆದರೆ ಇದೀಗ ಜಾರಿಗೆ ಬಂದಿರುವ ಹೊಸ ಕಾನೂನು ದರ್ಶನ್ ಅವರ ಪ್ರಕರಣಕ್ಕೆ ಅನ್ವಯ ಆಗುವುದಿಲ್ಲ ಎನ್ನಲಾಗಿದ್ದು, ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ ಹೊಸ ಕಾನೂನು ಜುಲೈ 1 ರಿಂದ ಜಾರಿಗೆ ಬರುತ್ತಿದ್ದು, ದರ್ಶನ್ ವಿರುದ್ಧದ ಕೊಲೆ ಪ್ರಕರಣ ನಡೆದಿದ್ದು ಜೂನ್ ತಿಂಗಳು ಹೀಗಾಗಿ ಹಳೆಯ ಕಾನೂನಿನ ಅಡಿಯಲ್ಲೇ ದರ್ಶನ್‌ರ ಕೇಸ್ ನಡೆಯಲಿದೆ ಎನ್ನಲಾಗಿದೆ.
ಅಮ್ಮನ ಎದುರು ದರ್ಶನ್ ಕಣ್ಣೀರು?
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ನುಂಗುತ್ತಾ, ಜೈಲಿನ ಕಂಬಿಗಳ ಎಣಿಸುತ್ತಾ ಜೀವನ ಕಳೆಯುತ್ತಿದ್ದಾರೆ. ಹೀಗಿದ್ದಾಗ ಇಂದು ದರ್ಶನ್ ಅವರನ್ನ ನೋಡೋಕೆ ಅಂತಾನೆ ಅವರ ಅಮ್ಮ & ತಮ್ಮ ಇಬ್ಬರೂ ಹೋಗಿದ್ದಾರೆ. ದರ್ಶನ್ ತಮ್ಮ ದಿನಕರ್ ಕೂಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ ಒಂದು ಹಂತದಲ್ಲಿ ನಟ ದರ್ಶನ್ ಸ್ವಂತ ತಮ್ಮ ದಿನಕರ್ ತೂಗುದೀಪ್ ಜೊತೆಯಲ್ಲೂ ಜಗಳ ಮಾಡಿ, ಹಲ್ಲೆ ಮಾಡಿದ್ದರೆಂಬ ಆರೋಪ ಇದೆ. ಹೀಗಿದ್ದರೂ ಕೊಲೆ ಆರೋಪದ ಮೇಲೆ ಜೈಲು ಸೇರಿದ ಅಣ್ಣನ ನೋಡಲು ತಮ್ಮ ದಿನಕರ್ ಬಂದಿದ್ದು, ಈ ವೇಳೆ ಇಬ್ಬರೂ ಭಾವುಕರಾಗಿದ್ದಾರೆ ಎನ್ನಲಾಗಿದೆ.
ತಮ್ಮನ ಕಂಡು ದರ್ಶನ್ ಮಾಡಿದ್ದೇನು?
ಜೈಲಿನ ಮೂಲಗಳ ಪ್ರಕಾರ ದರ್ಶನ್ ಅವರ ತಾಯಿ ಮೊದಲಿಗೆ ದರ್ಶನ್ ಮುಖ ನೋಡಿ, ಕಣ್ಣೀರು ಹಾಕಲು ಶುರು ಮಾಡಿದರಂತೆ. ಆಗ ದರ್ಶನ್ ಕೂಡ ಅಮ್ಮ & ತಮ್ಮನ ಮುಖ ನೋಡಿ, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ತಮ್ಮ ತಪ್ಪಿನ ಕುರಿತು ದರ್ಶನ್ ಅವರಿಗೆ ಈಗ ಪ್ರಾಯಶ್ಚಿತ ಆಗಿದೆ ಎಂಬ ಮಾತುಗಳು ಕೇಳಿಬಂದಿವೆ.
ದರ್ಶನ್ ಅತ್ತಿರುವ ಸುದ್ದಿ ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ನಟ ದರ್ಶನ್ ಅವರ ಫ್ಯಾನ್ಸ್ ಪಾಲಿಗೆ ಇದು ಬೇಸರದ ಸುದ್ದಿಯೂ ಆಗಿದೆ. ಜೈಲಿನಲ್ಲಿ ದರ್ಶನ್ ಒಬ್ಬರೇ ಕೂತು ಚಿಂತೆ & ನೋವಿನಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದು, ದರ್ಶನ್ ಭೇಟಿಗೆ ಅಂತಾ ಅವರ ಅಮ್ಮ & ತಮ್ಮ ಬಂದು ಯೋಗಕ್ಷೇಮ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ನಟ ದರ್ಶನ್ ಭಾವುಕರಾಗಿದ್ದಾರೆ.
ದರ್ಶನ್ ಅಲಿಯಾಸ್ ರೌಡಿ ದರ್ಶನ್?
2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ದರ್ಶನ್ ಹೇಳಿದ್ದ 'ಜಲಗಾರ' ಯಾರು?
'ಜಲಗಾರ' ಅಂದ್ರೆ ಮೈಸೂರು ಸುತ್ತಮುತ್ತ ಹಳ್ಳಿಗಳಲ್ಲಿ ಬಳಸುವ ಶಬ್ಧವಾಗಿದೆ, ಈ ಪದವನ್ನು ಸಫಾಯಿ ಕರ್ಮಚಾರಿಗಳನ್ನ ಗುರುತು ಹಿಡಿಯಲು ಬಳುಸುತ್ತಾರೆ ಅಲ್ಲಿನ ಹಳ್ಳಿಗಳ ಜನರು. ಈ ಶಬ್ಧ ಬಳಸಿ ಪತ್ನಿಗೆ ಬೈದಿದ್ದರು ನಟ ದರ್ಶನ್ ಎಂಬ ಆರೋಪ ಕೇಳಿಬಂದಿತ್ತು. ಈ ಕೇಸ್ ಕೂಡ ತಿರುವು ಪಡೆಯುವ ಸಾಧ್ಯತೆ ಈಗ ದಟ್ಟವಾಗಿದೆ. ಅಲ್ಲದೆ ಪತ್ನಿ & ಮಗನ ಬಗ್ಗೆಯೇ ದರ್ಶನ್ ಈ ರೀತಿ ಮಾತನಾಡಿದ್ದು ಭಾರಿ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು.












Click it and Unblock the Notifications