Darshan Thoogudeepa: 'ದರ್ಶನ್ ಪ್ರಕರಣದಿಂದ ಇಂಡಸ್ಟ್ರಿಗೆ ಕೆಟ್ಟ ಹೆಸರು'- ಸುಕೃತಾ ವಾಗ್ಲೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ವಿರುದ್ಧ ಸಾಕ್ಷಿಗಳು ಹುಡುಕಿದಷ್ಟು ಸಿಗುತ್ತಲೇ ಇವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು ಕಂಬಿ ಎಣಿಸುತ್ತಿರುವ ದರ್ಶನ್ ಬಗ್ಗೆ ಇಂಡಸ್ಟ್ರಿಯಲ್ಲಿ ಪರ ವಿರೋಧದ ಚರ್ಚೆಗಳು ನಿಲ್ತಾಯಿಲ್ಲ. ದರ್ಶನ್ ಅವರ ಬಗ್ಗೆ ನಟಿ ಸುಕೃತಾ ವಾಗ್ಲೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
''ಅವ್ರು ಮಾಡಿದ್ದು ತಪ್ಪು. ದರ್ಶನ್ ಈ ನಿರ್ಧಾರ ತಗೊಬಾರ್ದಿತ್ತು. ಪ್ರಕರಣ ಇಂಡಸ್ಟ್ರಿಗೆ ಕೆಟ್ಟ ಹೆಸರು. ಅವರು ಹಾಗೆಲ್ಲಾ ಮಾಡಬಾರದಿತ್ತು'' ಎಂದು ಸುಕೃತಾ ವಾಗ್ಲೆ ಹೇಳಿದ್ದಾರೆ. ಸಿಂಪಲ್ ಆಗಿರುವ ಸಮಸ್ಯೆಯನ್ನು ದೊಡ್ಡದಾಗಿ ಮಾಡಿಕೊಂಡು ಈ ಸ್ಟಾರ್ ನಟ ಜೈಲು ಸೇರಬೇಕಿತ್ತಾ? ಅಂತಿದ್ದಾರೆ ಹಲವರು. ಸಿನಿಮಾ ರಂಗ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಜೊತೆಗೆ ದರ್ಶನ್ ಪ್ರಕರಣ ಕೂಡ ಸೇರಿಕೊಂಡಿದೆ ಅಂತ ನಟಿ ಸುಕೃತಾ ವಾಗ್ಲೆ ಹೇಳಿದ್ದಾರೆ.

ಅಂತಹ ಒಬ್ಬ ವ್ಯಕ್ತಿ ಅವರದ್ದೇ ಆದ ಅಭಿಮಾನಿಗೆ ಈತರ ಮಾಡಿರೋದು ಶಾಕಿಂಗ್ ಆಗಿದೆ. ದರ್ಶನ್ ಮಾಡಿದ್ದು ತಪ್ಪು. ಅವರು ಕಾನೂನು ಪ್ರಕಾರ ಹೋಗಬಹುದಿತ್ತು. ದರ್ಶನ್ ಸರ್‌ಗೆ ಹೀಗಾಗಿರುವುದು ತುಂಬಾ ಬೇಸರ ತಂದಿದೆ ಎಂದು ನಟಿ ಸುಕೃತಾ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿ ನಿಂತಿದೆ. ಪರಭಾಷಾ ಚಿತ್ರಗಳಿಗೆ ಠಕ್ಕರ್ ಕೊಡುವಷ್ಟು ಬೆಳೆದು ಪ್ಯಾನ್ ವರ್ಲ್ಡ್ ಹಂತಕ್ಕೆ ಕನ್ನಡ ಸಿನಿಮಾಗಳು ತಲುಪಿವೆ. ಸಿನಿಮಾಗಳ ಮೂಲಕ ಕನ್ನಡ ತಾರೆಯರು ಭಾರತೀಯ ಚಿತ್ರರಂಗದಲ್ಲಿ ಅದೆಷ್ಟು ಹೆಸರು ಮಾಡಿದ್ದಾರೋ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಕನ್ನಡ ಚಿತ್ರ ರಂಗ ಅಷ್ಟೇ ತಲೆ ತಗ್ಗಿಸುವಂತೆ ಆಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ನಾನು ಎರಡು ಬಾರಿ ಅಷ್ಟೇ ದರ್ಶನ್ ಸರ್ ಅವರನ್ನು ಭೇಟಿ ಮಾಡಿದ್ದೇನೆ. ಅವರ ಮನಸ್ಸು ತುಂಬಾ ದೊಡ್ಡದು. ತುಂಬಾ ಉದಾರ ಮನಸ್ಸಿನವರು. ಎಲ್ಲರಿಗೂ ತುಂಬಾ ಸಹಾಯ ಮಾಡ್ತಾರೆ. ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡುವುದು ಮಾತ್ರವಲ್ಲದೆ ಎಷ್ಟೋ ಪ್ರಾಣಿ ಪಕ್ಷಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಾವು ಅವರ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರೋದಕ್ಕೆ ಆಗಲ್ಲ. ಆದರೆ ನೋಡಿ ನಿಮ್ಮ ಇಂಡಸ್ಟ್ರಿ ಹೀಗಿದೆ. ನಿಮ್ಮ ಇಂಡಸ್ಟ್ರಿ ಸ್ಟಾರ್ ಹೀಗಿದ್ದಾರೆ ಅಂತ ಕನ್ನಡ ಇಂಡಸ್ಟ್ರಿ ಬಗ್ಗೆನೇ ಕೆಟ್ಟದಾಗಿ ಆಚೆ ಮಾತಾಡ್ತಾಯಿದ್ದಾರೆ ಎಂದು ಸುಕೃತಾ ಹೇಳಿದ್ದಾರೆ.
ಅಭಿಮಾನಿಗಳಿಗೆ ಸೆಲೆಬ್ರಿಟಿ ಸ್ಥಾನ ನೀಡಿ, ತಮ್ಮ ಎದೆ ಮೇಲೆ ಅಚ್ಚೆ ಹಾಕಿಸಿಕೊಂಡವರು ದರ್ಶನ್. ಆದರೆ ಸೆಲೆಬ್ರಿಟಿ ಅನ್ನೇ ಕೊಂದ ಆರೋಪವನ್ನು ಹೊತ್ತಿರೋದು ಹಲವರಿಗೆ ಶಾಕ್ ನೀಡಿದೆ. ಈ ಮಟ್ಟಕ್ಕೂ ಒಬ್ಬ ನಟ ಇಳಿಯಬಲ್ಲನಾ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಈ ಪ್ರಕರಣ ಸದ್ಯ ಕೋರ್ಟ್‌ನಲ್ಲಿದೆ. ಮುಂದಿನಗಳಲ್ಲಿ ಯಾರಿಗೆ ಏನಾಗಬಹುದು ಅಂತ ಕಾದು ನೋಡೋಣ.
ಭೀಮನಮವಾಸ್ಯೆಗೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ
ಭೀಮನಮವಾಸ್ಯೆಗೆ ಬನಶಂಕರಿ ದೇವಸ್ಥಾನಕ್ಕೆ ತೆರಳಿದ ವಿಜಯಲಕ್ಷ್ಮಿ ತಮ್ಮ ಪತಿ ಸುರಕ್ಷಿತವಾಗಿ ಹೊರಬರಲೆಂದು ಪೂಜೆ ಮಾಡಿಸಿದ್ದಾರೆ. ಅವರು ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳು ದರ್ಶನ್ ಅಭಿಮಾನಿ ವಲಯಗಳಲ್ಲಿ ವೈರಲ್ ಆಗಿವೆ.
ದರ್ಶನ್ ಜೈಲಿನಿಂದ ಆದಷ್ಟು ಬೇಗ ಹೊರಬರಲೆಂದು ಪತ್ನಿ ವಿಜಯಲಕ್ಷ್ಮಿ ದೇವರ ಬಳಿ ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ನವ ಚಂಡಿಕಾ ಯಾಗ ಮಾಡಿಸಿದ್ದರು. ಸಹೋದರ ದಿನಕರ್ ತೂಗುದೀಪ್ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದರು. ರೇಣುಕಾಸ್ವಾಮಿ ಪಗ್ರಕರಣದಲ್ಲಿ ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 14 ರವರೆಗೆ ವಿಸ್ತರಿಸಲಾಗಿದೆ.












Click it and Unblock the Notifications