Darshan Birthday: ದರ್ಶನ್ ಬರ್ತ್‌ಡೇಗೂ ಮುನ್ನ ಶುರುವಾಗಿದೆ ಫ್ಯಾನ್ಸ್ ಸಂಭ್ರಮ, ತಯಾರಿ ಹೇಗಿದೆ ಗೊತ್ತಾ?
ಬೆಂಗಳೂರು, ಫೆಬ್ರವರಿ 09: ಫೆಬ್ರವರಿ ಪ್ರೇಮಿಗಳ ಪಾಲಿಗೆ ವಿಶೇಷ ತಿಂಗಳಾದರೇ, ಡಿ ಬಾಸ್ ಫ್ಯಾನ್‌ಗಳಿಗೆ ಹಬ್ಬದ ಸಂಭ್ರಮ. ಕಾರಣ ತಮ್ಮ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬ. ಪ್ರತಿ ವರ್ಷ ಫೆಬ್ರವರಿ 16ಕ್ಕೆ ದರ್ಶನ್ ಅವರ ಹುಟ್ಟುಹಬ್ಬವಿದ್ದು, ಈಗಾಗಲೇ ಫ್ಯಾನ್ಸ್ ಸಂಭ್ರಮ ಶುರುಹಚ್ಚಿಕೊಂಡಿದ್ದಾರೆ.
ಹುಟ್ಟುಹಬ್ಬಕ್ಕೆ ಏಳು ದಿನಗಳಿವೆ. ಆದರೆ, 15 ದಿನಗಳಿಗೂ ಮುನ್ನವೇ ಬರ್ತ್‌ಡೇ ಸೆಲಬ್ರೆಷನ್‌ಗೆ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಆಚರಿಸಲು ಕಾಟೇರ ಸಿನಿಮಾ ಸಕ್ಸಸ್ ಕೂಡ ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಕಾರಣ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಫ್ಯಾನ್ ಗ್ರೂಪ್ಸ್ ಪ್ರತಿದಿನ ಪೋಸ್ಟರ್‌ಗಳನ್ನು ಬಿಡುತ್ತಾ ಹುಟ್ಟುಹಬ್ಬದ ದಿನಗಣನೆ ಆರಂಭಿಸಿದ್ದಾರೆ.

ದರ್ಶನ್ ತೂಗುದೀಪ ಅವರ ಅಭಿಮಾನಿ ಬಳಗ ರಾಜ್ಯದ ಎಲ್ಲಾ ಭಾಗಗಳಲ್ಲೂ ಈಗಾಗಲೇ ಬ್ಯಾನರ್, ಕಟೌಟ್ ಕಟ್ಟುವುದಕ್ಕೆ ಶುರು ಮಾಡಿದ್ದಾರೆ. ಫ್ಯಾನ್ ಪೇಜ್‌ಗಳಲ್ಲಿ ವಿಭಿನ್ನ ಬಗೆಯ ಪೋಸ್ಟರ್‌ಗಳು ಹರಿದಾಡುತ್ತಾ ಹುಟ್ಟುಹಬ್ಬ ಇವತ್ತೆ ನಡೆಯುತ್ತಿದೆ ಅನ್ನುವಂತೆ ಸಂಭ್ರಮಿಸುತ್ತಿದ್ದಾರೆ. ಅಡ್ವಾನ್ಸ್ ಹ್ಯಾಪಿ ಬರ್ಡ್‌ಡೇ ಅನ್ನೋ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ಬರ್ತ್‌ಡೇ ಮುನ್ನ ದರ್ಶನ್ ಸ್ಪೇಷಲ್ ಮನವಿ
ಇನ್ನು, ಹುಟ್ಟು ಹಬ್ಬಕ್ಕೆ ಕೆಲ ದಿನಗಳು ಇರುವಾಗಲೇ ನಟ ದರ್ಶನ್ ತಮ್ಮ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದರು. ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ.
" ಬಾಸ್ ಪರ್ವ ಸುಲ್ತಾನ್ ಸಂಭ್ರಮ "
— DᴇVɪLᵗʰᵉ ʰᵉʳᵒ (@DBossFrvr) February 6, 2024
10 Days To Go 💥
Advance Happy Birthday BØSSUU @dasadarshan 👑❤#BossOfSandalwood 😎👑#DBoss #Kaatera #DevilTheHero pic.twitter.com/Z0wNAiKVwA
ಅದನ್ನು ಅನಾಥಾಶ್ರಮ ವೃದ್ಧಾಶ್ರಮಗಳಿಗೆ ತಲುಪಿಸುತ್ತೆನೆ. ಸಂಭ್ರಮಾಚರಣೆ ವೇಳೆ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವ ಅನುಚಿತ ವರ್ತನೆ ನಡೆಯಬಾರದು. ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.
ಹುಟ್ಟುಹಬ್ಬದ ಜೊತೆಗೆ ಮತ್ತೊಂದು ವಿಶೇಷ
ನಟ ದರ್ಶನ್ ಚಿತ್ರರಂಗದಲ್ಲಿ ನಾಯಕರಾಗಿ ಗುರುತಿಸಿಕೊಂಡು 25 ವರ್ಷ ತುಂಬುತ್ತಿರುವುದಕ್ಕೆ ಮತ್ತೊಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶ್ರೀರಂಗಪಟ್ಟಣದ ಶ್ರೀರಂಗನಾಥ ಆಟದ ಮೈದಾನದಲ್ಲಿ"D25" ಕಾರ್ಯಕ್ರಮ ಆಯೋಜನೆಯಾಗಿದೆ. ಶ್ರೀರಂಗಪಟ್ಟಣದ ಬಿಜೆಪಿ ನಾಯಕ ಸಚ್ಚಿದಾನಂದ ಎಸ್ ಇದನ್ನು ಆಯೋಜಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

"ಇದೇ ಫೆಬ್ರವರಿ 17ಕ್ಕೆ ಕನ್ನಡ ಚಿತ್ರರಂಗದ ಹೆಸರಾಂತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ನಾಯಕರಾಗಿ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ "D25" ಎಂಬ ಶೀರ್ಷಿಕೆಯಲ್ಲಿ ಶ್ರೀರಂಗಪಟ್ಟಣದ ಶ್ರೀರಂಗನಾಥ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ದೂರಿ ಅಭಿನಂದನಾ ಕಾರ್ಯಕ್ರಮದ ಕುರಿತಾಗಿ ಇಂದು ಮಂಡ್ಯ ಜಿಲ್ಲಾ ಡಿ ಬಾಸ್ ಅಭಿಮಾನಿ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು" ಎಂದಿದ್ದಾರೆ.
ಘೋಷಣೆಯಾಗಲಿವೆ ದರ್ಶನ್ ಸಿನಿಮಾಗಳು
ನಟ ದರ್ಶನ್ ಹುಟ್ಟುಹಬ್ಬಕ್ಕೆ ಹಲವು ಸಿನಿಮಾಗಳು ಘೋಷಣೆಯಾಗುವ ನಿರೀಕ್ಷೆಯಿದೆ. ಅದರ ಜೊತೆಗೆ ಈಗಾಗಲೇ ಚರ್ಚೆಯಲ್ಲಿರುವ ಮಿಲನಾ ಪ್ರಕಾಶ್ ನಿರ್ದೇಶನದ ಡೆವಿಲ್ ದಿ ಹೀರೋ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಲಿದೆ. ಮತ್ತೊಂದು ನಿರ್ದೇಶಕ ಜೋಗಿ ಪ್ರೇಮ್ ಸಿನಿಮಾದಲ್ಲಿ ದರ್ಶನ್ ನಟಿಸುವ ಬಗ್ಗೆ ಸುದ್ದಿಗಳಿವೆ. ಇತ್ತೀಚೆಗೆ ದರ್ಶನ್ 'ಕೆಡಿ' ಚಿತ್ರತಂಡದ ಜೊತೆಗೆ ಸಂಜಯ್ ದತ್ ಅವರನ್ನು ಭೇಟಿಯಾಗಿದ್ದರು.











Click it and Unblock the Notifications