Darshan Thoogudeepa: ಪವಿತ್ರಾ ಗೌಡ ಸಹವಾಸವೇ ಸಾಕು ಅಂತಾ ‘ಡಿ-ಬಾಸ್’ ದರ್ಶನ್ ತೂಗುದೀಪ್...

ದರ್ಶನ್ ತೂಗುದೀಪ್ ಜೀವನದಲ್ಲಿ ಬಿರುಗಾಳಿ ಎದ್ದಿದೆ, ಅದರಲ್ಲೂ ಪವಿತ್ರಾ ಗೌಡ ಕಾರಣಕ್ಕೆ 'ಡಿ-ಬಾಸ್' ಜೀವನದಲ್ಲಿ ಇಷ್ಟೆಲ್ಲಾ ಆಗುತ್ತಿದೆ ಅನ್ನೋದು ಅಭಿಮಾನಿಗಳ ಆರೋಪ. ಇದೇ ವಿಚಾರಕ್ಕೆ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ, ದರ್ಶನ್ ತೂಗುದೀಪ್ ಅವರಿಂದ ಪವಿತ್ರಾ ಗೌಡ ಬಾಳು ಹಾಳಾಯ್ತಾ? ಅಥವಾ ಪವಿತ್ರಾ ಗೌಡ ಬಂದ ನಂತರ ದರ್ಶನ್ ತೂಗುದೀಪ್‌ರ ಬದುಕು ಹಾಳಾಗಿ ಹೋಯ್ತಾ? ಅಂತಾ ಚರ್ಚೆ ಜೋರಾಗಿದೆ. ಇಂತಹ ಸಮಯದಲ್ಲೇ ನಟ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡ ಸಹವಾಸವೇ ಸಾಕು ಅಂತಾ...

ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಪರಿಚಯ ಆಗಿ ಸುಮಾರು 11 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ ಇಬ್ಬರ ಮಧ್ಯೆ ಆತ್ಮೀಯ ಸಂಬಂಧ ಇತ್ತು ಎನ್ನುವ ಆರೋಪವು ಕೂಡ ಕೇಳಿಬಂತು. ಖುದ್ದಾಗಿ ದರ್ಶನ್ ತೂಗುದೀಪ್ ತಮ್ಮ ಹೆಂಡತಿ ವಿಜಯಲಕ್ಷ್ಮಿ ಅವರ ಬಗ್ಗೆ ಕೆಟ್ಟದಾಗಿ ಬೈದಿದ್ದ ಆಡಿಯೋ ಒಂದರಲ್ಲಿ ಕೂಡ, ಪವಿತ್ರಾ ಗೌಡ ಜೊತೆ ಸಂಬಂಧದ ಬಗ್ಗೆ ಪ್ರಸ್ತಾಪ ಆಗಿತ್ತು ಎಂಬ ಆರೋಪ ಕೂಡ ಕೇಳಿಬಂದಿತ್ತು. ಆದರೆ ಆಡಿಯೋದಲ್ಲಿ ಎಲ್ಲಿಯೂ ಪವಿತ್ರಾ ಗೌಡ ಹೆಸರನ್ನ ದರ್ಶನ್ ತೂಗುದೀಪ್ ಪ್ರಸ್ತಾಪ ಮಾಡಿರಲಿಲ್ಲ. ಹೀಗೆ ಇಬ್ಬರ ನಡುವೆ ಇಷ್ಟೊಂದು ಆತ್ಮೀಯತೆ ಇದ್ದಾಗಲೇ, 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡ ಸಹವಾಸವೇ ಸಾಕು ಅಂತಾ ಇದೀಗ...

Darshan Thoogudeepa And Pavithra Gowda Will Not Speak Each Other For This Reason

ಪವಿತ್ರಾ ಗೌಡಗೆ ದರ್ಶನ್ ತೂಗುದೀಪ್...

ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ನಡುವೆ ಸಂಬಂಧ ಇದೀಗ ಸರಿಯಾಗಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ದರು ಎಂಬ ಆರೋಪ ಕೇಳಿಬಂತು. ಪೊಲೀಸರು ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗೆ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆಯುತ್ತಿರುವ ಸಮಯದಲ್ಲೇ, 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡ ಸಹವಾಸವೇ ಸಾಕು ಅಂತಾ ಇದೀಗ ನಿರ್ಧರಿಸಿದ್ದಾರೆ. ಹೀಗಾಗಿ ದರ್ಶನ್ ತೂಗುದೀಪ್ ಜೈಲಿಂದ ಹೊರಗೆ ಬಂದ ನಂತರ ಪವಿತ್ರಾ ಗೌಡ ಸಹವಾಸ ಬಿಟ್ಟು ಬಿಡುತ್ತಾರೆ ಎಂಬ ಮಾತು ಕೇಳಿಬಂದಿದೆ.

ಪವಿತ್ರಾ ಗೌಡ & ದರ್ಶನ್ ನಡುವೆ ದ್ವೇಷ?

ದರ್ಶನ್ ತೂಗುದೀಪ್ ಅವರನ್ನ ಇದೀಗ ಹೊರಗೆ ಕರೆದುಕೊಂಡು ಬರಲು ಸಂಬಂಧಿಕರು & ಜೊತೆಗಾರರು ಒಂದೇ ಒಂದು ಶರತ್ತು ಹಾಕಿದ್ದಾರಂತೆ. ಅದು ಏನಂದ್ರೆ, ಆಗುವುದೆಲ್ಲಾ ಆಗಿ ಹೋಗಿದೆ ಆದರೆ ದರ್ಶನ್ ತೂಗುದೀಪ್ ಜೈಲಿನಿಂದ ಹೊರಗೆ ಬಂದ ನಂತರ ಪವಿತ್ರಾ ಗೌಡ ಸಹವಾಸ ಬಿಡಬೇಕು ಎಂಬ ಶರತ್ತು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ದರ್ಶನ್ ತೂಗುದೀಪ್ ಕೂಡ, ಪವಿತ್ರಾ ಗೌಡ ಸಹವಾಸ ಬಿಟ್ಟು ಬಿಡುತ್ತಾರೆ ಎಂಬ ಮಾತು ಕೇಳಿಬಂದಿದೆ. ಮತ್ತೊಂದು ಕಡೆ ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮೂವರು ಜಾಮೀನು ಪಡೆದು ಜೈಲಿನಿಂದ ರಿಲೀಸ್ ಆಗಿರುವ ಕಾರಣಕ್ಕೆ, ದರ್ಶನ್ ತೂಗುದೀಪ್ ಅವರಿಗೆ ಕೂಡ ನಾಳೆ ಬೇಲ್ ಸಿಗುತ್ತದೆ. ನಮ್ಮ ಡಿ-ಬಾಸ್ ಹೊರಗೆ ಬರುತ್ತಾರೆ ಅಂತಾ ಅಭಿಮಾನಿಗಳು ಖುಷಿ ಖುಷಿಯಾಗಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+