Darshan Thoogudeepa: ಪವಿತ್ರಾ ಗೌಡ ಜೊತೆ ದರ್ಶನ್ ತೂಗುದೀಪ್‌ಗೆ ಯಾವ ರೀತಿಯ ಸಂಬಂಧ ಇತ್ತು ಗೊತ್ತೆ?

ದರ್ಶನ್ ತೂಗುದೀಪ್ ಇದೀಗ ಕೊಲೆ ಆರೋಪಿ ಆಗಿದ್ದು, ಪವಿತ್ರಾ ಗೌಡ ಕಾರಣಕ್ಕೆ ವ್ಯಕ್ತಿ ಒಬ್ಬನನ್ನ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ದರ್ಶನ್ ತೂಗುದೀಪ & ಗ್ಯಾಂಗ್ ವಿರುದ್ಧ ಕೇಳಿಬಂದಿದೆ. ಹೀಗಿದ್ದಾಗ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ನಡುವೆ ಇರುವ ಸಂಬಂಧ ಎಂತಹದ್ದು? ಅನ್ನೋ ಪ್ರಶ್ನೆಯನ್ನ ಕನ್ನಡಿಗರು ಕೇಳುತ್ತಿದ್ದರು. ಇದೀಗ ಆ ಎಲ್ಲ ಪ್ರಶ್ನೆಗೆ ಪಕ್ಕಾ ಉತ್ತರ ಸಿಕ್ಕಿದೆ. ಹಾಗಾದ್ರೆ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಗಂಡ & ಹೆಂಡತಿ ಆಗಿದ್ರಾ? ಅಥವಾ ಬೇರೆ ರೀತಿಯ ಸಂಬಂಧ ಏನಾದ್ರು ಇತ್ತಾ? ಬನ್ನಿ ತಿಳಿಯೋಣ.

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಆ ರೀತಿ ಸಂಬಂಧ ಇತ್ತು, ಈ ರೀತಿಯಾಗಿ ಸಂಬಂಧ ಇತ್ತು, ಇಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂಬ ಮಾತುಗಳು ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲೂ ಹರಡಿವೆ. ಪರಿಸ್ಥಿತಿ ಹೀಗಿದ್ದಾಗಲೇ ಪವಿತ್ರಾ ಗೌಡಗಳಿಗಾಗಿ ನಟ ದರ್ಶನ್ ತೂಗುದೀಪ್ ಒಂದು ಕೊಲೆಯನ್ನೇ ಮಾಡಿದ್ದಾರೆ ಎಂಬ ಆರೋಪ ಕೂಡ ಈ ಸಮಯದಲ್ಲಿ ಕೇಳಿಬರುತ್ತಿದೆ. ಹಾಗಾದ್ರೆ ಪೊಲೀಸರ ತನಿಖೆ ಮೂಲಕ ಬೆಳಕಿಗೆ ಬಂದಿರುವ ಆ ಭಯಾನಕ ಸತ್ಯ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Darshan Thoogudeepa And Pavithra Gowda Relationship Explained

ಹೇಳೋದು ವೇದಾಂತ.. ತಿನ್ನೋದು..

ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗದ ದೊಡ್ಡ ಹೀರೋ. ಹೀಗಾಗಿ, ಹುಡುಗಿಯರ ದಂಡೇ ಅವರ ಹಿಂದೆ ಬೀಳುತ್ತೆ ಅಂತಾ ಅಭಿಮಾನಿಗಳು ಹೇಳುತ್ತಾರೆ. ಅದೇ ರೀತಿ ಪವಿತ್ರಾ ಗೌಡ ಕೂಡ ದರ್ಶನ್ ತೂಗುದೀಪ್ ಹಿಂದೆ ಬಿದ್ದು ಲವ್ ಮಾಡಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಜನ ಮಾತನಾಡುತ್ತಿದ್ದಾರೆ. ಆದರೆ ಪೊಲೀಸರ ತನಿಖೆ ಸಮಯದಲ್ಲಿ ಬಯಲಾದ ಸಂಗತಿಯೇ ಬೇರೆ. ಅದು ಏನಪ್ಪ ಅಂದ್ರೆ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲೀವ್ ಇನ್ ರಿಲೇಶನ್‌ಶಿಪ್ ಅಂದ್ರೆ ಮದುವೆ ಆಗದೆ ಜೊತೆಗೆ ಇರುವ ಸಂಬಂಧದಲ್ಲಿ ಇದ್ದರು ಎಂಬ ಭಯಾನಕ ಸತ್ಯ ಇದೀಗ ಬಯಲಾಗಿದೆ.

ದರ್ಶನ್ ಅಭಿಮಾನಿಗಳು ಹೇಳಿದ್ದು ಏನು?

ಹೌದು, ರೇಣುಕಾಸ್ವಾಮಿ ಕೊಲೆ ಆಗುವ ಮೊದಲು ಕಣ್ಣು & ಮುಖಕ್ಕೆ ಗಾಯ ಮಾಡಿಕೊಂಡು ಕೂತು ದರ್ಶನ್ & ಗ್ಯಾಂಗ್ ಎದುರು ಬೇಡಿಕೊಳ್ಳುತ್ತಿರುವ ಫೋಟೋಗೆ ಭರ್ಜರಿ ಕಮೆಂಟ್‌ಗಳು ದರ್ಶನ್ ಅವರ ಅಭಿಮಾನಿಗಳಿಂದ ಬರುತ್ತಿವೆ. ಅದ್ರಲ್ಲೂ ಬಹುತೇಕರು ಈ ಫೋಟೋ ನೋಡಿ ಹೇಳಿರುವುದು ಏನು ಅಂದ್ರೆ, ಈ ರೀತಿಯಾಗಿ ಒಬ್ಬ ವ್ಯಕ್ತಿಯನ್ನು ಹಿಂಸೆ ಮಾಡಬಾರದಾಗಿತ್ತು ಅಂತಾ.

ಆದರೂ ಇನ್ನು ಕೆಲವರು ವಿಕೃತ ಮನಸ್ಕರು, ರೇಣುಕಾಸ್ವಾಮಿ ಹೆಣವನ್ನು ಅಲ್ಲೇ ಸುಟ್ಟು ಹಾಕಿದ್ದರೆ ಅಥವಾ ಬೇರೆ ಕಡೆಗೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದರೆ ನೀವು ಜೈಲಿಗೆ ಹೋಗುತ್ತಿರಲಿಲ್ಲ ಎಂದು ಐಡಿಯಾ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೀಗೆ ವಿಕೃತವಾಗಿ ಕಮೆಂಟ್ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ಭಾರಿ ಆಕ್ರೋಶ ಮೊಳಗಿದ್ದು, ಸೋಷಿಯಲ್ ಮೀಡಿಯಾದ ಬಳಕೆದಾರರು ಸೂಕ್ತ ಕ್ರಮಕ್ಕೆ ಆಗ್ರಹ ಮಾಡುತ್ತಿದ್ದಾರೆ.

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+