Darshan Thoogudeepa: ಪವಿತ್ರಾ ಗೌಡ ಜೊತೆಗಿನ ದರ್ಶನ್ ತೂಗುದೀಪ್ ಸಂಬಂಧ ಮುಗಿದ ಅಧ್ಯಾಯ?

ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ಅವರು ಈಗ ಹಾವು & ಮುಂಗುಸಿ ರೀತಿಯಲ್ಲಿ ಕಿತ್ತಾಡುತ್ತಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರೂ ಮಾತನಾಡುತ್ತಿಲ್ಲ ಎಂಬ ಸುದ್ದಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಜನರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಅದ್ರಲ್ಲೂ ನಟ ದರ್ಶನ್ ಅವರು ಪವಿತ್ರಾ ಗೌಡ ಮುಖ ನೋಡಿದ್ರೂ ಕೂಡ ಉರಿದು ಬೀಳುತ್ತಿದ್ದಾರಂತೆ! ಯಾಕೆ ಗೊತ್ತಾ?

ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ಅವರು ಆತ್ಮೀಯ ಸ್ನೇಹಿತರು ಮಾತ್ರವಲ್ಲ, ಈ ಹಂತವನ್ನೂ ಮೀರಿದ ಮತ್ತೊಂದು ಸಂಬಂಧ ಅವರಿಬ್ಬರ ನಡುವೆ ಇದೆ ಅನ್ನೋದು ಹೊರಗೆ ಜನರು ಹೇಳುವ ಮಾತು. ಹೀಗಿದ್ದಾಗ ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ, ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣ ಬೆಂಕಿ ಹಚ್ಚಿದೆ. ಯಾಕಂದ್ರೆ ಇದೇ ಕೇಸ್‌ನಲ್ಲಿ, ನಟ ದರ್ಶನ್ 2ನೇ ಆರೋಪಿ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರು ಮುದ್ದೆ ಮುರಿಯುವ ಸ್ಥಿತಿ ಬಂದಿದೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರು ಇದೀಗ ಪವಿತ್ರಾ ಗೌಡ ವಿರುದ್ಧ ರೊಚ್ಚಿಗೆ ಎದ್ದಿದ್ದಾರಂತೆ!

Darshan Thoogudeepa And Pavithra Gowda Is Not Speaking For This Reason

ಪವಿತ್ರಾ & ದರ್ಶನ್ ತೂಗುದೀಪ್ ಕಿತ್ತಾಟ?

ಅಂದಹಾಗೆ ನಟ ದರ್ಶನ್ ತೂಗುದೀಪ್ ಅವರು ಹೊರಗಡೆ ರಾಜನಂತೆ ಮೆರೆಯುತ್ತಿದ್ದರು. ನೂರಾರು ಕೋಟಿ ಆಸ್ತಿ, ಕೋಟಿ ಕೋಟಿ ಬೆಲೆಬಾಳುವ ಕಾರುಗಳು, ಕೈಗೆ ಒಂದು & ಕಾಲಿಗೆ ಒಂದು ಎಂಬಂತೆ ಸೌಲಭ್ಯಗಳು. ಇಷ್ಟೆಲ್ಲದರ ಜೊತೆಯಲ್ಲಿ, ಸುತ್ತಲೂ ಇದ್ದ ಬೆಂಬಲಿಗರು, ಈ ಅಬ್ಬರಕ್ಕಿಂತ ಹೆಚ್ಚಾಗಿ ಕೋಟ್ಯಂತರ ಅಭಿಮಾನಿಗಳಿಂದ ಸಿಗುತ್ತಿದ್ದ ಬೆಂಬಲ ದರ್ಶನ್‌ರ ಖದರ್ ಹೆಚ್ಚು ಮಾಡಿತ್ತು. ಆದರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಅವರು ಇದೀಗ ಜೈಲಿನಲ್ಲಿ ಪರದಾಡುತ್ತಿದ್ದು, ಇದಕ್ಕೆಲ್ಲಾ ಕಾರಣ ಪವಿತ್ರಾ ಗೌಡನೇ ಅಂತಾ ಇದೀಗ ನಟ ದರ್ಶನ್ ತೂಗುದೀಪ್ ಕೋಪಗೊಂಡು ಮಾತು ಬಿಟ್ಟಿದ್ದಾರೆ ಎನ್ನಲಾಗಿದೆ.

ಪವಿತ್ರಾ ಗೌಡ ಸಹವಾಸ ಸಾಕು?

ಒಟ್ನಲ್ಲಿ ಪವಿತ್ರಾ ಗೌಡ ಕಾರಣಕ್ಕೆ ನಟ ದರ್ಶನ್ ತೂಗುದೀಪ್ ಅವರು ಈ ರೀತಿ ಸಂಕಷ್ಟ ಸ್ಥಿತಿಗೆ ಸಿಲುಕಿದ್ದಾರೆ ಎಂಬ ಆಕ್ರೋಶ ಅಭಿಮಾನಿಗಳಲ್ಲಿ ಕೂಡ ಮೂಡಿದೆ. ಅಲ್ಲದೆ ಖುದ್ದು ನಟ ದರ್ಶನ್ ತೂಗುದೀಪ್ ಅವರು ಕೂಡ ನನಗೆ ಪವಿತ್ರಾ ಗೌಡ ಸಹವಾಸ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದೆಲ್ಲಾ ಈಗ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಚರ್ಚೆಗೆ ವಿಷಯ ಒದಗಿಸಿದ್ದು, ಕೆಲವರು ಇದು ಸುಳ್ಳು ಅಂತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲೂ ಈ ಕುರಿತು ದೊಡ್ಡ ಗಲಾಟೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+