Darshan Thoogudeepa: ಪವಿತ್ರಾ ಗೌಡ ಬಂದ ನಂತರ ದರ್ಶನ್ ತೂಗುದೀಪ್ ಬಾಳಿಗೆ ಶನಿ ಪ್ರವೇಶ?

ಪವಿತ್ರಾ ಗೌಡ ತಂಟೆಗೆ ಬಂದು, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ ಆರೋಪದ ಹಿನ್ನೆಲೆ ಒಬ್ಬ ವ್ಯಕ್ತಿಯ ಕಥೆಯನ್ನೇ ದರ್ಶನ್ ತೂಗುದೀಪ್ ಮುಗಿಸಿದ್ದು, ಹೀಗಾಗಿ ಜೈಲು ಸೇರುವಂತೆ ಆಗಿದೆ. ರೇಣುಕಾಸ್ವಾಮಿ ಎಂಬಾತನನ್ನ ಹತ್ತಾರು ಜನ ಸೇರಿಕೊಂಡು ಹಲ್ಲೆ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿದೆ. ಹಾಗಾದರೆ ವಿಜಯಲಕ್ಷ್ಮೀ ಅವರ ಜೊತೆ ಬಾಳುತ್ತಿದ್ದ ದರ್ಶನ್ ತೂಗುದೀಪ್ ಜೀವನದಲ್ಲಿ ಶನಿ ಎಂಟ್ರಿ ಆಗಿದ್ದು ಯಾವಾಗ? ಪವಿತ್ರಾ ಗೌಡ ಶನಿ ರೀತಿ ಬಂದಳಾ? ಬನ್ನಿ ತಿಳಿಯೋಣ.

ಜೀವನದಲ್ಲಿ ಉದ್ಧಾರ ಆಗಬೇಕು ಅಂದ್ರೆ ಸುತ್ತಲೂ ಇರುವವರು ಸರಿಯಾಗಿ ಇರಬೇಕು, ಇಲ್ಲ ಅಂದ್ರೆ ಉದ್ಧಾರ ಆಗುವುದು ಬಿಡಿ ಜೀವನದಲ್ಲಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ ಅನ್ನೋದು ದರ್ಶನ್ ತೂಗುದೀಪ್ ವಿಚಾರದಲ್ಲಿ ಪ್ರೂವ್ ಆಗಿದೆ. ಹೀಗೆ ಕನ್ನಡ ಸಿನಿಮಾಗಳ ಬೆಳ್ಳಿತೆರೆ ಮೇಲೆ ಅಬ್ಬರಿಸುತ್ತಿದ್ದ ದರ್ಶನ್ ತೂಗುದೀಪ್ ಇದೀಗ ಹಿಂಗೆ ಹಾಳಾಗಿ ಹೋಗಲು, ಅಕ್ಷರಶಃ ಬೀದಿಗೆ ಬರುವಂತೆ ಮಾಡಿದ್ದು ಯಾರು ಗೊತ್ತೆ? ಅನ್ನೋ ಚರ್ಚೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಜನ ಮಾಡುತ್ತಿದ್ದಾರೆ. ಹೀಗಿದ್ದಾಗ ಪವಿತ್ರಾ ಗೌಡ ಬಂದ ನಂತರವೇ ಹೀಗೆ ದರ್ಶನ್ ತೂಗುದೀಪ್ ಬಾಳು ಹಾಳಾಗಿದ್ದು ಎಂಬ ಆರೋಪ ಅಭಿಮಾನಿಗಳಿಂದ ಕೇಳಿಬರ್ತಿದೆ. ಹಾಗಾದ್ರೆ ಅಸಲಿಗೆ ಈ ಪವಿತ್ರಾ ಗೌಡ ಮೊದಲಿಗೆ ದರ್ಶನ್ ತೂಗುದೀಪ್‌ಗೆ ಪರಿಚಯ ಆಗಿದ್ದು ಹೇಗೆ? ಮುಂದೆ ಓದಿ.

Darshan Thoogudeepa And Pavithra Gowda Cinema History

ಬುಲ್ ಬುಲ್ ಸಿನಿಮಾ ಸಮಯದಲ್ಲಿ...

ದರ್ಶನ್ ತೂಗುದೀಪ್ ಜೊತೆಗೆ ಬೇಕು ಬೇಕು ಅಂತಲೇ ಪವಿತ್ರಾ ಗೌಡ ಸ್ನೇಹ ಬೆಳೆಸಿಕೊಂಡು ಹತ್ತಿರ ಆಗಿದ್ದಳು ಎಂಬ ಆರೋಪ ಇದೆ. ಹೀಗೆ ದರ್ಶನ್ ತೂಗುದೀಪ್ ಜೊತೆ ಆತ್ಮೀಯ ಸ್ನೇಹದ ಬೆಸುಗೆ ಹಾಕಿಕೊಂಡ ಪವಿತ್ರಾ ಗೌಡ, ತನ್ನ ಪ್ರೇಮದ ಬಲೆಯಲ್ಲಿ ದರ್ಶನ್ ತೂಗುದೀಪನನ್ನ ಲಾಕ್ ಮಾಡಿದ್ದಳಂತೆ. ಬುಲ್ ಬುಲ್ ಸಿನಿಮಾ ಸಮಯದಲ್ಲಿ ನನಗೆ ಒಂದು ಅವಕಾಶವನ್ನ ಕೊಡಿ ಅಂತಾ ಕಾಲಿಗೆ ಬೀಳಲು ಹೋದವಳು ಕೊನೆಗೆ, ದರ್ಶನ್ ತೂಗುದೀಪ್ ಬಾಳಿಗೆ ಈಗ ಶನಿ ಆಗಿದ್ದಾಳೆ ಎಂಬ ಆರೋಪವನ್ನ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿದ್ದಾರೆ.

ದರ್ಶನ್ ತೂಗುದೀಪ್ ಜೈಲಿಂದ ರಿಲೀಸ್?

ಅಂದಹಾಗೆ ಅಕ್ಟೋಬರ್ 22 ರಂದು ಉಪೇಂದ್ರ ನಿರ್ದೇಶನ ಮಾಡಿದ್ದ 'ಉಪೇಂದ್ರ' ಸಿನಿಮಾಗೆ ಬರೋಬ್ಬರಿ 25 ವರ್ಷ ತುಂಬುತ್ತಿದೆ. ಹೀಗಾಗಿ 'ಉಪೇಂದ್ರ' ಸಿನಿಮಾದ ಬೆಳ್ಳಿಹಬ್ಬ ಆಚರಣೆಗೆ ಸಿದ್ಧತೆ ನಡೆದಿದೆ. ಇದೇ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ರಂಗದ ಘಟಾನುಘಟಿ ನಟರನ್ನ ಕರೆದುಕೊಂಡು ಬರಲು ಪ್ಲಾನ್ ಮಾಡಿದ್ದಾರೆ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರು.

ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಅವರು ಸೇರಿದಂತೆ ದೊಡ್ಡ ದೊಡ್ಡ ನಟರನ್ನೇ ಕರೆದುಕೊಂಡು ಬರುವ ಯೋಜನೆ ರೂಪಿಸಲಾಗಿದೆ. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಅವರನ್ನು ಕೂಡ ಪೆರೋಲ್​ ಮೇಲೆ ಬಳ್ಳಾರಿ ಜೈಲಿಂದ ರಿಲೀಸ್ ಮಾಡಿಸಿಕೊಂಡು ಬರಲು ಸಿದ್ಧತೆ ಸಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+