Master Anand: ಮಾಸ್ಟರ್ ಆನಂದ್‌ ಬಗ್ಗೆ ಇಂಟ್ರಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಕಾಮಿಡಿ ಕಿಲಾಡಿಗಳು ನಯನಾ

ಮಾಸ್ಟರ್ ಆನಂದ್‌ ಹಾಗೂ ಕಾಮಿಡಿ ಕಿಲಾಡಿಗಳು ನಯನಾ ಕಾಂಬಿನೇಷನ್‌ ವೇದಿಕೆ ಮೇಲೆ ಚೆನ್ನಾಗಿ ಕಾಣಿಸುತ್ತಿತ್ತು. ಇಬ್ಬರ ಟೈಮಿಂಗ್‌, ಪಂಚ್‌ ಡೈಲಾಗ್‌ಗಳು ನೋಡುಗರಿಗೆ ಇಷ್ಟವಾಗುತ್ತಿತ್ತು. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ನಟ ಜಗ್ಗೇಶ್‌ ಇಬ್ಬರ ಕಾಂಬಿನೇಷನ್‌ ಬಗ್ಗೆ ಕಾಲೆಯುತ್ತಿದ್ದರು. ಜೊತೆಯಾಗಿ ಹಾಡೊಂದನ್ನು ಮಾಡಿದ್ದ ಆನಂದ್‌-ನಯನಾ ಬಳಿಕ ಇಬ್ಬರು ಸಿನಿಮಾವೊಂದಕ್ಕೆ ಸಹಿ ಹಾಕಿದ್ದರು.

ಸಿನಿಮಾದಲ್ಲಿ ಮಾಸ್ಟರ್ ಆನಂದ್‌ ಹೀರೋ ಆದರೆ ನಯನಾ ನಾಯಕಿಯಾಗಿದ್ದರು. ಈ ಸಿನಿಮಾ ಕಥೆ ಏನಾಯ್ತು? ಶೂಟಿಂಗ್‌ ಸಮಯದಲ್ಲಿ ಏನೇನಾಯ್ತು? ಎನ್ನುವುದರ ಬಗ್ಗೆ ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಅವರ ಕನೆಕ್ಟ್‌ ಕನ್ನಡ(Konnect Kannada) ಯೂಟ್ಯೂಬ್‌ ಚಾನೆಲ್‌ನಲ್ಲಿ ನಯನಾ ಮಾತನಾಡಿದ್ದಾರೆ.

Comedy Khiladigalu Nayana Revealed An Interesting Story About Master Anand

ಮಾಸ್ಟರ್ ಆನಂದ್‌ ಹಾಗೂ ನಾನು ಸಹಿ ಮಾಡಿದ್ದ ಸಿನಿಮಾ ಅರ್ಧ ಶೂಟಿಂಗ್‌ ಆಗಿತ್ತು. ಆ ಸಿನಿಮಾದಲ್ಲಿ ಆನಂದ್‌ ಸರ್‌ ನಟನೆ ಮಾಡಿಲ್ಲ. ಬದಲಿಗೆ ಅವರು ಇರುವುದನ್ನೇ ತೋರಿಸಿದ್ದಾರೆ. ಆ ಸಿನಿಮಾದ ಪಾತ್ರದಂತೆಯೇ ಆನಂದ್‌ ಸರ್‌ ನಿಜ ಜೀವನದಲ್ಲಿ ಇದ್ದಾರೆ. ನಾನು ಅವರಿಗೆ ನೇರವಾಗಿ ಹೇಳಿದ್ದೆ. ಈ ಸಿನಿಮಾದಲ್ಲಿ ನೀವು ನಟನೆ ಮಾಡುವುದು ಬೇಡ ನೀವು ಇರುವುದೇ ಹಾಗೆ ಅಂದಿದ್ದೆ ಎಂದು ನಯನಾ ಹೇಳಿದರು.

ಇನ್ನು ಶೂಟಿಂಗ್‌ಗಾಗಿ ಉತ್ತರ ಕರ್ನಾಟಕಕ್ಕೆ ಹೋದಾಗ ನಡೆದ ಘಟನೆ ಬಗ್ಗೆ ಮಾತನಾಡಿದ ನಯನಾ, 'ಇಬ್ಬರು ಜೊತೆಯಾಗಿ ಶೂಟಿಂಗ್‌ಗೆ ಹೋದರೆ ಏನು ಪ್ರಯೋಜನಾ? ಅವರು ಮಣಿ ಹಿಡಿದುಕೊಂಡು ಜಪ ಮಾಡುತ್ತಿದ್ದರು. ಅವರು ಅಲ್ಲಿ ಹೇಗೆ ಇದ್ದರು ಅಂದರೆ. ಬೆಳಗ್ಗೆ ಎದ್ದು ನಾವು ಗುಡ್‌ ಮಾರ್ನಿಂಗ್‌ ಆನಂದ್‌ ಸರ್‌ ಅಂತಾ ಅವರ ರೂಮ್‌ಗೆ ಹೋದರೆ, ರೂಮ್‌ ಸಂಪೂರ್ಣ ಹೊಗೆಯಿಂದ ತುಂಬಿರುತ್ತಿತ್ತು. ಅವರು ರೂಮ್ ಒಳಗೆ ಹೋಮ ಮಾಡುತ್ತಿದ್ದರು'.

'ನನಗೆ ನಾನು ಶೂಟಿಂಗ್‌ಗೆ ಬಂದಿದ್ದೀನಾ ಇಲ್ಲಾ ಯಾವುದಾದರೂ ದೇವಸ್ಥಾನಕ್ಕೆ ಬಂದಿದ್ದೀನಾ ಅನಿಸುವುದು. ಅವರು ದೇವರಿಗೆ ಎಷ್ಟು ಶ್ರದ್ಧೆ ತೋರಿಸುತ್ತಿದ್ದರು ಎಂದರೆ ನಾವು ಯಾವ ದೇವಸ್ಥಾನದ ಕಥೆ ಮಾಡುತ್ತಿದ್ದೇವು, ಆ ದೇವಸ್ಥಾನ ಪ್ರತಿದಿನ ಅವರೇ ತೊಳೆಯುತ್ತಿದ್ದರು. ಅವರೇ ದೇವರನ್ನು ತೊಳೆದು ಅದಕ್ಕೆ ಸಿಂಗಾರ ಮಾಡಿ ಪೂಜೆ ಮಾಡಿ ಬರುತ್ತಿದ್ದರು'.

Comedy Khiladigalu Nayana Revealed An Interesting Story About Master Anand

'ಅದಾದ ಮೇಲೆ ನನಗೂ ಹೇಳಿದರು. ಅದ್ಯಾಕೆ ಅಷ್ಟು ತಡವಾಗಿ ಎದ್ದೇಳುವುದು, ನೀನು ಬಾ ಪೂಜೆ ಮಾಡು ಅಂತಾ ಕರೆದಿದ್ದರು. ಮಾರನೇ ದಿನ ನನ್ನ ಕೈಯಲ್ಲೇ ದೇವರಿಗೆ ಅಲಂಕಾರ ಮಾಡಿಸಿದ್ದರು. ಅದರಿಂದ ನನಗೆ ತುಂಬಾ ಮನಸ್ಸುಗೆ ನೆಮ್ಮದಿ ಅನಿಸಿತು. ಆದರೆ ಪ್ರತಿ ದಿನ ಆ ರೀತಿ ಬದುಕಲು ಆಗುವುದಿಲ್ಲ. ಅದು ಕಷ್ಟ ಇದೆ' ಎಂದು ನಯನಾ, ಮಾಸ್ಟರ್‌ ಆನಂದ್‌ ದೇವರ ಮೇಲಿಟ್ಟಿರುವ ನಂಬಿಕೆ, ಶ್ರದ್ಧೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+