Master Anand: ಎಕ್ಸ್ ಗರ್ಲ್‌ಫ್ರೆಂಡ್ಸ್ ಬಗ್ಗೆ ಹೇಳಿ ಸಿಕ್ಕಾಕಿಕೊಂಡ ಮಾಸ್ಟರ್ ಆನಂದ್!
Master Anand: ಕನ್ನಡ ಚಿತ್ರರಂಗ ಖ್ಯಾತ ಹಾಸ್ಯ ನಟ ಹಾಗೂ ಕಿರುತೆರೆಯಲ್ಲಿ, ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವ ಮಾಸ್ಟರ್ ಆನಂದ್ ಲವ್‌ಲೈಫ್‌ನ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. ಲವ್‌ಲೈಫ್ ಹಾಗೂ ಟೀನೆಜ್‌ನಲ್ಲಿ ಏನೆಲ್ಲಾ ನಡೆದಿತ್ತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮಾಸ್ಟರ್ ಆನಂದ್ ಕನ್ನಡದ ಸಿನಿಮಾಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ತಮ್ಮ ಟ್ಯಾಲೆಂಟ್ ಪ್ರದರ್ಶನ ಮಾಡಿದ್ದರು.
ಹಾಸ್ಯ ನಟ ಮಾತ್ರವಲ್ಲ. ನಟ, ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿರುವ ಆನಂದ್.. ಈಗ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ. ಈಗ ಲವ್ ಲೈಫ್ & ಎಷ್ಟು ಜನ ಗರ್ಲ್‌ಫ್ರೆಂಡ್ಸ್ ಇದ್ದರು ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಬಾಲ ನಟನಾಗಿ ಚಿತ್ರರಂಗೆ ಎಂಟ್ರಿ ಕೊಟ್ಟಿರುವ ಆನಂದ್.. ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿ ಇದೀಗ ಕಿರುತೆರೆ ಹಾಗೂ ರಿಯಾಲಿಟಿ ಶೋನಲ್ಲೂ ಮಿಂಚಿದ್ದಾರೆ. ಆನಂದ್ ಅವರ ಲವ್ ಲೈಫ್ ಬಗ್ಗೆ ಪತ್ನಿ ಯಶಸ್ವಿನಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ನಿರೂಪಣೆ ಮೂಲಕ ಫೇಮಸ್ ಆಗಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಮೂಲಕ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಅವರು, ಜೀ ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲೂ ಮಿಂಚುತ್ತಿದ್ದಾರೆ. ಅವರ ನಿರೂಪಣೆಯನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ.
ಮಾಸ್ಟರ್ ಆನಂದ್ ಅವರು, ಅವರ ಪತ್ನಿ ಯಶಸ್ವಿನಿ ಯೂಟ್ಯೂಬ್ ಚಾನೆಲ್‌ನೊಂದಿಗೆ ಮಾತನಾಡುವಾಗ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ನನಗೆ ಲೈಫ್‌ನಲ್ಲಿ ಎಲ್ಲಾ ಸ್ಟೇಜ್‌ನಲ್ಲಿಯೂ ಲವ್ ಆಗಿದೆ. ನಮ್ಮ ಅಪ್ಪ ಮಗನೇ ಏನು ಬೇಕಾದರೂ ನಿನ್ನ ಹೆಂಡ್ತಿ ಜೊತೆ ಮಾತಾಡು. ನಿನ್ನ ಲವ್ ಸ್ಟೋರಿನ ಮಾತ್ರ ಹೆಂಡ್ತಿ ಜೊತೆ ಹೇಳಿಕೊಳ್ಳಬೇಡ ಅಂತ ಹೇಳಿದ್ದರು. ಮಾಸ್ಟರ್ ಆನಂದ್ ಅವರು ಅವರ ಟೀನೇಜ್ ಲವ್ ಸ್ಟೋರಿಯ ಬಗ್ಗೆ ಇನ್ನೂ ಇಂಟ್ರಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಲವ್ ಸ್ಟೋರಿ ಹಾಗೂ ಲೈಫ್ ಎರಡೂ ಮೈ ಆಟೋಗ್ರಾಫ್ ಮೂವಿಗೆ ಮ್ಯಾಚ್ ಆಗುತ್ತದೆ. ಈ ವಿಷಯಗಳನ್ನ ನಾನು ನನ್ನ ಹೆಂಡ್ತಿಗೆ ಈ ಹಿಂದೆಯೂ ಹೇಳಿದ್ದೇನೆ. ಕೆಲವೊಂದು ವಿಚಾರ ಆಮೇಲೆ ಹೇಳಬಾರದಿತ್ತು ಅಂತನೂ ಅನಿಸಿದೆ ಅಂತ ನಕ್ಕಿದ್ದಾರೆ. ಯಾವುದೋ ಒಂದು ನಂಬಿಕೆಯಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿರುತ್ತೇವೆ. ಆ ಮೇಲೆ ಇದೆಲ್ಲಾ ಬೇಕಿತ್ತಾ ಅನ್ಸುತ್ತೆ. ಯಾಕಂದ್ರೆ ಹೇಳಿದ ವಿಷಯವನ್ನೇ ಹಿಡ್ಕೊಂಡು ನಮಗೆ ರುಬ್ತಾರೆ ಅಂತ ಪತ್ನಿಗೆ ಕೊಟ್ಟಿರುವ ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದಾರೆ.
ನಮ್ಮ ಅಪ್ಪ ನನಗೆ ಕೂರಿಸಿಕೊಂಡು ಗಿಣಿಗೆ ಪಾಠ ಮಾಡಿದಂಗೆ ಪಾಠ ಮಾಡಿದ್ದರು. ನೀನು ಯಾವ ವಿಷಯದ ಬಗ್ಗೆಯಾದರೂ ಮಾತನಾಡು.. ಬೇಕಾದರೆ ಎಷ್ಟೇ ಸತ್ಯ ಹರಿಶ್ಚಂದ್ರನಾಗಿರು ತೊಂದರೆ ಇಲ್ಲ. ಆದರೆ ನಿನ್ನ ಹಳೇ ಗರ್ಲ್‌ಫ್ರೆಂಡ್ಸ್ ಬಗ್ಗೆ ಯಾವುದೇ ಕಾರಣಕ್ಕೂ ಹೆಂಡ್ತಿ ಬಳಿ ಹೇಳಿಕೊಳ್ಳಬೇಡ ಅಂತ ಸಜೆಸ್ಟ್ ಮಾಡಿದ್ದರು. ಅದು ಚಿನ್ನ ಕಿವಿ ಮಾತು. ನಾನು ಆಗ ಅದೆಲ್ಲ ವರ್ಕ್ ಆಗಲ್ಲ. ಮದುವೆ ಆದ್ಮೇಲೆ ಯಾರಿಂದಾದರೂ ಈ ವಿಷಯ ಮುಂದೆ ಹೆಂಡ್ತಿಗೆ ಗೊತ್ತಾದರೆ. ಸಮಸ್ಯೆ ಆಗುತ್ತದೆ. ಅದಕ್ಕಿಂತ ನೋಡಮ್ಮ, ನನಗೆ ಹೀಗೆ ಈ ತರ ಎಲ್ಲಾ ಲವ್ ಆಗಿತ್ತು. ಅದೆಲ್ಲ ಮುಗಿದು ಹೋಯಿತು ಅಂತ ಹೇಳಿ ಬಿಡುತ್ತೀನಿ ಅಂತ ಅಪ್ಪನಿಗೆ ಉಲ್ಟಾ ಮಾತನಾಡಿದ್ದೆ ಅಂತ ಮಾಸ್ಟರ್ ಆನಂದ್ ಹೇಳಿಕೊಂಡಿದ್ದಾರೆ.












Click it and Unblock the Notifications