Pavitra Jayaram:ಪವಿತ್ರಾಗಾಗಿ ಆತ್ಮಹತ್ಯೆ ಮಾಡಿಕೊಂಡ ನಟ, ಇಬ್ಬರ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಚಂದ್ರಕಾಂತ್ ಪತ್ನಿ ಶಿಲ್ಪಾ!
ಬೆಂಗಳೂರು, ಮೇ. 18: ಕಿರುತೆರೆ ಧಾರಾವಾಹಿ ನಟ ಚಂದ್ರಕಾಂತ್ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಪವಿತ್ರಾ ಜಯರಾಮ್ ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದೇ ಸಾವನ್ನಪ್ಪಿದ್ದಾರೆ ಎನ್ನುತ್ತಾರೆ ಅವರ ಆಪ್ತರು. ಪವಿತ್ರಾ ನಿಧನ ಚಂದ್ರಕಾಂತ್ ಅವರನ್ನು ಎಷ್ಟು ಹಿಂಸಿಸಿತ್ತು ಎಂಬುದನ್ನು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳುತ್ತವೆ. ಆದರೆ, ಈ ಇಬ್ಬರು ನಟರು ಬೇರೆ ಬೇರೆಯವರನ್ನು ಮದುವೆಯಾಗಿದ್ದವರು.
ಹೌದು... ನಟಿ ಪವಿತ್ರಾ ಜಯರಾಮ್ ಕನ್ನಡ ಸೇರಿದಂತೆ ಬೇರೆ ಭಾಷೆಯ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. ಆದರೆ, ಚಂದ್ರಕಾಂತ್ ಕೂಡ ಮದುವೆಯಾಗಿದ್ದವರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಆದರೆ, ಪವಿತ್ರಾ ಅವರ ಸ್ನೇಹವಾದ ನಂತರ ಕುಟುಂಬದಿಂದ ದೂರ ಉಳಿದಿದ್ದರು ಎಂದು ತಿಳಿದುಬಂದಿದೆ.

ಹೆಂಡತಿಯನ್ನು ಹಿಂಸುತ್ತಿದ್ದರಾ ಚಂದ್ರಕಾಂತ್!
ಪವಿತ್ರಿ ಜಯರಾಮ್ ಮತ್ತು ಚಂದ್ರಕಾಂತ್ 'ತ್ರಿನಯನಿ' ಧಾರಾವಾಹಿಯಲ್ಲಿ ಕೆಲಸ ಮಾಡುವಾಗ ಭೇಟಿಯಾದವರು. ಸ್ನೇಹ ಪ್ರೀತಿಗೆ ತಿರುಗಿತು. ಅವರಿಬ್ಬರು ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಶೀಘ್ರದಲ್ಲೇ ಮದುವೆಯಾಗಲು ಯೋಚಿಸುತ್ತಿದ್ದರು. ಆದರೆ, ಚಂದ್ರಕಾಂತ್ ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಪವಿತ್ರಾ ಜೊತೆಯಲ್ಲಿಯೇ ಇದ್ದರು. ಚಂದ್ರಕಾಂತ್ ತನ್ನ ಪತ್ನಿಗೆ ವಿಚ್ಛೇದನ ನೀಡಿ ಪವಿತ್ರಾಳನ್ನು ಮದುವೆಯಾಗಲು ಬಯಸಿದ್ದರು.
ಚಂದ್ರಕಾಂತ್ ಅವರ ಪತ್ನಿಯ ಹೆಸರು ಶಿಲ್ಪಾ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬರಿಗೆ ಐದು ವರ್ಷ ಮತ್ತು ಒಬ್ಬರಿಗೆ ಆರು ವರ್ಷ. ಚಂದ್ರಕಾಂತ್ ಅವರು ಶಿಲ್ಪಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದವರು. 11 ವರ್ಷಗಳ ಹಿಂದೆ ತಂದೆ ತಾಯಿಗೆಇಷ್ಟವಾಗದಿದ್ದರೂ ಕೂಡ ಮದುವೆ ಮಾಡಿಕೊಂಡಿದ್ದರು. ಈಗ ಪವಿತ್ರಾಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಗಳ ಬೆನ್ನಲ್ಲೇ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಚಂದ್ರಕಾಂತ್ ಪತ್ನಿ ಶಿಲ್ಪಾ. ಪವಿತ್ರಾ ಜಯರಾಮ್ ಅವರು ಚಂದ್ರಕಾಂತ್ ಬಾಳಿನಲ್ಲಿ ಬಂದ ಮೇಲೆ ಹೇಗೆ ತಮ್ಮ ಜೀವನ ಬದಲಾಯಿತು ಎಂದು ಹೇಳಿದ್ದಾರೆ. ಕುಡಿದು ಮನೆಗೆ ಬರುತ್ತಿದ್ದರು. ನನ್ನನ್ನು ಹೊಡೆಯುತ್ತಿದ್ದರು. ಇಬ್ಬರು ಕಾಲ್ ಮಾಡಿ ನನಗೆ ಹಿಂಸೆ ಕೊಡುತ್ತಿದ್ದರು ಎಂದಿದ್ದಾರೆ.
"ನನ್ನ ಪತಿ ಪವಿತ್ರಾಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ಮನೆಗೆ ಬಂದರೂ ಕೂಡ ವಿಡಿಯೋ ಕಾಲ್‌ನಲ್ಲಿ ಅವಳ ಜೊತೆಗೆನೇ ಮಾತಾಡುತ್ತಿದ್ದರು. ಇಲ್ಲದಿದ್ದರೇ ಪವಿತ್ರಾ ಫೋಟೋ ನೋಡುತ್ತಾ ಇರುತ್ತಿದ್ದರು. ಲಾಕ್‌ಡೌನ್ ಸಮಯದಲ್ಲಿ ಇಬ್ಬರು ಜೊತೆಗೆ ಇರಲು ಆರಂಭಿಸಿದರು. ನಾನು ಅವರ ಹೆಂಡತಿ ಎಂದು ಎಲ್ಲೂ ಚಂದ್ರಕಾಂತ್ ಹೇಳಿಕೊಂಡಿಲ್ಲ" ಎಂದು ನೋವು ತೋಡಿಕೊಂಡಿದ್ದಾರೆ.
ಚಂದ್ರಕಾಂತ್ ಬದುಕಿದ್ದಾಗಲೂ ನರಕ, ಸತ್ತ ಮೇಲೂ ನರಕ!
ಚಂದ್ರಕಾಂತ್ ಅವಳಿಲ್ಲದ ಲೋಕದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಚಂದ್ರಕಾಂತ್ ತೆಗೆದುಕೊಂಡ ನಿರ್ಧಾರದಿಂದ ಅವರ ತಂದೆ-ತಾಯಿ, ಪತ್ನಿ, ಮಕ್ಕಳು ನರಕ ಅನುಭವಿಸುವಂತಾಗಿದೆ. ಈಗ ಮಕ್ಕಳು ಮತ್ತು ಚಂದ್ರಕಾಂತ್ ಹೆತ್ತವರ ಜವಾಬ್ದಾರಿ ಶಿಲ್ಪಾ ಮೇಲೆ ಬಿದ್ದಿದೆ. ಅವರನ್ನು ಯಾರು ನೋಡಿಕೊಳ್ಳಬೇಕು.. ಮಕ್ಕಳ ಭವಿಷ್ಯವೇನು.. ಎಂಬುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಕಷ್ಟದ ಸಮಯದಲ್ಲಿ ಯಾರು ತನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಶಿಲ್ಪಾ.
ಚಂದ್ರಕಾಂತ್ ಬದುಕಿದ್ದಾಗಲೂ ಕೂಡ ಪತ್ನಿ ಶಿಲ್ಪಾ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆಕೆಯನ್ನು ಹಿಂಸಿಸುತ್ತಿದ್ದರು. ಚಂದ್ರಕಾಂತ್ ಬದುಕಿದ್ದಾಗಲೇ ಯಾತನೆ ಅನುಭವಿಸುತ್ತಿದ್ದ ಅವರ ಪತ್ನಿ, ಈಗ ಸತ್ತ ನಂತರವೂ ಕಷ್ಟಗಳ ಸುರಿಮಳೆಯನ್ನೇ ಎದುರಿಸಬೇಕಿದೆ.
ಇನ್ನು, ಪವಿತ್ರಾ ಸಾವಿನಿಂದ ಚಂದ್ರಕಾಂತ್ ಖಿನ್ನತೆಗೆ ಒಳಗಾಗಿದ್ದರು. ಅವರಿಲ್ಲದ ಜಗತ್ತಿನಲ್ಲಿ ತಾನು ಇರಲು ಸಾಧ್ಯವಿಲ್ಲ ಎಂದೂ, ಆಕೆಯ ಬಗ್ಗೆ ಸರಣಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಅವರ ಹುಟ್ಟುಹಬ್ಬದ ದಿನ ಕೂಡ ಚಂದ್ರಕಾಂತ್ ಎರಡು ದಿನ ಕಾಯುವಂತೆ ಹೇಳಿದ್ದರು. ಆದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.












Click it and Unblock the Notifications