Chandan Shetty: ಸಿಗ್ನಲ್ ಕೊಟ್ಟರಾ ಚಂದನ್ ಶೆಟ್ಟಿ, ಹೊಸ ಫೋಟೋ ವೈರಲ್!
Chandan Shetty: ಸಿಂಗರ್ ಚಂದನ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಟ್ರೆಂಡ್‌ನಲ್ಲಿ ಇದ್ದಾರೆ. ಅವರು ಇನ್ಸ್‌ಟಾದಲ್ಲಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಚಂದನ್ ಶೆಟ್ಟಿ ಅವರು ಹೊಸ ಅಧ್ಯಾಯ ಶುರು ಮಾಡುವ ಮುನ್ಸೂಚನೆಯಾ ಅಂತ ಅವರ ಅಭಿಮಾನಿಗಳು ಕೇಳುತ್ತಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಡಿವೋರ್ಸ್ ತೆಗೆದುಕೊಂಡ ಮೇಲೆ ಇಬ್ಬರೂ ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಇಬ್ಬರು ಸಹ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಇಬ್ಬರು ಮೂವ್ ಆನ್ ಆಗುತ್ತಿರುವುದನ್ನು ಸೂಚಿಸುತ್ತಿದೆ.
ಚಂದನ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರಸಿದ್ಧ ಸಿಂಗರ್, ಸಂಗೀತ ನಿರ್ದೇಶಕ ಹಾಗೂ ಗೀತಾರಚನಕಾರ ಅವರ ಹೆಸರು ಬರುತ್ತಿದ್ದಂತೆ ಕನ್ನಡಿಗರಿಗೆ ಮೊದಲು ನೆನಪಾಗುವುದೇ ಮೂರೇ ಮೂರು ಪೆಗ್ಗಿಗೆ ಎನ್ನುವ ಹಾಡು. ಇನ್ನು ಅವರ ವೈಯಕ್ತಿಕ ಬದುಕಿನಲ್ಲಿ ಏರುಪೇರಾಗಿತ್ತು. ಡಿವೋರ್ಸ್ ನಂತರ ಅವರು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಅಥವಾ ಆಕ್ಟೀವ್ ಆಗಿ ಕಾಣಿಸಿಕೊಂಡಿದ್ದು ಕಡಿಮೆ ಇದೀಗ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಯುವತಿಯೊಂದಿಗೆ ಇರುವ ಫೋಟೋ ಶೇರ್ ಮಾಡಿದ್ದಾರೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚಂದದ ಫೋಟೋಗಳನ್ನು ಚಂದನ್ ಶೆಟ್ಟಿ ಅವರು ಹಂಚಿಕೊಂಡಿದ್ದು. ಚಂದನ್ ಶೆಟ್ಟಿ ಅವರು ಎರಡನೇ ಮದುವೆ ಆಗಲಿದ್ದಾರೆಯೇ ಎನ್ನುವುದನ್ನು ಅವರ ಫ್ಯಾನ್ಸ್‌ಗಳು ಪರೋಕ್ಷವಾಗಿ ಕೇಳಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳ ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಕಾಟನ್ ಕ್ಯಾಂಡಿ ಫೇಮಸ್ ಬೆನ್ನಲ್ಲೆ ಹೊಸ ಸುದ್ದಿ: ಇನ್ನು ಹೊಸ ವರ್ಷಕ್ಕೆ ಚಂದನ್ ಶೆಟ್ಟಿ ಅವರ ಹೊಸ ಹಾಡು ಕಾಟನ್ ಕ್ಯಾಂಡಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಹೊಸ ವರ್ಷ ಅವರಿಗೆ ಹೊಸ ಆರಂಭದಂತೆ ಆಗಿದ್ದು. ಕಾಟನ್ ಕ್ಯಾಂಡಿ ಹಾಡಿಗೆ ಪ್ರೇಕ್ಷಕರಿಂದ / ಕೇಳುಗರಿಂದಲೂ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಇದೇ ಖುಷಿಯಲ್ಲಿ ಚಂದನ್ ಶೆಟ್ಟಿ ಅವರು ಇದ್ದಾರೆ. ಇದೀಗ ಅವರು ಎರಡನೇ ಮದುವೆ ಸಿದ್ಧವಾಗುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಶುರುವಾಗಿದೆ. ಇದನ್ನು ಅವರ ಅಭಿಮಾನಿಗಳೇ ಕೇಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಫೋಟೋ ವೈರಲ್: ಚಂದನ್ ಶೆಟ್ಟಿ ಅವರ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಫೋಟೋಗೆ 96.5K ಲೈಕ್ಸ್ ಬಂದಿದ್ದು. ನೂರಾರು ಜನ ಕಮೆಂಟ್ ಮಾಡಿದ್ದಾರೆ. ಹಲವರು ಸಂತೋಷದಿಂದ ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಕಾಮಿಡಿ ಮಾಡಿದ್ದಾರೆ. ನೀವು ನಗುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ ಯಾವಾಗಲೂ ಇದೇ ರೀತಿ ಇರಿ ಎಂದು ಅವರ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಸಮಯ ತೆಗೆದುಕೊಳ್ಳಿ: ಚಂದನ್ ಅವರಿಗೆ ಹಲವರು ತುಂಬಾ ಕಾಳಜಿಯಿಂದ ಕಮೆಂಟ್ ಮಾಡಿದ್ದಾರೆ. ಮೊದಲ ರೀತಿ ಅವಸರ ಮಾಡಬೇಡಿ. ಸ್ವಲ್ಪ ಸಮಯ ತೆಗೆದುಕೊಳ್ಳಿ ಅರ್ಥ ಮಾಡಿಕೊಂಡು ಮುಂದುವರಿಯಿರಿ ಎಂದಿದ್ದಾರೆ. ಇದಕ್ಕ ನಮ್ಮ ಕಡೆ ಉರಸೋದು ಅಂತಾರ್ರೀ, ನಡಿಲಿ ನಡಿಲಿ ಗಂಡ್ ಮಕ್ಳೆಲ್ಲ ಖುಷಿಯಿಂದ ಸಪೋರ್ಟ್ ಮಾಡ್ತೀವಿ😍😍😍... ಶೆಟ್ರೇ ಮದ್ವೆ ಊಟ ಯಾವಾಗ ❤️🙌 ಎನ್ನುವ ಕಮೆಂಟ್‌ಗಳು ಬಂದಿವೆ. ಶೆಟ್ರೆ ಜೋಡಿ ಚೆನ್ನಾಗಿದೆ ಮದುವೆ ಆಗಿ ಬಿಡಿ ❤️ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ.












Click it and Unblock the Notifications