Chandan Shetty: ಚಂದನ್ ಶೆಟ್ಟಿ & ನಿವೇದಿತಾ ಗೌಡ ಬೇರೆ ಬೇರೆ ಆಗಲು ಇದೇ ಕಾರಣ?
ಚಂದನ್ ಶೆಟ್ಟಿ & ನಿವೇದಿತಾ ಗೌಡ ದೂರವಾಗಿ ಮದುವೆ ಸಂಬಂಧ ಮುರಿದುಕೊಂಡು ಬೇರೆ ಬೇರೆಯಾಗಿ ವಾಸ ಮಾಡ್ತಿದ್ದಾರೆ. ಹೀಗಿದ್ದಾಗ ಚಂದನ್ ಶೆಟ್ಟಿ & ನಿವೇದಿತಾ ಗೌಡ ಬೇರೆ ಆಗಲು ಕಾರಣ ಏನು? ಇಬ್ಬರ ಪ್ರೀತಿ & ಸಂಬಂಧಕ್ಕೆ ಹುಳಿ ಹಿಂಡಿದ್ದು ಯಾರು? ಎಂಬ ಪ್ರಶ್ನೆ ಕಿಚ್ಚಿನಂತೆ ಭುಗಿಲೆದ್ದಿವೆ. ಹೀಗಿದ್ದಾಗಲೇ ನಿವೇದಿತಾ ಗೌಡ ಸ್ಕರ್ಟ್ ಹಾಕಿ, ಸಖತ್ ಹಾಟ್ ಹಾಟ್ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುವ ಜೊತೆಗೆ, ಕನ್ನಡ ನಾಡಿನ ಜನರು ಏನೆಲ್ಲಾ ಹೇಳುತ್ತಿದ್ದಾರೆ ಗೊತ್ತಾ?
ಚಂದನ್ ಶೆಟ್ಟಿ & ನಿವೇದಿತಾ ಗೌಡ ಬೇರೆ ಆದ ಸುದ್ದಿ ಹವಾ ಎಬ್ಬಿಸಿತ್ತು. ಹತ್ತಿರ ಹತ್ತಿರ ಎರಡು ತಿಂಗಳು ಕಳೆದು 3ನೇ ತಿಂಗಳಿಗೆ ಕಾಲಿಟ್ಟಿದೆ ಈ ಸುದ್ದಿ. ಹೀಗಿದ್ದರೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಅಂದ್ರೆ ಮದುವೆ ಸಂಬಂಧ ಮುರಿದುಕೊಂಡ ಸುದ್ದಿ ಈಗಲೂ ಸಂಚಲನ ಸೃಷ್ಟಿ ಮಾಡುತ್ತಿದೆ. ಅದರಲ್ಲೂ ನಿವೇದಿತಾ ಗೌಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚಂದನ್ ಶೆಟ್ಟಿಯಿಂದ ದೂರವಾದ ನಂತರ ಸಖತ್ ಆಕ್ಟಿವ್ ಆಗಿದ್ದು, ಸಾಲು ಸಾಲು ವಿಡಿಯೋ ಹಾಕುತ್ತಿದ್ದಾರೆ.

ಇದೇ ರೀತಿ ಈಗಲೂ ಸ್ಕರ್ಟ್ ಹಾಕಿ, ಹಾಟ್ ಆಗಿ ಒಂದು ಭರ್ಜರಿ ರೀಲ್ಸ್ ಮಾಡಿರುವ ನಿವೇದಿತಾ ಗೌಡ ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಿವೇದಿತಾ ಗೌಡ ವಿಡಿಯೋ ನೋಡಿ ಜನ ಏನು ಹೇಳುತ್ತಿದ್ದಾರೆ? ಹಾಗಾದರೆ ಚಂದನ್ ಶೆಟ್ಟಿ & ನಿವೇದಿತಾ ಗೌಡ ಬೇರೆ ಆಗಲು ಏನು ಕಾರಣ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಅಬ್ಬಬ್ಬಾ.. ನಿವೇದಿತಾ ಗೌಡ!
ಚಂದನ್ ಶೆಟ್ಟಿ & ನಿವೇದಿತಾ ಗೌಡ ಮದುವೆ ಸಂಬಂಧ ಮುರಿದು ಬೀಳಲು ಕಾರಣ ಏನು? ಅನ್ನೋದನ್ನೂ ಜನ ವಿವರಿಸಿದ್ದಾರೆ. ಕೆಲವು ಜನರಿಗೆ ಮಾಡೋದಕ್ಕೆ ಕೆಲಸ ಇಲ್ಲ, ಹೀಗಾಗಿ ಅವರು ಬಂದು ಸೋಷಿಯಲ್ ಮೀಡಿಯಾ ವಿಡಿಯೋಗಳಿಗೆ ಕಮೆಂಟ್ ಹಾಕುತ್ತಾರೆ ಎನ್ನುವ ಆರೋಪ ಕೂಡ ಇದೆ. ಆದರೆ ಜನ ಕಮೆಂಟ್ ಮಾಡುವುದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ಸೆಲೆಬ್ರಿಟಿಗಳು ಮತ್ತಷ್ಟು ವಿಡಿಯೋ ಹಾಕಿ, ಇನ್ನಷ್ಟು ಗಮನ ಸೆಳೆಯುತ್ತಾರೆ. ಹಾಗೇ ವಿಡಿಯೋಗಳು ವೈರಲ್ ಆಗುತ್ತವೆ. ಇದನ್ನೆಲ್ಲಾ ಬಿಡಿ, ಇದೀಗ ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಿವೇದಿತಾ ಗೌಡ ಸ್ಕರ್ಟ್ ಹಾಕಿ ಭರ್ಜರಿ ಹಾಟ್ ಡಾನ್ಸ್ ಮಾಡಿದ ನಂತರ ವಿಡಿಯೋ ನೋಡಿ ಜನಗಳು ಏನಂದ್ರು? ಮೊದಲು ವಿಡಿಯೋ ನೋಡಿ ಆ ನಂತರ ಕಮೆಂಟ್ ಓದಿ.
ಇದೇ ಕಾರಣಕ್ಕೆ ಡಿವೋರ್ಸ್ ಆಗಿದ್ದು?
ನಿವೇದಿತಾ ಗೌಡ ಹೀಗೆಲ್ಲಾ ಚಂದನ್ ಶೆಟ್ಟಿ ಅವರಿಂದ ದೂರ ಆದ ನಂತರ ಜನರು ಕೂಡ ಸಿಕ್ಕಾಪಟ್ಟೆ ರೊಚ್ಚಿಗೆದ್ದು ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ಇದೀಗ ನಿವೇದಿತಾ ಗೌಡ ಅವರು ಹಾಕಿರುವ ಹಾಟ್ ಡಾನ್ಸ್ ವಿಡಿಯೋಗೆ ಕಮೆಂಟ್ ಮಾಡುತ್ತಿರುವ ಜನರು, ಇದಕ್ಕೇ ಡಿವೋರ್ಸ್ ಆಗಿರಬೇಕು ಅಂತಾ ಕೊಂಕು ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲಾ ಅವರ ವೈಯಕ್ತಿಕ ಜೀವನ ಅಂತಾ ಹೇಳುತ್ತಿದ್ದರೆ, ಮತ್ತೆ ಕೆಲವರು ಬಂದು ಹಿಂಗೆಲ್ಲಾ ವಿಡಿಯೋ ಮಾಡಿ ಹಾಕಬೇಡಮ್ಮ ಮಕ್ಕಳು & ಮರಿ ಇರ್ತಾರೆ ಅಂತಾ ಕಮೆಂಟ್ ಮಾಡ್ತಿದ್ದಾರೆ.












Click it and Unblock the Notifications