ನಟ ದರ್ಶನ್ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಹೇಳಿದ್ದು ಏನು?
ಮೈಸೂರು ರಾಜ್ಯ ನಮ್ಮ ಕರ್ನಾಟಕವಾಗಿ ಈಗ 50 ವರ್ಷ ಕಳೆದಿದೆ. ಇದೇ ಸಮಯದಲ್ಲಿ ಅದ್ಧೂರಿಯಾಗಿ ಕರ್ನಾಟಕ ಸರ್ಕಾರ ಕೂಡ ರಾಜ್ಯೋತ್ಸವ ಆಚರಿಸಿದೆ. ಗಣ್ಯರೆಲ್ಲಾ ಕನ್ನಡ ನಾಡಿನ ಜನರಿಗೆ ಕರ್ನಾಟಕ ರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ. ಅದರಲ್ಲೂ ಸಿನಿಮಾ ಮಂದಿ ತಮ್ಮ ನೆಲದ ಅಭಿಮಾನಿಗಳಿಗೆ ಹಾಗೂ ಪ್ರಜೆಗಳಿಗೆ ತುಂಬು ಹೃದಯದಿಂದ ವಿಶ್ ಮಾಡಿದ್ದಾರೆ. ಹಾಗಾದರೆ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಹೇಳಿದ್ದೇನು?
ನಟ ದರ್ಶನ್ ಅಂದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಇಷ್ಟದ ನಟ ಹಾಗೂ ಈ ನಟನನ್ನು ಅಭಿಮಾನಿಗಳು ಫಾಲೋ ಮಾಡ್ತಾರೆ. ಹೀಗೆ ನಟ ದರ್ಶನ್ ಅವರು ಕೂಡ ಅಭಿಮಾನಿಗಳು ಅಂದ್ರೆ ಸಖತ್ ಇಷ್ಟ ಪಡ್ತಾರೆ. ಪ್ರತಿ ಹಬ್ಬಕ್ಕೂ ಫ್ಯಾನ್ಸ್‌ಗೆ ಶುಭ ಕೋರುತ್ತಾರೆ. ಹೀಗಿದ್ದಾಗ ನಮ್ಮ ನಾಡಿನ ಹಬ್ಬವಾದ, ಕರ್ನಾಟಕ ರಾಜ್ಯೋತ್ಸವಕ್ಕೆ ಡಿ-ಬಾಸ್ ಶುಭಾಶಯ ಕೋರದೆ ಇರ್ತಾರಾ? ಹಾಗಾದರೆ ನಟ ದರ್ಶನ್ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಹೇಗೆ ವಿಶ್ ಮಾಡಿದ್ರು ಗೊತ್ತಾ?

ಕನ್ನಡ ನೆಲ & ಜಲದ ವಿಚಾರದಲ್ಲಿ...
ಹೌದು ನಟ ದರ್ಶನ್ & ಅವರ ತಂದೆ ದಿವಂಗತ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಅಜರಾಮರ. ಇನ್ನ ದರ್ಶನ್ ಅವರ ಸಹೋದರರಾದ ದಿನಕರ್ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ಇದೀಗ, ದರ್ಶನ್‌ರ ಪುತ್ರ ಕೂಡ ಸಿನಿಮಾ ಅಖಾಡಕ್ಕೆ ಎಂಟ್ರಿ ಕೊಡಲು ಸಿದ್ಧರಾಗುತ್ತಿದ್ದಾರೆ. ಹೀಗೆ ಕನ್ನಡ ನೆಲ & ಜಲದ ವಿಚಾರದಲ್ಲಿ ನಟ ದರ್ಶನ್ ಸದಾ ಅಭಿಮಾನ ತೋರಿಸುತ್ತಾರೆ. ಇದೇ ರೀತಿ ಈಗ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಕನ್ನಡಿಗರಿಗೆ ಶುಭ ಕೋರಿದ್ದಾರೆ.
ನಟ ದರ್ಶನ್ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ವಿಶೇಷ ಟ್ವೀಟ್ ಒಂದನ್ನ ಮಾಡಿದ್ದು, 'ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ. ಬದುಕು ಕಲಿಸಿದ ಈ ಮಾತೃಭೂಮಿಯ ಹಬ್ಬದಂದು ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು' ಎಂದು ತಮ್ಮ ಅಭಿಮಾನಿಗಳಿಗೆ & ಕನ್ನಡದ ಜನತೆಗೆ ಶುಭ ಕೋರಿದ್ದಾರೆ. ಇನ್ನು ನಟ ಡಿ-ಬಾಸ್ ದರ್ಶನ್ ಅವರ ಟ್ವೀಟ್‌ಗೆ ಅಭಿಮಾನಿ ಬಳಗ ಕೂಡ ರೀಪ್ಲೆ ಕೊಟ್ಟಿದ್ದು, ಲೈಕ್ ಮಾಡಿ & ಶೇರ್ ಮಾಡಿ ಸಂಭ್ರಮಿಸಿದೆ.
ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ. ಬದುಕು ಕಲಿಸಿದ ಈ ಮಾತೃಭೂಮಿಯ ಹಬ್ಬದಂದು ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು#ಕನ್ನಡರಾಜ್ಯೋತ್ಸವ #KannadaRajyothsava pic.twitter.com/JiUEaCMmDJ
— Darshan Thoogudeepa (@dasadarshan) November 1, 2023
ಒಟ್ನಲ್ಲಿ ಕನ್ನಡಿಗರ ಮನೆ & ಮನಗಳ ಹಬ್ಬ ಕರ್ನಾಟಕ ರಾಜ್ಯೋತ್ಸವ ಇಂದು ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಹಾಗೇ ಸಿನಿಮಾ ನಟರು, ಗಣ್ಯರು ಕನ್ನಡಿಗರಿಗೆ ಇಂದು ಶುಭ ಹಾರೈಸಿದ್ದಾರೆ. ಅದರಲ್ಲೂ ನಟ ದರ್ಶನ್ ಅವರು ಶುಭ ಕೋರಿರುವ ಟ್ವೀಟ್ ಅಭಿಮಾನಿ ಬಳಗದ ಸಂಭ್ರಮ ದುಪ್ಪಟ್ಟಾಗಿಸಿದೆ.












Click it and Unblock the Notifications