ದಾಸ ‘ಡಿ-ಬಾಸ್’ ದರ್ಶನ್ ಅವರ ಅಭಿಮಾನಿಗಳು ಈ ಸುದ್ದಿ ಮಿಸ್ ಮಾಡುವಂತಿಲ್ಲ!
ನಟ ದರ್ಶನ್ ಅವರು ಫುಲ್ ಖುಷಿಯಲ್ಲಿದ್ದಾರೆ, ಯಾಕಂದ್ರೆ ಒಂದು ಕಡೆ ಅವರ ಸಿನಿಮಾ ಕಾಟೇರ ಭರ್ಜರಿ ಸಕ್ಸಸ್ ಪಡೆದಿದೆ. ಹಾಗೇ ಇನ್ನೊಂದು ಕಡೆ ಅವರ ಡೆವಿಲ್ ಸಿನಿಮಾ ಕೂಡ ಸಿದ್ಧವಾಗುತ್ತಿದೆ. ಇದೇ ಸಮಯದಲ್ಲಿ ನಟ ದರ್ಶನ್ ಅವರ ಹುಟ್ಟುಹಬ್ಬ ಕೂಡ ಬಂದಿದೆ. ಆದರೆ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳ ಬಳಿ ಈಗ ವಿಶೇಷ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. ಹಾಗಾದರೆ ಅಭಿಮಾನಿಗಳ ಪಾಲಿನ ಡಿ-ಬಾಸ್ ಮನವಿ ಏನು?
ಅಷ್ಟಕ್ಕೂ ಫೆಬ್ರವರಿ 16, ದರ್ಶನ್ ಅವರ ಅಭಿಮಾನಿಗಳಿಗೆ ಎಂದೆಂದಿಗೂ ಮರೆಯಲಾಗದ ದಿನ. ಯಾಕಂದ್ರೆ ಇದೇ ದಿನ ನಟ ದರ್ಶನ್ ಅವರು ಜನಿಸಿದ್ದು, ಹೀಗಾಗಿ ಅಭಿಮಾನಿಗಳು ಫೆಬ್ರವರಿ 16ನ್ನು ಅತ್ಯಂತ ಸಂಭ್ರಮ ಮತ್ತು ಸಡಗರದ ಮೂಲಕ ಆಚರಿಸುತ್ತಾರೆ. ಹೀಗಾಗಿ ಆ ದಿನ ಸಾಕಷ್ಟು ಸಂಭ್ರಮ ಮೇಳೈಸಿರುತ್ತದೆ. ಅದರಲ್ಲೂ ಈ ಬಾರಿಯ ಹುಟ್ಟುಹಬ್ಬಕ್ಕೆ, ಕಾಟೇರ ಸಿನಿಮಾ ಸಕ್ಸಸ್ ಕೂಡ ಡಬಲ್ ಮೆರಗು ನೀಡಿದೆ. ಈ ಕಾರಣಕ್ಕೆ ಅಭಿಮಾನಿಗಳು ಕೂಡ ಖುಷಿಯಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ದರ್ಶನ್ ಅವರು ತಮ್ಮ ಫ್ಯಾನ್ಸ್ ಬಳಿ ಮಹತ್ವದ ಮನವಿ ಮಾಡಿಕೊಂಡಿದ್ದಾರೆ.

ದರ್ಶನ್‌ರ ಫ್ಯಾನ್ಸ್‌ಗೆ ಕಾದಿದೆ ಉಡುಗೊರೆ
ಹೌದು, ಈಗಾಗಲೇ ಅಭಿಮಾನಿಗಳಿಗೆ ದರ್ಶನ್ ಅವರು ಸಂದೇಶ ರವಾನಿಸಿದ್ದು ಯಾರೂ ಕೇಕ್ & ಬ್ಯಾನರ್ ಕಟ್ಟದಂತೆ ಮನವಿ ಮಾಡಿದ್ದಾರೆ. ಹುಟ್ಟು ಹಬ್ಬ ಅರ್ಥಪೂರ್ಣವಾಗಿ ಆಚರಿಸೋಕೆ ದವಸ ಧಾನ್ಯ ಉಡುಗೊರೆಯಾಗಿ ನೀಡಿ ಸಾಕು ಎಂದು ಮನವಿ ಮಾಡಿದ್ದು. ಹೀಗಾಗಿ ಡಿ-ಬಾಸ್, ದರ್ಶನ್ ಅವರ ಅಭಿಮಾನಿಗಳು ಈಗ ಹೀಗೆ ಅರ್ಥಪೂರ್ಣವಾಗಿ ಹುಟ್ಟಹಬ್ಬ ಆಚರಣೆಗಾಗಿ ಸಕಲ ಸಿದ್ಧತೆ ನಡೆಸಿದ್ದಾರೆ. ಇದರ ಜೊತೆ ದರ್ಶನ್‌ರ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆಲ್ಲಾ ಭರ್ಜರಿ ಸರ್ಪ್ರೈಸ್ ಕೂಡ ಸಿಗಲಿದೆಯಂತೆ!
ಡೆವಿಲ್ ಸಿನಿಮಾ ಫಸ್ಟ್ ಲುಕ್ ರಿಲೀಸ್?
ಯೆಸ್, ನಟ ದರ್ಶನ್ ಅವರ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ ಅವರ ಹುಟ್ಟುಹಬ್ಬದ ದಿನ ಡೆವಿಲ್ ಸಿನಿಮಾ ಫಸ್ಟ್ ಲುಕ್ ರಿಲೀಸ್ ಮಾಡುವ ಸಾಧ್ಯತೆ ಇದೀಗ ದಟ್ಟವಾಗಿದೆ. ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದ ಅಂದ್ರೆ 'ಡೆವಿಲ್' ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನಡೆದಿತ್ತು. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಲ್ಲಿ ಪೋಸ್ಟರ್ ಹರಿದಾಡಿದ್ದವು. ಇದೀಗ ಸಿಕ್ಕಿರುವ ಮಾಹಿತಿ ತಿಳಿಸುವಂತೆ, ದರ್ಶನ್ ಅವರ ಹುಟ್ಟುಹಬ್ಬದ ದಿನವೇ ಫಸ್ಟ್ ಲುಕ್ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ದರ್ಶನ್ ಅವರ ಮನವಿ ಏನು?
'ಬ್ಯಾನರ್, ಕೇಕ್ & ಹಾರಗಳನ್ನ ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವು ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ & ಇತರ ದವಸ ಧಾನ್ಯ ದಾನ ನೀಡಿ. ಅದನ್ನ ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡೆಯಬಾರದು.'
'ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟ ನೀವೆಲ್ಲ ನನ್ನ ಕೋರಿಕೆ ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೇ ಸಂಘದ ಕಾರ್ಯಕರ್ತರು & ಪೊಲೀಸ್ ಸಿಬ್ಬಂದಿಗು ಸಹಕರಿಸಬೇಕೆಂದು ವಿನಂತಿಸುತ್ತೇನೆ.' ಎಂದು ತಮ್ಮ ಅಭಿಮಾನಿಗಳಿಗೆ ನಟ ದರ್ಶನ್ ಅವ್ರು ಮನವಿ ಮಾಡಿದ್ದರು. ಇದೀಗ ಇನ್ನೇನು ನಟ ದರ್ಶನ್ ಅವರ ಹುಟ್ಟುಹಬ್ಬ ಹತ್ತಿರ ಬಂದ ಕಾರಣ ಮತ್ತೊಮ್ಮೆ, ಈ ಪೋಸ್ಟರ್ ವೈರಲ್ ಆಗುತ್ತಿದೆ.











Click it and Unblock the Notifications