‘ಕಾಟೇರ’ಗೆ ದೊಡ್ಡ ಗೆಲುವು, ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?
ನಟ ದರ್ಶನ್ ಅವರ 'ಕಾಟೇರ' ಸಿನಿಮಾಗೆ ದೊಡ್ಡ ಗೆಲುವು ಸಿಕ್ಕಿದೆ. ಹೀಗಾಗಿ 'ಕಾಟೇರ' ಸಿನಿಮಾ ಟೀಂ ಫುಲ್ ಖುಷ್ ಆಗಿದೆ. ಅದಕ್ಕಿಂತ ಹೆಚ್ಚಾಗಿ ಸಿನಿಮಾ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಅಭಿಮಾನಿಗಳು, ಕಾಟೇರ ಸಿನಿಮಾವನ್ನು ಸಂಭ್ರಮಿಸಿದ್ದಾರೆ. ಹೀಗಿದ್ದಾಗ ಸ್ವತಃ ದರ್ಶನ್ ಅವರು, ಸಂಭ್ರಮ ಹಂಚಿಕೊಂಡಿದ್ದಾರೆ. ಹಾಗಾದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದೇನು? ಫ್ಯಾನ್ಸ್ ಪಾಲಿನ ಡಿ-ಬಾಸ್ ಭಾವುಕ ನುಡಿ ಹೇಗಿತ್ತು? ಬನ್ನಿ ತಿಳಿಯೋಣ.
ದರ್ಶನ್ ಅವರ ಸಿನಿಮಾ ಕರಿಯರ್‌ಗೆ 'ಕಾಟೇರ' ಮತ್ತೊಂದು ಅದ್ಭುತ, ಅನ್ನೋ ಮಾತು ಈಗ ಕೇಳಿಬರುತ್ತಿದೆ. ಆಕ್ಷನ್ ಹೀರೋ ಆಗಿ ಅಭಿಮಾನಿಗಳ ಮನಸ್ಸನ್ನ ಗೆದ್ದಿದ್ದ ನಟ ತಮ್ಮ ವಿಭಿನ್ನ ನಟನೆ ಮೂಲಕವು ಗಮನ ಸೆಳೆದಿದ್ದಾರೆ. ಹೀಗಾಗಿ ನಟ ದರ್ಶನ್ ಅವರು ಕಾಟೇರ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಜೊತೆಯಲ್ಲಿ ಕಾಟೇರ ಸಿನಿಮಾ ಸಾಮಾಜಿಕ ಕಳಕಳಿ ಕೂಡ ಜನರಿಗೆ ಇಷ್ಟವಾಗಿದೆ. ಹೀಗಿದ್ದಾಗ ಜನ ತಮ್ಮ ನೆಚ್ಚಿನ ನಟ ಡಿ-ಬಾಸ್ ದರ್ಶನ್ ಅವರ ಸಿನಿಮಾನ ಸಂಭ್ರಮದಿಂದ ನೋಡ್ತಿದ್ದು, ಈ ಬಗ್ಗೆ ಸ್ವತಃ ದರ್ಶನ್ ಅವರು ಹೇಳಿಕೆ ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು?
ಕಾಟೇರ ಸಕ್ಸಸ್ ಹಿನ್ನೆಲೆ ಸ್ಪೆಷಲ್ ಟ್ವೀಟ್ ಮಾಡಿರುವ ದರ್ಶನ್ ಅವರು, ಕನ್ನಡಾಭಿಮಾನ ಮೆರೆದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದೇನು ಅಂದ್ರೆ, 'ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ ❤️ ಈ ಪ್ರೀತಿಯ ಚಪ್ಪಾಳೆ ನಮ್ಮ #Kaatera ಚಿತ್ರತಂಡದ ಮನತುಂಬಿದೆ. Speechless 🙏' ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್.
ಅರ್ಜುನ ಆನೆಗೆ 'ಕಾಟೇರ' ನಮನ
ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ 'ಕಾಟೇರ' ಸಿನಿಮಾ ಪ್ರದರ್ಶನದ ವೇಳೆ, ಅರ್ಜುನ ಆನೆಗೂ ನಮನ ಸಲ್ಲಿಸಲಾಗಿದೆ. 'ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನ ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ 'ಅರ್ಜುನ' ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ' ಎಂದು ವಿಶೇಷ ಸಂದೇಶವನ್ನು ರವಾನಿಸಲಾಗಿದೆ. ಈ ಮೂಲಕ ದರ್ಶನ್‌ರ ಸಿನಿಮಾ ತಂಡದಿಂದ ಅಂಬಾರಿ ಹೊತ್ತು, ಕನ್ನಡಿಗರ ಮನಸ್ಸನ್ನು ಗೆದ್ದಿದ್ದ 'ಅರ್ಜುನ' ಆನೆಗೆ ನಮನ ಸಲ್ಲಿಸಲಾಗಿದೆ.
ಮೊದಲ ದಿನವೇ 20 ಕೋಟಿ!
'ಕಾಟೇರ' ಸಿನಿಮಾ ಬಿಡುಗಡೆಯಾದ ಮೊದಲ ದಿನ ಎಷ್ಟು ಗಳಿಸಿದೆ..? ಎನ್ನುವ ಬಗ್ಗೆ ಇನ್ನೂ ಅಧಿಕೃತವಾಗಿ ಸಿನಿಮಾ ತಂಡ ಮಾಹಿತಿ ನಿಡಿಲ್ಲ. ಆದ್ರೆ ಈ ಮಧ್ಯೆ ಎಲ್ಲೆಲ್ಲೂ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಭರ್ತಿ 20 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ಕನ್ನಡಿಗರ ಈ ಸಿನಿಮಾ ಗಳಿಸಿದೆ ಎನ್ನಲಾಗಿದೆ. ಜೊತೆಗೆ ಹೊರ ರಾಜ್ಯದಲ್ಲೂ 'ಕಾಟೇರ'ನ ಅಬ್ಬರ ಬಲು ಜೋರಾಗಿದೆ. ಹೀಗಾಗಿ ಈ ಸಿನಿಮಾ ಮತ್ತಷ್ಟು ದಾಖಲೆ ಧೂಳ್ ಮಾಡುವ, ಹೊಸ ಇತಿಹಾಸವನ್ನ ಸೃಷ್ಟಿಸುವ ನಿರೀಕ್ಷೆ ಕೂಡ ಇದೆ.

ಒಟ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಕನ್ನಡದ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟಿನ ಯಶಸ್ಸು ಪಡೆದಿದೆ. ಇದಕ್ಕೆಲ್ಲಾ ಕನ್ನಡ ಸಿನಿಮಾ ಪ್ರೇಕ್ಷಕರ ಕೊಡುಗೆಯು ಪ್ರಮುಖ ಕಾರಣವಾಗಿದೆ. ಈ ಮೂಲಕ ಕನ್ನಡದ ಸಿನಿಮಾ ಜಗತ್ತಿನಾದ್ಯಂತ ಅಬ್ಬರವನ್ನು ತೋರಿಸುತ್ತಿದ್ದು, ಈ ಯಶಸ್ಸು ಹೀಗೆ ಮುಂದುವರಿಯಲಿ ಅನ್ನೋದೆ ಅಭಿಮಾನಿಗಳ ಆಸೆ ಕೂಡ. ನಾಳೆ ಭಾನುವಾರ ರಜೆ ಇದ್ದು, ಸೋಮವಾರ ಹೊಸ ವರ್ಷದ ಸಂಭ್ರಮದಲ್ಲಿ ಮತ್ತೆ ಮತ್ತೆ ಸಿನಿಮಾ ಮಂದಿರಗಳು ತುಂಬಿ ತುಳುಕುವ ನಿರೀಕ್ಷೆ ಇದೆ.












Click it and Unblock the Notifications