15 ವರ್ಷ ಚಿಕ್ಕ ಹುಡುಗನನ್ನು ಮದುವೆ ಆಗುತ್ತಾರಾ ಸುಶ್ಮಿತಾ ಸೇನ್?
ಬಾಲಿವುಡ್ ಬ್ಯೂಟಿ & ಒಂದು ಕಾಲದಲ್ಲಿ ಹಿಂದಿ ಸಿನಿಮಾ ರಂಗದಲ್ಲೇ ದೊಡ್ಡ ಹೆಸರನ್ನು ಮಾಡಿದ್ದ ನಟಿ ಸುಶ್ಮಿತಾ ಸೇನ್ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಸುಶ್ಮಿತಾ ಸೇನ್ ಅವರು, ತಮ್ಮ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣ ಸುದ್ದಿಯಲ್ಲಿರುತ್ತಾರೆ. ಇದೀಗ ಈ ನಟಿ ತಮಗಿಂತಲೂ 15 ವರ್ಷ ಚಿಕ್ಕ ವಯಸ್ಸಿನ ಹುಡುಗನನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಅಲ್ಲದೆ ಈ ಬಗ್ಗೆ ಬ್ಯೂಟಿ ಸುಶ್ಮಿತಾ ಸ್ಪಷ್ಟನೆ ನೀಡಿದ್ದಾಳೆ!
ಹೌದು, ಮಾಡೆಲ್ ಹಾಗೂ ಸುಶ್ಮಿತಾ ಸೆನ್‌ಗಿಂತ 15 ವರ್ಷ ಚಿಕ್ಕವನಾದ ರೋಹ್ಮನ್ ಶಾಲ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದ ಸುಶ್ಮಿತಾ ಮತ್ತೆ ಪ್ಯಾಚಪ್ ಮಾಡಿದ್ದಾರೆ. ಹೀಗಿದ್ದಾಗ ಮದುವೆ ಬಗ್ಗೆ ನಟಿ ಹೇಳಿದ್ದೇನು? ಅನ್ನೋದು ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ 2021ರಲ್ಲಿ, ಉದ್ಯಮಿ ಲಲಿತ್ ಮೋದಿ ಜೊತೆಗಿನ ಸಂಬಂಧದ ಬಳಿಕ ರೋಹ್ಮನ್ ಶಾಲ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು ಸುಶ್ಮಿತಾ ಸೇನ್.

ಸುಶ್ಮಿತಾಗೆ ಎಲ್ಲಿ ಸಿಕ್ಕಿದ್ದ ರೋಹ್ಮನ್?
ರೋಹ್ಮನ್ ಹಾಗೂ ಸುಶ್ಮಿತಾ ಮೊದಲಿಗೆ 2018ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಿತರಾಗಿ ಪ್ರೇಮದಲ್ಲಿ ಬಿದ್ದಿದ್ದರು. ಆದರೆ ನಂತರ ಲಲಿತ್ ಮೋದಿ ಜೊತೆಗಿನ ಸಂಬಂಧದ ಕಾರಣಕ್ಕೆ ಬ್ರೇಕಪ್ ಆಗಿತ್ತು. ಇದೀಗ ಮತ್ತೆ ರೋಹ್ಮನ್‌ಗೆ ಹಾಯ್ ಹೇಳಿರುವ ಸುಶ್ಮಿತಾ, ತನಗಿಂತ 15 ವರ್ಷ ಚಿಕ್ಕವನಾದ ರೋಹ್ಮನ್ ಶಾಲ್ ಜೊತೆ ಮದುವೆ ಆಗುತ್ತಾರಾ? ಎಂಬ ಪಶ್ನೇ ಕಾಡ್ತಿದೆ ಅದಕ್ಕೆ ಅವರೇ ಉತ್ತರ ಹೇಳಿದ್ದಾರೆ.
ಪ್ಯಾಚಪ್ ಜೊತೆಗೆ ಮದುವೆ ಫಿಕ್ಸ್?
ಅಷ್ಟಕ್ಕೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಡೇಟಿಂಗ್ ವಿಚಾರದಲ್ಲಿ ಸಖತ್ ಸದ್ದು ಮಾಡಿದ್ದರು. ಸುಶ್ಮಿತಾ ಸೇನ್ ಹೆಸರು ಹಲವರ ಜೊತೆ ತಳುಕು ಹಾಕಿಕೊಂಡಿತ್ತು. ಕಳೆದ ಹಲವು ದಿನಗಳಿಂದ ರೋಹ್ಮನ್ ಶಾಲ್ ಜೊತೆ ಕೂಡ ಸುಶ್ಮಿತಾ ಡೇಟಿಂಗ್ ಮಾಡ್ತಿದ್ರು ಎಂಬ ಮಾತು ಹರಿದಾಡಿದೆ. ಹೀಗಿದ್ದಾಗ ಇಬ್ಬರೂ ಬಹಳ ಸಮಯದಿಂದ ಪರಸ್ಪರ ಚೆನ್ನಾಗಿದ್ದರು. ಶಾಪಿಂಗ್, ಈವೆಂಟ್, ವೆಕೇಷನ್ ಅಂತಾ ಪದೇ ಪದೇ ಒಟ್ಟಿಗೆ ಕಾಣಿಸಿಕೊಂಡರು. ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಮಾತು ದಟ್ಟವಾಗಿ ಹರಡಿರುವಾಗ ಸುಶ್ಮಿತಾ ಬ್ರೇಕಪ್ ಘೋಷಿಸಿಬಿಟ್ಟರು. ಆದರೆ ಈಗ ಮತ್ತೆ ಪ್ಯಾಚಪ್ ಆಗಿರುವ ಕಾರಣಕ್ಕೆ ಇಬ್ಬರು ಮದುವೆ ಆಗಲಿದ್ದಾರಾ? ಅಂತಾ ಪಶ್ನೆ ಈಗ ಉದ್ಭವಿಸಿದೆ.

ಇಬ್ಬರ ಮದುವೆ ಯಾವಾಗ ಗೊತ್ತೆ?
ಸುಶ್ಮಿತಾ ಸಾಲು ಸಾಲು ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇದೇ ಸಮಯದಲ್ಲಿ ನಟಿ ಸುಶ್ಮಿತಾ ಮದುವೆ ಕೂಡ ಆಗಲಿದ್ದಾರೆ ಎಂಬ ಮಾತುಗಳು ಓಡಾಡಿದ್ದವು. ಇದೀಗ ಈ ಬಗ್ಗೆ ಸ್ವತಃ ಸುಶ್ಮಿತಾ ಉತ್ತರ ನೀಡಿದ್ದಾರೆ. ಸುಶ್ಮಿತಾ ತನಗಿಂತ 15 ವರ್ಷ ಕಿರಿಯ ಗೆಳೆಯನಾದ ರೋಹ್ಮನ್ ಶಾಲ್ ಜೊತೆ ಮದುವೆಯಾಗ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಹಾಗಾದರೆ ಈ ಇಬ್ಬರೂ ನಿಜವಾಗಿಯೂ ಮದುವೆ ಆಗುತ್ತಿದ್ದಾರಾ? ಮುಂದೆ ಓದಿ.
ಸುಶ್ಮಿತಾ ಹೇಳಿದ್ದಾರೆ ಅಸಲಿ ಕಹಾನಿ!
ಇದೀಗ ತಮ್ಮ ಮದುವೆ ಗಾಸಿಪ್ ಬಗ್ಗೆ ಮಾತನಾಡಿರುವ ಸುಶ್ಮಿತಾ ಸೇನ್, ನನಗೆ ಚೆನ್ನಾಗಿ ಗೊತ್ತು ಎಲ್ಲರೂ ನಾನು ಮದುವೆ ಆಗಬೇಕೆಂದು ಬಯಸುತ್ತಾರೆ. ಈ ವಯಸ್ಸಿನಲ್ಲಿ ಜೀವನದಲ್ಲಿ ಸೆಟ್ಲ್ ಆಗ್ಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ನಾನು ಮದುವೆ ಬಗ್ಗೆ ಚಿಂತಿಸುವುದೇ ಇಲ್ಲ ಎಂದಿದ್ದಾರೆ ಸುಶ್ಮಿತಾ ಸೇನ್. ಹಾಗೇ ಮದುವೆ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಆದರೆ ನಾನು ಮದುವೆಯಾಗಲ್ಲ ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ. ನಾನು ಒಡನಾಟ ಮತ್ತು ಸ್ನೇಹ ಹೆಚ್ಚು ನಂಬುತ್ತೇನೆ ಎಂದಿದ್ದಾರೆ ಸುಶ್ಮಿತಾ. ಈ ಮೂಲಕ ಅವರ ಅಭಿಮಾನಿ ಬಳಗಕ್ಕೆ ಈ ಸುದ್ದಿ ಶಾಕ್ ಕೊಟ್ಟಿದೆ.












Click it and Unblock the Notifications