Bollywood: ಬಾಲಿವುಡ್‌ ನಟ ಗೋವಿಂದನಿಗೆ ಬಿದ್ದೇ ಬಿಡ್ತು ಗುಂಡು: ಐಸಿಯುನಲ್ಲಿ..

ರಜನಿಕಾಂತ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ ಹಿನ್ನೆಲೆಯಲ್ಲಿ ಸಿನಿಮಾ ರಂಗದಲ್ಲಿ ಆತಂಕ ಮನೆ ಮಾಡಿದ್ದರೆ, ಮತ್ತೊಂದು ಕಡೆ ಬಾಲಿವುಡ್ ಕೂಡ ಇಂದು ಶೇಕ್ ಆಗಿದೆ. ಯಾಕಂದ್ರೆ ದಿಢೀರ್ ಅಂತಾ ಬಾಲಿವುಡ್ ಅಂಗಳದಿಂದ ಒಂದು ಸುದ್ದಿ ಈಗ ಹೊರ ಬಿದ್ದಿದ್ದು, ಅಭಿಮಾನಿಗಳು ಅತಂಕದಲ್ಲಿ ಮೊಬೈಲ್ ತೆಗೆದು ಬ್ರೌಸ್ ಮಾಡುವ ಪರಿಸ್ಥಿತಿಯೇ ನಿರ್ಮಾಣ ಆಗಿದೆ. ಅಂದಹಾಗೆ, ಬಾಲಿವುಡ್‌ ನಟ ಗೋವಿಂದಗೆ ಗುಂಡು ಬಿದ್ದಿದ್ದು, ಇದೀಗ ಐಸಿಯುನಲ್ಲಿ...

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ.. ಅಂತಾ ಕನ್ನಡಿಗರ ಹಾಡನ್ನು ಹಾಡುತ್ತಾ, ಕನ್ನಡ ಸಿನಿಮಾ ಪ್ರಿಯರ ಮನಸ್ಸು ಗೆದ್ದಿದ್ದ ನಟ ಗೋವಿಂದ ಅವರ ಅಭಿಮಾನಿಗಳಿಗೆ ಈ ದಿನ ದೊಡ್ಡ ಆಘಾತ ಎದುರಾಗಿದೆ. ಅಂದಹಾಗೆ ಕೂಲಿ ನಂ 1, ಸಾಜನ್ ಚಲೇ ಸಸುರಾಲ್, 'ರಾಜಾ ಬಾಬು', 'ರಜನಿ', 'ಪಾರ್ಟ್ನರ್', 'ಹಸೀನಾ ಮಾನ್ ಜಾಯೇಗಿ' ರೀತಿಯ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ನಟ ಗೋವಿಂದ ಅವರಿಗೆ ಇಂದು ಗುಂಡು ತಗುಲಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕು ಬಾಲಿವುಡ್‌ ನಟ ಗೋವಿಂದಗೆ ಗುಂಡು ಬಿದ್ದಿದ್ದು, ಇದೀಗ ಐಸಿಯುನಲ್ಲಿ...

Bollywood actor Govinda was shot while cleaning a revolver and has been admitted to the ICU

ಐಯ್ಯಯ್ಯೋ ಹಿಂಗೆಲ್ಲಾ ಆಗೋಯ್ತಾ?

ಹೌದು, ತಮ್ಮ ಕಾಮಿಡಿ ಮೂಲವೇ ನಟ ಗೋವಿಂದ ಅವರು ಕೋಟಿ ಕೋಟಿ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇಂತಿಪ್ಪ ನಟ ಗೋವಿಂದ ಅವರಿಗೆ ಇಂದು ಗುಂಡು ತಗುಲಿದೆ. ಗೋವಿಂದ ಅವರ ಬಳಿ ಇರುವ ಲೈಸೆನ್ಸ್ಡ್ ರಿವಾಲ್ವರ್‌ನಿಂದ ಅಚಾನಕ್ ಆಗಿ ಗುಂಡು ಹಾರಿ ಕಾಲಿಗೆ ತಗುಲಿಬಿಟ್ಟಿದೆ. ಹೀಗಾಗಿ ಕೂಡಲೇ ನಟ ಗೋವಿಂದ ಅವರನ್ನ ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 4.45ಕ್ಕೆ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಆತಂಕ ಮನೆ ಮಾಡಿದೆ.

ಗೋವಿಂದ 90ರ ದಶಕದ ಸೂಪರ್ ಸ್ಟಾರ್

90ರ ದಶಕದಲ್ಲಿ ಗೋವಿಂದ ಅಂದ್ರೆ ಬಾಲಿವುಡ್ ಟು ಸ್ಯಾಂಡಲ್‌ವುಡ್ ಒಂದು ದೊಡ್ಡ ಕ್ರೇಜ್ ಇತ್ತು. ಹೀಗೆ 90ರ ದಶಕದಲ್ಲಿ ನಟ ಗೋವಿಂದ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ರಾಶಿಯನ್ನೇ ನೀಡಿದ್ದರು. ಹೀಗಿದ್ದಾಗ 2007ರ ನಂತರ ಗೋವಿಂದ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫಿಸ್‌ನಲ್ಲಿ ತೋಪೆದ್ದು ಹೋದವು. ಇದೇ ಕಾರಣಕ್ಕೆ ನಟ ಗೋವಿಂದ ಅವರು ಮುಂದೆ ರಾಜಕೀಯ ಅಖಾಡಕ್ಕೆ ನುಗ್ಗಿದ್ದರು.

ಹೀಗಿದ್ದಾಗಲೇ, ಇಂದು ಕೊಲ್ಕತ್ತಾಗೆ ಹೊರಡಲು ಸಜ್ಜಾಗಿದ್ದ ನಟ ಗೋವಿಂದ ಅವರಿಗೆ ಆಕಸ್ಮಿಕ ಅವರದ್ದೇ ರಿವಾಲ್ವರ್‌ನಿಂದ ಗುಂಡು ಹಾರಿ ತಗುಲಿಬಿಟ್ಟಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಟ ಗೋವಿಂದ ಅವರ ಆರೋಗ್ಯ ಸ್ಥಿರವಾಗಿದೆ. ಗೋವಿಂದ ಅವರ ಮೊಣಕಾಲಿನ ಸಮೀಪ ಗುಂಡು ತಗುಲಿದೆ. ತಜ್ಞ ವೈದ್ಯರಿಂದ ಇದೀಗ ಚಿಕಿತ್ಸೆ ನಡೆಯುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+