Aamir Khan: 3ನೇ ಮದುವೆಗೆ ಬೆಂಗಳೂರು ಬೆಡಗಿ ಮೇಲೆ ಕಣ್ಣಾಕಿದ್ರಾ ನಟ ಅಮೀರ್ ಖಾನ್?
ಸಿನಿಮಾ ಜಗತ್ತಿನಲ್ಲಿ ಸೆಲೆಬ್ರಿಟಿಗಳ ಮದುವೆ ಹಾಗು ಡಿವೋರ್ಸ್ ಅನ್ನೋದು ಕಾಮನ್ ವಿಷಯಗಳಾಗಿವೆ. ಅದರಲ್ಲೂ ಎರಡು ಮೂರು ಮದುವೆ ವಿಚಾರ ಅಂದ್ರೆ ಅಯ್ಯೋ ಅಷ್ಟೇನಾ ಅನ್ನೋ ಹಾಗಿದೆ ಪರಿಸ್ಥಿತಿ. ಹಲವು ನಟ ನಟಿಯರು ಒಂದಲ್ಲ, ಎರಡಲ್ಲ ಹಲವು ಮದುವೆಗಳಾಗುವ ಮೂಲಕ ಶಾಕ್ ಕೊಟ್ಟಿದ್ದಾರೆ. ಇದೀಗ ಹೊಸ ವಿಚಾರವೆಂದರೆ ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ (Aamir Khan) ಮೂರನೇ ಮದುವೆಯಾಗಲು ಸಜ್ಜಾಗಿದ್ದಾರಂತೆ. ವಿಶೇಷ ಅಂದ್ರೆ ನಮ್ಮ ಬೆಂಗಳೂರಿನ ಬೆಡಗಿಯನ್ನ ಅಮೀರ್ ಖಾನ್ ಮದುವೆಯಾಗ್ತಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಹಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. 59 ವರ್ಷದ ನಟ ಅಮೀರ್ ಖಾನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದು, ಬೆಂಗಳೂರು ಮೂಲದ ಯುವತಿ ಜೊತೆಗೆ ಲವ್ವಿಡವ್ವಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಅಮೀರ್ ಅವರ ಕುಟುಂಬವು ಈಗಾಗಳೇ ಆ ಯುವತಿಯನ್ನು ಭೇಟಿ ಮಾಡಿದ್ದು, ಶೀಘ್ರದಲ್ಲೇ ನಟನೊಂದಿಗೆ ಹಸೆಮಣೆ ಏರುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ.

ಸದ್ಯ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಅಮೀರ್ ಖಾನ್ ಮನ ಮೆಚ್ಚಿರುವುದು ಗೌರಿ ಹೆಸರಿನ ಯುವತಿ ಎಂದು ತಿಳಿದುಬಂದಿದೆ. ಅಚ್ಚರಿಯೆಂದರೆ ಈ ಯುವತಿಗೂ ಬಾಲಿವುಡ್‌ಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ. ಚಿತ್ರರಂಗಕ್ಕೆ ಪರಿಚಿತರಲ್ಲದ ಯುವತಿಯನ್ನೇ ಅಮೀರ್ ಖಾನ್ ಇಷ್ಟಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ ಅಮೀರ್ ಖಾನ್ ತಮ್ಮ ಹೊಸ ಸಂಬಂಧವನ್ನು ಗುಟ್ಟಾಗಿ ಇಡಲು ಇಚ್ಛಿಸಿದ್ದಾರೆ. ಯಾರಿಗೂ ತಿಳಿಯದಂತೆ ಅವರು ಯುವತಿಯನ್ನು ಇಷ್ಟಪಟ್ಟು, ಕುಟುಂಬಕ್ಕೂ ಭೇಟಿ ಮಾಡಿಸಿದ್ದಾರೆ ಎನ್ನಲಾಗಿದೆ. ಇಲ್ಲಿವರೆಗೆ ಅಮೀರ್ ಖಾನ್ ಅವರು ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆದರೆ ಅವರು ಯುವತಿಯೊಂದಿಗೆ ಪ್ರೀತಿಯಲ್ಲಿರುವುದು ಪಕ್ಕಾ ಮಾಹಿತಿ ಎಂದೇ ಹೇಳಲಾಗುತ್ತಿದೆ. ಮೂರನೇ ಮದುವೆ ಮೂಲಕ ಅಮೀರ್ ಹೊಸ ಅಧ್ಯಾಯ ಶುರು ಮಾಡಲು ಹೊರಟಿದ್ದಾರಂತೆ.
ಬಾಲಿವುಡ್‌ನ ಸೂಪರ್‌ಸ್ಟಾರ್ ಆಗಿರುವ ಅಮೀರ್ ಖಾನ್ ಅವರು ಈ ಹಿಂದೆ ಸಿನಿಮಾ ನಿರ್ಮಾಪಕಿ ರೀನಾ ದತ್ತಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇರಾ ಖಾನ್ ಮತ್ತು ಜುನೈದ್ ಖಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. 1986ರಲ್ಲಿ ವಿವಾಹವಾಗಿದ್ದ ಈ ಜೋಡಿ 16 ವರ್ಷಗಳ ಬಳಿಕ 2002ರಲ್ಲಿ ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದರು. ಬಳಿಕ ಅಮೀರ್ ಖಾನ್ 2005ರಲ್ಲಿ ಕಿರಣ್ ರಾವ್ ಅವರನ್ನು ಎರಡನೇ ಮದುವೆಯಾಗಿದ್ದರು.

ಲಗಾನ್ ಸೆಟ್‌ನಲ್ಲಿ ಈ ಜೋಡಿ ಭೇಟಿಯಾಗಿತ್ತು. ಅಶುತೋಷ್ ಗೋವಾರಿಕರ್ ನಿರ್ದೇಶನದ ಲಗಾನ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕಿರಣ್ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಆದರೆ ಈ ಬಂಧ ಕೂಡ ಹೆಚ್ಚು ವರ್ಷ ಉಳಿಯಲಿಲ್ಲ. ಸುಮಾರು 15 ವರ್ಷಗಳ ದಾಂಪತ್ಯದ ಬಳಿಕ ಕಿರಣ್ ಮತ್ತು ಅಮೀರ್ ಡಿವೋರ್ಸ್ ಘೋಷಿಸಿದ್ದರು.
ಈ ಸುಂದರ 15 ವರ್ಷಗಳಲ್ಲಿ ನಾವು ಜೀವಮಾನದ ಅನುಭವಗಳು, ಸಂತೋಷ ಮತ್ತು ನಗುವನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧ ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಶುರುಮಾಡಲು ಬಯಸುತ್ತೇವೆ. ನಾವಿಬ್ಬರೂ ಇನ್ನು ಮುಂದೆ ದಂಪತಿ ಅಲ್ಲ, ಆದರೆ ಪರಸ್ಪರ ಸಹ-ಪೋಷಕರು ಎಂದು ತಮ್ಮ ಡಿವೋರ್ಸ್ ಅನ್ನು ಬಹಿರಂಗವಾಗಿ ಘೋಷಿಸಿದ್ದರು.












Click it and Unblock the Notifications