Bigg Boss: ಯಾರೂ ಕೂಡ ಊಹಿಸದ ಅಭ್ಯರ್ಥಿಯೇ ಈ ಬಾರಿ ಬಿಗ್‌ಬಾಸ್ ಮನೆಯಿಂದ ಔಟ್!
ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಒಂದು ಲೆಕ್ಕವಾದರೆ ಇನ್ಮುಂದೆ ನಡೆಯೋದೇ ಒಂದು ಲೆಕ್ಕಾ. ಈ ವಾರ ಮನೆಯಿಂದ ಯಾರು ಹೊರಗಡೆ ಹೋಗ್ತಾರೆ ಅನ್ನೋದು ಇದಿಯಲ್ಲಾ ಅದಕ್ಕಿಂತ ಸಸ್ಪೆನ್ಸ್ ಇನ್ನೊಂದಿಲ್ಲ. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಯಾವೊಬ್ಬ ಸ್ಪರ್ಧಿಯೂ ಮನೆಯಿಂದ ಹೊರಬಂದಿಲ್ಲ. ಹೀಗಾಗಿ ಈ ವಾರ ದೊಡ್ಡ ಸ್ಪರ್ಧಿಯೂ ಮನೆಯಿಂದ ಹೊರ ಹೋಗಬಹುದು ಎನ್ನಲಾಗುತ್ತಿದೆ. ಹಾಗಾದರೆ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಹೋಗುವುದು ಯಾರು? ಯಾರು ಸೇಫ್ ಆಗ್ತಾರೆ? ಯಾರು ಡೇಂಜರ್ ಝೋನ್‌ನಲ್ಲಿ ಇದ್ದಾರೆ? ಇದೆಲ್ಲದರ ಬಗ್ಗೆ ತಿಳಿಯೋಣ.
ಬಿಗ್‌ಬಾಸ್ ಶುರುವಾಗಿ ಹನ್ನೆರಡನೇ ವಾರ ಮುಗಿಯುತ್ತಾ ಬಂತು. ಬಿಗ್‌ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಮುಗಿಯುತ್ತಾ ಬಂದರೂ ಇಷ್ಟೊಂದು ಆಟಗಾರರು ಇನ್ನೂ ಕೂಡ ಉಳಿದುಕೊಂಡಿದ್ದಾರೆ. ಈ ಹಿಂದಿನ ಸೀಸನ್‌ಗಳಲ್ಲಿ ಇಷ್ಟೊಂದು ಆಟಗಾರರು ಇದ್ದಿದ್ದೇ ಇಲ್ಲ. ಕಳೆದ ಸೀಸನ್‌ಗೆ ಹೋಲಿಸಿದರೆ ಏಳೆಂಟು ಆಟಗಾರರು ಮಾತ್ರ ಹನ್ನೆರಡನೇ ವಾರಕ್ಕೆ ಉಳಿದುಕೊಂಡಿರುತ್ತಿದ್ದರು. ಆದರೆ ಈ ಬಾರಿ ಇನ್ನೂ ಸಹ ಹನ್ನೆರಡು ಆಟಗಾರರು ಬಿಗ್‌ಬಾಸ್ ಮನೆಯಲ್ಲಿ ಇದ್ದಾರೆ.

ಬಿಗ್‌ಬಾಸ್ ಟಿಆರ್‌ಪಿ ಲೆಕ್ಕಾಚಾರ
ಬಿಗ್‌ಬಾಸ್ ಶುರುವಾದಾಗ ಈ ಮನೆಗೆ ಎಂಟ್ರಿ ಕೊಟ್ಟವರು ಒಟ್ಟು 16 ಸ್ಪರ್ಧಿಗಳು. ಆಮೇಲೆ ಕೆಲವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆಯುತ್ತಾರೆ. ಈ ಬಿಗ್‌ಬಾಸ್ ಮನೆಯಲ್ಲಿ 80 ದಿನದ ಆಟ ಮುಗಿದ್ರೂ ಕೂಡ ಔಟ್ ಆಗಿರೋದು ಮಾತ್ರ ಆರೇ ಜನ. ಇದಕ್ಕೆ ಕಾರಣ ಟಿಆರ್‌ಪಿ ಲೆಕ್ಕಾಚಾರ, ಯಾರು ಹೊರ ಹೋದರೆ ಟಿಆರ್‌ಪಿಗೆ ಹೊಡೆತ ಬೀಳುತ್ತೆ ಅನ್ನೋ ಲೆಕ್ಕಾಚಾರ ಹಾಕಿಯೇ ಬಿಗ್‌ಬಾಸ್‌ನವರು ಯಾರನ್ನ ಕಳುಹಿಸಬೇಕು ಯಾರನ್ನು ಇಟ್ಟುಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾರೆ.
ನಾವು ನೀವೆಲ್ಲಾ ಓಟ್ ಮಾಡಿದವರು ಉಳಿದುಕೊಳ್ಳುತ್ತಾರೆ. ಓಟ್ ಸಿಗದವರು ಹೊರಗಡೆ ಬರುತ್ತಾರೆ ಎಂದು ಅಂದುಕೊಂಡಿದ್ದೇವೆ. ಆದರೆ ಇದು ಎಲ್ಲಾ ಸಮಯದಲ್ಲೂ ವರ್ಕೌಟ್ ಆಗಲ್ಲ. ಯಾಕೆಂದರೆ ಇಲ್ಲಿ ಬಿಗ್‌ಬಾಸ್ ತಂಡ ಕೆಲವೊಮ್ಮೆ ಯಾರು ಟಿಆರ್‌ಪಿ ಫೇಸ್ ಅನ್ನೋದನ್ನು ಲೆಕ್ಕಾಚಾರ ಹಾಕುತ್ತಾರೆ. ಹಾಗಾದರೆ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಳ್ಳುವ ಸ್ಪರ್ಧಿಗಳು ಯಾರು ಹೊರಗಡೆ ಹೋಗುವ ಸ್ಪರ್ಧಿಗಳು ಯಾರು? ಈಗ ತಿಳಿಯೋಣ.
ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಳ್ಳುವ ಸ್ಪರ್ಧಿಗಳು: -
ಐಶ್ವರ್ಯ
ಈ ವಾರ ಕೇವಲ ಮೂರು ಅಭ್ಯರ್ಥಿಗಳು ಮಾತ್ರ ನಾಮಿನೇಷನ್‌ನಿಂದ ಪಾರಾಗಿದ್ದಾರೆ. ಅದ್ರಲ್ಲೂ ಕೂಡ ಈ ವಾರ ಯಾರು ಬಿಗ್‌ಬಾಸ್ ಮನೆಯಿಂದ ಹೊರಗಡೆ ಹೋಗ್ತಾರೆ ಅಂದುಕೊಂಡಿದ್ವೋ ಆ ಸ್ಪರ್ಧಿಗಳು ಸೇವ್ ಆಗಿದ್ದಾರೆ. ಇವರಲ್ಲಿ ಐಶ್ವರ್ಯ ಒಬ್ಬರು. ಐಶ್ವರ್ಯ ಅವರು ನಾಮಿನೇಷನ್‌ನ ತುತ್ತ ತುದಿಗೆ ಹೋಗಿ ಬಂದಿದ್ದಾರೆ. ಶೋಭಾ ಶೆಟ್ಟಿ ಅವರು ಮನೆಯಿಂದ ಹೊರಗಡೆ ಹೋಗುವ ನಿರ್ಧಾರ ಮಾಡದೇ ಇದ್ದಲ್ಲಿ ಐಶ್ವರ್ಯ ಅವರು ಕಳೆದ ಬಾರಿ ಬಿಗ್‌ಬಾಸ್ ಮನೆಯಿಂದ ಹೊರ ಹೋಗಬೇಕಿತ್ತು. ಆದರೆ ಐಶ್ವರ್ಯ ಅವರ ಲಕ್ ಚೆನ್ನಾಗಿ ಇತ್ತು. ಗ್ರೇಟ್ ಬಚಾವ್ ಆದರು.
ಕಳೆದ ಬಾರಿ ಕೂಡ ಹಾಗೇ ಆಗಿತ್ತು. ನಾಮಿನೇಷನ್ ಕೊನೆವರೆಗೂ ಇದ್ದಿದ್ದು ಚೈತ್ರಾ ಮತ್ತು ಐಶ್ವರ್ಯ ಮಾತ್ರ. ಆದರೆ ಆ ವಾರವೂ ನಾಮಿನೇಷನ್ ನಡೆಯಲೇ ಇಲ್ಲ. ಹೀಗಾಗಿ ಎರಡು ವಾರವೂ ಐಶ್ವರ್ಯ ನಾಮಿನೇಷನ್‌ನಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಆದರೆ ಈ ವಾರ ಐಶ್ವರ್ಯ ಅವರು ನಾಮಿನೇಷನ್ ಆಗೇ ಇಲ್ಲ. ಹೀಗಾಗಿ ಐಶ್ವರ್ಯ ಮನೆಯಿಂದ ಹೊರಗಡೆ ಹೋಗುವ ಸುಳಿವಿನಿಂದ ಪಾರಾಗಿದ್ದಾರೆ.
ಗೋಲ್ಡ್ ಸುರೇಶ್
ಇನ್ನೂ ಗೋಲ್ಡ್ ಸುರೇಶ್ ಆಟ ಆಡದೇ ಯಾವ ಕಾಲ ಆಗಿದಿಯೋ ಏನೋ. ಹುಷಾರಿಲ್ಲ ಅನ್ನೋ ಕಾರಣಕ್ಕೆ ಗೋಲ್ಡ್ ಸುರೇಶ್ ಆಟವೇ ಆಡುತ್ತಿಲ್ಲ. ಅನಾರೋಗ್ಯ ಕಾರಣದಿಂದ ಮನೆಯಲ್ಲಿ ಹಾಯಾಗಿ ಇದ್ದಂತೆ ಕಾಣಿಸುತ್ತಿದೆ. ಹೀಗಾಗಿ ಈ ವಾರ ಗೋಲ್ಡ್ ಸುರೇಶ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಇತ್ತು. ಆದರೆ ಸುರೇಶ್ ಲಕ್ ಚೆನ್ನಾಗಿದೆ. ಈ ವಾರ ನಾಮಿನೇಷನ್‌ನಿಂದ ಸುರೇಶ್ ಪಾರಾಗಿದ್ದಾರೆ. ಯಾಕೆಂದರೆ ಮನೆಯಲ್ಲಿರುವ ಯಾವೊಬ್ಬ ಸ್ಪರ್ಧಿಯೂ ಇವರನ್ನು ನಾಮಿನೇಟ್ ಮಾಡೇ ಇಲ್ಲ.
ಗೌತಮಿ ಜಾದವ್
ಜೊತೆಗೆ ಗೌತಮಿ ಜಾದವ್. ಗೌತಮಿ ಅಸಲಿ ಆಟವನ್ನು ಈಗ ಶುರು ಮಾಡಿದ್ದಾರೆ. ಇವರ ಅಸಲಿ ಮುಖ ಈಗ ಕಾಣಿಸುತ್ತಿದೆ. ಒಂದು ವೇಳೆ ಗೌತಮಿ ಕ್ಯಾಪ್ಟನ್ ಆಗಿ ಇಲ್ಲದೇ ಇದ್ದಿದ್ದರೆ ನಾಮಿನೇಟ್ ಆಗುವ ಸಾಧ್ಯತೆ ಇತ್ತು. ಆದರೆ ಕ್ಯಾಪ್ಟನ್ ಆದ ಕಾರಣ ಅವರು ಪಾರಾಗಿದ್ದಾರೆ. ಈ ಮೂರು ಸ್ಪರ್ಧಿಗಳು ಬಿಟ್ಟರೆ ಈ ವಾರ ಯಾರೂ ಕೂಡ ಸೇಫ್ ಆಗಿಲ್ಲ. ಹಾಗಾದರೆ ಅನ್‌ಸೇಪ್ ಆಗಿರುವ ಸ್ಪರ್ಧಿಗಳು ಯಾರು? ಇವರಲ್ಲಿ ಡೇಂಜರ್ ಝೋನ್ ಅಲ್ಲಿ ಇರುವ ಸ್ಪರ್ಧಿಗಳು ಯಾರು ಎಂದು ತಿಳಿಯೋಣ.
ಬಿಗ್‌ಬಾಸ್ ಮನೆಯಲ್ಲಿ ಅನ್‌ಸೇಫ್ ಸ್ಪರ್ಧಿಗಳು: -
ಈ ವಾರ ತ್ರಿವಿಕ್ರಮ್, ರಜತ್, ಮಂಜು, ಶಿಶಿರ್, ಹನುಮಂತ, ಧನ್‌ರಾಜ್, ಭವ್ಯ, ಮೋಕ್ಷಿತಾ, ಚೈತ್ರಾ ಒಟ್ಟು ಒಂಬತ್ತು ಆಟಗಾರರು ನಾಮಿನೇಷನ್ ಆಗಿದ್ದಾರೆ. ಇದರಲ್ಲಿ ತ್ರಿವಿಕ್ರಮ್ ಮತ್ತು ರಜತ್ ಇವರಿಬ್ಬರು ಯಾವುದೇ ಕಾರಣಕ್ಕೂ ಔಟ್ ಆಗಲ್ಲ. ಇವರಿಬ್ಬರೂ ಏನಿಲ್ಲಾ ಅಂದ್ರೂ ಟಾಪ್ 5 ಅಲ್ಲಿ ಇರುವುದು ಪಕ್ಕಾ. ಹೀಗಾಗಿ ಇವರಿಬ್ಬರನ್ನು ಟಚ್ ಮಾಡಲ್ಲ ಅನ್ನೋ ಗ್ಯಾರಂಟಿ ಬಿಗ್‌ಬಾಸ್ ವೀಕ್ಷಕರಿಗಿದೆ.
ಇನ್ನೂ ಮಂಜು ಅವರು ಬಿಗ್‌ಬಾಸ್ ಮನೆಯ ಆಲ್‌ರೌಂಡರ್. ಎಂಟರ್ಟೈನ್‌ಮೆಂಟ್, ಗೇಮ್, ಫಿಸಿಕಲ್ ಟಾಸ್ಕ್ ಎಲ್ಲದರಲ್ಲೂ ಇವರು ಎತ್ತಿದ ಕೈ. ಹೀಗಾಗಿ ಇವರನ್ನು ಬಿಗ್‌ಬಾಸ್ ಮನೆಯಿಂದ ಕಳುಹಿಸುವ ಸಾಧ್ಯತೆ ಕಡಿಮೆ ಇದೆ. ಇನ್ನೂ ಶಿಶಿರ್ ವಿಚಾರ ಮಾತನಾಡುವುದಾದರೆ 50-50. ಶಿಶಿರ್ ಹೊರ ಹೋಗಬಹುದು ಹೋಗದೇ ಕೂಡ ಇರಬಹುದು.
ಇನ್ನೂ ಹನುಮಂತ ಮತ್ತು ಭವ್ಯ. ಇವರಿಬ್ಬರೂ ಸಹ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಹೋಗುವುದಿಲ್ಲ. ಯಾಕೆಂದರೆ ಟಾಸ್ಕ್ ಅಂತ ಬಂದರೆ ಇವರಿಬ್ಬರ ಪಫಾರ್ಮೆನ್ಸ್ ಚೆನ್ನಾಗಿರುತ್ತದೆ.
ಇನ್ನೂ ಧನ್‌ರಾಜ್, ಚೈತ್ರಾ ಮತ್ತು ಮೋಕ್ಷಿತಾ ಬಗ್ಗೆ ಹೇಳುವುದಾದರೆ, ಧನ್‌ರಾಜ್ ಹಾಗೂ ಚೈತ್ರಾಗೆ ಹೋಲಿಸಿಕೊಂಡರೆ ಮೋಕ್ಷಿತಾ ಟೂ ಬೆಸ್ಟ್. ಇದೀಗಾ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಮೋಕ್ಷಿತಾ. ಗೌತಮಿ ನೇರ ನಾಮಿನೇಷನ್ ಮಾಡದೇ ಇದ್ದಿದ್ದರೆ ಮೋಕ್ಷಿತಾ ಈ ವಾರ ಸೇಫ್ ಆಗ್ತಾಯಿದ್ದರು. ಆದರೂ ಮೋಕ್ಷಿತಾ ಉಳಿದುಕೊಂಡರೆ ಯಾವುದೇ ಅಚ್ಚರಿ ಇಲ್ಲ. ಇನ್ನುಳಿದ ಇಬ್ಬರು ಅಂದರೆ ಧನ್‌ರಾಜ್ ಹಾಗೂ ಚೈತ್ರಾ ಇವರಿಬ್ಬರಲ್ಲಿ ಒಬ್ಬರು ಹೋಗೋದು ಖಾಯಂ ಆಗಿದೆ. ಇದು ಧನ್‌ರಾಜ್‌ಗೂ ಗೊತ್ತಾಗಿದೆ. ಈ ಬಗ್ಗೆ ಹನುಮಂತ ಬಳಿ ಧನ್‌ರಾಜ್ ಹೇಳಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಮನೆಯಿಂದ ಹೊರಗಡೆ ಹೋಗೋದು ಖಾಯಂ ಆಗಿದೆ.
ಬಿಗ್‌ಬಾಸ್ ಮನೆ ಅಲ್ಲೋಲ ಕಲ್ಲೋಲ
ಬಿಗ್‌ಬಾಸ್ ಮನೆ ರಣರಂಗವಾಗಿ ಹೋಗಿದೆ. ಸಾಫ್ಟ್ ಆಗಿದ್ದ ಸ್ಪರ್ಧಿಗಳು ಕೆಣಕಿ ಮಾತನಾಡಲು ಶುರು ಮಾಡಿದ್ದಾರೆ. ವೈಲೆಂಟ್ ಆಗಿದ್ದ ಸ್ಪರ್ಧಿಗಳು ಕೈ ಕೈ ಮಿಲಾಸುವ ಮಟ್ಟಿಗೆ ಹೋಗಿದ್ದಾರೆ. ಇದರಿಂದಾಗಿ ಬಿಗ್‌ಬಾಸ್ ಮನೆ ಅಲ್ಲೋಲ ಕಲ್ಲೋಲವಾಗಿದೆ. ಇಂದು ಬಿಡುಗಡೆಯಾದ ವೀಡಿಯೋದಲ್ಲಿ ಧನ್‌ರಾಜ್ ಮೇಲೆ ರಜತ್ ಕೈ ಮಾಡಲು ಮುಂದಾಗಿದ್ದಾರೆ. ಇದು ನಿಜಕ್ಕೂ ಬಿಗ್‌ಬಾಸ್ ವೀಕ್ಷಕರಿಗೆ ಆತಂಕವನ್ನು ಸೃಷ್ಟಿಸಿದೆ.
ಹೌದು... ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು ಕೆಣಕಿಸಿ ಕೋಪ ನೆತ್ತಿಗೇರಿಸುವಂತೆ ಮಾತನಾಡುತ್ತಿದ್ದ ಲಾಯರ್ ಜಗದೀಶ್ ಹೊರಬಂದ ಬಳಿಕ ದೊಡ್ಮನೆ ಶಾಂತವಾಗಿತ್ತು. ಆದರೀಗ ಬಿಗ್‌ಬಾಸ್ ಮನೆಯ ವಾತಾವರಣ ಬದಲಾಗಿ ಹೋಗಿದೆ. ಗೋಲ್ಡ್ ಸುರೇಶ್ ಬಳಿಕ ರಜತ್ ಧನ್‌ರಾಜ್ ಮೇಲೆ ಕೈ ಮಾಡಲು ಮುಂದಾಗಿರುವುದು ಕಂಡು ಬಂದಿದೆ.
ಇಲ್ಲಿ ರಜತ್ ಕೋಪಕ್ಕೆ ಒಂದು ಕಾರಣ ಇದೆ. ಧನ್‌ರಾಜ್ ರಜತ್ ಅವರ ಕೆನ್ನೆಯನ್ನ ಮಗುವಿನಂತೆ ತಟ್ಟುವ ಬದಲು ಕೆಣಕಿಸುವ ರೀತಿ ತಟ್ಟಿದ್ದರು. ಆಗಲೂ ರಜತ್ ಧನ್‌ರಾಜ್ ಮೇಲೆ ಕೈ ಮಾಡಲು ಮುಂದಾಗಿದ್ದರು. ಆದರೆ ಇಂದು ನಾಮಿನೇಟ್ ಪ್ರಕ್ರಿಯೆಯಲ್ಲಿ ಧನ್‌ರಾಜ್ ರಜತ್ ಅವರನ್ನು ನಾಮಿನೇಟ್ ಮಾಡಿ, 'ನನಗೆ ಕೈ-ಕಾಲು ಮುರಿಯುತ್ತೇನೆ ಎಂದು ರಜತ್ ಹೇಳಿದ್ದಾರೆ' ಎನ್ನುವ ಕಾರಣವನ್ನು ಧನ್‌ರಾಜ್ ನೀಡಿದರು.
ಇದಕ್ಕೆ ತಿರುಗೇಟು ಕೊಟ್ಟ ರಜತ್ ನೀವು ಮಗುವಿನಂತೆ ನನ್ನ ಕೆನ್ನೆ ಮುಟ್ಟಲಿಲ್ಲ. ಅದು ನನಗೆ ಹೊಡೆದಂತೆ ಇತ್ತು. ಅವತ್ತೇ ನಾನು ನಿನಗೆ ಹೊಡೆಯಬೇಕಿತ್ತು ಎಂದರು. ಇದಕ್ಕೆ ಧನ್‌ರಾಜ್ ಈಗಲೂ ಹೊಡಿ ನೋಡೋಣ ಎಂದಿದ್ದಕ್ಕೆ ರಜತ್ ಕೋಪಗೊಂಡು ಹೊಡೆಯಲು ಮುಂದಾಗುತ್ತಾರೆ. ರಜತ್‌ಗೆ ಯಾವ ಮಟ್ಟಿಗೆ ಕೋಪ ಬರುತ್ತೆ ಅಂದರೆ ಭವ್ಯಾ ಗೌಡ ಅವರನ್ನೂ ತಳ್ಳಿ ಧನ್‌ರಾಜ್ ಅವರನ್ನು ಹೊಡೆಯಲು ಮುಂದಾಗುತ್ತಾರೆ. ಇಂದಿನ ಸಂಚಿಕೆಯಲ್ಲಿ ಇದೆಲ್ಲದಕ್ಕೆ ಇನ್ನಷ್ಟು ಮಾಹಿತಿ ಗೊತ್ತಾಗಲಿದೆ.
ಈ ಬಾರಿ ವಿನ್ನರ್ ರೇಸ್‌ನಲ್ಲಿ ಹನುಮಂತ
ಬಿಗ್‌ಬಾಸ್ ಮನೆಯಲ್ಲಿ ಈ ಬಾರಿ ಗಾಯಕ ಹನುಮಂತ ಭಾರೀ ಸದ್ದು ಮಾಡುತ್ತಿದ್ದಾರೆ. ಅವರ ಸರಳತೆ, ಮುಗ್ದತೆ ಬಿಗ್‌ಬಾಸ್ ವೀಕ್ಷಕರ ಮನಗೆದ್ದಿದೆ. ಮಾತನಾಡಬೇಕಾದಾಗ ಮಾತು, ಆಡಬೇಕಾದಾಗ ಆಟ, ಕಾಮಿಡಿ ಮಾಡುವಾಗ ಕಾಮಿಡಿ, ಹಾಡುವಾಗ ಹಾಡು ಹೇಳಿ ಬಿಗ್‌ಬಾಸ್ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಹೀಗಾಗಿ ಕಿತ್ತಾಡಿ ಹೊಡೆದಾಡಿ, ಪರಸ್ಪರ ಬೈದಾಡಿಕೊಂಡು ಆಟ ಆಡದೇ ಹೀಗೂ ಬಿಗ್‌ಬಾಸ್ ಮನೆಯಲ್ಲಿ ಆಟ ಆಡಬಹುದು ಎಂದು ತೋರಿಸಿಕೊಡುತ್ತಿರುವುದು ಹನುಮಂತ ಮಾತ್ರ.
ಇದು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಹೀಗಾಗಿ ಅವರಿಗೆ ಓಟ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಬಿಗ್‌ಬಾಸ್ ನೋಡುವ ಜನ ಹನುಮಂತನ ಹಾಡು ಮಾತ್ರ ಅಲ್ಲ ಅವರ ಆಟ ಶೈಲಿ ಕೂಡ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ವಿನ್ನರ್ ರೇಸ್‌ನಲ್ಲಿ ಟಾಪ್ 5ನೇ ಸ್ಪರ್ಧಿ ಹನುಮಂತ ಆಗುವುದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications