Aishwarya Shindogi: ನಾನು ಬಿಗ್‌ಬಾಸ್‌ ಮನೆಯಿಂದ ಹೊರ ಬಂದಿದ್ದಕ್ಕೆ ಜನ ಕಣ್ಣೀರು ಹಾಕಿದ್ದಾರೆ- ಐಶ್ವರ್ಯ ಸಿಂಧೋಗಿ

ಬಿಗ್‌ಬಾಸ್‌ ಮನೆಯಿಂದ ಈ ವಾರ ಐಶ್ವರ್ಯ ಸಿಂಧೋಗಿ ಅವರು ಹೊರಬಂದಿದ್ದಾರೆ. ಸತತ 90 ದಿನಗಳವರೆಗೆ ಐಶ್ವರ್ಯ ಬಿಗ್‌ಬಾಸ್‌ ಮನೆಯಲ್ಲಿ ಇದ್ದು ಚೆನ್ನಾಗಿ ಆಟ ಆಡಿ ಬಂದಿದ್ದಕ್ಕೆ ಭರ್ಜರಿ ಸ್ವಾಗತ ಅವರಿಗೆ ಸಿಕ್ಕಿದೆ. ಅವರ ಅಭಿಮಾನಿಗಳು ಐಶ್ವರ್ಯ ಅವರನ್ನು ತುಂಬು ಹೃದಯದಿಂದ ಸ್ವಾಗತಿಸಿ ಈವರೆಗೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದರಿಂದ ಐಶ್ವರ್ಯ ಅವರಿಗೆ ಗೆಲುವು ಸಾಧಿಸಿದಷ್ಟೇ ಖುಷಿಯಾಗಿದೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬಳಿಕ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಐಶ್ವರ್ಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಹೌದು... ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಐಶ್ವರ್ಯ ಅವರು ಮನೆಗೆ ತೆರಳಿದಾಗ ಅವರ ಮನೆಯ ಸುತ್ತಮುತ್ತಲಿನ ಜನ ಅದ್ದೂರಿಯಾಗಿ ಸ್ವಾಗತ ನೀಡಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮದಿಂದ ಸಿಹಿ ತಿನಿಸಿದ್ದಾರೆ. ತುಂಬಾ ಚೆನ್ನಾಗಿ ಆಡಿರುವುದಾಗಿ ಪ್ರಶಂಸಿಸಿದ್ದಾರೆ. ಅಲ್ಲದೆ ಐಶ್ವರ್ಯ ಅವರ ಮನೆಯ ಸುತ್ತಮುತ್ತಲಿನ ಜನ ಹಾಗೂ ಮಕ್ಕಳು ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಐಶ್ವರ್ಯ ಅವರನ್ನು ಕಂಡು ಕಣ್ಣೀರು ಹಾಕಿದ್ದಾರೆ. ಇದರಿಂದ ನನಗೆ ಗೆದ್ದಷ್ಟೇ ಖುಷಿಯಾಗಿದೆ. ಜನ ಹೊರಗಡೆ ನನ್ನ ಮೇಲೆ ತೂರಿದ ಪ್ರೀತಿ ಸಾಕಷ್ಟು ಖುಷಿ ತಂದಿದೆ ಎಂದು ಐಶ್ವರ್ಯ ಹೇಳಿಕೊಂಡಿದ್ದಾರೆ.

bigg boss people shed tears after i left the bigg boss house - aishwarya shindogi

ಬಿಗ್‌ಬಾಸ್‌ ಮನೆಯಲ್ಲಿ ಇರುವಾಗ ಐಶ್ವರ್ಯ ಅವರು ಮಿಸ್‌ ಮಾಡಿಕೊಂಡಿದ್ದು ಯಾರನ್ನ ಗೊತ್ತಾ? ಬಿಗ್‌ಬಾಸ್‌ ಮನೆಯಲ್ಲಿರುವಾಗ ಐಶ್ವರ್ಯ ಅವರು ತುಂಬಾ ಮಿಸ್ ಮಾಡಿಕೊಂಡಿದ್ದು ಸಿಂಭಾ(ನಾಯಿ)ನನ್ನು. ಜೊತೆಗೆ ಅವರು ಓಡಿಸುತ್ತಿದ್ದ್ ಕಾರನ್ನ. ಇದನ್ನು ಸ್ವತ: ಐಶ್ವರ್ಯ ಅವರೇ ಹೇಳಿಕೊಂಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಐಶ್ವರ್ಯ ಅವರಿಗೆ ತಂದೆ-ತಾಯಿ ಇಬ್ಬರೂ ಇಲ್ಲ. ಪ್ರಸ್ತುತ ಇವರಿಗೆ ಮನೆಯಲ್ಲಿ ತುಂಬಾ ಕ್ಲೋಸ್ ಆಗಿರುವವರು ಅಂದರೆ ಅದು ಇವರ ಸಾಕು ನಾಯಿ ಸಿಂಭಾ ಮಾತ್ರ. ನಾಯಿ ಕಂಡರೆ ಐಶ್ವರ್ಯ ಅವರಿಗೆ ತುಂಬಾ ಅಚ್ಚುಮೆಚ್ಚು. ಹೀಗಾಗಿ ಬಿಗ್‌ಬಾಸ್‌ ಮನೆಯಲ್ಲಿ ಇರುವ ಅಷ್ಟು ದಿನ ಐಶ್ವರ್ಯ ಅವರು ಸಿಂಭಾನನ್ನು ತುಂಬಾ ಮಿಸ್‌ ಮಾಡಿಕೊಂಡಿದ್ದಾರೆ.

ಹೋಗಿ ಬಾ ಮಗಳೆ- ಬಿಗ್‌ಬಾಸ್

13 ವಾರಗಳ ಕಾಲ ಟಫ್‌ ಸ್ಪರ್ಧೆ ಆಗಿದ್ದ ಐಶ್ ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಪೋಷಕರು ಇಲ್ಲದ ಐಶ್ವರ್ಯ ಅವರನ್ನು ಬಿಗ್‌ಬಾಸ್‌ ಕೂಡ ಭಾವುಕವಾಗಿ ಕಳುಹಿಸಿಕೊಟ್ಟಿದ್ದಾರೆ. 'ಹೋಗಿ ಬಾ ಮಗಳೆ' ಎನ್ನುವ ಮೂಲಕ ಐಶ್ವರ್ಯಾ ಅವರನ್ನು ಬಿಗ್‌ಬಾಸ್‌ ಇನ್ನಷ್ಟು ಎಮೋಷನಲ್ ಆಗಿಸಿದ್ದು ಕಂಡು ಬಂದಿದೆ.

bigg boss people shed tears after i left the bigg boss house - aishwarya shindogi

ಈ ವಾರ ಮನೆಯಿಂದ ಹೊರಬರಲು ಡೇಂಜರ್ ಝೋನ್‌ನಲ್ಲಿ ಐಶ್ವರ್ಯ ಮತ್ತು ಮೋಕ್ಷಿತಾ ಇದ್ದರು. ಅಂತಿಮವಾಗಿ ಐಶ್ವರ್ಯಾ ಎಮಿಲಿನೇಟ್ ಆದರು. ಬಿಗ್‌ಬಾಸ್‌ ಮನೆಯಿಂದ ಹೊರಗೆ ಬರುವುದಕ್ಕೂ ಮುನ್ನ ಐಶ್ವರ್ಯಗೆ ಒಂದು ಪತ್ರ ಬಂತು. ಆ ಪತ್ರ ಓದುತ್ತಿದ್ದಂತೆಯೇ ಐಶ್ವರ್ಯ ಅವರು ಕಣ್ಣೀರು ಹಾಕಲು ಆರಂಭಿಸಿದರು. ಲವ್‌ ಯೂ ಬಿಗ್‌ ಬಾಸ್ ಎಂದು ಐಶ್ವರ್ಯ ಸಿಂಧೋಗಿ ಹೇಳಿ ಮನೆಯಿಂದ ಹೊರಬಂದರು.

ಇನ್ನೂ ಮನೆಯಿಂದ ಹೊರಬಂದು ಸುದೀಪ್ ಜೊತೆ ಮಾತನಾಡಿದ ಐಶ್ವರ್ಯ,'ನನಗೆ ಇದು ಮನೆಯಂತೇ ಅನಿಸಿದೆ. ನನಗೆ ಒಂದು ಫ್ಯಾಮಿಲಿ ಸಿಕ್ಕಿದೆ. ನನಗೆ ಯಾರೂ ಇಲ್ಲ ಅನ್ನೋಥರ ಅನಿಸುತ್ತಿಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಐಶ್ವರ್ಯ ಹೇಳಿದ್ದಾರೆ. ಜೊತೆಗೆ ಸುದೀಪ್ ಅವರ ಜೊತೆಗೆ ಸಿನಿಮಾ ಮಾಡುವ ಆಸೆಯನ್ನು ಕೂಡ ಐಶ್ವರ್ಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಐಶ್ವರ್ಯ ಆಟದಲ್ಲಿ ಗೆದ್ದಿಲ್ಲ ಅನ್ನೋ ಫೀಲ್‌ಗಿಂತ ಮನೆಯ ಎಲ್ಲಾ ತನ್ನ ಕುಟುಂಬಸ್ಥರನ್ನು ಮಿಸ್‌ ಮಾಡಿಕೊಳ್ಳುತ್ತಿರುವುದು ಕಂಡು ಬಂತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+