Bigg Boss: ಉಗ್ರಂ ಮಂಜುಗೆ ಬೈದು ಬೆಂಡೆತ್ತಿದ ಕಿಚ್ಚ ಸುದೀಪ್!
ದಿನದಿಂದ ದಿನಕ್ಕೆ ಬಿಗ್‌ಬಾಸ್ ರಂಗೇರುತ್ತಿದೆ. ಇದೀಗ ವಾರಾಂತ್ಯ ಬಂದಿದ್ದು ಕಿಚ್ಚನ ಪಂಚಾಯಿತಿ ಕೂಡ ಶುರುವಾಗಿದೆ. ಕಿಚ್ಚ ಸುದೀಪ್ ಅವರು ಕೆಲ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಫೇವರ್ ಗೇಮ್ ಆಡಿದ್ದಕ್ಕೆ ಉಗ್ರಂ ಮಂಜು ಅವರಿಗೆ ಕಿಚ್ಚ ಸುದೀಪ್ ತರಾಟೆ ತೆಗೆದುಕೊಂಡಿದ್ದಾರೆ. ಹಾಗಾದರೆ ಉಗ್ರಂ ಮಂಜು ಯಾರ ಪರವಾಗಿ ಟಾಸ್ಕ್ ಆಡಿದರು? ಮಂಜು ಅವರು ಎಡವಿದ್ದು ಎಲ್ಲಿ? ಕಿಚ್ಚ ಸುದೀಪ್ ಬೈದಿದ್ದು ಯಾಕೆ ಇದೆಲ್ಲದರ ಬಗ್ಗೆ ತಿಳಿದುಕೊಳ್ಳೋಣ.
ಬಿಗ್‌ಬಾಸ್ ಈ ವಾರ ಬಿಗ್‌ಬಾಸ್ ಸಾಮ್ರಾಜ್ಯವಾಗಿತ್ತು. ಈ ಸಾಮ್ರಾಜ್ಯದ ಮಹಾರಾಜ ಉಗ್ರಂ ಮಂಜು ಆಗಿದ್ದರು. ಇದಕ್ಕೆ ತಕ್ಕ ನಟನೆಯನ್ನು ಕೂಡ ಮಂಜು ಮಾಡಿದರು. ಎಲ್ಲವೂ ಸರಿ ಹೋಗುತ್ತಿರುವಾಗ ಎಡವಟ್ಟು ಒಂದು ನಡೆದು ಹೋಯ್ತು. ಉಗ್ರಂ ಮಂಜು ಅವರು ತಮ್ಮ ಗೆಳತಿಯಾಗಿರುವ ಗೌತಮಿ ಅವರ ಪರವಾಗಿ ಆಟ ಆಡಿದ್ದಾರೆ.

ಬೇರೆಯವರಿಗೆ ಒಂದು ರೀತಿ ಹಾಗೂ ಗೌತಮಿ ಅವರಿಗೆ ಒಂದು ರೀತಿ ನೋಡಿದ್ದು ಈ ಆಟದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಮುಖ್ಯವಾಗಿ ಈ ಆಟದಲ್ಲಿ ಕ್ಯಾಪ್ಟನ್ ರೂಂಗೆ ಬೆಲೆ ಇರಲಿಲ್ಲ. ಗೌತಮಿ ಅವರು ಪ್ರತಿಯೊಂದು ವಿಚಾರಕ್ಕೂ ಕ್ಯಾಪ್ಟನ್ ರೂಂ ಒಳಗಡೆ ಇರುತ್ತಿದ್ದರು. ಟಾಸ್ಕ್‌ನಲ್ಲಿ ಮಹರಾಜ ಆಗಿರುವ ಮಂಜು ಅವರು ಮನೆಯ ಇತರ ಸ್ಪರ್ಧಿಗಳನ್ನು ಒಂದು ರೀತಿ ನಡೆಸಿಕೊಂಡರೆ ಗೌತಮಿ ಅವರನ್ನು ಇನ್ನೊಂದು ರೀತಿ ನಡೆಸಿಕೊಂಡಿರುವುದು ಇಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಸ್ವಲ್ಪ ಸ್ಪೆಷಲ್ ಟ್ರೀಟ್‌ಮೆಂಟ್ ಗೌತಮಿ ಅವರಿಗೆ ಬಿಗ್‌ಬಾಸ್ ಮನೆಯಲ್ಲಿ ಮಹಾರಾಜ ಮಂಜು ನೀಡಿದ್ದರು.
ಬಿಗ್‌ಬಾಸ್ ಮನೆಯ ಉಳಿದ ಸ್ಪರ್ಧಿಗಳಿಗೆ ಮಂಜು ಮಹಾರಾಜನಾಗಿ ವರ್ತಿಸಿದರೆ ಗೌತಮಿಯವರೊಂದಿಗೆ ಮಾತ್ರ ಸಲಿಗೆಯಿಂದ ವರ್ತಿಸಿದ್ದಾರೆ. ಅಂದರೆ ಅವರು ಬೇರೆಯವರೊಂದಿಗೆ ಮಹಾರಾಜರಾಗಿ ನಡೆದುಕೊಂಡರೆ ಗೌತಮಿಯವರೊಂದಿಗೆ ಸ್ನೇಹಿತನಂತೆ ನಡೆದುಕೊಂಡರು. ಹೀಗೆ ಗೌತಮಿಯವರ ವಿಚಾರಕ್ಕೆ ಮಾತ್ರ ಮಂಜು ಟಾಸ್ಕ್‌ಗೆ ನ್ಯಾಯವನ್ನು ಒದಗಿಸಿಲ್ಲ.
ಮಂಜು ಅವರು ಗೌತಮಿಯವರ ವಿಷಯದಲ್ಲಿ ಕಟುಕ ಮಹಾರಾಜನಾಗಿ ಇರಲಿಲ್ಲ. ಉಳಿದ ಎಲ್ಲಾ ಸದಸ್ಯರೊಂದಿಗೆ ಕಟುಕ ಮಹಾರಾಜನಾಗಿ ಇದ್ದರು. ಮಂಜು ಅವರ ಕಟುಕ ರಾಜನ ನಟನೆ ತುಂಬಾ ಉತ್ತಮವಾಗಿ ಇತ್ತು. ಆದರೆ ಗೌತಮಿಯವರ ವಿಚಾರದಲ್ಲಿ ಆ ಪಾತ್ರಕ್ಕೆ ಮಂಜು ಗೌರವ ತಂದುಕೊಟ್ಟಿಲ್ಲ. ರಾಜನಾಗಿದ್ದ ಮಂಜುಗೆ ಈ ಟಾಸ್ಕ್‌ನಲ್ಲಿ ಉಸ್ತುವಾರಿ ಟಾಸ್ಕ್ ಕೂಡ ಸಿಗುತ್ತದೆ. ಆಗಲೂ ಕೂಡ ಮಂಜು ತಾರತಮ್ಯ ಮಾಡಿದ್ದು ಕಂಡು ಬಂದಿದೆ.
ಈ ಟಾಸ್ಕ್‌ನಲ್ಲಿ ಮಣ್ಣಿನ ಪ್ರತಿಮೆಯನ್ನು ಗೌತಮಿ ಹಾಗೂ ಐಶ್ವರ್ಯ ಅವರು ತಯಾರಿಸುತ್ತಾರೆ. ಆದರೆ ಟಾಸ್ಕ್ ಇದ್ದಿದ್ದು ಮೇಜಿನ ಮೇಲೆ ಮಣ್ಣಿನ ಪ್ರತಿಮೆ ಇಡಬೇಕು. ಮೇಜಿನ ಮೇಲೆ ಮಣ್ಣಿನ ಪ್ರತಿಮೆ ತಯಾರಿಸಬೇಕೆಂದು. ಆದರೆ ಆರಂಭದಲ್ಲೇ ಗೌತಮ್ ಹಾಗೂ ಐಶ್ವರ್ಯ ಅವರು ಟೇಬಲ್ ಕೆಳಗೆ ಮಣ್ಣಿನ ಅಸ್ತ್ರ ತಯಾರಿಸುತ್ತಿದ್ದರು. ಹೀಗಿದ್ದರೂ ಮಂಜು ಅವರಿಗೆ ಏನನ್ನೂ ಹೇಳುವುದಿಲ್ಲ.
ಹೀಗಾಗಿ ಮೋಕ್ಷಿತಾ ತಂಡದವರೂ ಕೂಡ ಮೇಜಿನ ಮೇಲೆ ಮಣ್ಣಿನ ಅಸ್ತ್ರ ತಯಾರಿಸುತ್ತಿದ್ದವರು ಮೇಜಿನ ಕೆಳಗೆ ಕುಳಿತು ಅಸ್ತ್ರವನ್ನು ತಯಾರಿಸಲು ಮುಂದಾಗುತ್ತಾರೆ. ಇದೆಲ್ಲಾ ಆದ ಬಳಿಕ ಗೌತಮಿಯವರು ಬಝರ್ ಆದ ನಂತರ ಮಣ್ಣಿನ ಅಸ್ತ್ರವನ್ನು ತಯಾರಿಸಿ ಇಡುತ್ತಾರೆ. ಉಸ್ತುವಾರಿಯಾಗಿ ಮಂಜಣ್ಣ ಇದನ್ನು ಗಮನಿಸಲೇ ಇಲ್ಲ. ಕ್ಲಿಯರ್ ಆಗಿ ಎದುರಾಳುಗಳಿಯನ್ನು ಸೋಲಿಸಬೇಕು ಅನ್ನೋದೇ ಅವರ ಗುರಿಯಾಗಿತ್ತೇ ವಿನ: ತಮ್ಮ ತಂಡದಲ್ಲಿ ಗೌತಮಿ ಮಾಡುವ ತಪ್ಪುಗಳನ್ನು ಅವರು ಗಮನಿಸಲೇ ಇಲ್ಲ.
ಅಲ್ಲದೆ ನಾಮಿನೇಟ್ ಕೂಡ ಫೇವರ್ ಆಗಿ ಮಾಡಲಾಗಿದೆ. ನಾಮಿನೇಷನ್‌ಗೆ ಸ್ಟ್ರಾಂಗ್ ರೀಸನ್ ತೆಗೆದುಕೊಳ್ಳದೇ ತಮಗೆ ಬೇಡ ಆದವರ ಹೆಸರನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಇಂದು ಕಿಚ್ಚ ಸುದೀಪ್ ಅವರು ಉಗ್ರಂ ಮಂಜು ಅವರಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಂದಿನ ಸಂಚಿಕೆಯಲ್ಲಿ ಸುದೀಪ್ ಮಂಜು ಅವರಿಗೆ ಏನು ಹೇಳಿದ್ರು? ಅದಕ್ಕೆ ಮಂಜು ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications