ಹೇ ಗಿಲ್ಲಿ ನನ್ನತ್ರ ಆಟ ಆಡಬೇಡ... ಮಲ್ಲಮ್ಮ & ಗಿಲ್ಲಿ ನಡುವೆ ವಾರ್ ಶುರು! Bigg Boss
ಕನ್ನಡ ಬಿಗ್‌ಬಾಸ್ ಮನೆಯಲ್ಲಿ ನೂರಾರು ಸ್ಪರ್ಧಿಗಳು ಬಂದು ಹೋಗಿದ್ದಾರೆ. ಆದರೆ ಮಲ್ಲಮ್ಮ ರೀತಿ ಸ್ಪರ್ಧಿ ಹೊಸ ಹುಮ್ಮಸ್ಸು ತುಂಬುತ್ತಿದ್ದು, ತಮ್ಮ ಮುಗ್ಧತೆ ಮೂಲಕವೇ ಕನ್ನಡಿಗರ ಮನಸ್ಸು ಗೆದ್ದಿದ್ದರು. ಹೀಗೆ ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಮಲ್ಲಮ್ಮ ಇದೀಗ ಕನ್ನಡ ಬಿಗ್‌ಬಾಸ್ ಮನೆಯಲ್ಲಿ ಫುಲ್ ವೈಲೆಂಟ್ ಆಗುವ ಮೂಲಕ ತಮ್ಮ ಇನ್ನೊಂದು ಮುಖ ತೋರಿಸಿದ್ದಾರೆ. ಈ ಮೂಲಕ, ಹೇ ಗಿಲ್ಲಿ ನನ್ನತ್ರ ಆಟ ಆಡಬೇಡ... ಮಲ್ಲಮ್ಮ & ಗಿಲ್ಲಿ ನಡುವೆ ವಾರ್ ಶುರು!
ಕನ್ನಡ ಬಿಗ್‌ಬಾಸ್ ಕಾರ್ಯಕ್ರಮ ಮತ್ತೊಮ್ಮೆ ಜತ್ತಿನಾದ್ಯಂತ ಸೌಂಡ್ ಮಾಡಿ, ಕೋಟಿ ಕೋಟಿ ಜನರ ಮನಸ್ಸು ಗೆಲ್ಲಲು ಬಂದಿದೆ. ಅದರಲ್ಲೂ ಕನ್ನಡ ಬಿಗ್‌ಬಾಸ್ ಸೀಸನ್ 12 ನೋಡೋಕೆ ಕನ್ನಡಿಗರು ಕೂಡ ಕಾತರದಿಂದ ಕಾಯುತ್ತಿದ್ದರು. ಯಾರೆಲ್ಲಾ ಬಿಗ್‌ಬಾಸ್ ಸೀಸನ್ 12 ಮನೆಗೆ ಎಂಟ್ರಿ ಕೊಟ್ಟು ಸೌಂಡ್ ಮಾಡ್ತಾರೆ? ಅನ್ನೋ ಚರ್ಚೆ ಕೂಡ ಜೋರಾಗಿತ್ತು. ಹೀಗಿದ್ದಾಗ ಬಿಗ್‌ಬಾಸ್ ಮನೆಯಲ್ಲಿ ದಿಢೀರ್ ಮಲ್ಲಮ್ಮ & ಗಿಲ್ಲಿ ನಡುವೆ ದೊಡ್ಡ ಗಲಾಟೆ ನಡೆದು ಹೋಗಿದೆ.

ಮಲ್ಲಮ್ಮ & ಗಿಲ್ಲಿ ನಡುವೆ ವಾರ್!
ಹೌದು, ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಡಬಲ್ ಗೇಮ್ ಆಡಿದ್ದಾರೆ ಅಂತಾ ಈಗ ದಿಢೀರ್ ಮಲ್ಲಮ್ಮ ಅವರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಈ ವಿಚಾರ ಬಂದಾಗ ಇಬ್ಬರ ನಡುವೆ ದೊಡ್ಡ ಕಿರಿಕ್ ಕೂಡ ಆಗಿ ಹೋಗಿದೆ. ಇದೇ ವೇಳೆ ಗಿಲ್ಲಿಗೆ ನೇರವಾಗಿ ವಾರ್ನಿಂಗ್ ಕೊಟ್ಟಿರುವ ಮಲ್ಲಮ್ಮ, ನನ್ನ ಹತ್ತಿರ ಇದೆಲ್ಲಾ ಬೇಡ ಅಂತಾ ಕೂಡ ಎಚ್ಚರಿಸಿದ್ದಾರೆ. ಈ ವಿಡಿಯೋ ನೋಡಿ ವೀಕ್ಷಕರು ಕೂಡ ಅಬ್ಬಬ್ಬಾ ಮಲ್ಲಮ್ಮ ಅವರಿಗೂ ಕೋಪ ಬರುತ್ತಾ? ಅಂತಾ ಚರ್ಚೆ ನಡೆಸುತ್ತಿದ್ದಾರೆ.
ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ವಿವಿಧ ಭಾಷೆ ಪ್ರೇಕ್ಷಕರು ಕೂಡ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಇಷ್ಟಪಟ್ಟು ನೋಡುತ್ತಾರೆ. ಹೀಗಾಗಿ ಟಿಆರ್‌ಪಿ ವಿಚಾರದಲ್ಲಿ ಕೂಡ ಬಿಗ್‌ಬಾಸ್ ಕನ್ನಡ ಇತಿಹಾಸವನ್ನೇ ಬರೆದಿದೆ. ಅದರಲ್ಲಿಯೂ ಕನ್ನಡ ಬಿಗ್‌ಬಾಸ್ ಸೀಸನ್ 12 ಮತ್ತಷ್ಟು ನಿರೀಕ್ಷೆಗಳ ಭಾರವನ್ನೇ ಹೊತ್ತುಕೊಂಡು ಬಂದಿದೆ. ಈ ಸಮಯದಲ್ಲೇ ಸಾಮಾನ್ಯ ಜನರಿಗೆ ಕೂಡ ಭರ್ಜರಿ ಮನರಂಜನೆ ಇದೀಗ ಸಿಗುತ್ತಿದೆ. ಹಾಗೇ ಮುಂದಿನ ದಿನಗಳಲ್ಲಿ ಇನ್ನೂ ಹಲವು ತಿರುವುದು ಪಡೆಯುವುದು ಕೂಡ ಗ್ಯಾರಂಟಿ ಆಗಿದ್ದು, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿರುವ ಸ್ಪರ್ಧಿಗಳು ಹವಾ ಎಬ್ಬಿಸಿದ್ದಾರೆ.












Click it and Unblock the Notifications