ಬಿಗ್‌ ಬಾಸ್‌ ಮನೆಯಲ್ಲಿ ಒಬ್ಬ ಅಪ್ಪನಿಗೆ ಹುಟ್ಟಿದ್ರೆ.. ಅಂದಿದ್ದ ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್‌ ಹಿಗ್ಗಾಮುಗ್ಗಾ ಕ್ಲಾಸ್‌.

Bigg Boss Kannada: ಕನ್ನಡ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದಾಗಿದೆ. 11ನೇ ಸೀಸನ್‌ನ ಆರಂಭದಲ್ಲೇ ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಸಖತ್ ಸದ್ದು ಮಾಡಿದ್ದರು. ಆದರೆ, ಅವಾಚ್ಯ ಶಬ್ಧಗಳನ್ನು ಬಳಸಿದ್ದರಿಂದ ಅವರನ್ನು ಹೊರಹಾಕಲಾಯಿತು. ಇನ್ನು ಜಗದೀಶ್‌ ಅವರನ್ನು ತಳ್ಳಿದ ಹಿನ್ನೆಲೆ ರಂಜಿತ್‌ ಹೊರಬಿದ್ದರು. ಇದರ ಬೆನ್ನಲ್ಲೇ ಚೈತ್ರಾಗೆ ಸುದೀಪ್‌ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅವಾಚ್ಯ ಶಬ್ಧಗಳನ್ನು ಬಳಸಿದ್ದಾರೆ ಎನ್ನುವ ಕಾರಣಕ್ಕೆ ಲಾಯರ್‌ ಜಗದೀಶ್‌ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಹೊರಹಾಕಲಾಯಿತು. ಬಳಿಕ ಜಗದೀಶ್‌ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೂಗುಗಳು ಎದ್ದವು. ಜಗದೀಶ್‌ ಅವರನ್ನು ಕೆಟ್ಟ ಪದಗಳನ್ನು ಬಳಸಿದ್ದಾರೆ ಎಂದು ಹೊರಗಡೆ ಹಾಕಿದ್ದೀರ. ಹಾಗಾದರೆ, ಚೈತ್ರಾ ಕುಂದಾಪುರ ಹಾಗೂ ಮಾನಸ ಅವರು ಕೂಡ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅವರಿಬ್ಬರನ್ನು ಯಾಕೆ ಹೊರಗಡೆ ಹಾಕಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದರು.

Bigg Boss Kannada Actor Kiccha Sudeep warns to Chaithra Kundapura video viral

ಇದರ ಬೆನ್ನೆಲ್ಲೇ ಇದೀಗ ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ಮನೆ ಮಂದಿಗೆಲ್ಲ ಕ್ಲಾಸ್‌ ತೆಗೆದುಕೊಂಡಿರುವ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ. "ನಿಮ್‌ಗಳಲ್ಲಿ ಎಷ್ಟು ಜನ ಸರಿ ಇದ್ದೀರಿ? ಒಬ್ಬರು ಚಪ್ಪಲಿ ಎತ್ತಿ ಬೀಸಾಡುತ್ತಿದ್ದಾರೆ ಅಂದರೆ, ಅದು ಒಕೆನಾ.? ಎಂದು ಉಗ್ರಂ ಮಂಜು ವಿರುದ್ಧ ಕೆಂಡಕಾರಿದ್ದಾರೆ. ಇನ್ನಯ ಪ್ರಾಮಾಣಿಕ ಅನ್ನೋ ಪದ ಈ ಮನೆಗೆ ಸೂಕ್ತ ಆಗೋದಿಲ್ಲ," ಎಂದು ಹಂಸಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮಾನಸ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು?: ಇನ್ನು "ಕೆಟ್ಟ ಮಾತುಗಳಿಂದಲೇ ಒಬ್ಬ ವ್ಯಕ್ತಿ ಹೊರಗಡೆ ಹೋದ ಎಂದರೆ, ನೀವು ಮಾತನಾಡಿರುವ ತಪ್ಪು ಮಾತುಗಳನ್ನು ಇಟ್ಟುಕೊಂಡು ನಿಮ್ಮನ್ನ ಯಾಕೆ ಒಳಗಡೆ ಇಟ್ಟುಕೊಳ್ಳಬೇಕು, ಎಂದು ತುಕಾಲಿ ಸಂತೋಷನ ಪತ್ನಿ ಮಾನಸಗೆ ಕಿಚ್ಚ ಸುದೀಪ್‌ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಚೈತ್ರಾಗೆ ಹಿಗ್ಗಾಮುಗ್ಗಾ ತರಾಟೆ: "ಚೈತ್ರಾ ಅವರೇ.. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಹೇಳಿತ್ತೀರ. ಆದರೆ, ಒಬ್ಬ ಅಪ್ಪನಿಗೆ ಹುಟ್ಟಿದ್ರಿ ಅಂದ್ರೆ, ಯಾವ ನನ್‌ ಮಗನೂ ಅಪ್ಪನಿಗೆ ಬಯ್ಯುತ್ತಿರೋದಲ್ಲ ಮೇಡಂ.. ನೀವು ತಾಯಿಗೆ ಬಯುತ್ತಿರೋದು," ಎಂದು ಚೈತ್ರಾ ಕುಂದಾಪುರ್ ಅವರಿಗೆ ಖಡಕ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ನನ್ನ ಮುಂದೆ ಬಂದ್‌ ಮಾತನಾಡಲಿ ಎಂದು ಚೈತ್ರಾ ಕುಂದಾಪುರ್ ಜಗದೀಶ್‌ ಅವರಿಗೆ ಹೇಳಿದ ಮಾತಿಗೆ ಕಿಚ್ಚನ ಖಡಕ್‌ ತಿರುಗೇಟು ಇದು.

ಲಾಯರ್‌ ಜಗಗೀಶ್‌ ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದ ಮೇಲೆ. ಬಿಗ್‌ ಬಾಸ್‌ ತೆಗೆದುಕೊಂಡಿರುವ ನಿರ್ಧಾರ ಸರಿಯಿಲ್ಲ ಎಂದು ಪ್ರೇಕ್ಷಕರು ಕೆಂಡಕಾರುತ್ತಿದ್ದಾರೆ. ಇನ್ನು ಜಗದೀಶ್‌ ಹೋದಮೇಲೆ ದೊಡ್ಮನೆಯಲ್ಲಿ ಉಳಿದ ಸ್ಪರ್ಧಿಗಳೆಲ್ಲ ಕುಣಿದು ಕುಪ್ಪಳಿಸಿದ್ದರು. ಆದರೆ ಇದಕ್ಕೆ ಇದೀಗ ಕಿಚ್ಚ ಸುದೀಪ್‌ ಅವರು ಇಡೀ ಮನೆ ಮಂದಿಗೆಲ್ಲ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಕೆಟ್ಟ ಪದಗಳ ಬಳಕೆ ಹಿನ್ನೆಲೆ ಲಾಯರ್‌ ಜದೀಶ್‌ ಹೊರಗಡೆ ಹೋದರೆ, ಜಗದೀಶ್‌ ಅವರಿಗೆ ತಳ್ಳಿದ್ದಕ್ಕೆ ರಂಜಿತ್‌ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಹಾಕಾಲಾಗಿದೆ. ಇದರ ಬೆನ್ನಲ್ಲೇ ಚೈತ್ರಾ ಕುಂದಾಪುರ ಅವರು ಬಿಗ್‌ ಬಾಸ್‌ ಮೆನೆಯಲ್ಲಿನ ಜೈಲು ಸೇರಿದ್ದಾರೆ. ಪ್ರತಿ ​ಸೀಸನ್‌​ನಲ್ಲೂ ಜೈಲು ಇಡಲಾಗುತ್ತದೆ.

ಕಳಪೆ ಕಾರಣ ನೀಡಿ ಪ್ರತಿ ವಾರ ಒಬ್ಬರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈ ಬಾರಿ ಸ್ವಲ್ಪ ಬದಲಾವಣೆ ತರಲಾಗಿದೆ. ಅಪ್ರಾಮಣಿಕ ಹಾಗೂ ಕುತಂತ್ರಿ ಯಾರು ಎಂದು ಸೂಚಿಸಬೇಕು ಮತ್ತು ಅದಕ್ಕೆ ಸೂಕ್ತ ಕಾರಣ ನೀಡಬೇಕು. ಅಂತಿಮವಾಗಿ ಯಾರ ಬಳಿ ಹೆಚ್ಚು ಹಣೆಪಟ್ಟಿ ಇರುತ್ತದೆಯೋ ಅವರು ಜೈಲು ಸೇರಬೇಕು. ಇದರ ಅನುಸಾರ ಚೈತ್ರಾ ಕುಂದಾಪುರ ಅವರು ಅತೀ ಹೆಚ್ಚು ಹಣೆಪಟ್ಟಿ ಪಡೆದುಕೊಂಡಿರುವ ಹಿನ್ನೆಲೆ ಅವರು ಜೈಲು ಸೇರಿದ್ದಾರೆ.

ಅವರು ಜೈಲಿಗೆ ಕಾಲಿಡುವಾಗ, ನನಗೆ ಖಾಸಗಿತನ ಸಿಗುತ್ತದೆ. ಇಲ್ಲೆಲ್ಲ ನಿಮ್ಮ ಮುಖ ನೋಡಿ ಸಾಕಾಗಿದೆ ಎಂದು ಹೇಳುವ ಮೂಲಕ ಸಂತಸಪಡುತ್ತಾರೆ. ಇನ್ನು ಚೈತ್ರಾ ಕುಂದಾಪುರ ಅವರು ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷಯೊಡ್ಡಿ 5,00,00,000 ರೂಪಾಯಿ ಹಣ ಪಡೆದ ಆರೋಪವನ್ನು ಹೊತ್ತಿದ್ದು, ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದು, ಪ್ರಕರಣದಲ್ಲಿ ಅವರು ಜೈಲು ಸೇರಿ ಬಂದಿದ್ದಾರೆ. ಆದರೆ ಇದೀಗ ಅವರೇ ಹೇಳುವ ಪ್ರಕಾರ, ಬಿಗ್ ಬಾಸ್ ಮನೆಯೂ ಜೈಲಿನ ಅನುಭವ ಸಿಕ್ಕಿತೇ ಎನ್ನುವ ಪ್ರಶ್ನೆಗಳು ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+