Bigg Boss: ಹನುಮಂತನಿಗೆ ಅವಮಾನ ಮಾಡಿದ ಹಳೆಯ ಸ್ಪರ್ಧಿಗಳು
ಕಳೆದ ದಿನ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಎಲಿಮಿನೇಟ್ ಆದ ಹಳೆಯ ಸ್ಪರ್ಧಿಗಳು ಆಗಮಿಸಿದ್ದರು. ಶಿಶಿರ್ ಶಾಸ್ತ್ರಿ, ಹಂಸಾ, ಯಮುನಾ ಶ್ರೀನಿಧಿ, ಅನುಷಾ ರೈ, ರಂಜಿತ್, ಗೋಲ್ಡ್ ಸುರೇಶ್, ಮಾನಸ ತುಕಾಲಿ ಹೀಗೆ ಒಟ್ಟು ಏಳು ಜನ ಹಳೆಯ ಸ್ಪರ್ಧಿಗಳು ದೊಡ್ಮನೆಗೆ ಆಗಮಿಸಿ ದೊಡ್ಡ ದೊಡ್ಡ ಮಾತುಗಳನ್ನು ಆಡಿದ್ದಾರೆ. ಈ ಮಾತುಗಳನ್ನ ಕೇಳಿ ಕೆಲ ಬಿಗ್‌ಬಾಸ್ ವೀಕ್ಷಕರ ಕಣ್ಣು ಕೆಂಪಾಗಿದೆ. ವಿಶೇಷವಾಗಿ ಹನುಮಂತನಿಗೆ ಹಳೆಯ ಸ್ಪರ್ಧಿಗಳು ಅವಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಯಾರು ಏನಂದರು? ಹನುಮಂತನಿಗೆ ಅವಮಾನ ಮಾಡಿದ್ದು ನಿಜನಾ? ಎಲ್ಲವನ್ನೂ ಕಂಪ್ಲೀಟ್ ಆಗಿ ತಿಳಿಯೋಣ.
ಬಿಗ್‌ಬಾಸ್ ಮನೆಗೆ ಆಗಮಿಸಿದ ಹಳೆಯ ಸ್ಪರ್ಧಿಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ವಿಶೇಷವಾಗಿ ಗೋಲ್ಡ್ ಸುರೇಶ್ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ. ಸುರೇಶ್ ನೇರವಾಗಿ ಪ್ರಶ್ನೆ ಮಾಡಿ, ಭವ್ಯಾ ಗೌಡ ನಿಮಗೆ ತ್ರಿವಿಕ್ರಮ್ ಪ್ರಪೋಸ್ ಮಾಡಿದ್ದಾರಾ? ಎಂದು ಕೇಳುತ್ತಾರೆ. ಆಗ ಭವ್ಯಾ ಹೌದು ಎಂದು ಹೇಳುತ್ತಾರೆ. ಹಾಗಾದರೆ ನೀವಿಬ್ಬರು ಹೊರ ಬಂದ ಮೇಲೆ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ ಎಂದು ಗೋಲ್ಡ್ ಸುರೇಶ್ ಕಾಮಿಡಿ ಮಾಡಿದ್ದಾರೆ.
ಇದಕ್ಕೆ ಭವ್ಯಾ ನಾನು ಇನ್ನೂ ಮೂರು ವರ್ಷ ಮದುವೆ ಆಗಲ್ಲ ಎಂದು ಹೇಳಿದ್ದಾರೆ. ಆದರೀಗ ಇದಲ್ಲ ವಿಷಯ. ಹನುಮಂತ ಅವರಿಗೆ ಮಾನಸಾ ತುಕಾಲಿ ಹಾಗೂ ಶಿಶಿರ್ ಶಾಸ್ತ್ರಿ ಅವರು ಅವಮಾನ ಮಾಡಿದರು ಎಂದು ಹೇಳಲಾಗುತ್ತಿದೆ. ಬಿಗ್‌ಬಾಸ್ ವೀಕ್ಷಕರಿಗೆ ಈ ರೀತಿ ಅನಿಸಿದ್ದು ಯಾಕೆ? ಬಿಗ್‌ಬಾಸ್ ಮನೆಯಲ್ಲಿ ಏನಾಯ್ತು?

ದೊಡ್ಮನೆಗೆ ಬಂದು ದೊಡ್ಡ ಮಾತು ಹೇಳಿದ ಮಾನಸಾ ತುಕಾಲಿ
ಬಿಗ್‌ಬಾಸ್ ಮನೆಗೆ ಆಗಮಿಸಿದ ಮಾನಸಾ ಹನುಮಂತ ಅವರಿಗೆ, 'ನೀನು ನನ್ನ ಎಲ್ಲೋ ಇಡುತ್ತೇನೆ, ಎಲ್ಲೋ ಇಡುತ್ತೇನೆ ಎಂದು ಹೇಳಿ. ಬಿಗ್‌ಬಾಸ್‌ಯಿಂದ ಹೊರಗಡೆ ಇಟ್ಟುಬಿಟ್ಟೆ' ಎಂದು ಹೇಳುತ್ತಾರೆ. ಇದು ನಿಜವಾಗಲೂ ದೊಡ್ಡ ಮಟ್ಟದ ಹೇಳಿಕೆ. ಯಾಕೆಂದರೆ ಹನುಮಂತನಿಗೆ ದುರ್ಬುದ್ಧಿ ಇಲ್ಲ. ಇಂತಹ ಮಾತಿಗೆ ಹನುಮಂತ ಸರಿಹೊಂದುವ ವ್ಯಕ್ತಿ ಕೂಡ ಅಲ್ಲ. ಈ ಒಂದು ಹೇಳಿಕೆ ಹನುಮಂತನ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಹನುಮಂತ ಮುಗ್ಧ ಹಾಗೂ ಎಲ್ಲರ ಏಳಿಗೆ ಬಯಸುವಂತಹ ಹುಡುಗ. ಮಾನಸಾ ಅವರ ಈ ಹೇಳಿಕೆಯಿಂದ ಹನುಮಂತನಿಗೂ ಬೇಸರವಾಗಿದೆ. ಮಾನಸಾ ಅವರು ಈ ಮಾತನ್ನು ಗಂಭೀರವಾಗಿ ಹೇಳಿ, ಅದನ್ನು ಕಾಮಿಡಿಯಾಗಿಸಲು ಪ್ರಯತ್ನ ಪಡುತ್ತಾರೆ. ಆದರೆ ಅದು ವರ್ಕೌಟ್ ಆಗಲ್ಲ. ಇದು ಹನುಮಂತನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಹನುಮಂತನಿಗೆ ಅವಮಾನ ಮಾಡಿದ ಶಿಶಿರ್ ಶಾಸ್ತ್ರಿ
ಇನ್ನೂ ಶಿಶಿರ್ ಶಾಸ್ತ್ರಿ ಕೂಡ ಮನೆಯಲ್ಲಿ ಯಾರದ್ದು ಇದ್ದು ಫಿನಾಲೆ ಟಿಕೆಟ್ ಎಂದು ಕೇಳಿ ಅದು ಹನುಮಂತದ್ದು ಎಂದು ಗೊತ್ತಾದಾಗ ತುಂಬಾ ಅಚ್ಚರಿ ಎಂಬಂತೆ ನಟಿಸುತ್ತಾರೆ. ಇವರು ಹೊರಗಡೆ ಬಿಗ್‌ಬಾಸ್ ಎಪಿಸೋಡ್ ನೋಡೇ ಇಲ್ಲ ಅನ್ನೋ ತರ ಬಿಲ್ಡ್‌ಪ್ ಕೊಡುತ್ತಾರೆ. ಹನುಮಂತ ಫಿನಾಲೆಗೆ ಹೋಗಿದ್ದಾರೆ ಎಂದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ಹೀಗಿರುವಾಗ ಶಿಶಿರ್ ಶಾಸ್ತ್ರಿಗೆ ಗೊತ್ತಿಲ್ವಾ ಎಂದು ಬಿಗ್‌ಬಾಸ್ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಇಷ್ಟೊಂದು ಬಿಲ್ಡ್‌ಪ್ ಬೇಡ ಆಗಿತ್ತು ಎಂದು ಹನುಮಂತನ ಅಭಿಮಾನಿಗಳು ಹೇಳುತ್ತಿದ್ದಾರೆ. ಜೊತೆಗೆ ಇದು ಶಿಶಿರ್ ಹನುಮಂತನಿಗೆ ಮಾಡಿದ ಅವಮಾನ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಯಾಕೆಂದರೆ ಬಿಗ್‌ಬಾಸ್ ಮನೆಯಿಂದ ಹೊರ ಹೋಗಿರುವ ಪ್ರತಿಯೊಬ್ಬ ಸ್ಪರ್ಧಿಗಳು ಬಿಗ್‌ಬಾಸ್ ಅನ್ನು ನೋಡುತ್ತಲೇ ಇರುತ್ತಾರೆ. ಅವರು ಹೊರ ಬಂದ ಮೇಲೆ ಸಾಕಷ್ಟು ಸಂದರ್ಶನದಲ್ಲಿ ಭಾಗಿ ಕೂಡ ಆಗಿರುತ್ತಾರೆ. ಹೀಗಿರುವಾಗ ಶಿಶಿರ್ ಬಿಗ್‌ಬಾಸ್ ಅನ್ನು ವೀಕ್ಷಣೆ ಮಾಡದೇ ಬಿಗ್‌ಬಾಸ್ ಮನೆಗೆ ಬಂದ್ರಾ? ಎಂದು ಜನ ಪ್ರಶ್ನೆ ಹಾಕುತ್ತಿದ್ದಾರೆ.
ನಿಜ ಹೇಳಬೇಕು ಅಂದರೆ ಇದೆಲ್ಲಾ ಹನುಮಂತನಿಗೆ ಬೇಕೇ ಆಗಿಲ್ಲ. ಹನುಮಂತ ಇದಕ್ಕೆಲ್ಲ ತಲೆ ಕೂಡ ಕೆಡಿಸಿಕೊಳ್ಳುವುದಿಲ್ಲ. ಯಾರು ಏನೇ ಅಂದರೂ ಕೂಡ ತಾನಾಯ್ತು ತನ್ನ ಆಟ ಆಯ್ತು ಅಂತ ಸುಮ್ಮನಿರುತ್ತಾರೆ. ಹೀಗಿರುವಾಗ ಶಿಶಿರ್ ಓವರ್ ಬಿಲ್ಡ್‌ಪ್ ನೋಡಿ ಹನುಮಂತನ ಅಭಿಮಾನಿಗಳು ಕಿಡಿ ಕಾರಿದ್ದಾರೆ.
ಹನುಮಂತನನ್ನು ಕಂಡರೆ ಯಾಕಿಷ್ಟು ತಾತ್ಸಾರ?
ಅಷ್ಟಕ್ಕೂ ಹನುಮಂತನನ್ನು ಕಂಡರೆ ಯಾಗಿಷ್ಟು ಹೊಟ್ಟೆ ಉರಿ? ಹನುಮಂತ ಈ ಬಾರಿ ಫಿನಾಲೆ ತಲುಪುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಫಿನಾಲೆ ಟ್ರೋಫಿ ಹಿಡಿಯುವ ಕೈ ಹನುಮಂತನದ್ದೇ ಎನ್ನುವ ಅಭಿಪ್ರಾಯ ಬಿಗ್‌ಬಾಸ್ ವೀಕ್ಷಕರಿಗಿದೆ. ಅಲ್ಲದೆ ಹನುಮಂತನ ಆಟದ ವೈಖರಿ ಎಲ್ಲವೂ ಕೂಡ ಜನ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಗೆಲುವು ಸಾಧಿಸುವುದು ಹನುಮಂತನೇ ಎಂದು ಹೇಳಲಾಗುತ್ತಿದೆ.
ಒಂದೆಡೆ ತ್ರಿವಿಕ್ರಮ್ ಕೂಡ ಗೆಲ್ಲುವ ಸುಳಿವು ಸಿಕ್ಕಿದೆ. ಹೀಗಾಗಿ ತ್ರಿವಿಕ್ರಮ್ ಹಾಗೂ ಹನುಮಂತ ಇಬ್ಬರೂ ಕೂಡ ಗೆಲುವು ಓಟದಲ್ಲಿ ಮುಂಚುಣಿಯಲ್ಲಿದ್ದಾರೆ. ಇವರಿಬ್ಬರ ಕೈಯನ್ನೇ ಕಿಚ್ಚ ಸುದೀಪ್ ಫಿನಾಲೆಯಲ್ಲಿ ಹಿಡಿಯುತ್ತಾರೆ. ಆದರೆ ಈ ಹಳ್ಳಿ ಹುಡುಗನನ್ನು ಕಂಡರೆ ಸ್ವಲ್ಪ ಅಂತರ ಕಾಯ್ದುಕೊಳ್ಳುವ ದೊಡ್ಡಮಂದಿ ದೊಡ್ಮನೆಯಲ್ಲಿ ಇದ್ದರು. ಈಗ ಅವರಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು ಮಾತನಾಡಿದ್ದಾರೆ. ಶರ್ಟ್ ಜಾಡಿಸಿಕೊಂಡು ಮುಂದೆ ಹೋಗುತ್ತಿರಬೇಕು ಅನ್ನೋದು ಹನುಮಂತನ ಲೆಕ್ಕಾಚಾರ.












Click it and Unblock the Notifications